ನಗೆಯೊಂದು ಬೀರಿದರೆ ನನ್ನ ಪ್ರಿಯ ಹಬೀಬರ ಆನನವು ಮಲ್ಲಿಗೆ ಹೂ ಅರಳಿದಂತೆ.... ಸಿಹಿಮುತ್ತುಗಳಾಡಿದರೆ ನನ್ನ ಪ್ರೇಮ ಭಾಜನರ ಅಧರವು ಸಂಪಿಗೆಯು ಕಂಪು ಹರಡಿದಂತೆ.... ಆಕಾಶವೇ ಹೇಳು , ನಿನ್ನೊಡಲೊಳಗಿನ ಚಂದಿರನ ಶೋಭೆಯೋ ಅವರಿಗೆ,ಅದೋ ಅದಕ್ಕಿಂತಲೂ ಮಿಗಿಲೋ.. ಪೃಥ್ವಿಯೇ ಮಾತಾಡು, ನೀ ಪ್ರೀತಿಸಿದ ಚಂದಿರನಿಗಿಂತಲೂ ಕಾಂತಿಯಿದೆಯೋ ಆ ಮೃದು ಮಂದಹಾಸಕ್ಕೆ... ಮೋಡವೇ ಹೇಳು ಬಾ.. ತಾರೆಗಳಂತೆ ಪ್ರಕಾಶಿಸಿದ ಅನುಚರರ ಮಧ್ಯೆ ನನ್ನ ಹಬೀಬರು ಹುಣ್ಣಿಮೆಯ ಚಂದ್ರನ ಸೊಬಗನ್ನು ನಾಚಿಸುವಷ್ಟು ಸುಂದರಾಂಗರೇ... ಗರಿಬಿಚ್ಚಿ ಹಾರತೊಡಗಿದೆ ಮನಸ್ಸು ಪ್ರಣಯಾನುರಾಗಗಳ ರಸದಲ್ಲಿ ಬೆರೆತು ಮತ್ತೆ ಮನವು ಮದೀನಾವನ್ನು ನೆನೆಯುತ್ತಿದೆ.. ಆ ಪುಣ್ಯ ಮಣ್ಣನ್ನು ಮತ್ತೆ ಸ್ಮರಿಸುತ್ತಿದೆ.. ಅಸ್ಸಲಾಮು ಅಲೈಕ ಯಾ ರಸೂಲಲ್ಲಾಹ್.....
ಪಥಿಕನ ಬಗ್ಗೆ ಸಿಂಪಲ್ಲಾಗಿ : ನಿಝಾಮ್ ಅನ್ಸಾರಿ - ತಂ - ದಿ. ಇಸ್ಮಾಯಿಲ್ ಯು.ಕೆ, ತಾ -ಝುಬೈದಾ. ಕಲ್ಲಡ್ಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ. ಕಾಸರಗೋಡು ಧಾರ್ಮಿಕ-ಲೌಕಿಕ ಸಮನ್ವಯ ಶಿಕ್ಷಣ ಸಂಸ್ಥೆಯಲ್ಲಿ ಪದವಿ ವ್ಯಾಸಂಗ. ಸಮಾಜಶಾಸ್ತ್ರದಲ್ಲಿ ಬಿ.ಎ ಹಾಗೂ ಅರಬಿಕ್ ನಲ್ಲಿ 'ಅನ್ಸಾರಿ' ಪದವೀಧರ, ಪ್ರಸ್ತುತ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿ.