
ನಗೆಯೊಂದು ಬೀರಿದರೆ
ನನ್ನ ಪ್ರಿಯ ಹಬೀಬರ ಆನನವು ಮಲ್ಲಿಗೆ
ಹೂ ಅರಳಿದಂತೆ....
ಸಿಹಿಮುತ್ತುಗಳಾಡಿದರೆ
ನನ್ನ ಪ್ರೇಮ ಭಾಜನರ ಅಧರವು ಸಂಪಿಗೆಯು ಕಂಪು ಹರಡಿದಂತೆ....
ಆಕಾಶವೇ ಹೇಳು ,
ನಿನ್ನೊಡಲೊಳಗಿನ
ಚಂದಿರನ ಶೋಭೆಯೋ ಅವರಿಗೆ,ಅದೋ
ಅದಕ್ಕಿಂತಲೂ ಮಿಗಿಲೋ..
ಪೃಥ್ವಿಯೇ ಮಾತಾಡು,
ನೀ ಪ್ರೀತಿಸಿದ
ಚಂದಿರನಿಗಿಂತಲೂ
ಕಾಂತಿಯಿದೆಯೋ ಆ ಮೃದು ಮಂದಹಾಸಕ್ಕೆ...
ಮೋಡವೇ ಹೇಳು ಬಾ..
ತಾರೆಗಳಂತೆ ಪ್ರಕಾಶಿಸಿದ
ಅನುಚರರ ಮಧ್ಯೆ ನನ್ನ
ಹಬೀಬರು ಹುಣ್ಣಿಮೆಯ ಚಂದ್ರನ
ಸೊಬಗನ್ನು ನಾಚಿಸುವಷ್ಟು ಸುಂದರಾಂಗರೇ...
ಗರಿಬಿಚ್ಚಿ ಹಾರತೊಡಗಿದೆ ಮನಸ್ಸು
ಪ್ರಣಯಾನುರಾಗಗಳ ರಸದಲ್ಲಿ ಬೆರೆತು
ಮತ್ತೆ ಮನವು ಮದೀನಾವನ್ನು ನೆನೆಯುತ್ತಿದೆ..
ಆ ಪುಣ್ಯ ಮಣ್ಣನ್ನು ಮತ್ತೆ ಸ್ಮರಿಸುತ್ತಿದೆ..
ಅಸ್ಸಲಾಮು ಅಲೈಕ ಯಾ ರಸೂಲಲ್ಲಾಹ್.....
ಕಾಮೆಂಟ್‌ಗಳು