✒ ನಿಝಾಮ್ ಅನ್ಸಾರಿ
ಭಾಷೆ ಮನುಷ್ಯನ ಸವಿಶೇಷತೆಗಳಲ್ಲೊಂದು. ಚಿಂತನೆಗಳು ಮತ್ತು ಅಭಿರುಚಿಗಳ ಆಶಯವನ್ನು ಅಭಿವ್ಯಕ್ತಿಗೊಳಿಸುವ ಅಥವಾ ಹೊರ ಹಾಕುವ ಶಬ್ದಗಳ ಒಂದು ಸಮೂಹವಾಗಿದೆ ಇದು. ಪ್ರಪಂಚದಲ್ಲಿ ಇಂದು ಹಲವು ಅಧಿಕೃತವಾಗಿರುವ ಭಾಷೆಗಳು ಅಸ್ತಿತ್ವದಲ್ಲಿವೆ.ಅದರಲ್ಲೂ ಪ್ರಾದೇಶಿಕ ಭಾಷೆಗಳು ಬೇರೇನೆ. ಆದರೆ ಈ ಎಲ್ಲಾ ಭಾಷೆಗಳ ಪೈಕಿ ರಾಜನಂತೆ ಇರೋದು ಅರಬಿ ಭಾಷೆ ಮಾತ್ರ .

ಒಂದು ಕಾಲದಲ್ಲಿ ಇಡೀ ಜಗತ್ತನ್ನೇ ನಿಯಂತ್ರಿಸುವ ತಾಕತ್ತಿದ್ದ ಭಾಷೆಯಾಗಿತ್ತು ಅರಬಿ. ಯಾವ ರೀತಿಯಲ್ಲಿ ಈಗ ಆಂಗ್ಲ ಭಾಷೆಗೆ ಪ್ರಾಧಾನ್ಯತೆ, ಜಾಗತಿಕ ಅಂಗೀಕಾರ ಇದೆಯೋ ಅದೇ ರೀತಿಯಲ್ಲಿ ಅಂದು ಅರಬಿ ಭಾಷೆ ಸ್ಥಾನ ಪಡೆದಿತ್ತು. ಬಲದಿಂದ ಎಡಕ್ಕೆ ಇರುವ ಕೆಲವೊಂದು ಭಾಷೆಗಳಲ್ಲಿ ಅರಬೀ ಕೂಡಾ ಒಂದು. ಸೈಮಟಿಕ್ ಭಾಷೆಗಳಲ್ಲೊಂದಾದ ಅರಬಿ ಜಗತ್ತಿನ ಅತ್ಯಂತ ಪುರಾತನ ಭಾಷೆಗಳ ಪೈಕಿ ಒಂದು ಕೂಡಾ . ಐಕ್ಯ ರಾಷ್ಟ್ರ ಸಂಘದ ಅಂಗೀಕೃತ ಭಾಷೆಯಾದ ಅರಬಿ, 26 ದೇಶಗಳ ಅಧಿಕೃತ ಭಾಷೆಯಾಗಿದೆ. ಆಫ್ರಿಕನ್ ಯೂನಿಯನ್ ಆರ್ಗನೈಸೇಷನ್ ಇಸ್ಲಾಮಿಕ್ ಕಾನ್ಫೆರನ್ಸ್ ನಂತಹ ಹಲವು ಅಂತಾರಾಷ್ಟ್ರೀಯ ಸಂಸ್ಥೆಗಳು ಅರಬಿ ಭಾಷೆಯನ್ನು ಅಧಿಕೃತ ಭಾಷೆಯಾಗಿ ಅಂಗೀಕರಿಸಿದೆ.
ಅರಬಿ ಭಾಷೆ: ಹುಟ್ಟು ಮತ್ತು ಬೆಳವಣಿಗೆ
ಬಿ.ಸಿ 1900 ರಲ್ಲಿ ಜೀವಿಸಿದ್ದ 'ಯಅರೂಬ್ ಇಬ್ನ್ ಖಹ್ತಾನ್' ಎಂಬವರನ್ನು ಅರಬಿ ಭಾಷೆಯ ಪಿತಾಮಹ ಎಂದು ಕರೆಯಲಾಗುತ್ತದೆ. ಇವರ ನಾಮಕ್ಕೆ ಹೊಂದಿಕೊಂಡು 'ಅರಬಿ' ಎಂಬ ಹೆಸರು ಈ ಭಾಷೆಗೆ ಬಂದಿದ್ದಂತೆ. ಆದರೆ ಈ ಭಾಷೆಗೆ ಅರಬಿ ಅನ್ನುವ ಹೆಸರು ಬರೋದಕ್ಕೆ ಇನ್ನೊಂದು ಕಾರಣವಿದೆ ಎಂಬ ಅಭಿಪ್ರಾಯವೂ ಇದೆ. 'ಇಅರಾಬ್' (ಅರಬಿ ಭಾಷಾ ವರ್ಣ ವ್ಯವಸ್ಥೆ) ಇರುವ ಏಕೈಕ ಭಾಷೆಯಾದುದರಿಂದಲೇ ಈ ಭಾಷೆಗೆ ಅರಬಿ ಎಂದು ಹೆಸರಿಡಲಾಯಿತು ಎಂಬ ಅಭಿಪ್ರಾಯವೂ ಇದೆ. ಮಧ್ಯಕಾಲೀನ ಯುಗದಲ್ಲಿ ಉನ್ನತಿಯ ಉತ್ತುಂಗ ಪಥದಲ್ಲಿ ರಾರಾಜಿಸುತ್ತಿದ್ದ ಭಾಷೆಯಾಗಿತ್ತು ಅರಬಿ. ವೈಜ್ಞಾನಿಕವಾಗಿ ಅರಬಿಗಳು ಸಬಲರಾದಾಗ ಸ್ವಾಭಾವಿಕವೆಂಬಂತೆ ಅರಬ್ ಭಾಷಾ ಗ್ರಂಥಗಳೂ ಹೆಚ್ಚಾದವು. ತತ್ವಶಾಸ್ತ್ರ ಮತ್ತು ವೈದ್ಯಶಾಸ್ತ್ರ ಗ್ರಂಥಗಳೆಲ್ಲವೂ ಅರಬಿಕ್ ಭಾಷೆಯಲ್ಲೇ ರಚಿಸಲ್ಪಟ್ಟಿತು. ಮಾತ್ರವಲ್ಲದೆ ಪ್ಲಾಟೋ, ಅರಿಸ್ಟಾಟಲ್, ಸಾಕ್ರೆಟಿಸ್ ಮುಂತಾದ ಗ್ರೀಕ್ ಚಿಂತಕರ ಗ್ರಂಥಗಳೂ ಅರಬಿ ಭಾಷೆಗೆ ಅನುವಾದಗೊಂಡಿತು. ಹಾಗಾಗಿ ಅರಬಿ ಭಾಷೆಯ ಕಲಿಕೆಗೆ ಜನರು ಮುಂದೆ ಬಂದರು. ಮುಂದೆ ಅರಬಿ ಭಾಷೆಯು ಬೆಳವಣಿಗೆಯ ಕಡೆಗೆ ಹೆಜ್ಜೆಯಿಟ್ಟಿತು. ಜಗತ್ತಿನಲ್ಲಿ ಇಂದು ನೆಲೆಗೊಂಡಿರುವ ಒಂದೇ ಒಂದು ಸೆಮಿಟಿಕ್ ಭಾಷೆಯಾಗಿದೆ ಅರಬಿ. ಪ್ರವಾದಿ ನೂಹ್ ಅಲೈಹಿಸ್ಸಲಾಮರ ಪುತ್ರ ಸಾಮ್ ಎಂಬವರ ವಂಶ ಪರಂಪರೆಯಲ್ಲಿ ಬರುವ ಜನವರ್ಗದ ಭಾಷೆಯಾಗಿತ್ತು ಸೆಮಿಟಿಕ್. ಪ್ರತಿ ವರ್ಷ ಡಿಸೆಂಬರ್ 18 ಅನ್ನು ವಿಶ್ವ ಅರಬಿಕ್ ಭಾಷಾ ದಿನವನ್ನಾಗಿ ಆಚರಿಸಲಾಗುತ್ತದೆ.

ಅರೆಬಿಕ್ ಲಿಪಿ:
ಜಗತ್ತಿನ ಭಾಷೆಗಳಲ್ಲಿ ಅತ್ಯಂತ ಮನೋಹರವಾದ ಲಿಪಿ ಸ್ವಂತವಾಗಿ ಇರುವುದು ಅರೆಬಿಕ್ ಭಾಷೆಗೆ ಮಾತ್ರ. ಆದ್ದರಿಂದಲೇ ಇದು 'ಬರಹದ ಸುಂದರಿ' ಎಂದು ಇದು ಕರೆಯಲ್ಪಡುತ್ತದೆ. ಅರಬಿ ಭಾಷೆಗೆ ಮುಖ್ಯವಾಗಿ ಐದು ಲಿಪಿಗಳಿವೆ.
1.ಕೂಫೀ ಲಿಪಿ : ಅತ್ಯಂತ ಹಳೆಯದಾದ ಲಿಪಿಯಾಗಿದೆ ಇದು. ಮುಸ್ಲಿಂಗಳು ಮೊದಲನೆಯದಾಗಿ ನಿರ್ಮಿಸಿದ ಕೂಫಿ ನಗರದೊಂದಿಗೆ ಸೇರಿಸಿ ಕೂಫೀ ಎಂದು ಕರೆಯಲಾಗುತ್ತದೆ.
2. ಖತ್ತುನ್ನಸಖ್: ಇದು ಮುದ್ರಣ ಲಿಪಿ. ಸಾಮಾನ್ಯವಾಗಿ ಉಪಯೋಗಿಸಲ್ಪಡುವ ಲಿಪಿಯಾಗಿದೆ. ವಿದೇಶಗಳಿಂದ ಮುದ್ರಣ ಮಾಡಲಾಗುವ ಖುರ್ ಆನ್ ಮತ್ತು ಇತರ ಗ್ರಂಥಗಳೆಲ್ಲವೂ ಈ ಲಿಪಿಯಲ್ಲಿಯೇ ಮುದ್ರಣಗೊಳ್ಳುತ್ತದೆ.
3. ಖತ್ತುರ್ರುಖಅ: ಇದು ಕೈ ಬರಹ ಲಿಪಿ. ಮುದ್ರಣ ಲಿಪಿಗಿಂತಲೂ ಬಹಳ ವ್ಯತ್ಯಸ್ಥವಾಗಿದೆ ಈ ಲಿಪಿ. ಅತಿ ವೇಗದಲ್ಲಿ ಬರೆಯಲು ಸಾಧ್ಯವಾಗುವುದು ಇದರ ಪ್ರತ್ಯೇಕತೆ ಎನ್ನಬಹುದು.
4. ಖತ್ತುದ್ದೀವಾನೀ: ಇದು ಕಾವ್ಯ ಲಿಪಿ. ಆಟೋಮನ್ ಸಾಮ್ರಾಜ್ಯದ ಆಡಳಿತಾಧಿಕಾರಿಯಾಗಿದ್ದ ಮುಹಮ್ಮದ್ ಫಾತಿಹ್ ರ ಕಾಲದಲ್ಲಾಗಿತ್ತು ಈ ಲಿಪಿಯ ರೂಪಕಲ್ಪನೆ ನಡೆದದ್ದು. ಕಣ್ಣುಗಳನ್ನು ಆಕರ್ಷಿಸುವ ರೂಪದಲ್ಲಿ ಈ ಲಿಪಿ ಇದ್ದುದರಿಂದ ಮುಂದೆ ಖತ್ತುದ್ದೀವಾನಿ ಎಂದೇ ಪ್ರಸಿದ್ದವಾಯಿತು.
5. ಖತ್ತುಲ್ ಫಾರಿಸಿ: ಇದು ಪೇರ್ಶ್ಯನ್ ಲಿಪಿ. ಅತ್ಯಂತ ಮೆಲ್ಲನೆ ಬರೆಯಲು ಸಾಧ್ಯವಾಗುವ ಈ ಲಿಪಿಯು ಹದಿಮೂರನೇ ಶತಮಾನದಲ್ಲಿ ಪೇರ್ಶ್ಯದಲ್ಲಾಗಿತ್ತು ಪ್ರಾರಂಭಗೊಂಡದ್ದು.

ಅರಬಿ ಭಾಷೆ ಭಾರತದಲ್ಲಿ:
ಪುರಾತನ ಕಾಲದಿಂದಲೂ ಅರೇಬ್ಯರು ಸಂಚಾರ ಪ್ರಿಯರಾಗಿದ್ದರು. ಹಲವು ಪ್ರದೇಶಗಳಿಗೆ ಪ್ರಯಾಣ ಬೆಳೆಸಿದ ಅವರು ವಿಶ್ವದ ವಿವಿಧೆಡೆಗಳಲ್ಲಿ ಹೋಗಿ ಅವರ ಭಾಷೆಯನ್ನು ಬೆಳೆಸಿ ಪೋಷಿಸಿದರು. ಭಾರತದೊಂದಿಗೆ ಅವಿನಾಭಾವ ಸಂಬಂಧವನ್ನು ಇಟ್ಟುಕೊಂಡ ಅರೇಬ್ಯರು, ಭಾರತದಲ್ಲೂ ಅವರ ಭಾಷೆಯನ್ನು ನೆಟ್ಟು ಬೆಳೆಸಿದರು. ಹಳೆಯ ಕಾಲದಿಂದಲೇ ಭಾರತೀಯರು ಅರಬಿ ಮಾತನಾಡಲು ಆರಂಭಿಸಿದ್ದರು ಎಂಬುದು ಇತಿಹಾಸದ ಪುಟಗಳಲ್ಲಿ ಕಾಣಬಹುದಾಗಿದೆ.
'ಅಲ್ಲಾಮಾ ಸಯ್ಯಿದ್ ಸುಲೈಮಾನ್ ನದ್ವಿ ಬರೆಯುತ್ತಾರೆ " ಆದರೆ ಮಹಾಭಾರತ ಕಾಲದಲ್ಲಿಯೂ ಭಾರತದಲ್ಲಿ ಅರಬಿ ಮಾತನಾಡಬಲ್ಲವರಿದ್ದರೆಂಬುವುದು ಇದಕ್ಕಿಂತಲೂ ಕುತೂಹಲಕಾರಿ ಅಂಶವಾಗಿದೆ" (ಅರಬ್ ವಹಿಂದು ಕೆ ತಅಲ್ಲುಕಾತ್). 'ಸತ್ಯಾರ್ಥ ಪ್ರಕಾಶ' ಎಂಬ ಗ್ರಂಥದ ರಚನೆಕಾರ ಸ್ವಾಮಿ ದಯಾನಂದ ಸರಸ್ವತಿ ಉಲ್ಲೇಖಿಸುತ್ತಾರೆ, " "ಮಹಾಭಾರತದಲ್ಲಿ ಕೌರವರು ಮೇಣದರಮನೆ ಮಾಡಿ ಪಾಂಡವರನ್ನು ದಹಿಸಿದರು. ಕೊಲ್ಲಲು ತಯಾರಾದಾಗ ವಿಧುರನು ಯುಧಿಷ್ಟಿರನೊಂದಿಗೆ ಅರಬಿ ಭಾಷೆಯಲ್ಲಿ ಮಾತನಾಡಿದನು. ಯುಧಿಷ್ಟಿರನು ಅದಕ್ಕೆ ಪ್ರತಿಯಾಗಿ ಅರಬಿಯಲ್ಲೇ ಉತ್ತರಿಸಿದನು. ಈ ಎರಡೂ ಉಲ್ಲೇಖಗಳು ಪುರಾತನ ಕಾಲದಿಂದಲೇ ಅರಬಿ ಭಾಷೆಯು ಭಾರತದೊಂದಿಗೆ ನಿಕಟವಾದ ಸಂಪರ್ಕವನ್ನು ಹೊಂದಿತ್ತು ಅನ್ನುವುದಕ್ಕೆ ವ್ಯಕ್ತವಾದ ಸೂಚನೆಯಂತಿದೆ.
ಅರಬಿ ಭಾಷೆ ಮತ್ತು ಪಠಣ ಕೇರಳದಲ್ಲಿ:
ಸಹಸ್ರಾರು ಭಾಷಾ ಬೇರುಗಳನ್ನು ಹೊಂದಿರುವ ಅರಬಿ ಭಾಷೆಯು ಪೌರಾಣಿಕ ಕಾಲದಲ್ಲೇ ನೆರೆಯ ಕೇರಳ ರಾಜ್ಯವನ್ನು ತಲುಪಿತ್ತು. ಮಾಲಿಕ್ ದೀನಾರ್ ಮತ್ತು ಸಂಘದ ಆಗಮನದಿಂದಾಗಿತ್ತು ಕೇರಳದ ಮಣ್ಣು ಅರಬಿ ಭಾಷೆಯನ್ನು ಮೊದಲ ಬಾರಿಗೆ ಕೇಳಿದ್ದು. ಇಂದು ನಾವು ಉಪಯೋಗಿಸುವ ಹಲವು ಹೆಸರುಗಳ ಮೂಲವನ್ನು ಹುಡುಕಿ ಹೊರಟರೆ ಅದು ಅರಬಿ ಭಾಷೆಗೆ ಹೋಗಿ ಸೇರುವುದನ್ನು ಕಾಣಬಹುದು. ಕೇರಳದ ಹಲವು ಊರುಗಳ ಹೆಸರುಗಳು ಅರಬಿಯಿಂದಾಗಿ ಉದ್ಭವಗೊಂಡಿದೆ ಅನ್ನುವುದನ್ನು ಸ್ಪಷ್ಟವಾಗಿ ತಿಳಿಯಬಹುದು. ಉದಾ: ಕಲ್ಲಾಹ್ ಎಂಬುದು ಕಲ್ಲಾಯಿ ಆದದ್ದು, ಶಾಲಿಹಾರ್ ಎಂಬುದು ಚಾಲಿಯಾರ್ ಆದದ್ದು ಉದಾಹರಣೆ ಮಾತ್ರ.
ಅರಬಿ ಮತ್ತು ಮಲಯಾಳಂ ಒಂದಕ್ಕೊಂದು ಆಳವಾದ ನಂಟು ಬೆಸೆದುಕೊಂಡಿದ್ದರಿಂದಲೇ ಮುಂದೆ 'ಅರಬಿಮಲಯಾಳಂ' ಎಂಬ ಭಾಷೆಯೊಂದು ಉದಯವಾಯಿತು. ಮಲಯಾಳಂ ಭಾಷೆಯಲ್ಲಿನ ಹಲವು ಪದಗಳು ಅರಬಿಯದ್ದಾಗಿದೆ. ಕಫೀಲ್, ವಕೀಲ್, ವಕಾಲತ್ ಮುಂತಾದುವು ಅವುಗಳಲ್ಲಿ ಕೆಲವು. ಈ ವಿಷಯದಲ್ಲಿ ಕನ್ನಡ ಭಾಷೆ ಹೊರತೇನಲ್ಲ. ವಕಾಲತ್ತು, ವಗೈರೆ , ಜವಾಬು ಮುಂತಾದುವು ಕನ್ನಡದಲ್ಲಿ ಕೆಲವು ಮಾತ್ರ. ಹದಿನಾರನೇ ಶತಮಾನದಲ್ಲಿ ಕೋಝಿಕ್ಕೋಡ್ ಅಥವಾ ಕ್ಯಾಲಿಕೆಟ್ ನಗರದ ವ್ಯಾಪಾರ ಭಾಷೆ ಅರಬಿಯಾಗಿತ್ತೆಂದು ಕ್ರೈಸ್ತ ಕಾನೋನಗಳಲ್ಲಿ ಕಾಣಬಹುದು. ವಾಸ್ಕೋಡಿಗಾಮ ಕೇರಳಕ್ಕೆ ಬಂದು ತಲುಪಿದ್ದು, ಸಾಮೂದಿರಿ ರಾಜನಿಗಿರುವ ಒಂದು ಪತ್ರದೊಂದಿಗಾಗಿತ್ತು. ಆ ಪತ್ರದ ಭಾಷೆ ಅರಬಿಯಾಗಿತ್ತೆಂದು ಗುಂಡರ್ಟ್ ರವರು 'ಕೇರಳ ಪಝಮ' ಎಂಬ ಕೃತಿಯಲ್ಲಿ ಎರಡೆರಡು ಬಾರಿ ಉಲ್ಲೇಖಿಸಿರುವುದನ್ನು ಕಾಣಬಹುದು.
ಪೊನ್ನಾನಿ ಮತ್ತು ತಿರೂರಂಗಾಡಿಯಂತಹ ನಗರಗಳೆಲ್ಲಾ ಹಳೆಯ ಕಾಲದಲ್ಲಿ ಅರಬಿ ಕಲಿಯುವ ಕೇಂದ್ರಗಳಾಗಿದ್ದವು. ನಮ್ಮ ಕರುನಾಡಿನ ಕರಾವಳಿ ಭಾಗದಿಂದ ಅನೇಕರು ಅತ್ತ ಹೋಗಿ ಅರಬಿ ಕಲಿತು ಬಂದವರಿದ್ದರು. ಅರಬಿ ಭಾಷೆಯೊಂದಿಗೆ ಕೇರಳಕ್ಕೆ ಅಷ್ಟೊಂದು ನಂಟಿದ್ದರೂ ಕೂಡಾ ಇದುವರೆಗೂ ಅರಬಿಕ್ ವಿಶ್ವವಿದ್ಯಾಲಯವೊಂದು ಕೇರಳದಲ್ಲಿ ತಲೆ ಎತ್ತದೇ ಉಳಿದಿರೋದು ವಿಪರ್ಯಾಸವೇ ಸರಿ.
*****************************

ಕಾಮೆಂಟ್‌ಗಳು