ವಿಷಯಕ್ಕೆ ಹೋಗಿ

ರಂಝಾನ್ ನೀಡುವ ಒಳಿತಿನ ಸಂದೇಶ...

-ನಿಝಾಮ್ ಅನ್ಸಾರಿ



ಮತ್ತೆ ರಂಝಾನ್ ತಿಂಗಳ ಆಗಮನವಾಗಿದೆ. ಪ್ರತಿ ವರ್ಷವೂ ರಂಝಾನ್ ಬಗ್ಗೆ ಬರೆಯುವಾಗ ಅದರ ಶ್ರೇಷ್ಟತೆ, ವ್ರತಾನುಷ್ಟಾನದ ಪ್ರಾಧಾನ್ಯತೆಯನ್ನೇ ಹೆಚ್ಚಿನವರೂ ಬರೆಯುತ್ತಾರೆ. ಅದನ್ನೇ ಮಸೀದಿಗಳಲ್ಲೂ ಹೇಳುವುದಿದೆ. ಒಳ್ಳೆಯದೇ. ಕಾರಣ ಆಧುನಿಕ ಜನರು ಧರ್ಮದ ಪ್ರತಿಯೊಂದು ವಿಷಯಗಳಲ್ಲೂ ಸಡಿಲಿಕೆ ಬಯಸುತ್ತಾರೆ. ಅಂದರೆ ಅವರವರ ಜೀವನಕ್ರಮಗಳಿಗನುಸಾರವಾಗಿ ಧರ್ಮದ ನಿಯಮಗಳನ್ನು ಗಾಳಿಗೆ ತೂರುವಂತಹ ಕಾರ್ಯಗಳು ಎಲ್ಲಾ ಕಡೆ ನಡೆಯುತ್ತಲಿದೆ. ಹಾಗಿರುವಾಗ ರಂಝಾನ್ ವ್ರತಾಚರಣೆಯ ಮಹತ್ವವನ್ನು ಪ್ರತಿ ಬಾರಿಯೂ ಪ್ರಭಾಷಣ ವೇದಿಕೆಗಳಲ್ಲಿ, ಮಸೀದಿಗಳಲ್ಲಿ ಜನ ಸಾಮಾನ್ಯರಿಗೆ ನೆನಪಿಸುತ್ತಲಿರುವುದು ಸ್ವಾಗತಾರ್ಹವಾದುದು. ಮತ್ತು ಪ್ರಯೋಜನಕಾರಿಯೂ ಕೂಡಾ.

ಯಾಕೆ ಈ ರೀತಿ ಬರೆದೆ ಅಂತ ಕೇಳಿದರೆ, ಇತ್ತೀಚೆಗೆ ವಾಟ್ಸಾಪ್ ನೊಳಗೆ ಕಣ್ಣಾಡಿಸಿದಾಗ ಕಂಡ ಕೆಲವೊಂದು ಸಂದೇಶಗಳು ಧರ್ಮದ ಬಗ್ಗೆ ಕೀಳರಿಮೆಯ ಭಾವ ತೋರುವವರಿಗೆ ತಕ್ಕ ಉತ್ತರ ನೀಡುವಂತಿತ್ತು.
ಬಡ ಕುಟುಂಬಕ್ಕೆ ಮನೆ ಕಟ್ಟುವ ಸಹಾಯಾರ್ಥ ಕಲೆಕ್ಷನ್, ರಂಝಾನ್ ನಂತರದ ಬಡ ಹೆಣ್ಮಕ್ಕಳ ಮದುವೆಗಾಗಿ, ಮುಅಲ್ಲಿಂಗಳಿಗಾಗಿ ಹೀಗೇ ಹಲವು ರೀತಿಯಲ್ಲಿ ಯುವ-ವಯಸ್ಕರು ಸೇರಿ ಸಮುದಾಯದೊಂದಿಗಿನ ಸಾಮಾಜಿಕ ಕಾಳಜಿಗಾಗಿ ರಂಝಾನ್ ಅನ್ನು ಉಪಯೋಗಿಸುತ್ತಿದ್ದಾರೆನ್ನುವಾಗ ಧರ್ಮದ ಮನದಲ್ಲಿ ಅಭಿಮಾನ ಮೂಡುತ್ತಿದೆ.

ಬುರ್ಖಾದ ವಿಚಾರದಲ್ಲಿ ಬಲತ್ಕಾರ ಮಾಡಲಾಗುತ್ತದೆ ಎಂದು ಆರೋಪಿಸುತ್ತಿರುವಾಗ, ಆ ವಾದವನ್ನು ವಿರೋಧಿಸಿ , ಯಾರ ಒತ್ತಡ , ಬಲ ಪ್ರಯೋಗಗಳಿಲ್ಲದೆ ನಾವು ಬುರ್ಖಾ ಧರಿಸುತ್ತಿದ್ದೇವೆ. ಆರೋಪಗಳೆಲ್ಲ ಸುಳ್ಳೆಂದು ಒಂದು ಸ್ತ್ರೀ ಸಮುದಾಯ ಪ್ರತಿಭಟಿಸಿದಾಗ ಅಲ್ಲೂ ಕೂಡ ಧರ್ಮದ ,ಅಥವಾ ಇಸ್ಲಾಂನ ಕಾಳಜಿ ಬಹಳ ವ್ಯಕ್ತವಾಗಿ ಇತರರಲ್ಲಿ ಅಭಿವ್ಯಕ್ತಿಗೊಂಡಿತ್ತು.
ಧರ್ಮ ನಿಯಮಗಳನ್ನು ಸ್ಥಾಪಿಸಿದ್ದು ಅದರ ನೈಜ ಅನುಯಾಯಿಗಳಿಗೇ ಹೊರತು ನಾಮಧಾರಿ ಧರ್ಮ ರಕ್ಷಕರಿಗಲ್ಲ ಅನ್ನೋದನ್ನ ನಾವು ಮೊದಲು ಮನದಟ್ಟು ಮಾಡಬೇಕಿದೆ.

ಒಂದೆಡೆ ತಡೆಯಲಾಗಂತಹ ಸುಡು ಬಿಸಿಲು. ಈ ವೇಳೆಯಲ್ಲಿನ ವ್ರತಾಚರಣೆಗೂ , ಇತರ ಕಾಲಮಾನದಲ್ಲಿ ಕೈಗೊಳ್ಳುವ ವ್ರತಕ್ಕೂ ಪ್ರತಿಫಲದಲ್ಲಿ ತುಂಬಾ ವ್ಯತ್ಯಾಸವಿರಬಹುದು ಎಂಬುವುದು ನನ್ನ ಅನಿಸಿಕೆ. ಕಾರಣ ಈಗೀಗ ವ್ರತಾಚರಣೆಯು ಒಂದು ಟಾಸ್ಕ್ ನಂತಾಗಿದೆ‌. ರಂಝಾನ್ ತಿಂಗಳ ಮುಂಚೆಯೇ ಬಿಸಿಲನ್ನು ತಡೆಯಲಾಗದೆ ಲೀಟರ್ಗಟ್ಟಲೆ ನೀರು, ಸಿಹಿ ಪಾನೀಯಗಳನ್ನು ಸೇವಿಸಿ ಬಾಯಾರಿಕೆ ನೀಗಿಸಲು ಹರಸಾಹಸ ಪಡುತ್ತಿದ್ದೆವು. ಅದಕ್ಕೆಂದೇ ದಾರಿ ಬದಿಗಳಲ್ಲಿ ಕಬ್ಬು, ಕೋಲ್ಡ್ ಡ್ರಿಂಕ್ಸ್, ಜ್ಯೂಸ್ ಅಂಗಡಿಗಳು ತಲೆಯೆತ್ತಿವೆ. ಈ ನಿಟ್ಟಿನಲ್ಲಿ ದಿನದ ಹದಿಮೂರು , ಹದಿನಾಲ್ಕು ಗಂಟೆಗಳ ಕಾಲ ಸೃಷ್ಟಿಕರ್ತನಾದ ಅಲ್ಲಾಹನಿಗೆ ಅನ್ನ ಪಾನೀಯಗಳನ್ನು ತೊರೆಯುವುದು ಅಲ್ಪ ತ್ರಾಸದಾಯಕವಾದದ್ದು. ಹೀಗಾಗಿ ಇತರ ವ್ರತಗಳಿಗಿಂತಲೂ ಈ ಬಾರಿಯ ರಂಝಾನ್ ಹೆಚ್ಚಿನ ಪ್ರತಿಫಲಾರ್ಹ ವ್ರತಗಳೆಂದರೆ ತಪ್ಪಾಗದು‌.

ಮತ್ತೊಂದು ವಿಚಾರ ಇಲ್ಲಿ ನೆನಪಿಸಬೇಕಾಗುತ್ತದೆ. ವ್ರತ ತೊರೆಯುವ ಅಥವಾ ಇಫ್ತಾರ್ ನ ವಿಷಯದಲ್ಲಿ ನಮ್ಮ ಸಮುದಾಯವು ತೋರುವಂತಹ ಕಾಳಜಿ ಎಲ್ಲೂ ಕಂಡಿಲ್ಲ. ಪ್ರತಿಯೊಂದು ಮನೆ ಮನೆಗಳಲ್ಲೂ ಇಫ್ತಾರ್ ನಡೆಯುವಾಗ ಕುಟುಂಬ ಮತ್ತು ನೆರೆಕರೆಯವರನ್ನು ಕರೆಯೋದ್ರಿಂದ ಹಿಡಿದು , ಆ ವೇಳೆ ದಾರಿಯಲ್ಲಿ ಹೋಗುವವರಿಗೆ ದಾರಿ ಬದಿಯ ಮಸೀದಿಗಳಲ್ಲಿ, ಇಫ್ತಾರ್ ಟೆಂಟ್ ಗಳನ್ನು ಸ್ಥಾಪಿಸಿ ಪ್ರಯಾಣಿಕರಿಗೆ ವ್ರತ ತೊರೆಯುವ ಸೌಕರ್ಯಗಳನ್ನು ಒದಗಿಸುವುದು, ಹೀಗೇ ವಿಶ್ವದ ನಾನಾಕಡೆಗಳಲ್ಲಿ ನಾನಾ ರೀತಿಯ ಇಫ್ತಾರ್ ಸಂಗಮಗಳು ನಡೆಯುತ್ತಿರುವುದು ನಮ್ಮ ಸಹೋದರತೆಯ ಸಾಮೀಪ್ಯವನ್ನು ಎತ್ತಿ ತೋರಿಸುತ್ತದೆ. ಕಳೆದೆರಡು ದಿನಗಳ ಹಿ‌ದೆ ಪತ್ರಿಕೆಯೊಂದರ ಪುಟ ತಿರುವಿದಾಗ ಕಂಡ ವಾರ್ತೆಯೊಂದನ್ನು ಓದಿ ಅಚ್ಚರಿಯೆನಿಸಿತ್ತು. ಸಿಖ್ ಸಮುದಾಯದ ನೇತಾರರು ಸೇರಿ ನಡೆಸುವ ಇಫ್ತಾರ್ ಸಂಗಮದ ಫೋಟೋದೊಂದಿಗೆ ವರದಿಯಾಗಿತ್ತು.

ನಮ್ಮ ಕರಾವಳಿಯ ಉಡುಪಿ ಮಠದಲ್ಲೂ ಇಫ್ತಾರ್ ಸಂಗಮಗಳು ನಡೆಯುವುದಿದೆ. ಕೇರಳದ ಮಲಪ್ಪುರಂ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಮುಸ್ಲಿಮರಂತೆಯೇ ಹಿಂದೂಗಳೂ ವೃತಾಚರಣೆ ಮಾಡುತ್ತಾರೆ. ಒಂದೆರದೂ ವ್ರತವಲ್ಲ .ಪೂರ್ತಿ ತಿಂಗಳು..! ಅಲ್ಲದೇ ಅವರ ಹೋಟೆಲ್‌ಗಳು ಕೂಡಾ ಒಂದು ತಿಂಗಳ ಕಾಲ ಮುಚ್ಚಿಡುತ್ತಾರೆ‌. ಇಂತಹ ಮತ ಸೌಹಾರ್ದತೆಯು ಇಂದಿಗೂ ಜೀವಂತಿಕೆ ಪಡೆಯುತ್ತಲಿದೆ ಎನ್ನುವಾಗ ಅಚ್ಚರಿಯೆನಿಸುವುದಿದೆ. ವ್ರತ ಬರೀ ರಂಝಾನ್ ಎಂಬ ದೃಷ್ಟಿಯಿಂದ ನೋಡುವುದು ಮಾತ್ರವಲ್ಲ ಅದರ ಆರೋಗ್ಯಕರ ಅಂಶಗಳನ್ನೂ ತಿಳಿದರೆ ವೈದ್ಯಕೀಯ ಅಥವಾ ವೈಜ್ಞಾನಿಕ ದೃಷ್ಟಿಕೋನದಿಂದ ಹೇಳುವುದಾದರೆ ಶಾರೀರಿಕ ಧೃಡತೆಗೂ ಪರಿಣಾಮಕಾರಿಯಾಗಿದೆ ಅನ್ನೋದನ್ನ ತಿಳಿದ ಹಲವು ಇತರ ಧರ್ಮೀಯರೂ ಉಪವಾಸ ಆಚರಿಸುವುದಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕೋವಿಡ್ ಕಾಲದ ಓದು: ಚಂದ್ರನ ಚೂರು

'ಚಂದ್ರನ ಚೂರು' ಕೃತಿಯ ಹೆಸರು ಕೇಳಿದಾಗ ನಿಜವಾಗಿಯೂ ಅದೊಂದು ಕಾದಂಬರಿಯಾಗಿರಬಹುದು ಎಂದು ಭಾವಿಸಿದ್ದೆ. ಆದರೆ, ಪುಸ್ತಕ ಕೈಗೆ ತಲುಪಿದಾಗಲೇ ಗೊತ್ತಾಗಿದ್ದು, ಅದೊಂದು ಚಂದ್ರಲೋಕಕ್ಕೆ ಕೊಂಡೊಯ್ಯುವ ಅದ್ಭುತ ಕೃತಿ ಅಂತ. ತಂದೆ ಕುವೆಂಪು ಅವರ ಸಾಹಿತ್ಯದ ಹಾದಿಯಲ್ಲೇ ನಡೆದರೂ, ತೇಜಸ್ವಿಯವರ ಸಾಹಿತ್ಯವು ನಿಸರ್ಗ ವಿಸ್ಮಯ, ಭೂಗೋಳ, ಜೀವಶಾಸ್ತ್ರ, ಭತಶಾಸ್ತ್ರ, ಇತಿಹಾಸ ಹೀಗೇ ಎಲ್ಲಾ ಶಾಸ್ತ್ರಗಳ ಮಿಶ್ರಣ ರಸಾಯನ ಎಂದೇ ಹೇಳಬಹುದು. ಚಂದ್ರನ ಚೂರು ಚಂದ್ರ ಲೋಕದ ವಿಸ್ಮಯ ದೃಶ್ಯಗಳನ್ನು ಕಟ್ಟಿಕೊಡುವ ಚೊಚ್ಚಲ ಕೃತಿ. ಬಾಹ್ಯಾಕಾಶ, ಖಗೋಳ ಶಾಸ್ತ್ರ ವಿಷಯದಲ್ಲಿ ಆಸಕ್ತಿ ಇಲ್ಲದ ನನ್ನಂತವರನ್ನೂ ಇದು ಸರಾಗವಾಗಿ ಓದಿಸಿಕೊಂಡು ಹೋಗುವಂತೆ ಮಾಡುತ್ತದೆ, ಅದಕ್ಕೆ ಕಾರಣ, ತೇಜಸ್ವಿ ಅವರ ಬರವಣಿಗೆ ಹಾಗೂ ವಿವರಣೆಯ ಶೈಲಿ.. ಜಗತ್ತಿನಲ್ಲಿ ಮನುಷ್ಯನು ಚಂದ್ರನಲ್ಲಿಗೆ ಕಾಲಿಡುವುದಕ್ಕೂ ಮುನ್ನ, ಯಾವುದೆಲ್ಲಾ ರೀತಿಯ ಪರಿಶ್ರಮಗಳು ನಡೆದಿದ್ದವು ಹಾಗೂ ಭೂಮಂಡಲ ಮತ್ತು ಚಂದ್ರನ ಕುರಿತಾಘಿ ಯಾವುದೆಲ್ಲಾ ಆಯಾಮಗಳಲ್ಲಿ ಅಧ್ಯಯನಗಳಾಗಿದ್ದುವು ಎಂಬುದರ ಸಂಪೂರ್ಣ ವಿಷಯಗಳಿವೆ. ಚಂದ್ರನಲ್ಲಿ ತಲುಪಿದ ಮನುಷ್ಯನಿಗೆ ಆದ ಅನುಭವಗಳೇನು? ನೀಲ್ ಆಮ್Fಸ್ಟ್ರಾಂಗ್ ತಂಡದ ಚಂದ್ರಯಾನದ ರಸವತ್ತಾದ ಅನುಭವಗಳು, ಚಂದಿರನ ಮಣ್ಣಲ್ಲಿ ಅಮೇರಿಕದ ಫ್ಲಾಗ್ ಮತ್ತು ಬೋಡ್F ಸ್ಥಾಪಿಸಿ ಬಂದ ಆ ಧೀರ ತಂಡದ ಬೆರಗಾಗಿಸುವ ಕ್ಷಣ ಕ್ಷಣದ ವರದಿಗಳು ಈ ಕೃತಿಯ ಲೇಖನಗಳಲ್ಲಿ ಅಡಗಿದೆ. ಒಟ್ಟಿನಲ...

ಇಂದಿನಿಂದ 'ಸಮಸ್ತ'ದ ಆನ್ ಲೈನ್ ತರಗತಿಗಳು ಆರಂಭ

ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಒಕ್ಕೂಟದ (SKJU)ಅಧೀನದಲ್ಲಿ‌ ಕಾರ್ಯಾಚರಿಸುವ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್‌ ಅಂಗೀಕೃತ ಮದ್ರಸಗಳ ವಿದ್ಯಾರ್ಥಿಗಳಿಗೆ ನವ ಅಧ್ಯಯನ ವರ್ಷ ಇಂದಿನಿಂದ ಆರಂಭಗೊಂಡಿದೆ. ವಿಶೇಷ ಅಂದ್ರೆ, ಈ ಬಾರಿ ತರಗತಿಗಳ ಪ್ರಾರಂಭೋತ್ಸವದ ಸಂಭ್ರಮಗಳಿಲ್ಲದೆ, ಮದ್ರಸಾ ಕಟ್ಟಡಗಳು ತೆರೆಯದೇ, ಹತ್ತು ಸಾವಿರಕ್ಕೂ ಮಿಕ್ಕ ಮದ್ರಸಗಳ ಹನ್ನೆರಡು ಲಕ್ಷ ವಿದ್ಯಾರ್ಥಿಗಳು ಅವರವರ ಮನೆಗಳಲ್ಲಿಯೇ ಕುಳಿತು ತರಗತಿಗಳಲ್ಲಿ ಪಾಲ್ಗೊಳ್ಳುತ್ತಿರುವುದು ಎಂಬುದು.  ಆನ್ ಲೈನ್ ತರಗತಿಗಳಿಗಾಗಿ, ಸಮಸ್ತ ಈ ಹಿಂದೆಯೇ ಎಲ್ಲಾ ಸಿದ್ಧತೆಗಳನ್ನು ನಡೆಸಿದ್ದು, ವಿದ್ಯಾಭ್ಯಾಸ ಬೋರ್ಡ್‌ ಅದಕ್ಕಾಗಿ ಆರು ಕ್ಯಾಮರಾ ಯುನಿಟ್ ಗಳ ಕ್ಲಾಸ್ ರೂಂಗಳು ,22 ಪರಿಣತರಾದ ಅಧ್ಯಾಪಕರನ್ನು ನೇಮಕಗೊಳಿಸಿದೆ.  ತರಗತಿ ಆರಂಭದಿಂದ ಕೊನೆಯವರೆಗೂ ವಿದ್ಯಾರ್ಥಿ ಜೊತೆ ಪೋಷಕರು ಕುಳಿತಿರಬೇಕು.ಹೋಂ ವರ್ಕ್ ನೀಡಿದರೆ, ಅದನ್ನು ಮಾಡಿ, ಮುಂದೆ ಮದ್ರಸಗಳಲ್ಲಿ ತರಗತಿ ಆರಂಭಗೊಳ್ಳುವಾಗ ಮೌಲ್ಯಮಾಪನಕ್ಕಾಗಿ ಅಧ್ಯಾಪಕರಿಗೆ ತೋರಿಸಬೇಕು. ಮನೆಯಲ್ಲಿ ತರಗತಿಯ ವಾತಾವರಣವನ್ನು ಒದಗಿಸಿಕೊಟ್ಟು,ವಿದ್ಯಾರ್ಥಿಗಳಿಗೆ ಮನೆಯವರು ಸಹಕರಿಸಬೇಕು. ಅಲ್ಲದೇ, ಮದ್ರಸಾ ಹಾಗೂ ಜಮಾಅತ್ ಕಮಿಟಿಗಳು ಸೇರಿ, ಆನ್‌ಲೈನ್ ತರಗತಿಗಳು ಆಯಾ ಮದ್ರಸಗಳ ವಿದ್ಯಾರ್ಥಿಗಳಿಗೆ ಅವರವರ ಮನೆಗಳಲ್ಲಿಯೇ ಸುಲಭವಾಗಿ ತಲುಪುವಂತೆ ಎಲ್ಲಾ ರೀತಿಯಲ್ಲಿ ಸಹಕಾರವನ್ನು ನೀಡಬೇಕು. ಮದ್ರಸಗಳು ತ...

Payyakki Usthad Islamic Academy -Ansariya College of Islamic Science10th Anniversary & Convocation Program-#Photo Gallery......