- ನಿಝಾಮ್ ಅನ್ಸಾರಿ ಕಲ್ಲಡ್ಕ ಕೆಲವು ಧಾರ್ಮಿಕ ಸಂಸ್ಥೆಗಳು ಅವರ ಆರಾಧನೆಯ ನೆಪದಲ್ಲಿನ ಸಾಮೂಹಿಕ ಒಗ್ಗೂಡುವಿಕೆಯು ಆರಾಧಕರ ಸಂಖ್ಯೆಯನ್ನು ಕಡಿಮೆ ಮಾಡಿಕೊಂಡು ಈಗಲೂ ಮುಂದುವರೆಯುತ್ತಿದೆ. ಈ ಸಂಗಮಗಳು ಹಾಗೂ ಅನ್ಯೋನ್ಯವಾದ ಒಟ್ಟು ಸೇರುವಿಕೆಯು ತಂದೊಡ್ಡಬಹುದಾದಂತಹ ಆಘಾತಗಳು ಗುರುತರವಾದದ್ದು. ಎಲ್ಲಾ ಧಾರ್ಮಿಕ ಸಂಸ್ಥೆಗಳೂ ಈ ರೀತಿಯ ಗುಂಪು ಸೇರುವುದನ್ನು ಬಿಟ್ಟು, ಇತರರಿಗೆ ಮಾದರಿಯಾಗಬೇಕಿದೆ. ಬಹುತೇಕ ಮಸೀದಿಗಳೂ ಉತ್ತರದಾಯಿತ್ವ ಪ್ರಜ್ಞೆಯಿಂದ ಆರೋಗ್ಯ ಇಲಾಖೆ ಸೂಚಿಸುವುದಕ್ಕಿಂತಲೂ ಮೊದಲೇ ಜಾಗೃತರಾಗಿ ಸಾಮೂಹಿಕ ಪ್ರಾರ್ಥನೆಗಳನ್ನು ಮೊಟಕುಗೊಳಿಸಿದ್ದವು. ಆದರೆ, ಎಲ್ಲಯೋ ಕೆಲವೊಂದಷ್ಟು ಈಗಲೂ ತೆರೆದಿಟ್ಟಿವೆ. ಮಸೀದಿಗಳನ್ನು ತೆರೆದಿಡುವವರು ‘ಪ್ರವಾದಿ ಚರ್ಯೆಯನ್ನು ಪಾಲಿಸುತ್ತಿದ್ದೇವೆ’ ಎಂದು ವಾದಿಸುತ್ತಿದ್ದಾರೆ. ವಾಸ್ತವ ಹೇಳಬೇಕಾದರೆ, ಅವರು ಪ್ರವಾದಿ ಚರ್ಯೆಯ, ಪ್ರವಾದಿ ಕಲ್ಪನೆಯ ನೇರ ಉಲ್ಲಂಘನೆಯನ್ನಾಗಿದೆ ಮಾಡುತ್ತಿರುವುದು. ಇಸ್ಲಾಮಿನ ನಿಯಮಗಳ (ಶರೀಅಃ) ಐದು ಉನ್ನತ ಲಕ್ಷ್ಯಗಳಲ್ಲೊಂದು ಜೀವನ ಸಂರಕ್ಷಣೆಯೇ ಆಗಿದೆ. ಆದ್ದರಿಂದ ಮುಸಲ್ಮಾನರು ತೊಂದರೆಗಳನ್ನು ತಡೆಯಲಿಕ್ಕಿರುವ ಎಲ್ಲಾ ಹೆಜ್ಜೆಗಳನ್ನು ಸ್ವೀಕರಿಸಲು ಬಾಧ್ಯಸ್ಥರಾಗಿರುವರು. ರೋಗ ಹರಡುವಿಕೆಯನ್ನು ತಡೆ ಹಿಡಿಯುವ ಮಾರ್ಗಗಳೂ ಇದರೊಳಗೆ ಸೇರಿಕೊಂಡಿವೆ ಎಂಬುದೂ ಸ್ಪಷ್ಟ. ಅಚ್ಚರಿಯ ವಿಷಯವೇನೆಂದರೆ, 1400 ವರ್ಷಗಳ ಹಿಂದೆ ಪ್ರವಾದಿ ಮುಹಮ್ಮದ್ ಪೈಗಂಬರರು ಕ್ವಾರಂಟೈನ್...
ಪಥಿಕನ ಬಗ್ಗೆ ಸಿಂಪಲ್ಲಾಗಿ : ನಿಝಾಮ್ ಅನ್ಸಾರಿ - ತಂ - ದಿ. ಇಸ್ಮಾಯಿಲ್ ಯು.ಕೆ, ತಾ -ಝುಬೈದಾ. ಕಲ್ಲಡ್ಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ. ಕಾಸರಗೋಡು ಧಾರ್ಮಿಕ-ಲೌಕಿಕ ಸಮನ್ವಯ ಶಿಕ್ಷಣ ಸಂಸ್ಥೆಯಲ್ಲಿ ಪದವಿ ವ್ಯಾಸಂಗ. ಸಮಾಜಶಾಸ್ತ್ರದಲ್ಲಿ ಬಿ.ಎ ಹಾಗೂ ಅರಬಿಕ್ ನಲ್ಲಿ 'ಅನ್ಸಾರಿ' ಪದವೀಧರ, ಪ್ರಸ್ತುತ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿ.