ವಿಷಯಕ್ಕೆ ಹೋಗಿ

ಕೋವಿಡ್ ಕಾಲದ ಮತಾಚರಣೆ

- ನಿಝಾಮ್ ಅನ್ಸಾರಿ ಕಲ್ಲಡ್ಕ

ಕೆಲವು ಧಾರ್ಮಿಕ ಸಂಸ್ಥೆಗಳು ಅವರ ಆರಾಧನೆಯ ನೆಪದಲ್ಲಿನ ಸಾಮೂಹಿಕ ಒಗ್ಗೂಡುವಿಕೆಯು ಆರಾಧಕರ ಸಂಖ್ಯೆಯನ್ನು ಕಡಿಮೆ ಮಾಡಿಕೊಂಡು ಈಗಲೂ ಮುಂದುವರೆಯುತ್ತಿದೆ. ಈ ಸಂಗಮಗಳು ಹಾಗೂ ಅನ್ಯೋನ್ಯವಾದ ಒಟ್ಟು ಸೇರುವಿಕೆಯು ತಂದೊಡ್ಡಬಹುದಾದಂತಹ ಆಘಾತಗಳು ಗುರುತರವಾದದ್ದು. ಎಲ್ಲಾ ಧಾರ್ಮಿಕ ಸಂಸ್ಥೆಗಳೂ ಈ ರೀತಿಯ ಗುಂಪು ಸೇರುವುದನ್ನು ಬಿಟ್ಟು, ಇತರರಿಗೆ ಮಾದರಿಯಾಗಬೇಕಿದೆ.

Eid-al-Fitr1
ಬಹುತೇಕ ಮಸೀದಿಗಳೂ ಉತ್ತರದಾಯಿತ್ವ ಪ್ರಜ್ಞೆಯಿಂದ ಆರೋಗ್ಯ ಇಲಾಖೆ ಸೂಚಿಸುವುದಕ್ಕಿಂತಲೂ ಮೊದಲೇ ಜಾಗೃತರಾಗಿ ಸಾಮೂಹಿಕ ಪ್ರಾರ್ಥನೆಗಳನ್ನು ಮೊಟಕುಗೊಳಿಸಿದ್ದವು. ಆದರೆ, ಎಲ್ಲಯೋ ಕೆಲವೊಂದಷ್ಟು ಈಗಲೂ ತೆರೆದಿಟ್ಟಿವೆ. ಮಸೀದಿಗಳನ್ನು ತೆರೆದಿಡುವವರು ‘ಪ್ರವಾದಿ ಚರ್ಯೆಯನ್ನು ಪಾಲಿಸುತ್ತಿದ್ದೇವೆ’ ಎಂದು ವಾದಿಸುತ್ತಿದ್ದಾರೆ. ವಾಸ್ತವ ಹೇಳಬೇಕಾದರೆ, ಅವರು ಪ್ರವಾದಿ ಚರ್ಯೆಯ, ಪ್ರವಾದಿ ಕಲ್ಪನೆಯ ನೇರ ಉಲ್ಲಂಘನೆಯನ್ನಾಗಿದೆ ಮಾಡುತ್ತಿರುವುದು. ಇಸ್ಲಾಮಿನ ನಿಯಮಗಳ (ಶರೀಅಃ) ಐದು ಉನ್ನತ ಲಕ್ಷ್ಯಗಳಲ್ಲೊಂದು ಜೀವನ ಸಂರಕ್ಷಣೆಯೇ ಆಗಿದೆ. ಆದ್ದರಿಂದ ಮುಸಲ್ಮಾನರು ತೊಂದರೆಗಳನ್ನು ತಡೆಯಲಿಕ್ಕಿರುವ ಎಲ್ಲಾ ಹೆಜ್ಜೆಗಳನ್ನು ಸ್ವೀಕರಿಸಲು ಬಾಧ್ಯಸ್ಥರಾಗಿರುವರು. ರೋಗ ಹರಡುವಿಕೆಯನ್ನು ತಡೆ ಹಿಡಿಯುವ ಮಾರ್ಗಗಳೂ ಇದರೊಳಗೆ ಸೇರಿಕೊಂಡಿವೆ ಎಂಬುದೂ ಸ್ಪಷ್ಟ.

f3b4f9ef4aac4fe49b79542ad6907eda_18

ಅಚ್ಚರಿಯ ವಿಷಯವೇನೆಂದರೆ, 1400 ವರ್ಷಗಳ ಹಿಂದೆ ಪ್ರವಾದಿ ಮುಹಮ್ಮದ್ ಪೈಗಂಬರರು ಕ್ವಾರಂಟೈನ್ ನ ಬಗ್ಗೆ ತಿಳಿಸಿಕೊಟ್ಟರು: “ಸಾಂಕ್ರಮಿಕ ರೋಗಕ್ಕೆ ತುತ್ತಾದವರು ಆರೋಗ್ಯವಂತರೊಡನೆ ಬೆರೆಯಬಾರದು. ಇದಿಷ್ಟು ಹೇಳಿ ಪ್ರವಾದಿಯರು “ ಒಂದು ಪ್ರದೇಶದಲ್ಲಿ ಸಾಂಕ್ರಾಮಿಕ ರೋಗ ಇದೆ ಎಂದು ತಿಳಿದರೆ, ಆ ಕಡೆಗೆ ಹೋಗಬಾರದು. ಆ ಪ್ರದೇಶದಲ್ಲೇ ನೀವಿರುವುದಾದರೆ, (ರೋಗವು ವ್ಯಾಪಿಸುವುದನ್ನು ತಡೆಯಲು) ನೀವು ಆ ಪ್ರದೇಶವನ್ನು ಬಿಟ್ಟು ಎಲ್ಲಿಗೂ ಹೋಗಬಾರದು. ಸಾಂಕ್ರಾಮಿಕ ರೋಗ ಬಾಧಿತರಿಂದ ದೂರವಿರಲು ಪ್ರವಾದಿಯರು ಸಲಹೆ ನೀಡಿದರು.
ಒಮ್ಮೆ ಓರ್ವ ರೋಗ ಬಾಧಿತ ಮನುಷ್ಯನೊಬ್ಬ , ಪ್ರವಾದಿಯರೊಂದಿಗೆ (ಬೈಅತ್) ಅನುಸರಣಾ ಪ್ರತಿಜ್ಞೆಯನ್ನು ಸ್ವೀಕರಿಸುವುದಕ್ಕಾಗಿ ಮುಂದೆ ಬಂದು ಕೈ ಚಾಚಿದರು. ಆಗ ಅದನ್ನು ನಯವಾಗಿಯೇ ತಿರಸ್ಕರಿಸುತ್ತಾ ಪ್ರವಾದಿಯರು ಹೇಳಿದರು “ತಮ್ಮ ಪ್ರತಿಜ್ಞೆಯನ್ನು ನಾನು ಸ್ವೀಕರಿಸಿದ್ದೇನೆ”.
ಸಾಂಕ್ರಮಿಕ ರೋಗ, ಪ್ರವಾಹ ಇತ್ಯಾದಿ ಪ್ರಕೃತಿ ದುರಂತಗಳ ಸಂದರ್ಭಗಳಲ್ಲಿ ಪ್ರವಾದಿ ಮಹಮ್ಮದರು ಮಸೀದಿಯಲ್ಲಿನ ಸಾಮೂಹಿಕ ನಮಾಝನ್ನು ಸ್ಥಗಿತಗೊಳಿಸುತ್ತಿದ್ದರು. ಬಹಳ ಗಂಭೀರವಾದ ತೊಂದರೆ, ಹಾನಿ ಸಾಧ್ಯತೆಗಳಿರುತ್ತಿದ್ದಲ್ಲಿ, ಅವುಗಳನ್ನು ಯಾವ ವಿಧಾನದಲ್ಲಾದರೂ ತಡೆಯಲು ಶ್ರಮಿಸಬೇಕೆಂದಾಗಿದೆ ಪ್ರವಾದಿ ಪಾಠ.

[gallery ids="876,877" type="rectangular" orderby="rand"]
ಪ್ರವಾದಿಯರ ಬಗ್ಗೆ ಹೇಳೋದನ್ನ ಸಾಮಾನ್ಯವಾಗಿ ನಾವು ಕೇಳಿರಬಹುದು, ಬೆಳ್ಳುಳ್ಳಿಯನ್ನು ತಿಂದ ಮನುಷ್ಯ ಇತರರಿಗೆ ತೊಂದರೆ ಆಗದಿರಲು ಅದರ ಗಂಧವು ಹೋಗುವ ತನಕವೂ ಸಾಮೂಹಿಕವಾದ ಪ್ರಾರ್ಥನೆಗಳಲ್ಲಿ ಸೇರಕೂಡದು ಎಂಬ ಉಪದೇಶ. ಸಾಮೂಹಿಕ ಪ್ರಾರ್ಥನೆಯ ಮೂಲಕ ಸಿಗುವ ವಿಶೇಷ ಪುಣ್ಯಕ್ಕಾಗಿ, ಇತರ ಮನುಷ್ಯರಿಗೆ ತೊಂದರೆಯುಂಟು ಮಾಡುವುದನ್ನು ಅದ್ಹೇಗೆ ಪ್ರವಾದಿ ಚರ್ಯೆ ಎನ್ನಲಾದೀತು..? ಸರ್ವಶಕ್ತನೂ, ಪರಮ ಕಾರುಣ್ಯನೂ ಆದ ಸೃಷ್ಟಿಕರ್ತನು ಎಲ್ಲೆಡೆ ಇದ್ದಾನಲ್ವಾ..? ಎಲ್ಲಿಯೂ ನಿರ್ವಹಿಸುವ ಪ್ರಾರ್ಥನೆಗಳನ್ನೂ ಸ್ವೀಕರಿಸುತ್ತಾನೆ ಅಂದ ಮೇಲೆ, ಖಂಡಿತವಾಗಿಯೂ ಕೋವಿಡ್ ದಿನಗಳ ನಮ್ಮ ಭಕ್ತಿಯನ್ನು ಅವನು ಪ್ರತ್ಯೇಕವಾಗಿ ಪರಿಗಣಿಸುತ್ತಾನೆ ಎಂಬುದು ಸ್ಪಷ್ಟ.
ವರ್ಷಗಳ ನಂತರ ಇಸ್ಲಾಮಿಕ್ ಆಡಳಿತದ ದ್ವಿತೀಯ ಖಲೀಫ ಉಮರ್ ಅವರು ಈ ಪ್ರವಾದಿ ಆಜ್ಞಾಪನೆಗಳ ಮಾದರಿಯನ್ನು ಜಗತ್ತಿಗೆ ತೋರಿಸಿಕೊಟ್ಟರು. ಸಿರಿಯಾದ ದಾರಿಮಧ್ಯೆ, ಅಲ್ಲಿ ಕಾಲರಾ ರೋಗ ಹರಡಿದೆ ಎಂದು ತಿಳಿದ ಅವರು ಕೂಡಲೇ ಮದೀನದ ಕಡೆಗೇ ಹಿಂತಿರುಗಲನುವಾದರು. ಆಗ ಒಬ್ಬ ಅನುಯಾಯಿ ಕೇಳಿದರು: “ಸೃಷ್ಟಿಕರ್ತನ ವಿಧಿಯಿಂದ ಓಡಿ ರಕ್ಷೆ ಹೊಂದುತ್ತಿದ್ದೀರೋ..? ಉಮರ್ ಉತ್ತರ ನೀಡಿದರು “ಎಂದಿಗೂ ಅಲ್ಲ. ನಾವು ಸೃಷ್ಟಿಕರ್ತನ ಒಂದು ವಿಧಿಯಿಂದ ಇನ್ನೊಂದು ವಿಧಿಯೆಡೆಗೆ ಮರಳುತ್ತಿದ್ದೇವೆ”. ಮುಂದುವರಿಯುತ್ತಾ ಉಮರ್ ಕೇಳಿದರು : ಬರಡಾದ ಒಂದು ಬಂಜರು ಭೂಮಿಯಿಂದ ಫಲವತ್ತಾದ ಪ್ರದೇಶದ ಕಡೆಗೆ ನೀವು ನಿಮ್ಮ ಆಡುಗಳೊಂದಿಗೆ ಪಲಾಯನ ಮಾಡುವುದಿಲ್ಲವೇ? ಅದು ನಿಜಕ್ಕೂ ದೇವವಿಧಿಯಿಂದ ರಕ್ಷೆ ಹೊಂದುವುದಾಗಿದೆಯೇ?”. ಸೃಷ್ಟಿಕರ್ತನ ವಿಧಿಯನ್ನುü ಸ್ವೀಕರಿಸುವುದು, ಮನುಷ್ಯನ ಸ್ವತಂತ್ರ ಬುದ್ಧಿ, ಆಲೋಚನೆ ಮತ್ತು ಪ್ರಾಯಪ್ರಜ್ಞೆಗೆ ಒಳಿತಾಗುವುದನ್ನು ಪಡೆದುಕೊಳ್ಳಲೂ, ತೊಂದರೆ ಅನಿಸಿದ್ದನ್ನು ತ್ಯಜಿಸುವುದಕ್ಕಿರುವ ಸ್ವಾತಂತ್ರ್ಯಕ್ಕೂ ವಿರುದ್ಧವಲ್ಲ.

h41_17258477
ಈ ಅಸ್ವಾಭಾವಿಕ ಸಂದರ್ಭದಲ್ಲಿ ಇಸ್ಲಾಮೀ ತತ್ವಗಳು ನಮಗೆ ದಾರಿ ತೋರಿಸುತ್ತವೆ. ರೋಗ ಇರುವವರಿಗೂ, ರೋಗವಿರಬಹುದೆಂದು ಶಂಕಿಸಲ್ಪಡುವವರಿಗೂ ಸಾಮೂಹಿಕ ನಮಾಝ್‍ಗಳಲ್ಲಿ ಸೇರದೆ ದೂರವಿರಬಹುದೆಂಬ ವಿಷಯದಲ್ಲಿ ವಿದ್ವಾಂಸರ ನಡುವೆ ಏಕಾಭಿಪ್ರಾಯವೇ ಆಗಿದೆ. ಅದೇ ರೀತಿ ಬಂಧನದಲ್ಲೋ, ಕಾರಾಗೃಹದಲ್ಲೋ {ಐಸೋಲೇಶನ್ನಲ್ಲೂ) ಕಳೆಯುವವರೂ ಇದೇ ಪಟ್ಟಿಯಲ್ಲಿ ಸೇರುತ್ತಾರೆ. ಸರಿಯಾದ ಶುಚಿತ್ವ ಮತ್ತು ಅಂಗಾಗಗಳ ಶುದ್ಧೀಕರಣ ಎಲ್ಲವೂ ಈ ಯುದ್ಧದಲ್ಲಿ ನಿರ್ಣಾಯಕವಾದುದು ಎಂಬುದನ್ನು ಕಳೆದೆರೆಡು ವಾರಗಳಿಂದಲೂ ಆರೋಗ್ಯ ತಜ್ಞರು ಎಚ್ಚರಿಸುತ್ತಲೇ ಇದ್ದಾರೆ. ಮುಸ್ಲಿಮರಿಗೆ ಇದ್ಯಾವುದೂ ಹೊಸತೇನಲ್ಲ. ‘ಶುದ್ಧಿಯು ಈಮಾನಿನ ಅರ್ಧ ಭಾಗ’ ಎಂಬ ಪ್ರವಾದಿ ನುಡಿ ಸಣ್ಣ ಮಕ್ಕಳಿಗೂ ಕಂಠಪಾಠವಿದೆ.
ಪ್ರವಾದಿವರೇಣ್ಯರು ಹೇಳಿದರು: “ ನೀವು ನಿದ್ದೆಯಿಂದ ಎದ್ದಾಗ ನಿಮ್ಮೆರಡು ಕೈಗಳನ್ನು ತೊಳೆಯಿರಿ. ಕಾರಣ ರಾತ್ರಿ ಮಲಗಿರುವಾಗ ನಿಮ್ಮ ಕೈಗಳು ಎಲ್ಲಿರುತ್ತವೆ ಎಂದು ತಿಳಿದಿರುವುದಿಲ್ಲ ಅಲ್ಲವೇ”. ಆಹಾರ ಸೇವನೆಯ ಮೊದಲು ಮತ್ತು ನಂತರ ಕೈಗಳು ತೊಳೆಯುವುದರಿಂದಲೇ ಆಹಾರದಲ್ಲಿ ಪುಣ್ಯವಿರುವುದು ಎಂದು ಪ್ರವಾದಿ ತಿಳಿ ಹೇಳಿದರು. ಮತಾಚರಣೆ ಮಾಡುವ ಮುಸ್ಲಿಂ ದಿನದ ಐದು ಸಮಯಗಳಲ್ಲಿ ನಮಾಝ್ ನಿರ್ವಹಿಸಬೇಕು. ಈ ಎಲ್ಲಾ ಪ್ರಾರ್ಥನೆಗಳ ಮುನ್ನ ಕೈಕಾಲುಗಳು, ಮುಖ ಹಾಗೂ ಮೂಗಿನ ರಂಧ್ರಗಳೂ ಹಾಗೂ ಕಿವಿಯ ಬಾಹ್ಯ ಭಾಗಗಳನ್ನು ಶುಚಿಗೊಳಿಸುವುದು ಇತ್ಯಾದಿಗಳಡಗಿರುವ ಅಂಗಶುದ್ಧಿಯನ್ನು ನಿರ್ವಹಿಸಲೇಬೇಕು. ಶುದ್ಧಿ , ಶುಚಿತ್ವ ಹಾಗೂ ಜನರಿಂದ ಸ್ವತಃ ದೂರವಿರುವಿಕೆ, ಬಂಧನದಲ್ಲಿರುವಿಕೆ ಈ ಎಲ್ಲಾ ರೀತಿಯ ಜನಾರೋಗ್ಯ ಕಾಪಾಡುವ ನಿಯಮಾವಳಿಗಳನ್ನು ಉಲ್ಲಂಘಿಸಲು ಮುಸಲ್ಮಾನರಿಗೆ ಯಾವುದೇ ರೀತಿಯ ಧಾರ್ಮಿಕ ಸಮರ್ಥನೆಗಳನ್ನು ಮುಂದಿಡಲಾಗದು. ವಾಸ್ತವದಲ್ಲಿ ಅವುಗಳನ್ನು ಪಾಲಿಸುವುದು ಧಾರ್ಮಿಕವಾದ ಬಾಧ್ಯತೆಯೇ ಆಗಿದೆ.

*******************************************************

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಳಿವಿನಂಚಿನಲ್ಲಿರುವ ಸಾಂಪ್ರದಾಯಿಕ ಕೃಷಿ ಪರಂಪರೆ-* ನಿಝಾಮ್ ಅನ್ಸಾರಿ

ಭಾರತವು ಕೃಷಿ ಅವಲಂಬಿತ ಹಳ್ಳಿಗಳನ್ನೊಳಗೊಂಡ ಸಮೃದ್ಧ ದೇಶ. ದೇಶದ ಬೆಳವಣಿಗೆಯಲ್ಲಿ ವ್ಯವಸಾಯದ ಪಾತ್ರ ಬಹುಮುಖ್ಯವಾದುದು. ತಂತ್ರಜ್ಞಾನವು ದೇಶಕ್ಕೆ ಯಾವ ರೀತಿಯಲ್ಲಿ ಕೊಡುಗೆಗಳನ್ನು ನೀಡುತ್ತವೆಯೋ ಅದೇ ರೀತಿಯಲ್ಲಿ ಕೃಷಿಯ ಕೊಡುಗೆಯೂ ಕೂಡಾ ಅಪಾರವಾದುದು. ಆದರೆ ಇತ್ತೀಚಿನ ದಿನಗಳಲ್ಲಿ ಹಳ್ಳಿಗಳಲ್ಲಿ ವ್ಯವಸಾಯವು ಇಳಿಮುಖವಾಗುತ್ತಿದೆ. ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವವರನ್ನು ಕಾಣಬಹುದಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿನ ಜನರು ವಿದ್ಯಾವಂತರಾಗುತ್ತಲೇ ತಮ್ಮ ಪಾರಂಪರಿಕ ಕುಲ ಕಸುಬನ್ನು ನಿರ್ಲಕ್ಷಿಸಿ ನಗರಗಳತ್ತ ವಲಸೆ ಹೋಗುತ್ತಿದ್ದಾರೆ.ಕೈ ಕೆಸರು ಮಾಡಿಕೊಂಡು ದುಡಿಯುವವರ ಕೊರತೆ ಅಗಾಧವಾಗಿ ಎದ್ದು ಕಾಣುತ್ತಿದೆ. ಇಂದಿನ ನವ ತಲೆಮಾರು ಹಳ್ಳಿಗಳು ಕೇವಲ ವೃದ್ಧರಿಗೆ ಮಾತ್ರ ಯೋಗ್ಯವಾದುದು ಎಂದು ತಿಳಿದಂತಿದೆ. `ನೇಗಿಲಾ ಹಿಡಿದಾ ಹೊಲದಲಿ ಹಾಡುತ ಉಳುವಾ ಯೋಗಿಯ ನೋಡಲ್ಲಿ’ ಎಂದು ಕುವೆಂಪುರಂತಹ ಖ್ಯಾತ ಕವಿಗಳಿಂದ ಕೊಂಡಾಡಲ್ಪಟ್ಟ ಕೃಷಿ ಚಟುವಟಿಕೆಗಳಿಂದು ಕಣ್ಮರೆಯಾಗಿದೆ. ನೇಗಿಲಿನಂತಹ ಕೃಷಿ ಸಲಕರಣೆಗಳು ಇಂದು ಮ್ಯೂಸಿಯಂ ಸೇರಿಬಿಟ್ಟಿವೆ. ಇದರೊಂದಿಗೆ ಅತ್ಯಂತ ಸುಂದರವಾದ ಕೃಷಿ ಪರಂಪರೆ ಮೂಲೆಗುಂಪಾಗುತ್ತಿದೆ. ಹಳೆಯ ಕಾಲದ ಸಾಂಪ್ರದಾಯಿಕ ಬೇಸಾಯಕ್ಕೆ ಉಪಯೋಗವಾಗುತ್ತಿದ್ದ ಪರಿಕರಗಳ ಸ್ಥಾನವನ್ನು ಟ್ರಾಕ್ಟರ್,ಟಿಲ್ಲರ್ ಗಳಂತಹ ಯಂತ್ರಗಳು ಆಕ್ರಮಿಸಿಕೊಂಡಿವೆ. ಭತ್ತ ನಾಟಿ ಮಾಡುವ ಮಹಿಳೆಯರಿಂದ ಕೇಳಿ ಬರು...

ಅರಬಿ ಭಾಷೆ : ಇತಿಹಾಸ ಮತ್ತು ವರ್ತಮಾನ

✒ ನಿಝಾಮ್ ಅನ್ಸಾರಿ ಭಾಷೆ ಮನುಷ್ಯನ ಸವಿಶೇಷತೆಗಳಲ್ಲೊಂದು. ಚಿಂತನೆಗಳು ಮತ್ತು ಅಭಿರುಚಿಗಳ ಆಶಯವನ್ನು ಅಭಿವ್ಯಕ್ತಿಗೊಳಿಸುವ ಅಥವಾ ಹೊರ ಹಾಕುವ ಶಬ್ದಗಳ ಒಂದು ಸಮೂಹವಾಗಿದೆ ಇದು. ಪ್ರಪಂಚದಲ್ಲಿ ಇಂದು ಹಲವು ಅಧಿಕೃತವಾಗಿರುವ ಭಾಷೆಗಳು ಅಸ್ತಿತ್ವದಲ್ಲಿವೆ.ಅದರಲ್ಲೂ ಪ್ರಾದೇಶಿಕ ಭಾಷೆಗಳು ಬೇರೇನೆ. ಆದರೆ ಈ ಎಲ್ಲಾ ಭಾಷೆಗಳ ಪೈಕಿ ರಾಜನಂತೆ ಇರೋದು ಅರಬಿ ಭಾಷೆ ಮಾತ್ರ . ಒಂದು ಕಾಲದಲ್ಲಿ ಇಡೀ ಜಗತ್ತನ್ನೇ ನಿಯಂತ್ರಿಸುವ ತಾಕತ್ತಿದ್ದ ಭಾಷೆಯಾಗಿತ್ತು ಅರಬಿ. ಯಾವ ರೀತಿಯಲ್ಲಿ ಈಗ ಆಂಗ್ಲ ಭಾಷೆಗೆ ಪ್ರಾಧಾನ್ಯತೆ, ಜಾಗತಿಕ ಅಂಗೀಕಾರ ಇದೆಯೋ ಅದೇ ರೀತಿಯಲ್ಲಿ ಅಂದು ಅರಬಿ ಭಾಷೆ ಸ್ಥಾನ ಪಡೆದಿತ್ತು. ಬಲದಿಂದ ಎಡಕ್ಕೆ ಇರುವ ಕೆಲವೊಂದು ಭಾಷೆಗಳಲ್ಲಿ ಅರಬೀ ಕೂಡಾ ಒಂದು. ಸೈಮಟಿಕ್ ಭಾಷೆಗಳಲ್ಲೊಂದಾದ ಅರಬಿ ಜಗತ್ತಿನ ಅತ್ಯಂತ ಪುರಾತನ ಭಾಷೆಗಳ ಪೈಕಿ ಒಂದು ಕೂಡಾ . ಐಕ್ಯ ರಾಷ್ಟ್ರ ಸಂಘದ ಅಂಗೀಕೃತ ಭಾಷೆಯಾದ ಅರಬಿ, 26 ದೇಶಗಳ ಅಧಿಕೃತ ಭಾಷೆಯಾಗಿದೆ‌. ಆಫ್ರಿಕನ್ ಯೂನಿಯನ್ ಆರ್ಗನೈಸೇಷನ್ ಇಸ್ಲಾಮಿಕ್ ಕಾನ್ಫೆರನ್ಸ್ ನಂತಹ ಹಲವು ಅಂತಾರಾಷ್ಟ್ರೀಯ ಸಂಸ್ಥೆಗಳು ಅರಬಿ ಭಾಷೆಯನ್ನು ಅಧಿಕೃತ ಭಾಷೆಯಾಗಿ ಅಂಗೀಕರಿಸಿದೆ. ಅರಬಿ ಭಾಷೆ: ಹುಟ್ಟು ಮತ್ತು ಬೆಳವಣಿಗೆ ಬಿ.ಸಿ 1900 ರಲ್ಲಿ ಜೀವಿಸಿದ್ದ 'ಯಅರೂಬ್ ಇಬ್ನ್ ಖಹ್ತಾನ್' ಎಂಬವರನ್ನು ಅರಬಿ ಭಾಷೆಯ ಪಿತಾಮಹ ಎಂದು ಕರೆಯಲಾಗುತ್ತದೆ. ಇವರ ನಾಮಕ್ಕೆ ಹೊಂದಿಕೊಂಡು 'ಅರಬಿ' ಎಂಬ ಹೆಸರು...

ಕೋವಿಡ್ ಕಾಲದ ಓದು: ಚಂದ್ರನ ಚೂರು

'ಚಂದ್ರನ ಚೂರು' ಕೃತಿಯ ಹೆಸರು ಕೇಳಿದಾಗ ನಿಜವಾಗಿಯೂ ಅದೊಂದು ಕಾದಂಬರಿಯಾಗಿರಬಹುದು ಎಂದು ಭಾವಿಸಿದ್ದೆ. ಆದರೆ, ಪುಸ್ತಕ ಕೈಗೆ ತಲುಪಿದಾಗಲೇ ಗೊತ್ತಾಗಿದ್ದು, ಅದೊಂದು ಚಂದ್ರಲೋಕಕ್ಕೆ ಕೊಂಡೊಯ್ಯುವ ಅದ್ಭುತ ಕೃತಿ ಅಂತ. ತಂದೆ ಕುವೆಂಪು ಅವರ ಸಾಹಿತ್ಯದ ಹಾದಿಯಲ್ಲೇ ನಡೆದರೂ, ತೇಜಸ್ವಿಯವರ ಸಾಹಿತ್ಯವು ನಿಸರ್ಗ ವಿಸ್ಮಯ, ಭೂಗೋಳ, ಜೀವಶಾಸ್ತ್ರ, ಭತಶಾಸ್ತ್ರ, ಇತಿಹಾಸ ಹೀಗೇ ಎಲ್ಲಾ ಶಾಸ್ತ್ರಗಳ ಮಿಶ್ರಣ ರಸಾಯನ ಎಂದೇ ಹೇಳಬಹುದು. ಚಂದ್ರನ ಚೂರು ಚಂದ್ರ ಲೋಕದ ವಿಸ್ಮಯ ದೃಶ್ಯಗಳನ್ನು ಕಟ್ಟಿಕೊಡುವ ಚೊಚ್ಚಲ ಕೃತಿ. ಬಾಹ್ಯಾಕಾಶ, ಖಗೋಳ ಶಾಸ್ತ್ರ ವಿಷಯದಲ್ಲಿ ಆಸಕ್ತಿ ಇಲ್ಲದ ನನ್ನಂತವರನ್ನೂ ಇದು ಸರಾಗವಾಗಿ ಓದಿಸಿಕೊಂಡು ಹೋಗುವಂತೆ ಮಾಡುತ್ತದೆ, ಅದಕ್ಕೆ ಕಾರಣ, ತೇಜಸ್ವಿ ಅವರ ಬರವಣಿಗೆ ಹಾಗೂ ವಿವರಣೆಯ ಶೈಲಿ.. ಜಗತ್ತಿನಲ್ಲಿ ಮನುಷ್ಯನು ಚಂದ್ರನಲ್ಲಿಗೆ ಕಾಲಿಡುವುದಕ್ಕೂ ಮುನ್ನ, ಯಾವುದೆಲ್ಲಾ ರೀತಿಯ ಪರಿಶ್ರಮಗಳು ನಡೆದಿದ್ದವು ಹಾಗೂ ಭೂಮಂಡಲ ಮತ್ತು ಚಂದ್ರನ ಕುರಿತಾಘಿ ಯಾವುದೆಲ್ಲಾ ಆಯಾಮಗಳಲ್ಲಿ ಅಧ್ಯಯನಗಳಾಗಿದ್ದುವು ಎಂಬುದರ ಸಂಪೂರ್ಣ ವಿಷಯಗಳಿವೆ. ಚಂದ್ರನಲ್ಲಿ ತಲುಪಿದ ಮನುಷ್ಯನಿಗೆ ಆದ ಅನುಭವಗಳೇನು? ನೀಲ್ ಆಮ್Fಸ್ಟ್ರಾಂಗ್ ತಂಡದ ಚಂದ್ರಯಾನದ ರಸವತ್ತಾದ ಅನುಭವಗಳು, ಚಂದಿರನ ಮಣ್ಣಲ್ಲಿ ಅಮೇರಿಕದ ಫ್ಲಾಗ್ ಮತ್ತು ಬೋಡ್F ಸ್ಥಾಪಿಸಿ ಬಂದ ಆ ಧೀರ ತಂಡದ ಬೆರಗಾಗಿಸುವ ಕ್ಷಣ ಕ್ಷಣದ ವರದಿಗಳು ಈ ಕೃತಿಯ ಲೇಖನಗಳಲ್ಲಿ ಅಡಗಿದೆ. ಒಟ್ಟಿನಲ...