
ಉಪ್ಪಳ: ಪೈವಳಿಕೆ ಪಯ್ಯಕ್ಕಿ ಉಸ್ತಾದ್ ಇಸ್ಲಾಮಿಕ್ ಅಕಾಡೆಮಿಯ ಪೂರ್ವ ವಿದ್ಯಾರ್ಥಿ ಸಂಘ 'ಫೈಹಾ' ದ ವತಿಯಿಂದ ನಡೆಸಲ್ಪಡುವ 40 ದಿನಗಳ ತರ್ಬಿಯಾ ವೆಕೇಶನ್ ಸರ್ಟಿಫಿಕೇಟ್ ಕೋರ್ಸ್ ಗೆ ಸೋಮವಾರ ಉಪ್ಪಳದ ಬದ್ರಿಯಾ ಮದ್ರಸಾ ಸಭಾಂಗಣದಲ್ಲಿ ವಿದ್ಯುಕ್ತ ಚಾಲನೆ ನೀಡಲಾಯಿತು.
ಮುತವಲ್ಲಿ ಮುಹಮ್ಮದ್ ತುರುತ್ತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಪಯ್ಯಕ್ಕಿ ಉಸ್ತಾದ್ ಇಸ್ಲಾಮಿಕ್ ಅಕಾಡೆಮಿಯ ಅಧ್ಯಕ್ಷರಾದ ಅಬ್ದುಲ್ ಮಜೀದ್ ದಾರಿಮಿ ಪೈವಳಿಕೆ ಉದ್ಘಾಟಿಸಿದರು.

ಪೈವಳಿಕೆ ಅನ್ಸಾರಿಯಾ ದಅವಾ ಕಾಲೇಜಿನ ಅಧ್ಯಾಪಕರಾದ ರಫೀಕ್ ಬಾಖವಿ ಮಠ ಕಾರ್ಯಕ್ರಮದಲ್ಲಿ ತರ್ಬಿಯಾ ಕೋರ್ಸ್ ನ ಅನಿವಾರ್ಯತೆಯ ಬಗ್ಗೆ ವಿಷಯ ಮಂಡನೆ ನಡೆಸಿದರು.

ಕಾರ್ಯಕ್ರಮದಲ್ಲಿ ಪಯ್ಯಕ್ಕಿ ಉಸ್ತಾದ್ ಅಕಾಡೆಮಿಯ ಜ. ಸೆಕ್ರಟರಿ ಹನೀಫ್ ಹಾಜಿ ಪೈವಳಿಕೆ, ಟ್ರಶರರ್ ಅಝೀಝ್ ಹಾಜಿ ಮರಿಕ್ಕೆ,ಕಾರ್ಯದರ್ಶಿ ಸ್ವಾಲಿಹ್ ಹಾಜಿ ಕಳಾಯಿ ,ಪಯ್ಯಕ್ಕಿ ದರ್ಸ್ ಪೂರ್ವ ವಿದ್ಯಾರ್ಥಿಗಳ ಸಂಘ- ಓಸ್ಫೋಮಾಕ್ಸ್ ನ ಅಧ್ಯಕ್ಷರಾದ ಟಿ.ಎಚ್. ಅಬ್ದುಲ್ ಖಾದರ್ ಫೈಝಿ ಚೆಂಗಳ, ಪೈವಳಿಕೆ ಅನ್ಸಾರಿಯಾ ಕಾಲೇಜಿನ ಅಧ್ಯಾಪಕ ಲತೀಫ್ ದಾರಿಮಿ, ಕ್ಯಾಲಿಕಟ್ ಮುಹಮ್ಮದ್ ಹಾಜಿ,ಮುಹಮ್ಮದ್ ಕುಂಞಿ ಪೈವಳಿಕೆ, ಅಬ್ದುಲ್ ಜಬ್ಬಾರ್ ಉಪ್ಪಳ, ಹಮೀದ್ ಮಾಸಿಮಾರ್, ಹನೀಫ್ ಗೋಲ್ಡ್ ಕಿಂಗ್, ಉಪ್ಪಳ ಟೌನ್ ಖತೀಬ್ ಇಬ್ರಾಹಿಂ ಹನೀಫಿ, ಹನೀಫ್ ಮುಸ್ಲಿಯಾರ್ ತಹಾನಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪಯ್ಯಕ್ಕಿ ಅಕಾಡೆಮಿಯಿಂದ ಅನ್ಸಾರಿ ಬಿರುದು ಪಡೆದು, ಇತ್ತೀಚೆಗೆ ಮಂಗಳೂರಿನ ಶ್ರೀನಿವಾಸ್ ಯುನಿವರ್ಸಿಟಿಯಿಂದ ಬಿ.ಎಡ್ ಪದವೀಧರರಾಗಿ ಉತ್ತೀರ್ಣರಾದ ಅಬ್ದುಸ್ಸಮದ್ ಅನ್ಸಾರಿ ಹಾಗೂ ನಿಯಾಝ್ ಅನ್ಸಾರಿ, ಅಲ್ಲದೇ ಬೆಂಗಳೂರಿನ ಅಝೀಂ ಪ್ರೇಂಜಿ ಯುನಿವರ್ಸಿಟಿಯಲ್ಲಿ ಉನ್ನತ ವ್ಯಾಸಂಗಕ್ಕಾಗಿ ಪ್ರವೇಶಾತಿ ಪಡೆದ ಅದ್ನಾನ್ ಅನ್ಸಾರಿ ಇವರನ್ನು ಫೈಹಾ ದ ವತಿಯಿಂದ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.



ಈ ವೇಳೆ ತರ್ಬಿಯಾ ಕೋರ್ಸ್ ಗೆ ಪ್ರವೇಶಾತಿ ಪಡೆದ ವಿದ್ಯಾರ್ಥಿನಿಯರು ಮತ್ತು ಪೋಷಕರು ಹಾಗೂ ಸ್ಥಳೀಯರು ಮತ್ತು ಫೈಹಾದ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅದ್ನಾನ್ ಅನ್ಸಾರಿ ಸ್ವಾಗತಿಸಿ, ಅರಫಾತ್ ಅನ್ಸಾರಿ ವಂದಿಸಿದರು.
ಪ್ರಸ್ತುತ ಫೈಹಾ ತರ್ಬಿಯಾ ಕೋರ್ಸ್ ನಲವತ್ತು ದಿನಗಳಲ್ಲಿ ನಡೆಯಲಿದ್ದು, ಒಂದು ತಿಂಗಳ ಹಿಂದೆಯೇ ಪ್ರವೇಶಾತಿ ಅಪೇಕ್ಷೆ ಕರೆಯಲಾಗಿದ್ದು, 35 ರಷ್ಟು ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಮತ್ತು ಆಫ್ ಲೈನ್ ಮೂಲಕವೂ ಅಪೇಕ್ಷೆ ಸಲ್ಲಿಸಿದ್ದರು. ಅವಧಿಕಾಲದಲ್ಲಿ ವಿದ್ಯಾರ್ಥಿನಿಯರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸಿ, ಇಸ್ಲಾಮಿನ ಆಶಯಾದರ್ಶಗಳ ತಾತ್ವಿಕ ಹಾಗೂ ಪ್ರಾಯೋಗಿಕ ಕಲಿಕೆ ಒತ್ತು ನೀಡಿ. ಆಧುನಿಕತೆಯ ತಾಳಕ್ಕೆ ಗತಿಸಿ ಹೋಗುತ್ತಿರುವ ಧಾರ್ಮಿಕ ಮೌಲ್ಯಗಳ ಕುರಿತಾದ ಅರಿವು ಮೂಡಿಸಿ ಆ ಮೂಲಕ ಸಮರ್ಥರಾದ ಸ್ತ್ರೀ ಸಮುದಾಯವನ್ನು ಸಮಾಜಕ್ಕೆ ಸಮರ್ಪಿಸುವ ಮಹತ್ತರವಾದ ಉದ್ದೇಶವನ್ನು ಹೊಂದಿದೆ ಫೈಹಾ. ಅದಕ್ಕಾಗಿಯೇ ದಿನದ ನಾಲ್ಕು ಗಂಟೆಗಳಲ್ಲಿ ಮೂರು ಅಧ್ಯಾಪಕರನ್ನಿಟ್ಟುಕೊಂಡು ಪ್ರತ್ಯೇಕ ಸಿಲಬಸ್ ನ ಪ್ರಕಾರ ತರಗತಿಯನ್ನು ನಡೆಸಲಾಗುತ್ತಿದೆ. ಪ್ರಸ್ತುತ ಕೋರ್ಸ್ ನ ಕೊಆಡಿನೇಟರಾಗಿ ಜಾಬಿರ್ ಅನ್ಸಾರಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕಾಮೆಂಟ್‌ಗಳು