ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮೇ, 2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ದಾರುಲ್ ಹುದಾ: ಕೀರ್ತಿಯ ಕಿರೀಟಕ್ಕೆ ಮತ್ತೊಂದು ಗರಿ

'ದಾರುಲ್ ಹುದಾ' ಜೊತೆ ಒಡಂಬಡಿಕೆಗೆ ಸಹಿ ಹಾಕಿದ ಮೊರೊಕ್ಕೊ 'ಅಲ್ ಖರವಿಯ್ಯೀನ್' ವಿಶ್ವವಿದ್ಯಾನಿಲಯ..! ಜಗತ್ತಿನ ಅತಿ ಪುರಾತ‌ನ ಇಸ್ಲಾಮಿಕ್ ವಿದ್ಯಾಲಯವಾದ ಮೊರೋಕ್ಕೊ ದಲ್ಲಿರುವ 'ಅಲ್ ಖರವಿಯ್ಯೀನ್' ವಿಶ್ವವಿದ್ಯಾಲಯವು, ಚೆಮ್ಮಾಡ್ ದಾರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯೊಂದಿಗೆ ಸಹಕಾರ ಒಡಂಬಡಿಕೆಯ ಪತ್ರಕ್ಕೆ ಸಹಿ ಹಾಕಿತು. ಒಡಂಬಡಿಕೆಗೆ ಸಹಿ ಹಾಕುವ ಕಾರ್ಯಕ್ರಮವು 'ಅಲ್ ಖರವಿಯ್ಯೀನ್ ವಿಶ್ವವಿದ್ಯಾಲಯ'ದ ಉನ್ನತ ಮತ ಶಿಕ್ಷಣ ವಿಭಾಗ 'ದಾರುಲ್ ಹದೀಸ್ ಅಲ್ ಹಸನಿಯ್ಯ'ದ ಕ್ಯಾಂಪಸ್ನಲ್ಲಿ ಜರುಗಿತು. ಯುನೆಸ್ಕೊ ಮತ್ತು ಗಿನ್ನೆಸ್ ವಿಶ್ವ ದಾಖಲೆ ಪಟ್ಟಿಯ ಪ್ರಕಾರ ಜಗತ್ತಿನ ಅತ್ಯಂತ ಪುರಾತನವಾದ ಧಾರ್ಮಿಕ ಉನ್ನತ ಶಿಕ್ಷಣ ಕೇಂದ್ರವಾಗಿದೆ ಅಲ್ ಖರವಿಯ್ಯೀನ್ ವಿಶ್ವವಿದ್ಯಾಲಯ. ಅರಬ್ ವಂಶಜರಾಗಿದ್ದ ಫಾತಿಮ ಅಲ್ ಫಿಹ್ರಿ , ಕ್ರಿ.ಶ 859 ರಲ್ಲಿ ಸ್ಥಾಪಿಸಿದ ಪ್ರಾಥಮಿಕ ಮತ ಶಿಕ್ಷಣ ಶಾಲೆಯಾಗಿತ್ತು ಅದು. ಆನಂತರ ಇಸ್ಲಾಮಿನ ಇತಿಹಾಸದಲ್ಲೇ ಆಧ್ಯಾತ್ಮಿಕ ಶಿಕ್ಷಣ ರಂಗದಲ್ಲಿ ಜಗತ್ಪ್ರಸಿದ್ಧಿ ಪಡೆದ ಪ್ರಧಾನ ಕೇಂದ್ರವಾಗಿ ಅಲ್ ಖರವಿಯ್ಯೀನ್ ರೂಪುಗೊಂಡಿತು. 1963 ರಲ್ಲಿ ಇದು ವಿಶ್ವವಿದ್ಯಾಲಯವೆನಿಸಿಕೊಂಡಿತು. ಜಾಗತಿಕ ಮಟ್ಟದಲ್ಲಿನ ವಿಶ್ವವಿದ್ಯಾಲಯವೊಂದು ಇದೇ ಪ್ರಥಮ ಬಾರಿಗೆ ಭಾರತೀಯ ವಿಶ್ವವಿದ್ಯಾಲಯದೊಂದಿಗೆ ಕೈ ಜೋಡಿಸುತ್ತಿದೆ. ಅಕಾಡೆಮಿಕ್ ಒಡಂಬಡಿಕೆಯ ಪ್ರಕಾರ ವಿದ್ಯಾರ್ಥಿ ಹಸ್ತಾಂತರ,...

ಅರಬಿ ಭಾಷೆ : ಇತಿಹಾಸ ಮತ್ತು ವರ್ತಮಾನ

✒ ನಿಝಾಮ್ ಅನ್ಸಾರಿ ಭಾಷೆ ಮನುಷ್ಯನ ಸವಿಶೇಷತೆಗಳಲ್ಲೊಂದು. ಚಿಂತನೆಗಳು ಮತ್ತು ಅಭಿರುಚಿಗಳ ಆಶಯವನ್ನು ಅಭಿವ್ಯಕ್ತಿಗೊಳಿಸುವ ಅಥವಾ ಹೊರ ಹಾಕುವ ಶಬ್ದಗಳ ಒಂದು ಸಮೂಹವಾಗಿದೆ ಇದು. ಪ್ರಪಂಚದಲ್ಲಿ ಇಂದು ಹಲವು ಅಧಿಕೃತವಾಗಿರುವ ಭಾಷೆಗಳು ಅಸ್ತಿತ್ವದಲ್ಲಿವೆ.ಅದರಲ್ಲೂ ಪ್ರಾದೇಶಿಕ ಭಾಷೆಗಳು ಬೇರೇನೆ. ಆದರೆ ಈ ಎಲ್ಲಾ ಭಾಷೆಗಳ ಪೈಕಿ ರಾಜನಂತೆ ಇರೋದು ಅರಬಿ ಭಾಷೆ ಮಾತ್ರ . ಒಂದು ಕಾಲದಲ್ಲಿ ಇಡೀ ಜಗತ್ತನ್ನೇ ನಿಯಂತ್ರಿಸುವ ತಾಕತ್ತಿದ್ದ ಭಾಷೆಯಾಗಿತ್ತು ಅರಬಿ. ಯಾವ ರೀತಿಯಲ್ಲಿ ಈಗ ಆಂಗ್ಲ ಭಾಷೆಗೆ ಪ್ರಾಧಾನ್ಯತೆ, ಜಾಗತಿಕ ಅಂಗೀಕಾರ ಇದೆಯೋ ಅದೇ ರೀತಿಯಲ್ಲಿ ಅಂದು ಅರಬಿ ಭಾಷೆ ಸ್ಥಾನ ಪಡೆದಿತ್ತು. ಬಲದಿಂದ ಎಡಕ್ಕೆ ಇರುವ ಕೆಲವೊಂದು ಭಾಷೆಗಳಲ್ಲಿ ಅರಬೀ ಕೂಡಾ ಒಂದು. ಸೈಮಟಿಕ್ ಭಾಷೆಗಳಲ್ಲೊಂದಾದ ಅರಬಿ ಜಗತ್ತಿನ ಅತ್ಯಂತ ಪುರಾತನ ಭಾಷೆಗಳ ಪೈಕಿ ಒಂದು ಕೂಡಾ . ಐಕ್ಯ ರಾಷ್ಟ್ರ ಸಂಘದ ಅಂಗೀಕೃತ ಭಾಷೆಯಾದ ಅರಬಿ, 26 ದೇಶಗಳ ಅಧಿಕೃತ ಭಾಷೆಯಾಗಿದೆ‌. ಆಫ್ರಿಕನ್ ಯೂನಿಯನ್ ಆರ್ಗನೈಸೇಷನ್ ಇಸ್ಲಾಮಿಕ್ ಕಾನ್ಫೆರನ್ಸ್ ನಂತಹ ಹಲವು ಅಂತಾರಾಷ್ಟ್ರೀಯ ಸಂಸ್ಥೆಗಳು ಅರಬಿ ಭಾಷೆಯನ್ನು ಅಧಿಕೃತ ಭಾಷೆಯಾಗಿ ಅಂಗೀಕರಿಸಿದೆ. ಅರಬಿ ಭಾಷೆ: ಹುಟ್ಟು ಮತ್ತು ಬೆಳವಣಿಗೆ ಬಿ.ಸಿ 1900 ರಲ್ಲಿ ಜೀವಿಸಿದ್ದ 'ಯಅರೂಬ್ ಇಬ್ನ್ ಖಹ್ತಾನ್' ಎಂಬವರನ್ನು ಅರಬಿ ಭಾಷೆಯ ಪಿತಾಮಹ ಎಂದು ಕರೆಯಲಾಗುತ್ತದೆ. ಇವರ ನಾಮಕ್ಕೆ ಹೊಂದಿಕೊಂಡು 'ಅರಬಿ' ಎಂಬ ಹೆಸರು...

ರಂಝಾನ್ ನೀಡುವ ಒಳಿತಿನ ಸಂದೇಶ...

-ನಿಝಾಮ್ ಅನ್ಸಾರಿ ಮತ್ತೆ ರಂಝಾನ್ ತಿಂಗಳ ಆಗಮನವಾಗಿದೆ. ಪ್ರತಿ ವರ್ಷವೂ ರಂಝಾನ್ ಬಗ್ಗೆ ಬರೆಯುವಾಗ ಅದರ ಶ್ರೇಷ್ಟತೆ, ವ್ರತಾನುಷ್ಟಾನದ ಪ್ರಾಧಾನ್ಯತೆಯನ್ನೇ ಹೆಚ್ಚಿನವರೂ ಬರೆಯುತ್ತಾರೆ. ಅದನ್ನೇ ಮಸೀದಿಗಳಲ್ಲೂ ಹೇಳುವುದಿದೆ. ಒಳ್ಳೆಯದೇ. ಕಾರಣ ಆಧುನಿಕ ಜನರು ಧರ್ಮದ ಪ್ರತಿಯೊಂದು ವಿಷಯಗಳಲ್ಲೂ ಸಡಿಲಿಕೆ ಬಯಸುತ್ತಾರೆ. ಅಂದರೆ ಅವರವರ ಜೀವನಕ್ರಮಗಳಿಗನುಸಾರವಾಗಿ ಧರ್ಮದ ನಿಯಮಗಳನ್ನು ಗಾಳಿಗೆ ತೂರುವಂತಹ ಕಾರ್ಯಗಳು ಎಲ್ಲಾ ಕಡೆ ನಡೆಯುತ್ತಲಿದೆ. ಹಾಗಿರುವಾಗ ರಂಝಾನ್ ವ್ರತಾಚರಣೆಯ ಮಹತ್ವವನ್ನು ಪ್ರತಿ ಬಾರಿಯೂ ಪ್ರಭಾಷಣ ವೇದಿಕೆಗಳಲ್ಲಿ, ಮಸೀದಿಗಳಲ್ಲಿ ಜನ ಸಾಮಾನ್ಯರಿಗೆ ನೆನಪಿಸುತ್ತಲಿರುವುದು ಸ್ವಾಗತಾರ್ಹವಾದುದು. ಮತ್ತು ಪ್ರಯೋಜನಕಾರಿಯೂ ಕೂಡಾ. ಯಾಕೆ ಈ ರೀತಿ ಬರೆದೆ ಅಂತ ಕೇಳಿದರೆ, ಇತ್ತೀಚೆಗೆ ವಾಟ್ಸಾಪ್ ನೊಳಗೆ ಕಣ್ಣಾಡಿಸಿದಾಗ ಕಂಡ ಕೆಲವೊಂದು ಸಂದೇಶಗಳು ಧರ್ಮದ ಬಗ್ಗೆ ಕೀಳರಿಮೆಯ ಭಾವ ತೋರುವವರಿಗೆ ತಕ್ಕ ಉತ್ತರ ನೀಡುವಂತಿತ್ತು. ಬಡ ಕುಟುಂಬಕ್ಕೆ ಮನೆ ಕಟ್ಟುವ ಸಹಾಯಾರ್ಥ ಕಲೆಕ್ಷನ್, ರಂಝಾನ್ ನಂತರದ ಬಡ ಹೆಣ್ಮಕ್ಕಳ ಮದುವೆಗಾಗಿ, ಮುಅಲ್ಲಿಂಗಳಿಗಾಗಿ ಹೀಗೇ ಹಲವು ರೀತಿಯಲ್ಲಿ ಯುವ-ವಯಸ್ಕರು ಸೇರಿ ಸಮುದಾಯದೊಂದಿಗಿನ ಸಾಮಾಜಿಕ ಕಾಳಜಿಗಾಗಿ ರಂಝಾನ್ ಅನ್ನು ಉಪಯೋಗಿಸುತ್ತಿದ್ದಾರೆನ್ನುವಾಗ ಧರ್ಮದ ಮನದಲ್ಲಿ ಅಭಿಮಾನ ಮೂಡುತ್ತಿದೆ. ಬುರ್ಖಾದ ವಿಚಾರದಲ್ಲಿ ಬಲತ್ಕಾರ ಮಾಡಲಾಗುತ್ತದೆ ಎಂದು ಆರೋಪಿಸುತ್ತಿರುವಾಗ, ಆ ವಾದವನ್ನು ವಿರ...