ವಿಷಯಕ್ಕೆ ಹೋಗಿ

*ಓ ಅಲ್ಲಾಹ್..ಮತ್ತೆ ಮರಳಿಸು ಆ ಮಂದಹಾಸವ*



ಪ್ರಿಯ ಶೈಖುನಾ....

ತಾವು ನಮ್ಮೆಲ್ಲರ ಮಾರ್ಗದರ್ಶಕರು,ನಮ್ಮ ಏಳಿಗೆ ಮತ್ತು ಪ್ರಗತಿಯಲ್ಲೆಲ್ಲಾ ತಮ್ಮ ಅವಿಸ್ಮರಣೀಯ ಪ್ರಭಾವ ಸಾಫಲ್ಯಗಳಾಗಿವೆ.ತಮ್ಮೊಂದಿಗೆ ನಾವು ಸರ್ವದಾ ಸರ್ವತ್ರ ಋಣಿಯಾಗಿರುವೆವು.
ತಮಗೆ ಪ್ರತಿಯಾಗಿ ನೀಡಲು ನಮ್ಮ ಹಸ್ತಗಳು ಬರಿಶೂನ್ಯ.
ತಾವೆಂದಿಗೂ ಅಧಿಕಾರಕ್ಕಾಗಿ ಅಂಗಲಾಚಿ ಪಟ್ಟು ಹಿಡಿದಿಲ್ಲ
ಮೋಹದಿಂದ ಪಟ್ಟವು ತಮ್ಮನ್ನೇ ಅರಸಿಕೊಂಡು ಬಂದಿದ್ದೇ ಎಲ್ಲಾ....
ತಮ್ಮೊಡನೆ ಒಲವು ತೋರಿದವರೊಡನೆ ಒಲುಮೆಯ ಹಂಚಲು ತಮಗಂತೂ ವೈಮನಸ್ಯವೇ ಇಲ್ಲ....

ಶೈಖುನಾ ಕೋಟ ಉಸ್ತಾದರ ಜ್ಞಾನದ ಕೋಟೆಯೊಳಗೆ ಪಳಗಿದ ತಾವು ಕೋಟಿಗೊಬ್ಬರು....

ರಂಝಾನಿನ ದಿನಗಳೊಂದೊಂದು ಸರಿಯುತ್ತಿರುವಾಗ ನಿರೀಕ್ಷೆಯಿಂದಲೇ ಈ ಮನವು ತುಡಿಯುತಿದೆ ಆ ಸಚೇತನರ ಲವಲವಿಕೆಯಿಂದ ಕೂಡಿದ ಮುತ್ತಿನ ಉಪದೇಶವ ಆಲಿಸಲು....

ಆದರೆ....ಇದೀಗ
ಆ ಹೃದಯವು ನೋವ ನುಂಗುತ್ತಿದೆ....
ಆ ಶರೀರವಿಂದು ಬಳಲಿದೆ....
ಆ ಲವಲವಿಕೆ ಮಾಯವಾಗಿದೆ...
ಆ ನಯನಗಳಲ್ಲಿ ಮತ್ತೆ ಗುಣಮುಖರಾಗಬೇಕೆಂಬ ಹಂಬಲ ಕಾದಿದೆ...

ಇಲ್ಲ ಶೈಖುನಾ...
ತಾವು ಬರಬೇಕು....
ಮತ್ತೆ ಗುಣಮುಖರಾಗಿ.....
ನಿರೀಕ್ಷೆ ಹೊತ್ತ ನೂರಾರು ಶಿಷ್ಯಗಣಕ್ಕೆ ಆಸರೆಯಾಗಿ...
ತಮ್ಮ ಉಪದೇಶಗಳೇ ನಮ್ಮ ಉನ್ನತಿಗೆ ಹೇತು...
ತಮ್ಮ ನಿರ್ದೇಶನಗಳೇ ನಮ್ಮ ಗೆಲುವಿನ ನಿದರ್ಶನ...
ಜ್ಞಾನಧಾರೆಯ ನಡುವೆ ಹುರಿದುಂಬಿಸುತ್ತಿದ್ದ ಚಿಂತನಾರ್ಹ ಹಾಸ್ಯಭರಿತ ಮಣಿ ಮುತ್ತುಗಳೇ ನಮಗೆ ಸ್ಪೂರ್ತಿ..
ಅಕಾಡೆಮಿಯ ಅಂಗಣದಲ್ಲಿನ ತಮ್ಮ ಅನುದಿನದ ಹೆಜ್ಜೆಗಳು ಎಂದಿನಂತೆ ಇಂದೂ ನೆನಪಾಗಿದೆ..
ಮತ್ತೆ ಮತ್ತೆ ಮರುಕಳಿಸುತಿದೆ....

ಮನೋವೇದನೆಯ ಹೊತ್ತು ಅತ್ತ ಧಾವಿಸುವವರಿಗೆ ತಮ್ಮ ಮಂದಹಾಸ ಬೀರಿದ ಸಾಂತ್ವನದ ನುಡಿಗಳೇ ದಿವ್ಯ ಔಷಧವಾಗಿರಲು...
ಆ ಮೊಗದಲ್ಲಿ ನಗು ಮಿಂಚಲು ಪ್ರಾರ್ಥಿಸುತ್ತಿದೆ ಮುಗ್ಧ ಹೃದಯಗಳು ಹಲವು...

ಪ್ರಾರ್ಥಿಸೋಣ.....
ಯಾ ಅಲ್ಲಾಹ್...
ಆ ಅಭಿಜ್ಞರೊಂದಿಗಿನ ನಮ್ಮ ಅನುಬಂಧವ ಸುದೃಢಗೊಳಿಸು..
ಪ್ರೀತಿಯ ಶೈಖುನಾ ಪಯ್ಯಕ್ಕಿ ಉಸ್ತಾದರಿಗೆ ಪರಿಪೂರ್ಣ ಆರೋಗ್ಯವ ದಯಪಾಲಿಸು...
ಯಾ ಅಲ್ಲಾಹ್..ಆ ಮಂದಹಾಸವ ಮತ್ತೆ ಮರಳಿಸು, ‌

ಶೈಖುನಾ ಪಯ್ಯಕ್ಕಿ ಉಸ್ತಾದರ ಪರಿಪೂರ್ಣ ಆಫಿಯತ್ಗಾಗಿ ಪವಿತ್ರ ರಂಝಾನಿನ ದಿನ ರಾತ್ರಿಗಳಲ್ಲಿ ತಮ್ಮ ಪ್ರಾರ್ಥನೆಯಲ್ಲಿ ಎಂದಿಗೂ ಮರೆಯದಿರಿ.....

(ಹಳೆಯ ಬರಹ-ಉಸ್ತಾದರ ವಿರಹಕ್ಕಿಂತ ಮುಂಚಿನದ್ದು)

✍🏿ನಿಝಾಮುದ್ದೀನ್ ಅನ್ಸಾರಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕೋವಿಡ್ ಕಾಲದ ಓದು: ಚಂದ್ರನ ಚೂರು

'ಚಂದ್ರನ ಚೂರು' ಕೃತಿಯ ಹೆಸರು ಕೇಳಿದಾಗ ನಿಜವಾಗಿಯೂ ಅದೊಂದು ಕಾದಂಬರಿಯಾಗಿರಬಹುದು ಎಂದು ಭಾವಿಸಿದ್ದೆ. ಆದರೆ, ಪುಸ್ತಕ ಕೈಗೆ ತಲುಪಿದಾಗಲೇ ಗೊತ್ತಾಗಿದ್ದು, ಅದೊಂದು ಚಂದ್ರಲೋಕಕ್ಕೆ ಕೊಂಡೊಯ್ಯುವ ಅದ್ಭುತ ಕೃತಿ ಅಂತ. ತಂದೆ ಕುವೆಂಪು ಅವರ ಸಾಹಿತ್ಯದ ಹಾದಿಯಲ್ಲೇ ನಡೆದರೂ, ತೇಜಸ್ವಿಯವರ ಸಾಹಿತ್ಯವು ನಿಸರ್ಗ ವಿಸ್ಮಯ, ಭೂಗೋಳ, ಜೀವಶಾಸ್ತ್ರ, ಭತಶಾಸ್ತ್ರ, ಇತಿಹಾಸ ಹೀಗೇ ಎಲ್ಲಾ ಶಾಸ್ತ್ರಗಳ ಮಿಶ್ರಣ ರಸಾಯನ ಎಂದೇ ಹೇಳಬಹುದು. ಚಂದ್ರನ ಚೂರು ಚಂದ್ರ ಲೋಕದ ವಿಸ್ಮಯ ದೃಶ್ಯಗಳನ್ನು ಕಟ್ಟಿಕೊಡುವ ಚೊಚ್ಚಲ ಕೃತಿ. ಬಾಹ್ಯಾಕಾಶ, ಖಗೋಳ ಶಾಸ್ತ್ರ ವಿಷಯದಲ್ಲಿ ಆಸಕ್ತಿ ಇಲ್ಲದ ನನ್ನಂತವರನ್ನೂ ಇದು ಸರಾಗವಾಗಿ ಓದಿಸಿಕೊಂಡು ಹೋಗುವಂತೆ ಮಾಡುತ್ತದೆ, ಅದಕ್ಕೆ ಕಾರಣ, ತೇಜಸ್ವಿ ಅವರ ಬರವಣಿಗೆ ಹಾಗೂ ವಿವರಣೆಯ ಶೈಲಿ.. ಜಗತ್ತಿನಲ್ಲಿ ಮನುಷ್ಯನು ಚಂದ್ರನಲ್ಲಿಗೆ ಕಾಲಿಡುವುದಕ್ಕೂ ಮುನ್ನ, ಯಾವುದೆಲ್ಲಾ ರೀತಿಯ ಪರಿಶ್ರಮಗಳು ನಡೆದಿದ್ದವು ಹಾಗೂ ಭೂಮಂಡಲ ಮತ್ತು ಚಂದ್ರನ ಕುರಿತಾಘಿ ಯಾವುದೆಲ್ಲಾ ಆಯಾಮಗಳಲ್ಲಿ ಅಧ್ಯಯನಗಳಾಗಿದ್ದುವು ಎಂಬುದರ ಸಂಪೂರ್ಣ ವಿಷಯಗಳಿವೆ. ಚಂದ್ರನಲ್ಲಿ ತಲುಪಿದ ಮನುಷ್ಯನಿಗೆ ಆದ ಅನುಭವಗಳೇನು? ನೀಲ್ ಆಮ್Fಸ್ಟ್ರಾಂಗ್ ತಂಡದ ಚಂದ್ರಯಾನದ ರಸವತ್ತಾದ ಅನುಭವಗಳು, ಚಂದಿರನ ಮಣ್ಣಲ್ಲಿ ಅಮೇರಿಕದ ಫ್ಲಾಗ್ ಮತ್ತು ಬೋಡ್F ಸ್ಥಾಪಿಸಿ ಬಂದ ಆ ಧೀರ ತಂಡದ ಬೆರಗಾಗಿಸುವ ಕ್ಷಣ ಕ್ಷಣದ ವರದಿಗಳು ಈ ಕೃತಿಯ ಲೇಖನಗಳಲ್ಲಿ ಅಡಗಿದೆ. ಒಟ್ಟಿನಲ...

ಇಂದಿನಿಂದ 'ಸಮಸ್ತ'ದ ಆನ್ ಲೈನ್ ತರಗತಿಗಳು ಆರಂಭ

ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಒಕ್ಕೂಟದ (SKJU)ಅಧೀನದಲ್ಲಿ‌ ಕಾರ್ಯಾಚರಿಸುವ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್‌ ಅಂಗೀಕೃತ ಮದ್ರಸಗಳ ವಿದ್ಯಾರ್ಥಿಗಳಿಗೆ ನವ ಅಧ್ಯಯನ ವರ್ಷ ಇಂದಿನಿಂದ ಆರಂಭಗೊಂಡಿದೆ. ವಿಶೇಷ ಅಂದ್ರೆ, ಈ ಬಾರಿ ತರಗತಿಗಳ ಪ್ರಾರಂಭೋತ್ಸವದ ಸಂಭ್ರಮಗಳಿಲ್ಲದೆ, ಮದ್ರಸಾ ಕಟ್ಟಡಗಳು ತೆರೆಯದೇ, ಹತ್ತು ಸಾವಿರಕ್ಕೂ ಮಿಕ್ಕ ಮದ್ರಸಗಳ ಹನ್ನೆರಡು ಲಕ್ಷ ವಿದ್ಯಾರ್ಥಿಗಳು ಅವರವರ ಮನೆಗಳಲ್ಲಿಯೇ ಕುಳಿತು ತರಗತಿಗಳಲ್ಲಿ ಪಾಲ್ಗೊಳ್ಳುತ್ತಿರುವುದು ಎಂಬುದು.  ಆನ್ ಲೈನ್ ತರಗತಿಗಳಿಗಾಗಿ, ಸಮಸ್ತ ಈ ಹಿಂದೆಯೇ ಎಲ್ಲಾ ಸಿದ್ಧತೆಗಳನ್ನು ನಡೆಸಿದ್ದು, ವಿದ್ಯಾಭ್ಯಾಸ ಬೋರ್ಡ್‌ ಅದಕ್ಕಾಗಿ ಆರು ಕ್ಯಾಮರಾ ಯುನಿಟ್ ಗಳ ಕ್ಲಾಸ್ ರೂಂಗಳು ,22 ಪರಿಣತರಾದ ಅಧ್ಯಾಪಕರನ್ನು ನೇಮಕಗೊಳಿಸಿದೆ.  ತರಗತಿ ಆರಂಭದಿಂದ ಕೊನೆಯವರೆಗೂ ವಿದ್ಯಾರ್ಥಿ ಜೊತೆ ಪೋಷಕರು ಕುಳಿತಿರಬೇಕು.ಹೋಂ ವರ್ಕ್ ನೀಡಿದರೆ, ಅದನ್ನು ಮಾಡಿ, ಮುಂದೆ ಮದ್ರಸಗಳಲ್ಲಿ ತರಗತಿ ಆರಂಭಗೊಳ್ಳುವಾಗ ಮೌಲ್ಯಮಾಪನಕ್ಕಾಗಿ ಅಧ್ಯಾಪಕರಿಗೆ ತೋರಿಸಬೇಕು. ಮನೆಯಲ್ಲಿ ತರಗತಿಯ ವಾತಾವರಣವನ್ನು ಒದಗಿಸಿಕೊಟ್ಟು,ವಿದ್ಯಾರ್ಥಿಗಳಿಗೆ ಮನೆಯವರು ಸಹಕರಿಸಬೇಕು. ಅಲ್ಲದೇ, ಮದ್ರಸಾ ಹಾಗೂ ಜಮಾಅತ್ ಕಮಿಟಿಗಳು ಸೇರಿ, ಆನ್‌ಲೈನ್ ತರಗತಿಗಳು ಆಯಾ ಮದ್ರಸಗಳ ವಿದ್ಯಾರ್ಥಿಗಳಿಗೆ ಅವರವರ ಮನೆಗಳಲ್ಲಿಯೇ ಸುಲಭವಾಗಿ ತಲುಪುವಂತೆ ಎಲ್ಲಾ ರೀತಿಯಲ್ಲಿ ಸಹಕಾರವನ್ನು ನೀಡಬೇಕು. ಮದ್ರಸಗಳು ತ...

Payyakki Usthad Islamic Academy -Ansariya College of Islamic Science10th Anniversary & Convocation Program-#Photo Gallery......