ಕಳೆದ ಕೆಲವು ದಿನಗಳ ಹಿಂದೆ ಅಂಡಮಾನ್ ಸೆಲ್ಲುಲರ್ ಜೈಲಿನ ಬಗ್ಗೆ ಕೆಲವೊಂದು ಚರ್ಚೆಗಳು ನಡೆಯುತ್ತಿರೋದನ್ನ ನೋಡಿದಾಗ, ಗೆಳೆಯನೊಬ್ಬನಲ್ಲಿ ಈ ಬಗ್ಗೆ ತಿಳಿಸುತ್ತಾ, ನಮಗೂ ಅಂಡಮಾನ್ ಗೆ ಒಮ್ಮೆ ಹೋಗಬೇಕಿತ್ತು ಅಂತ ಹೇಳಿದ್ದೆ. ಅವನೂ ಕೂಢಾ ಹೌದಂದಿದ್ದ. ಕಳೆದ ದಿನ ಅಂಡಮಾನ್ ಬಗ್ಗೆ ಓದಿಕೊಳ್ಳಲು ಕನ್ನಡದಲ್ಲಿ ಪುಸ್ತಕಗಳು ಸಿಗುಬಹುದಾ ಅಂತ ವೆಬ್ ತಾಣಗಳೊಳಗೆ ಜಾಲಾಡಿದ್ದೆ. ಹಾಗೆ ಸಿಕ್ಕ ಕೃತಿಗಳಲ್ಲಿ ಓದಬೇಕು ಅಂತ ಅನ್ನಿಸಿದ್ದು ಪೂರ್ಣಚಂದ್ರ ತೇಜಸ್ವಿ ಅವರ ಅಲೆಮಾರಿಯ ಅಂಡಮಾನ್. ಈ ಪುಸ್ತಕದ ವಿಶೇಷತೆ ಅಂದರೆ, ಇದರಲ್ಲಿ ಎರಡು ಕೃತಿಗಳಿವೆ. ಒಂದು ಅಂಡಮಾನ್ ಪ್ರವಾಸ ಕಥನವಾದರೆ, ಮಗದೊಂದು ನೈಲ್ ನದಿಯ ಬಗೆಗಿನ ಅಧ್ಯಯನ ಲೇಖನಗಳ ಸಂಗ್ರಹ. ನಿಜಕ್ಕೂ ಎರಡೂ ಕೂಡಾ ಜ್ಞಾನದ ಅದ್ಭುತ ಜಗತ್ತನ್ನು ನಮ್ಮ ಮುಂದೆ ತೆರೆದಿಡುತ್ತದೆ. ಅಂಡಮಾನ್ ಬಗ್ಗೆ ಹೇಳುವಾಗ, ಅಲ್ಲಿನ ಸಮುದ್ರಗಳಿಂದ ತೀರಕ್ಕಪ್ಪಳಿಸುವ ಹೆದ್ದೆರೆಗಳ ಭಯಾಜನಕ ವಾತಾವರಣದ ಬಗ್ಗೆ ಹೇಳುತ್ತಾ, ಲೇಖಕರು ತನ್ನ ಜೊತೆಗಿದ್ದ ತಂಡದೊಂದಿಗೆ ಅಲ್ಲಿ ಸಂದರ್ಶಿಸಿದ ಪ್ರತಿಯೊಂದು ಜಾಗವನ್ನೂ ಅದರ ವೈಶಿಷ್ಟ್ಯವನ್ನೂ ಮನಮುಟ್ಟುವಂತೆ ಚಿತ್ರಿಸಿದ್ದಾರೆ. ನಾನು ಯಾವ ಜೈಲಿನ ಬಗ್ಗೆ ತಿಳಿದುಕೊಳ್ಳಲು ಬಯಸಿದ್ದೆನೋ, ಆ ಜೈಲಿಗೆ ತನ್ನ ತಂಡದವರೂ ಹೋದರೂ, ತಾನು ಹೋಗದಿದ್ದುದಕ್ಕೋ, ಅಥವಾ ಬೇರ್ಯಾವುದೋ ಕಾರಣಕ್ಕೇನೋ ತಿಳಿಯದು ಆ ಬಗ್ಗೆ ಅಲ್ಲಲ್ಲಿ ಅಲ್ಪ ಸ್ವಲ್ಪ ನೆನಪಿಸಿದ್ದು ಬಿಟ್ಟರೆ, ಸ್ಪಷ್ಟವಾಗಿ ಮಾಹಿತಿಗಳನ್...
ಪಥಿಕನ ಬಗ್ಗೆ ಸಿಂಪಲ್ಲಾಗಿ : ನಿಝಾಮ್ ಅನ್ಸಾರಿ - ತಂ - ದಿ. ಇಸ್ಮಾಯಿಲ್ ಯು.ಕೆ, ತಾ -ಝುಬೈದಾ. ಕಲ್ಲಡ್ಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ. ಕಾಸರಗೋಡು ಧಾರ್ಮಿಕ-ಲೌಕಿಕ ಸಮನ್ವಯ ಶಿಕ್ಷಣ ಸಂಸ್ಥೆಯಲ್ಲಿ ಪದವಿ ವ್ಯಾಸಂಗ. ಸಮಾಜಶಾಸ್ತ್ರದಲ್ಲಿ ಬಿ.ಎ ಹಾಗೂ ಅರಬಿಕ್ ನಲ್ಲಿ 'ಅನ್ಸಾರಿ' ಪದವೀಧರ, ಪ್ರಸ್ತುತ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿ.