
#ಕ್ರಿಸ್ಮಸ್ ಪ್ರಯುಕ್ತ ಮಂಗಳೂರಿನ ಚೇತನಾ ಸ್ಕೂಲ್ ನ #ವಿಶೇಷ_ಚೇತನ ಮಕ್ಕಳು ತಯಾರಿಸಿದ #ಕರಕುಶಲ_ವಸ್ತುಗಳ ಪ್ರದರ್ಶನ ಮತ್ತು ಮಾರಾಟ ನಗರದ ಫಿಝಾ ಮಾಲ್ ನಲ್ಲಿ ನಡೆಯುತ್ತಿತ್ತು..ಏನು ವಿಶೇಷ ಎಂದು ಅತ್ತ ಗಮನಹರಿಸಿದಾಗಲೇ ಗೊತ್ತಾಗಿದ್ದು ಬುದ್ದಿಮಾಂದ್ಯ,ವಿಕಲ ವಿಶೇಷ ಚೇತನ ಮಕ್ಕಳ ಗುಂಪೆಂದು...ಅಂತೂ ಅವರ ಕೈಚಳಕದಲ್ಲಿ ಮೂಡಿದ ಆ ವಿಶೇಷ ಕಲೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಆ ವಸ್ತುಗಳನ್ನು ಖರೀದಿಸುವಂತೆ ಅಲ್ಲಿದ್ದ ಮೇಡಂ ಹೇಳಿತ್ತಲಿದ್ರು.ಹಾಗೆ ಲೇಖನಿಗಳನ್ನಿಡುವ ಡಬ್ಬವೊಂದನ್ನು ಖರೀದಿಸಿದೆ..
ನನ್ನಂತೆ ಹಲವರು ಖರೀದಿಸುತ್ತಿದ್ದರು...ಅವಾಗಲೆಲ್ಲ ಅವರು ಹ್ಯಾಪಿ ಕ್ರಿಸ್ಮಸ್ ...ಹ್ಯಾಪಿ ಕ್ರಿಸ್ಮಸ್ ಎಂದು ಹೇಳುತಲಿದ್ದರು..ಅಷ್ಟು ಹೇಳೋಕೂ ಆಗದವರೂ ಅವರ ನಡುವೆ ಅಸಹಾಯಕತೆಯ ಮುಗುಳ್ನಗೆ ಬೀರುತ್ತಲಿದ್ದರು....ಕಂಡು ಒಂದು ಕ್ಷಣ ಹೃದಯ ಝಲ್ ಎಂದಿತು..ನಿಮ್ಮೊಡನೆ ಹಂಚಬೇಕೆಂದು ತೋಚಿತು...ಅದ್ಕೆ ಇಲ್ಲಿ ಗೀಚಿದೆ...
ಕಾಮೆಂಟ್‌ಗಳು