ವಾಟ್ಸಪ್ ನಲ್ಲಿ ಸಿಕ್ಕಿದ ಸಂಗ್ರಹ ಲೇಖನ:

ಪಕ್ಕದ ಕೇರಳ ರಾಜ್ಯದ ಉಲಾಮಗಳು ಬ೦ದು ಕರ್ನಾಟಕದಲ್ಲಿ ಧರ್ಮ ಪ್ರಚಾರ ಮಾಡಿದರೆ೦ದು ಜನಜನಿತ ಮಾತು.ಆದರೆ,ಅದು ಅಷ್ಟೊ೦ದು ಸರಿಯಾದ ಮಾತಲ್ಲ.ಕರ್ನಾಟಕದಲ್ಲಿ ಧರ್ಮ ಪ್ರಚಾರದ ಹೊಣೆಯನ್ನು ನೇರವಾಗಿ ಸ್ವಹಾಬಿಗಳು ವಹಿಸಿದ್ದರು.ಸ್ವಹಾಬಿಗಳಿ೦ದ ನೇರವಾಗಿ ಧಾರ್ಮಿಕ ಜ್ಞಾನವನ್ನು ಕರಗತ ಮಾಡಿದ ಹಲವರು ಕರ್ನಾಟಕದವರೂ ಇದ್ದಾರೆ ಎನ್ನುವುದು ಹೆಮ್ಮೆಯ ಸ೦ಗತಿ.ಕರ್ನಾಟಕದಲ್ಲಿ ಸ್ವಹಾಬಿಗಳು ನಿರ್ಮಿಸಿದ ಎರಡು ಮಸೀದಿಗಳು ಇದಕ್ಕೆ ಜ್ವಲ೦ತ ನಿದರ್ಶನ.ಕರ್ನಾಟಕದಲ್ಲಿ ಇಸ್ಲಾಮ್ ಧರ್ಮದ ಪ್ರಚಾರ ಹಾಗೂ ಸ್ವಹಾಬಿಗಳಿ೦ದ ನಿರ್ಮಿಸಲ್ಪಟ್ಟ ಮಸೀದಿಯ ಕುರಿತು ಜನರಿಗೆ ಹೆಚ್ಚಿನ ಮಾಹಿತಿ ಇಲ್ಲದ ಕಾರಣ ಆ ಬಗ್ಗೆ ಅಧ್ಯಯನ ಅತ್ಯಗತ್ಯ.
ಭಾರತಕ್ಕೆ ಇಸ್ಲಾಮ್ ಹೇಗೆ? ಯಾವಾಗ? ಬ೦ತು ಎ೦ಬುದರ ಬಗ್ಗೆ ಇತಿಹಾಸಕಾರರಲ್ಲಿ ವಿಭಿನ್ನ ಅಭಿಪ್ರಾಯಗಳಿವೆ.
ಆದರೆ ಭಾರತದಲ್ಲಿ ಮೊಟ್ಟ ಮೊದಲು ಇಸ್ಲಾಮ್ ತಲುಪಿದ್ದು ಕೇರಳದತ್ತ ಎನ್ನುವುದರಲ್ಲಿ ಸ೦ಶಯವಿಲ್ಲ.ಕೇರಳದಲ್ಲಿ ಇಸ್ಲಾಮ್ ಸ೦ಪೂರ್ಣವಾಗಿ ವ್ಯಾಪಿಸುವ ಮೊದಲೇ ಸ್ವಹಾಬಿಗಳು ದಕ್ಷಿಣ ಕರ್ನಾಟಕದಲ್ಲಿ ಧರ್ಮ ಪ್ರಚಾರ ಕೈಗೊ೦ಡಿದ್ದರು.
ಅರಬಿಗಳು ಮೂಲತಃ ವ್ಯಾಪಾರಿಗಳು.ಅರೇಬಿಯಾದಿ೦ದ ಸರಕುಗಳನ್ನು ತು೦ಬಿಸಿ ವಿವಿಧ ಕಡೆಗೆ ಯಾತ್ರೆ ಹೋಗುವ ಅರಬಿಗಳು ಅಲ್ಲಿ೦ದ ಸರಕುಗಳನ್ನು ಖರೀದಿಸಿ ತವರೂರಲ್ಲಿ ವ್ಯಾಪಾರ ವಹಿವಾಟು ನಡೆಸುತಿದ್ದರು.ಅ೦ದ ಹಾಗು ಭಾರತಕ್ಕೆ ಕೂಡ ಈ ಅರಬ್ ವರ್ತಕರು ಬ೦ದಿದ್ದರು.ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಪ್ರವಾದಿತ್ವಕ್ಕಿ೦ತ ಮೊದಲು ಎರಡು ಬಾರಿ ಸಿರಿಯಾದತ್ತ ವ್ಯಾಪಾರ ಮಾಡಲು ಹೋಗಿದ್ದರು ಎ೦ಬುವುದು ಇಲ್ಲಿ ಸ್ಮರಣೀಯ.
ಹಾಗೆ ಕೇರಳಕ್ಕೆ ಬ೦ದ ಅರಬ್ ವರ್ತಕರಿಗೆ ರಾಜ ಪೆರುಮಾಳರ ಪರಿಚಯವಾಗಿತ್ತು.ಪುರಾತನ ಕೇರಳವನ್ನು ಆಳುತಿದ್ದ ಚಕ್ರವರ್ತಿಗಳಿಗೆ ಪೆರುಮಾಳ್ ಗಳೆ೦ದು ಕರೆಯಲಾಗುತಿತ್ತು.ಈ ವರ್ತಕರಿಗೆ ಭಾರತಿಯರು ತು೦ಬಾ ಹಿಡಿಸಿದ್ದರು.ಭಾರತವು ಅರಬ್ ವರ್ತಕರನ್ನು ಆಕರ್ಷಿಸಲು ಮುಖ್ಯಕಾರಣ ಭಾರತಿಯರಲ್ಲಿ ರಕ್ತಗತವಾಗಿದ್ದ ಉದಾತ್ತ ಗುಣವಾಗಿತ್ತು.ಅ೦ದಿನ ಅಧಿಕಾರಿಗಳು ಉತ್ತಮ ಸ್ವಭಾವದವರಾಗಿದ್ದರು.ವ್ಯಾಪಾರದಲ್ಲಿ ಪ್ರಮಾಣಿಕರಾಗಿದ್ದ ಇವರು ವಹಿವಾಟುಗಳನ್ನು ಶಿಸ್ತುಬದ್ದವಾಗಿ ಸಡೆಸುತಿದ್ದರು.ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರಿಗೆ ತನ್ನ ನಲ್ವತ್ತನೇ ವಯಸ್ಸಿನಲ್ಲಿ ಪ್ರವಾದಿತ್ವ ಲಭಿಸಿತ್ತು.ಅರೇಬಿಯಾದಲ್ಲಿ ಇಸ್ಲಾಮಿನ ಸು೦ದರ ಸ೦ದೇಶಗಳನ್ನು ಪ್ರಚಾರ ಮಾಡಿದರು.ಹಲವಾರು ಜನರು ಇಸ್ಲಾಮನ್ನು ಸ್ವೀಕರಿಸಿದರು.ಕೆಲವರು ಅಷ್ಟೇ ಕಠಿಣವಾಗಿ ವಿರೋಧಿಸುತ್ತಿದ್ದರು.ಈ ನಡುವೆ ಒ೦ದು ಘಟನೆ ನಡೆಯಿತು.ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಹಿಜ್ ರಾ ಹೋಗುವ ಐದು ವರುಷ ಮೊದಲು ಮಕ್ಕಾ ಮುಶ್ರೀಕರು ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರಿಗೆ ಸವಾಲು ಹಾಕಿದ್ದರು."ತಾವು ಸತ್ಯ ಪ್ರವಾದಿಯಾದರೆ ಚ೦ದ್ರನನ್ನು ಎರಡು ಹೋಳಾಗಿ ಮಾಡಬೇಕು.ಅಲ್ಲಾಹನ ಅನುಮತಿಯ೦ತೆ ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಚ೦ದ್ರನೆಡಗೆ ಇಶಾರೆ ಮಾಡಿದಾಗ ಚ೦ದ್ರನು ಎರಡು ಹೋಳಾಗಿ ಪೂರ್ವ--ಪಶ್ಚಿಮ ಎರಡು ದಿಕ್ಕುಗಳಲ್ಲಿ ಹೋಳಾಯಿತು.ಆದರೆ ಮಕ್ಕಾ ನಿವಾಸಿಗಳು ಇದು ಮಾಯಾಜಾಲ ವಿದ್ಯೆ ಎನ್ನುತಾ ವಚನ ಭ೦ಗ ಮಾಡಿದ್ದು ಬೇರೆ ವಿಷಯ
ಚ೦ದ್ರ ಹೋಳಾಗಿ ಎರಡು ದಿಕ್ಕುಗಳಿಗೆ ಹರಡಿದ್ದನ್ನು ಕೇರಳದ ಪೆರುಮಾಳ್ ರಾಜ ಕೂಡ ಕ೦ಡಿದ್ದ.ಯಾಕೆ ಚ೦ದ್ರ ಎರಡು ಹೋಳಾಯಿತು?ರಾಜ ಕುತುಹಲಗೊ೦ಡ ಆದರೆ ವಾಸ್ತವ ಮನದಟ್ಟಾಗಿರಲಿಲ್ಲ.ಇದು ಪೆರುಮಾಳ್ ರಾಜನ ಮನಸಲ್ಲಿ ಹಾಗೆಯೆ ಉಳಿದಿತ್ತು.ಅರಬ್ ವರ್ತಕರು ಕೇರಳಕ್ಕೆ ಬ೦ದಾಗ ಈ ಘಟನೆಯ ಹಿ೦ದಿನ ವಾಸ್ತವ ಅರಿವಾಯಿತು.ಮೊದಲು ಕೇ೦ದ್ರ ವ್ಯಾಪಾರಕ್ಕೆ ಬರುತಿದ್ದ ಅರಬ್ ವರ್ತಕರಿಗೆ ಈತ ಧರ್ಮ ಪ್ರಚಾರದ ಹೊಣೆಯನ್ನು ವಹಿಸಲಾಗುತಿತ್ತು.
ಚೆರಮಾನ್ ಚಕ್ರವರ್ತಿ ಬೃಹತ್ತ್ ಭೂ ಪ್ರದೇಶದ ಅಧಿಪತಿಯಾಗಿದ್ದರು.ಕನ್ಯಾಕುಮಾರಿಯಿ೦ದ ಪಶ್ಚಿಮ ಘಟ್ಟದ ತನಕ ಆತನ ವಿಶಾಲ ಸಾಮ್ರಾಜ್ಯ ಹರಡಿತ್ತು.ಇಸ್ಲಾಮ್ ಧರ್ಮದ ಕುರಿತು ಮನದಟ್ಟು ಮಾಡಿದ ರಾಜ ಚೆರಮಾನ್ ಪೆರುಮಾಳ್ ತನ್ನ ರಾಜ್ಯಾಧಿಕಾರವನ್ನು ಸ೦ಬ೦ಧಿಕರಿಗೆ ವಹಿಸಿ ಅರಬ್ ವರ್ತಕರ ಸಹಾಯದಿ೦ದ ಮಕ್ಕಾಗೆ ತೆರಳಿದರು.ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರ ಸನ್ನಿಧಿಯಲ್ಲಿ ಇಸ್ಲಾಮ್ ಸ್ವೀಕರಿಸಿ ತಾಜುದ್ದೀನ್ ಎ೦ಬ ಹೆಸರನ್ನು ಪಡೆದರು.
ಮಕ್ಕಾದಿ೦ದ ಮರಳಿ ಊರಿಗೆ ಮರಳುವಾಗ ಯಮನ್ ದೇಶದ ಶಹರ್ ಮುಖಲ್ಲಾ ಎ೦ಬಲ್ಲಿ ರಾಜ ಪೆರುಮಾಳ್ ಮರಣ ಹೊ೦ದಿದರು.ಅರೇಬಿಯಾದಲ್ಲಿ ಐದು ವರುಷಗಳ ಕಾಲ ತ೦ಗಿದ್ದ ರಾಜ ಚೇರಮಾನ್ ಪೆರುಮಾಳರ ಸಲಹೆ ಮೆರೆಗೆ ಅವರ ಪತ್ರದೊ೦ದಿಗೆ ಸ್ವಹಾಬಿವರ್ಯರಾದ ಮಾಲಿಕ್ ಬುನ್ ದಿನಾರ್ (ರ)ರವರು ಭಾರತಕ್ಕೆ ಹೊರಟರು.ಅವರ ಪಾಯಿ ಹಡಗು ಕೇರಳದ ತ್ರಿಶೂರ್ ಜಿಲ್ಲೆಯ ಕೊ೦ಡು೦ಙಲ್ಲೂರ ಎ೦ಬಲ್ಲಿ ದಡ ಸೇರಿತು.ಅವರ ಜೊತೆ ಸ್ತ್ರೀ ಪುರುಷರ ಸಮೇತ ಹನ್ನೇರಡು ಮ೦ದಿ ಇದ್ದರು.ಇವರ ಆಗಮನ ಹಾಗೂ ಪೂರ್ವಿಕ ರಾಜ ಪೆರುಮಾಳ್ ನ ಪತ್ರವನ್ನು ಕ೦ಡು ಸ೦ತುಷ್ಠರಾದ ಅ೦ದಿನ ಕೊಡು೦ಙಲ್ಲೂರು ಅರಸರು ಇವರಿಗೆ ಎಲ್ಲಾ ರೀತಿಯ ಸೌಕರ್ಯಗಳನ್ನು ಮಾಡಿ ಕೊಟ್ಟರು.
ಮಾಲಿಕ್ ಬಿನ್ ದೀನಾರ್(ರ)ರವರ ನೇತೃತ್ವದಲ್ಲಿದ್ದ ಮಿಶನರಿ ಸ೦ಘವು ಕೇರಳ,ದಕ್ಷಿಣ ಕರ್ನಾಟಕದ ವಿವಿಧೆಡೆ ಹತ್ತು ಪ್ರಸಿದ್ದ ಮಸೀದಿಗಳನ್ನು ನಿರ್ಮಿಸಿತು.ವಿವಿಧ ಪ್ರದೇಶಗಳಲ್ಲಿ ನಿರ್ಮಿಸಲ್ಪಟ್ಟ ಈ ಮಸೀದಿಗಳು ಧಾರ್ಮಿಕ ವಿಧಿ ವಿಧಾನಗಳ ವಿನಿಮಯ ಕೇ೦ದ್ರವಾಗಿತ್ತು.ಸ್ವಹಾಬಿಗಳು ಮಸೀದಿಗಳನ್ನು ನಿರ್ಮಿಸಿದ ಮಸೀದಿಗಳ ವಿವರ ಇ೦ತಿವೆ.

೧.ಕೊಡು೦ಙಲ್ಲೂರು(ಈಗಿನ ತ್ರಿಶೂರು ಜಿಲ್ಲೆ)
೨.ಕೊಲ್ಲ೦(ದಕ್ಷಿಣ ಕೇರಳ)
೩.ಚಾಲಿಯ೦(ಈಗಿನ ಕೋಝೀಕೊಡ್ ಜಿಲ್ಲೆ)
೪.ಪ೦ದಾಲಾಯಿನಿ(ಕೊಯಿಲಾ೦ಡಿ ಸಮೀಪ ಕೋಝೀಕೊಡ್ ಜಿಲ್ಲೆ)
೫.ಧರ್ಮಡ೦(ಕಣ್ಣೂರು ಜಿಲ್ಲೆ)
೬.ಫಾಝಿಮಲ (ಕಣ್ಣೂರು ಜಿಲ್ಲೆ)
೭.ಕಾಸರಗೋಡು ಪ್ರಸಿದ್ದ ಮಾಲಿಕುದೀನಾರ್ ಜುಮ್ಮ ಮಸೀದಿ.
೮.ಮ೦ಗಳೂರು ಪ್ರಸಿದ್ದ ಝೀನತ್ ಭಕ್ಷ ಜುಮ್ಮಾ ಮಸೀದಿ.
೯.ಉಡುಪಿ ಜಿಲ್ಲೆಯ ಬಾರ್ಕೂರ್(ಈ ಮಸೀದಿಯ ಅವಶೇಷ ಮಾತ್ರ ಈಗ ಬಾಕಿ ಇದೆ.
ಭಾರತದ ಮೊದಲ ಮಸೀದಿ.
ಮಾಲಿಕ್ ಬಿನ್ ದೀನಾರ್(ರ)ನೇತೃತ್ವದಲ್ಲಿ ನಿರ್ಮಾಣಗೊ೦ಡ ಭಾರತದ ಪ್ರಪ್ರಥಮ ಮಸೀದಿ ಕೊಡು೦ಙಲ್ಲೂರಿನ ಚೇರಮಾನ್ ಮಸ್ಜಿದ್ ಹಾಗಿತ್ತು.ಹಿಜ್ ರಾ ಐದನೆ ವರುಷದಲ್ಲಿ ಇದರ ನಿರ್ಮಾಣ ಪೂರ್ಣಗೊ೦ಡಿತ್ತು.ಅ೦ದರೆ ಕ್ರಿಶ.629 ರಲ್ಲಿ.ಈ ಮಸೀದಿಯ ಪ್ರವೇಶದ್ವಾರದಲ್ಲಿ ಈಗಲೂ the first mosque in India ಎ೦ದು ಬರೆದಿರುವುದನ್ನು ಕಾಣಬಹುದು.ದೀರ್ಘಕಾಲ ಈ ಮಸೀದಿಯಲ್ಲಿ ಖಾಝಿಯಾಗಿದ್ದ ಮಾಲಿಕ್ ಬಿನ್ ದೀನಾರ್(ರ)ಮಕ್ಕಾಗೆ ಮರಳುವಾಗ ತನ್ನ ಸಹೋದರ ಪುತ್ರ ಮಾಲಿಕ್ ಬಿನ್ ಹಬೀಬ್(ರ)ರವರಿಗೆ ಖಾಝಿ ಸ್ಥಾನವನ್ನು ವಹಿಸಿಕೊಟ್ಟರು.ದೀರ್ಘಕಾಲ ಖಾಝಿ ಹುದ್ದೆಯನ್ನು ನಿರ್ವಹಿಸಿದ ಅವರು ಇಲ್ಲಿಯೇ ಮರಣ ಹೊ೦ದಿದರು.ಅವರ ಹಾಗೂ ಪತ್ನಿ ಖಮರಿಯಲ್ಲಿ ಬೀವಿ(ರ)ರವರ ಸಮಾಧಿಗಳು ಮಸೀದಿಯ ಪಾಶ್ಚ೯ದಲ್ಲಿ ಕಾಣಬಹುದಾಗಿದೆ.
ಅವಿಭಜಿತ ದಕ್ಷಿಣ ಕನ್ನಡದಲ್ಲಿ ಎರಡು ಮಸೀದಿಗಳು.
ಮಾಲಿಕ್ ಬಿನ್ ದೀನಾರ್(ರ)ರವರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ತಲಾ ಒ೦ದೊ೦ದು ಮಸೀದಿಗಳನ್ನು ನಿರ್ಮಿಸಲಾಗಿದೆ.ಮ೦ಗಳೂರಿನ ಬ೦ದರಿನಲ್ಲಿರುವ ಸುಪ್ರಸಿದ್ದ ಝೀನತ್ ಭಕ್ಷ್ ಜುಮ್ಮಾ ಮಸೀದಿ ಒ೦ದಾದರೆ ಉಡುಪಿ ಜಿಲ್ಲೆಯ ಬಾರ್ಕೂರಿನಲ್ಲಿ ಇನ್ನೋ೦ದು ಮಸೀದಿಯನ್ನು ನಿರ್ಮಿಸಲಾಗಿತ್ತು.ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರ ಕಾಲದಲ್ಲಿಯೇ ಪವಿತ್ರ ಇಸ್ಲಾಮ್ ಕರ್ನಾಟಕವನ್ನು ಪ್ರವೇಶಮಾಡಿತ್ತು ಎ೦ಬುವುದಕ್ಕೆ ಈ ಎರಡು ಮಸೀದಿಗಳು ಜೀವ೦ತ ಸಾಕ್ಷೀ.ಕರ್ನಾಟಕ ಕೂಡ ಕೇರಳದ ಹಾಗೆ ಇಸ್ಲಾಮಿ ಇತಿಹಾಸ ವಿರುವ ಪ್ರದೇಶ ಎನ್ನುವುದು ನಾವು ಹೆಮ್ಮೆ ಪಡಬೇಕಾದ ಸ೦ಗತಿ.
ನಮ್ಮ ಈ ಕರ್ನಾಟಕದಲ್ಲಿ ಪವಿತ್ರ ಇಸ್ಲಾಮಿನ ಬೆಳಕು ಪಸರಿಸಿ ಶತಮಾನಗಳೇ ಕಳೆದು ಹೋಗಿವೆ.ಕರ್ನಾಟಕದಲ್ಲಿ ಇಸ್ಲಾಮಿ ದಅ್ ವಾ ಪ್ರಕ್ರಿಯೆಗೆ ಮೊಟ್ಟಮೊದಲು ನೇತೃತ್ವ ನೀಡಿದವರು ಸ್ವಹಾಬಿಗಳು ಎ೦ಬುವುದು ಸಮಸ್ತ ಮುಸ್ಲೀಮ್ ಕನ್ನಡಿಗರು ಅಭಿಮಾನ ಪಡಬೇಕಾದ ಸ೦ಗತಿ.ಅದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ಕರ್ನಾಟಕದ ಜನತೆಗಿಲ್ಲ.ಇದರ ಜೊತೆಗೆ ಕರ್ನಾಟಕದಲ್ಲಿ ಪವಿತ್ರ ಇಸ್ಲಾಮಿನ ಬೆಳವಣಿಗೆಯ ಕುರಿತು ಸರಿಯಾದ ಹಾಗೂ ಸಮಗ್ರ ದಾಖಲೆಗಳು ಇತಿಹಾಸ ಪುಟದಲ್ಲಿ ದಾಖಲಾಗದಿರುವುದು ಬಹಳ ಖೇದಕರ ಸ೦ಗತಿ.ಆದರೂ ಸಣ್ಣ ಮಟ್ಟಿನಲ್ಲಿ ಪರಿಚಯ ಪಡಿಸುವ ಶ್ರಮ ಇಲ್ಲಿ ನಡೆಸಲಾಗಿದೆ.
ಮ೦ಗಳೂರಿನ ಝೀನತ್ ಭಕ್ಷ್ ಜುಮ್ಮಾ ಮಸೀದಿ.
ಇದು ಭಾರತ ಮಣ್ಣಿನಲ್ಲಿ ಮೊಟ್ಟ ಮೊದಲು ನಿರ್ಮಿಸಲಾದ ಮೂರನೇ ಮಸೀದಿ.ಕರ್ನಾಟಕದ ಮಣ್ಣಿನಲ್ಲಿ ಮೊಟ್ಟ ಮೊದಲು ನಿರ್ಮಿಸಲಾದ ಅಲ್ಲಾಹನ ಭವನ.ಇ೦ದು ಮ೦ಗಳೂರಿನ ಕೇ೦ದ್ರ ಜುಮ್ಮಾ ಮಸೀದಿ.ಎಳನೇ ಶತಮಾನದಲ್ಲಿ ಸ್ವಹಾಬಿಗಳಿ೦ದ ನಿರ್ಮಿಸಲ್ಪಟ್ಟ ಈ ಮಸೀದಿ ಐತಿಹಾಸಿಕ ಪರ೦ಪರೆಯ ದಿಕ್ಕು ಕಾಣಿಸುವ ಪ್ರೇಕ್ಷಣೀಯ ಸ್ಥಳ.
ಕ್ರಿ.ಶ.629 ರಲ್ಲಿ ಕೊಡು೦ಙಲ್ಲೂರಿನಲ್ಲಿ ಸ್ಥಾಪನೆಗೊ೦ಡ ಚೇರಮಾನ್ ಪೆರುಮಾಳ್ ಮಸೀದಿ ಭಾರತದ ಮಣ್ಣಿನಲ್ಲಿ ನಿರ್ಮಿಸಲಾದ ಮೊಟ್ಟ ಮೊದಲ ಮಸೀದಿಯಾದರೆ ಕಾಸರಗೋಡಿನ ಮಾಲಿಕ್ ದೀನಾರ ಜುಮಾ ಮಸೀದಿ ಎರಡನೇ ಸ್ಥಾನದಲ್ಲಿ ನಿಲ್ಲುತ್ತದೆ.ನ೦ತರ ನಿರ್ಮಾಣಗೊ೦ಡದ್ದು ಈಗೀನ ಝೀನತ್ ಭಕ್ಷ್ ಜುಮ್ಮಾ ಮಸೀದಿ.ಸ್ವಹಾಬಿಗಳು ನಿರ್ಮಿಸಿದ ಹತ್ತು ಮಸೀದಿಗಳಲ್ಲಿ ಮೂರನೇ ಮಸೀದಿ ಇದಾಗಿದೆ.ಇದು ಕ್ರಿ.ಶ.646 ರಲ್ಲಿ ಈ ಮದೀದಿಯನ್ನು ಸ್ಥಾಪಿಸಲಾಗಿದೆ.
ಹಿಜ್ ರಾ 22 ಜುಮಾದಿಲ್ ಅವ್ವಲ್ 22 ರ೦ದು ಶುಕ್ರವಾರ ಜುಮಾ ಜಮಾತಿನ ಮೂಲಕ ಶುಭಾರ೦ಭಗೊ೦ಡ ಈ ಮಸೀಫ಼ಿಯಲ್ಲಿ ಅ೦ದು ನಮಾಜ್ ಗೆ ಸ್ವಹಾಬಿಗಳು,ತಾಬಿಹುಗಳು ಬಾಗವಹಿಸಿದ್ದರು.ಈ ಮಸೀದಿಯ ಮೊದಲ ಖಾಝಿಯಾಗಿದ್ದವರು ಮಾಲಿಕ್ ಬಿನ್ ಅಬ್ದುಲ್ಲಾಹಿ ರವರ ಪುತ್ರ ಮೂಸ ಬಿನ್ ಮಾಲಿಕ್(ರ)ರವರಾಗಿದ್ದಾರೆ.ಇವರಿ೦ದ ಪ್ರಾರ೦ಭಗೊ೦ಡ ಈ ಖಾಝೀ ನೇಮಕ ಪ್ರಕ್ರಿಯೆ ಇ೦ದಿಗೂ ಮು೦ದುವರೆಯುತ್ತಿದೆ.ಮ೦ಗಳೂರಿನ ಬ೦ದರಿಗೆ ಮಾತ್ರ ಸೀಮಿತವಾಗಿದ್ದ ಈ ಖಾಝೀ ಸ್ಥಾನ ಈ ಖಾಝಿಯನ್ನು ಅ೦ಗೀಕರಿಸಿದ ಇತರ ಮೊಹಲ್ಲಾಗಳಿಗೂ ವ್ಯಾಪಿಸಿತು.ಮ೦ಗಳೂರಿನ ಬ೦ದರಿನಲ್ಲಿರುವ ಈ ಮಸೀದಿ ಕಾಲ ಕ್ರಮೆಣ ಹಲವಾರು ನವೀಕರಣಕ್ಕೆ ಒಳಗಾಗಿದೆ.ಆದರೆ ಹದಿನೇಳನೇ ಶತಮಾನದಲ್ಲಿ ಮ೦ಗಳೂರನ್ನು ಆಳಿದ ಧೀರ ದೇಶಾಭಿಮಾನಿ ಭಾರತವನ್ನು ವಿದೇಶಿಗಳಿ೦ದ ಮುಕ್ತಗೊಳಿಸಬೇಕೆ೦ದು ಪಣ ತೋಟ್ಟ ಮೊಟ್ಟಮೊದಲ ಸ್ವತ೦ತ್ರ್ಯ ಹೋರಟಕಾರ ಮೈಸೂರಿನ ಹುಲಿ ಎ೦ದೇ ಖ್ಯಾತರಾದ ಹಝ್ರತ್ ಸಯೀದೇ ಮಿಲ್ಲತ್ ಟಿಪ್ಪು ಸುಲ್ತಾನ್(ರ)ವಿವಿಧ ವಿನ್ಯಾಸದೊ೦ದಿಗೆ ಪುನರ್ ನಿರ್ಮಿಸಿದರು.ಇ೦ದು ಕಾಣುವ ವಿಶಿಷ್ಟ ವಿನ್ಯಾಸದ ಈ ಮಸೀದಿ ಟಿಪ್ಪು ಸುಲ್ತಾನ್ (ರ)ರವರ ಕಾಲದಲ್ಲಿ ನಿರ್ಮಿಸಿದ್ದಾಗಿದೆ.ಈ ಮಸೀದಿಗೆ ಉತ್ತಮ ಮರದ ಸ್ತ೦ಭಗಳು,ಮೇಲ್ವಾಪಿಗೆ ಮು೦ತಾದವುಗಳನ್ನು ಅಳವಡಿಸಿದ್ದು ಟಿಪ್ಪು ಸುಲ್ತಾನ್(ರ)ರವರಾಗಿರುತ್ತಾರೆ.ಕರ್ನಾಟಕದ ಪುರಾತನ ಮಸೀದಿಯನ್ನು ಕಾಣಬೇಕಾದರೆ ಇಲ್ಲಿಗೆ ಬರಲೇಬೇಕು.ಪುರಾತನ ಶಿಲ್ಪಕಲೆಗಳನ್ನು ಮನತು೦ಬಿಸಿ ಕೊಳ್ಳಬಹುದು.
ಹಝ್ರತ್ ಟಿಪ್ಪು ಸುಲ್ತಾನ್(ರ)ರವರು ಈ ಮಸೀದಿಗೆ ಎರಡು ಕಿಲೋ ಮೀಟರ್ ದೂರದಲ್ಲಿ ಬೇರೊ೦ದು ಮಸೀದಿಯನ್ನು ಕೂಡ ನಿರ್ಮಿಸಿದ್ದಾರೆ.ಅದು ಮ೦ಗಳೂರಿನ ಬಾವುಟಗುಡ್ಡೆಯಲ್ಲಿರುವ ಈದ್ಗಾ ಮಸೀದಿ.ಮ೦ಗಳೂರು ಹಾಗೂ ಪರಿಸರದಲ್ಲಿರುವ ಮುಸ್ಲೀಮ್ ಭಾ೦ದವರು ಈ ಮಸೀದಿಯಲ್ಲಿ ಈದ್ ನಮಾಜ್ ನಿರ್ವಹಿಸುತ್ತಾರೆ.ಮ೦ಗಳೂರಿನ ಬಾವುಟಗುಡ್ಡೆಯಲ್ಲಿರುವ ಈ ಮಸೀದಿ ಮತ್ತು ಝೀನತ್ ಭಕ್ಷ್ ಮಸೀದಿ ಒ೦ದೇ ಅಡಳಿತದ ಅಧೀನಕ್ಕೆ ಬರುತ್ತದೆ.
ಬಾರ್ಕೂರಿನ ಮಸೀದಿ.
ಕರ್ನಾಟಕದ ಮಣ್ಣಿನಲ್ಲಿ ನಿರ್ಮಿಸಲಾದ ಮೊಟ್ಟ ಮೊದಲ ಎರಡನೇ ಮಸೀದಿ.ಆದರೆ ಭಾರತದ ಇತಿಹಾಸದಲ್ಲಿ ನಾಲ್ಕನೇ ಸ್ಥಾನ ಪಡೆದಿದೆ.ಸ್ವಹಾಬಿಗಳು ಭಾರತದಲ್ಲಿ ನಿರ್ಮಿಸಿದ ಹತ್ತು ಮದೀದಿಗಳ ಪೈಕಿ ನಾಲ್ಕನೇ ಮಸೀದಿಯಾಗಿದೆ ಇದು.ಮೊಟ್ಟ ಮೊದಲ ಎರಡು ಮದೀದಿಗಳು ಕೇರಳದಲ್ಲಿ ನಿರ್ಮಾಣಗೊ೦ಡಿದ್ದರೆ ನ೦ತರ ಎರಡು ಮಸೀದಿಗಳು ಕರ್ನಾಟಕದಲ್ಲಿ ನಿರ್ಮಾನಗೊ೦ಡಿತ್ತು.ಕ್ರಿ.ಶ. 646 ರ ತನಕ ಭಾರತದಲ್ಲಿ ನಾಲ್ಕು ಮಸೀದಿಗಳು ನಿರ್ಮಾನವಾಗಿದ್ದವು.ಅದರಲ್ಲಿ ಎರಡು ಮಸೀದಿಗಳು ಕರ್ನಾಟಕದ ಮಣ್ಣಿನಲ್ಲಾಗಿದೆ ಎನ್ನುವುದು ಸಮಸ್ತ ಕನ್ನಡಿಗರ ಹೆಮ್ಮೆಯ ಸ೦ಗತಿ.
ಕ್ರಿ.ಶ 646 ರಲ್ಲಿ ಬಾರ್ಕೂರಿನಲ್ಲಿರುವ ಈ ಮಸೀದಿಯ ನಿರ್ಮಾಣ ಪ್ರಕ್ರಿಯೆ ಪೂರ್ಣಗೊ೦ಡಿತು.ಈ ಮಸೀದಿಯಲ್ಲಿ ಮೊಟ್ಟ ಮೊದಲು ಖಾಝಿಯಾಗಿದ್ದು ಇಬ್ರಾಹೀ೦ ಬಿನ್ ಮಾಲಿಕ್ (ರ) ರವರಾಗಿರುತ್ತಾರೆ.ಸ್ವಹಾಬಿಗಳಿ೦ದ ನಿರ್ಮಿಸಲ್ಪಟ್ಟ ಈ ಮಸೀದಿಯು ಇ೦ದು ಯಥಾಸ್ಥಿತಿಯಲ್ಲಿ ಕಾಣಲು ಸಾಧ್ಯವಿಲ್ಲ.ಮಸೀದಿಯ ಕೆಲವೊ೦ದು ಅವಶೇಷಗಳು ಮಾತ್ರ ಬಾಕಿಯಿದೆ.ಕರ್ನಾಟಕದ ಇಸ್ಲಾಮಿನ ಇತಿಹಾಸ ಅಧ್ಯಯನಕಾರರಿಗೆ ಬಹು ದೊಡ್ಡ ನಷ್ಟವಾಗಿದೆ ಇದು.
ಕಾಸರಗೋಡು,ಮ೦ಗಳೂರು,ಬಾರ್ಕೂರು ಇಸ್ಲಾಮ್ ಧರ್ಮದ ಪ್ರಚಾರ ಕಾರ್ಯದ ಹೊಣೆಗಾರಿಕೆಯನ್ನು ಹಝ್ರತ್ ಮಾಲಿಕ್ ಬಿನ್ (ರ)ರ ಪುತ್ರ ಮುಹಮ್ಮದ್ ಬಿನ್ ಮಸ್ಲಿಕ್(ರ)ರವರು ಪಡಿಸಿದ್ದರೆ೦ದು ಚರಿತ್ರೆಯ ಕೆಲವು ದಾಖಲೆಗಳಲ್ಲಿ ಕಾಣಬಹುದಾಗಿದೆ.ಸ್ವಹಾಬಿಯಾಗಿದ್ದ ಇವರು ಕುಟು೦ಬ ಸಮೇತ ಮ೦ಗಳೂರಿನಲ್ಲಿ ವಾಸಿಸಿದ್ದರೆ೦ದು,ಮ೦ಗಳೂರು ಹಾಗೂ ಬಾರ್ಕೂರಿನ ಮಸೀದಿಗಳನ್ನು ಇವರು ನಿರ್ಮಿಸಿದ್ದಾರೆ೦ದು ಇತಿಹಾಸದಲ್ಲಿ ದಾಖಲಾಗಿದೆ.
----------------*********-----------------
ಈ ತಿ೦ಗಳ ಸುನ್ನಿ ವಾಹಿನಿಯಾದ ಗಲ್ಪ್ ಇಶಾರ ಮಾಸ ಪತ್ರಿಕೆ 2015 ಮಾರ್ಚ್ ತಿ೦ಗಳ ಪತ್ರಿಕೆಯಲ್ಲಿ ಜುನೈದ್ ಬೆಳ್ಮ ಇವರು ಬರೆದ ಲೇಖನವಿದು.
ನಾನು ಇದನ್ನು ನಿಮ್ಮ ಮು೦ದೆ ತೆರೆದಿಡಲು ಕಾರಣ ಗಲ್ಪ್ ಇಶಾರ ಮಾಸ ಪತ್ರಿಕೆಯು ಕೈ ಸೇರದ ಹಲವಾರು ಕರ್ನಾಟಕ ಮುಸ್ಲಿಮರಿಗೆ ಈ ಮುಖಾ೦ತರವಾದರೂ ಇದು ಓದಲು ಹಾಗೂ ಈ ಚರಿತ್ರೆಯನ್ನು ಮನದಟ್ಟುಮಾಡಲು ಒ೦ದು ಅವಕಾಶವಾಗಲಿ ಎ೦ಬ ಉದ್ದೇಶದಿ೦ದ ಬರೆದು ನಿಮ್ಮ ಮುಂದೆ ತೆರೆದಿಟ್ಟಿರುತ್ತೇನೆ.ನೀವು ಓದಿ ನಿಮ್ಮ ಗೆಳೆಯರಿಗೂ,ಕುಟು೦ಬ ಸದಸ್ಯರಿಗೂ ಶೇರ್ ಮಾಡಿ.
ಸಂಗ್ರಹ:-- ಹನೀಪ್ ಕೆ.ಎಂ. (ಕೆ.ಎಸ್.ಎ)

ಕಾಮೆಂಟ್‌ಗಳು