ವಿಷಯಕ್ಕೆ ಹೋಗಿ

#_ಈ_ಕಳಂಕವನ್ನು_ಜನಮಾನಸಗಳಿಂದ_ಅಳಿಸುವುದಾದರೂ_ಹೇಗೆ..!?*

https://m.facebook.com/story.php?story_fbid=2464587093764817&id=100006406501585


-ನಿಝಾಮ್ ಅನ್ಸಾರಿ  ಫೇಸ್ ಬುಕ್ ವಾಲ್ ನಿಂದ-

ಎಲ್ಲರ ಮನದಲ್ಲೂ ಈಗ ಪುತ್ತೂರು ಎಂಬ ಊರ ಹೆಸರು ನೆಲೆಯಾಗಿದೆ..ಕಾರಣ ಎಲ್ಲರಿಗೂ ಗೊತ್ತೇ ಇದೆ. ಕಾಲೇಜು ವಿದ್ಯಾರ್ಥಿಗಳ ನಡುವಿನ ಅತ್ಯಾಚಾರ ಪ್ರಕರಣವೊಂದು ಬಟಾಬಯಲಾಗಿದ್ದು. ಒಂದು ಕಾಲದಲ್ಲಿ ಹಲವು ಕಲಾವಿದರ ಜನ್ಮ ಭೂಮಿಯೆಂದೇ ಖ್ಯಾತಿ ಪಡೆದಿದ್ದ ಪುತ್ತೂರು,ಇದೀಗ ಸಾಮೂಹಿಕ ಅತ್ಯಾಚಾರದ ಕಳಂಕವನ್ನು ಮೆತ್ತಿಕೊಂಡಿದೆ.. ಈ ಕುರಿತು ಒಂದು ವಿಭಾಗದ ಜನರು ನ್ಯಾಯಕ್ಕಾಗಿ ಆಕ್ರೋಶ ವ್ಯಕ್ತಪಡಿಸಿ ಧ್ವನಿಯೆತ್ತಿದರೆ, ಇನ್ನೊಂದು ವಿಭಾಗ ಅದನ್ನು ಸಾರಸಗಟಾಗಿ ತಿರಸ್ಕರಿಸಿ ಮತ್ತೊಮ್ಮೆ ಅವರ ಧರ್ಮಾಂಧತೆ ಸಾರವನ್ನು ಸಾರ್ವಜನಿಕವಾಗಿ ಜಾಲತಾಣಗಳಲ್ಲಿ ಪ್ರಕಟಪಡಿಸಿದ್ದಾರೆ..



ಈ ವಿಚಾರವಾಗಿ ವಿಷಾದವಿದೆ.. ಸಮರ್ಥನೆಗೂ ಒಂದು ಮಿತಿ ಇದೆಯಲ್ವಾ. ಅಮಾನವೀಯ ರೀತಿಯಲ್ಲಿ ಅಕ್ರಮ ಲೈಂಗಿಕ ಚಟುವಟಿಕೆ ನಡೆದಿದೆ ಎಂಬುವುದನ್ನು ಯಾವ ರೀತಿಯಲ್ಲೆಲ್ಲಾ ಪ್ರಚುರ ಪಡಿಸಬೇಕೋ ಆ ರೀತಿಯಲ್ಲೆಲ್ಲ ಪ್ರಚಾರವನ್ನು ಸೋಶಿಯಲ್ ಮೀಡಿಯಾ ಕೈಗೆತ್ತಿಕೊಂಡಿದೆ.. ಒಳ್ಳೆಯದು..ಆದರೆ ಎಲ್ಲೋ ಈ ಪ್ರಚಾರಗಳು ದುರ್ಬಳಕೆಯಾಗುತ್ತಿದೆ ಎಂಬುದು ನಗ್ನ‌ ಸತ್ಯ.

ಕಥುವಾ ಬಾಲಕಿಯ ಅತ್ಯಾಚಾರ ಪ್ರಕರಣದ ವಿಚಾರ ಬಂದಾಗ ಯಾರೆಲ್ಲ ಮೌನಿಯಾಗಿದ್ದರೋ ಅವರೀಗಲೂ ಮೌನರಾಗಿಯೇ ಇದ್ದಾರೆ. ಒಂದರ್ಥದಲ್ಲಿ ಹೇಳುವುದದರೆ ಸಾಮಾಜಿಕ ತಾಣಗಳಲ್ಲಿ ಈ ವಿಷಯದಲ್ಲಿ ಸಂಭ್ರಮಿಸಿದವರೂ ಅದೇ ಮನೋಸ್ಥಿತಿಯ ಜನರು. ವಿದ್ಯಾರ್ಥಿಗಳನ್ನು ರಾಜಕೀಯ ದೃಷ್ಟಿಕೋನವನ್ನಿಟ್ಟುಕೊಂಡು ಪೋಷಿಸುವ ಸಂಘಟನೆಯ ನೇತಾರರಂತೂ ತುಟಿ ಬಿಚ್ಚುತ್ತಿಲ್ಲ. ಬದಲಾಗಿ ಸಮರ್ಥನೆಗಳನ್ನು ನೀಡುತ್ತಾ ಬಂದಿದ್ದಾರೆ..
ದಲಿತ ಹೆಣ್ಮಗಳೊಬ್ಬಳ ಮೇಲಿನ ಸಾಮೂಹಿಕ ಅತ್ಯಾಚಾರ ಇಡೀ ಕರ್ನಾಟಕವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದೆ. ಜಾತಿಯ ನಾಮದಿಂದಲೇ ಮಂತ್ರಿಯಾದೆನು ಎಂದು ಪತ್ರಿಕಾಗೋಷ್ಠಿಯಲ್ಲಿ ಪರಿಚಯಿಸಿದ ವ್ಯಕ್ತಿಯೂ ತನ್ನ ಹುಟ್ಟೂರ ಬಗ್ಗೆ ಮರು ಮಾತನಾಡುವ ಗೋಜಿಗೆ ಹೋಗಲಿಲ್ಲ.
ಇಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದ ಎರಡು ಘಟನೆಗಳು ಚಿಂತನೆಗೆ ಹಚ್ಚುವುದಾದರೆ ಗಮನಾರ್ಹ ಎನಿಸುತ್ತದೆ. ಲವ್ ಹೆಸರಲ್ಲಿ ಯುವಕನೊಬ್ಬನಿಂದ ಇರಿತಕ್ಕೊಳಗಾದ ಹೆಣ್ಣೊಬ್ಬಳು ಚಿಂತಾಜನಕ ಸ್ಥಿತಿಯಲ್ಲಿರುವಾಗಲೇ, ಮತ್ತೊಂದು ಹೆಣ್ಣಿನ ಮೇಲೆ ಅತ್ಯಂತ ಕ್ರೂರವಾದ ರೀತಿಯಲ್ಲಿ ಅತ್ಯಾಚಾರ ಮಾಡಿದ್ದಲ್ಲದೆ, ಅದನ್ನು ಜಾಲತಾಣಗಳಲ್ಲಿ ಹರಿಯಬಿಟ್ಟು ವಿಕೃತಿ ಮೆರೆದಿರೋದು..
ಎರಡೂ ಅಪರಾಧಗಳಲ್ಲಿ ಶಾಮೀಲಾದವರೆಲ್ಲರೂ ಇನ್ನೇನು ಶಿಕ್ಷಣವನ್ನು ಪಡೆದು ಭವಿಷ್ಯವನ್ನು ರೂಪಿಸಬೇಕಾದ, ಆ ಬಗ್ಗೆ ಮಾತ್ರ ಚಿಂತಿಸಬೇಕಾದ ಯುವಕರು..

ಆಧುನಿಕ ಲೌಕಿಕ ಶಿಕ್ಷಣವು ಮಾನವೀಯತೆಯ ಅಣುವಿನಷ್ಟು ಗಾತ್ರದ ಪ್ರಭಾವವೂ ಕೂಡಾ ಬೀರುವುದಿಲ್ಲ ಎಂದಾದರೆ ಮತ್ತೆ ಮನುಷ್ಯತ್ವ ದೂರವಾಗಿ ಮೃಗೀಯತೆ ತಾಂಡವಾಡುವುದು ಖಂಡಿತ ಅಲ್ವಾ... ಕೆಲವೊಮ್ಮೆ ಪೋಷಕರು ತೋರುವ ಅತಿಯಾದ ಪ್ರೀತಿ ಇಲ್ಲವೇ ಅತಿಯಾದ ತಿರಸ್ಕೃತ ಮನೋಭಾವ ಎರಡೂ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಲೂ ಬಹುದು.. ತಂದೆ ತಾಯಿಯರು ತೋರುವ ಸಡಿಲಿಕೆ ಮುಂದೆ ಇದಕ್ಕಿಂತಲೂ ದೊಡ್ಡ ಪ್ರಮಾಣದ ಅನಾಹುತಗಳಿಗೆ ಕಾರಣವಾಗಲೂಬಹುದು.. ಪೋಷಕರಿಗೆ ಮಾತ್ರವಲ್ಲ..ಅಧ್ಯಾಪಕ ವರ್ಗಕ್ಕೂ ಕೂಡಾ ಈಗಿನ ಮಕ್ಕಳನ್ನು ಹತೋಟಿಯಲ್ಲಿಟ್ಟುಕೊಳ್ಳಲು ಪಾಡು ಪಡಬೇಕಾದ ಪರಿಸ್ಥಿತಿ ಬಿಡಿ..

ಹಾಗಿರುವಾಗ, ಇಂತಹ ಘಟನೆಗಳ ಹಿನ್ನಲೆಯನ್ನು ನೋಡುವಾಗ ಎಲ್ಲವೂ ನಡೆದದ್ದು ಮಾದಕ ವಸ್ತುಗಳ ಬಳಕೆಯಿಂದ ಎಂಬುವುದು ಸ್ಪಷ್ಟವಾಗಿ ತಿಳಿಯುತ್ತದೆ..

ಮಧ್ಯಪಾನ ಅಥವಾ ಮಾದಕ ವಸ್ತುಗಳ ಬಳಕೆಯ ವಿಷಯದಲ್ಲಿ ಇಸ್ಲಾಂ ಧರ್ಮದ ಕಟ್ಟು ನಿಟ್ಟಿನ ಕ್ರಮಗಳು ಬಹುಶಃ ಇತರ ಧರ್ಮಗಳ ಸಿದ್ಧಾಂತಗಳೊಂದಿಗೆ ತುಲನೆ ಮಾಡುವಾಗ ಇಸ್ಲಾಮಿನ ಅತಿ ಗಂಭೀರವೂ, ಕಠಿಣವೂ ಆದ ನಿಲುವು ಅತಿ ಪ್ರಯೋಜನಕಾರಿ ಎಂದು ತಿಳಿಯುತ್ತದೆ..

ಮದ್ಯಪಾನವು ಪೈಶಾಚಿಕ ಪ್ರವೃತ್ತಿಯ ಭಾಗವಾಗಿದೆ ಎಂಬ ಕುರಾನಿನ ಆಶಯಗಳು ಸಾಮಾಜಿಕವಾಗಿ ಮನುಷ್ಯರನ್ನು ಜಾಗೃತರನ್ನಾಗಿಸುತ್ತದೆ. ಲಹರಿ ವಸ್ತುಗಳ ಬಳಕೆಯನ್ನು ನಿಷಿದ್ಧ ಗೊಳಿಸಿದ್ದೂ ಅದೇ ಕಾರಣದಿಂದ.
ಪುತ್ತೂರಿನಲ್ಲಿ ನಡೆದಂತಹ ಘಟನೆಗಳನ್ನು ಬರೀ ಖಂಡಿಸುವುದರಿಂದ ಮುಂದಿನ ತಲೆಮಾರು ಪಾಠ ಕಲಿಯದು. ಯುವಕರನ್ನು ಮಾನಸಿಕವಾಗಿ ಪರಿವರ್ತಿಸುವ, ಮಾದಕ ವಸ್ತುಗಳ ಬಳಕೆಯಿಂದಾಗುವ ಅನಾಹುತಗಳನ್ನು ತಿಳಿ ಹೇಳಿ, ಅವರ ಬದುಕಿಗೆ ಕೊಳ್ಳಿ ಇಡುವಂತಹ, ತೆರೆಮರೆಯಲ್ಲಿ ರಾಜಕೀಯ ಪಕ್ಷಗಳ ಧುರೀಣರು ನಿಯಂತ್ರಿಸುತ್ತಾ ಯುವಕರನ್ನು ಬಲಿಕೊಡುವ ಸಂಘಟನೆಗಳಿಂದ ದೂರ ಮಾಡುವಲ್ಲಿ ಜಾತಿ ಧರ್ಮಗಳೆನ್ನದೆ ಎಲ್ಲರೂ ಒಗ್ಗಟ್ಟಾಗಿ ಧರ್ಮಾಂಧ ಧುರುಳರ ಕಪಟ ವ್ಯಾಮೋಹಗಳನ್ನು ಹತ್ತಿಕ್ಕಬೇಕಿದೆ.. ಧರ್ಮದ ಸೈದ್ಧಾಂತಿಕ ನಿಲುವುಗಳನ್ನು ಗಾಳಿಗೆ ತೂರಿ, ಧರ್ಮ ರಕ್ಷಕರೆಂಬ ಪಟ್ಟ ಸ್ವತಃ ಕಟ್ಟಿಕೊಂಡು ಬೆಂಕಿಯುಂಡೆ ಉಗುಳುವಂತಹ ಭಾಷಣ ಮಾಡಿ ಜನರ ನಡುವೆ ಅನವಶ್ಯಕ ಸಂಘರ್ಷ ಗಳನ್ನು ಹುಟ್ಟು ಹಾಕುವವರಿಂದ ಪ್ರತಿಯೊಂದು ಧರ್ಮವನ್ನೂ ರಕ್ಷಿಸಬೇಕಿದೆ..

ಕೆಲವು ಖಾಸಗಿ ಸಂಸ್ಥೆಗಳ ಹೆಸರು ಹೇಳುವಾಗಲೇ ಕೇಸರಿ ಬಣ್ಣ ನೆನಪಾಗುವಷ್ಟರ ಮಟ್ಟಿಗೆ ಇಂದಿನ ಖಾಸಗಿ ಸಂಸ್ಥೆಗಳು ಬದಲಾಗಿರುವುದು ಮತ್ತು ಇದರ ಪರಿಣಾಮವಾಗಿ ಕಾಲೇಜು ವರಾಂಡದೊಳಗಿನ ಪ್ರಕರಣಗಳು ಬಹುತೇಕ ಮುಚ್ಚಿ ಹಾಕಲ್ಪಡುತ್ತಿರುವುದು ಇಂತಹ ಕುಕೃತ್ಯಗಳಿಗೆ ದಾರಿ ತೆರೆದಂತಾಗಿದೆ..ಧರ್ಮಾಂಧರಿಗೆ ತುಟಿ ಬಿಚ್ಚಲಾರದಂತಾಗಿದೆಂಬುದು ಹಗಲು ಬೆಳಕಿನಷ್ಟು ಸತ್ಯ..

-ನಿಝಾಮ್‌ ಅನ್ಸಾರಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕೋವಿಡ್ ಕಾಲದ ಓದು: ಚಂದ್ರನ ಚೂರು

'ಚಂದ್ರನ ಚೂರು' ಕೃತಿಯ ಹೆಸರು ಕೇಳಿದಾಗ ನಿಜವಾಗಿಯೂ ಅದೊಂದು ಕಾದಂಬರಿಯಾಗಿರಬಹುದು ಎಂದು ಭಾವಿಸಿದ್ದೆ. ಆದರೆ, ಪುಸ್ತಕ ಕೈಗೆ ತಲುಪಿದಾಗಲೇ ಗೊತ್ತಾಗಿದ್ದು, ಅದೊಂದು ಚಂದ್ರಲೋಕಕ್ಕೆ ಕೊಂಡೊಯ್ಯುವ ಅದ್ಭುತ ಕೃತಿ ಅಂತ. ತಂದೆ ಕುವೆಂಪು ಅವರ ಸಾಹಿತ್ಯದ ಹಾದಿಯಲ್ಲೇ ನಡೆದರೂ, ತೇಜಸ್ವಿಯವರ ಸಾಹಿತ್ಯವು ನಿಸರ್ಗ ವಿಸ್ಮಯ, ಭೂಗೋಳ, ಜೀವಶಾಸ್ತ್ರ, ಭತಶಾಸ್ತ್ರ, ಇತಿಹಾಸ ಹೀಗೇ ಎಲ್ಲಾ ಶಾಸ್ತ್ರಗಳ ಮಿಶ್ರಣ ರಸಾಯನ ಎಂದೇ ಹೇಳಬಹುದು. ಚಂದ್ರನ ಚೂರು ಚಂದ್ರ ಲೋಕದ ವಿಸ್ಮಯ ದೃಶ್ಯಗಳನ್ನು ಕಟ್ಟಿಕೊಡುವ ಚೊಚ್ಚಲ ಕೃತಿ. ಬಾಹ್ಯಾಕಾಶ, ಖಗೋಳ ಶಾಸ್ತ್ರ ವಿಷಯದಲ್ಲಿ ಆಸಕ್ತಿ ಇಲ್ಲದ ನನ್ನಂತವರನ್ನೂ ಇದು ಸರಾಗವಾಗಿ ಓದಿಸಿಕೊಂಡು ಹೋಗುವಂತೆ ಮಾಡುತ್ತದೆ, ಅದಕ್ಕೆ ಕಾರಣ, ತೇಜಸ್ವಿ ಅವರ ಬರವಣಿಗೆ ಹಾಗೂ ವಿವರಣೆಯ ಶೈಲಿ.. ಜಗತ್ತಿನಲ್ಲಿ ಮನುಷ್ಯನು ಚಂದ್ರನಲ್ಲಿಗೆ ಕಾಲಿಡುವುದಕ್ಕೂ ಮುನ್ನ, ಯಾವುದೆಲ್ಲಾ ರೀತಿಯ ಪರಿಶ್ರಮಗಳು ನಡೆದಿದ್ದವು ಹಾಗೂ ಭೂಮಂಡಲ ಮತ್ತು ಚಂದ್ರನ ಕುರಿತಾಘಿ ಯಾವುದೆಲ್ಲಾ ಆಯಾಮಗಳಲ್ಲಿ ಅಧ್ಯಯನಗಳಾಗಿದ್ದುವು ಎಂಬುದರ ಸಂಪೂರ್ಣ ವಿಷಯಗಳಿವೆ. ಚಂದ್ರನಲ್ಲಿ ತಲುಪಿದ ಮನುಷ್ಯನಿಗೆ ಆದ ಅನುಭವಗಳೇನು? ನೀಲ್ ಆಮ್Fಸ್ಟ್ರಾಂಗ್ ತಂಡದ ಚಂದ್ರಯಾನದ ರಸವತ್ತಾದ ಅನುಭವಗಳು, ಚಂದಿರನ ಮಣ್ಣಲ್ಲಿ ಅಮೇರಿಕದ ಫ್ಲಾಗ್ ಮತ್ತು ಬೋಡ್F ಸ್ಥಾಪಿಸಿ ಬಂದ ಆ ಧೀರ ತಂಡದ ಬೆರಗಾಗಿಸುವ ಕ್ಷಣ ಕ್ಷಣದ ವರದಿಗಳು ಈ ಕೃತಿಯ ಲೇಖನಗಳಲ್ಲಿ ಅಡಗಿದೆ. ಒಟ್ಟಿನಲ...

ಇಂದಿನಿಂದ 'ಸಮಸ್ತ'ದ ಆನ್ ಲೈನ್ ತರಗತಿಗಳು ಆರಂಭ

ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಒಕ್ಕೂಟದ (SKJU)ಅಧೀನದಲ್ಲಿ‌ ಕಾರ್ಯಾಚರಿಸುವ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್‌ ಅಂಗೀಕೃತ ಮದ್ರಸಗಳ ವಿದ್ಯಾರ್ಥಿಗಳಿಗೆ ನವ ಅಧ್ಯಯನ ವರ್ಷ ಇಂದಿನಿಂದ ಆರಂಭಗೊಂಡಿದೆ. ವಿಶೇಷ ಅಂದ್ರೆ, ಈ ಬಾರಿ ತರಗತಿಗಳ ಪ್ರಾರಂಭೋತ್ಸವದ ಸಂಭ್ರಮಗಳಿಲ್ಲದೆ, ಮದ್ರಸಾ ಕಟ್ಟಡಗಳು ತೆರೆಯದೇ, ಹತ್ತು ಸಾವಿರಕ್ಕೂ ಮಿಕ್ಕ ಮದ್ರಸಗಳ ಹನ್ನೆರಡು ಲಕ್ಷ ವಿದ್ಯಾರ್ಥಿಗಳು ಅವರವರ ಮನೆಗಳಲ್ಲಿಯೇ ಕುಳಿತು ತರಗತಿಗಳಲ್ಲಿ ಪಾಲ್ಗೊಳ್ಳುತ್ತಿರುವುದು ಎಂಬುದು.  ಆನ್ ಲೈನ್ ತರಗತಿಗಳಿಗಾಗಿ, ಸಮಸ್ತ ಈ ಹಿಂದೆಯೇ ಎಲ್ಲಾ ಸಿದ್ಧತೆಗಳನ್ನು ನಡೆಸಿದ್ದು, ವಿದ್ಯಾಭ್ಯಾಸ ಬೋರ್ಡ್‌ ಅದಕ್ಕಾಗಿ ಆರು ಕ್ಯಾಮರಾ ಯುನಿಟ್ ಗಳ ಕ್ಲಾಸ್ ರೂಂಗಳು ,22 ಪರಿಣತರಾದ ಅಧ್ಯಾಪಕರನ್ನು ನೇಮಕಗೊಳಿಸಿದೆ.  ತರಗತಿ ಆರಂಭದಿಂದ ಕೊನೆಯವರೆಗೂ ವಿದ್ಯಾರ್ಥಿ ಜೊತೆ ಪೋಷಕರು ಕುಳಿತಿರಬೇಕು.ಹೋಂ ವರ್ಕ್ ನೀಡಿದರೆ, ಅದನ್ನು ಮಾಡಿ, ಮುಂದೆ ಮದ್ರಸಗಳಲ್ಲಿ ತರಗತಿ ಆರಂಭಗೊಳ್ಳುವಾಗ ಮೌಲ್ಯಮಾಪನಕ್ಕಾಗಿ ಅಧ್ಯಾಪಕರಿಗೆ ತೋರಿಸಬೇಕು. ಮನೆಯಲ್ಲಿ ತರಗತಿಯ ವಾತಾವರಣವನ್ನು ಒದಗಿಸಿಕೊಟ್ಟು,ವಿದ್ಯಾರ್ಥಿಗಳಿಗೆ ಮನೆಯವರು ಸಹಕರಿಸಬೇಕು. ಅಲ್ಲದೇ, ಮದ್ರಸಾ ಹಾಗೂ ಜಮಾಅತ್ ಕಮಿಟಿಗಳು ಸೇರಿ, ಆನ್‌ಲೈನ್ ತರಗತಿಗಳು ಆಯಾ ಮದ್ರಸಗಳ ವಿದ್ಯಾರ್ಥಿಗಳಿಗೆ ಅವರವರ ಮನೆಗಳಲ್ಲಿಯೇ ಸುಲಭವಾಗಿ ತಲುಪುವಂತೆ ಎಲ್ಲಾ ರೀತಿಯಲ್ಲಿ ಸಹಕಾರವನ್ನು ನೀಡಬೇಕು. ಮದ್ರಸಗಳು ತ...

Payyakki Usthad Islamic Academy -Ansariya College of Islamic Science10th Anniversary & Convocation Program-#Photo Gallery......