ವಿಷಯಕ್ಕೆ ಹೋಗಿ

ನೋವು -ನೆನಪು

🌀🌀🌀🌀🌀🌀🌀🌀🌀🌀

*ಕಡಮೇರಿ ರಹ್ಮಾನಿಯಾ ದ ನೆನಪು...*



*ಪ್ರಿಯ ಹಾರಿಸ್ ರಹ್ಮಾನಿ..... ನೆನಪಿನಾಳದಿ ಬೇರೂರಿದ ನೋವು ಮರುಕಳಿಸುತ್ತಿದೆ ಗೆಳೆಯಾ... ನಿನ್ನ ನೆನಪಲ್ಲೇ ಒಂದೆರೆಡು ಗೆರೆಗಳು ಬರೆಯಬೇಕೆಂದು ಅನಿಸಿತು.*
◻▪▫▪▫▪▫▪▫◻
*ಇದೀಗ ಮಗದೊಮ್ಮೆ ಸನದುದಾನ ಸಮ್ಮೇಳನಕ್ಕೆ ಕಡಮೇರಿ ರಹ್ಮಾನಿಯಾ ಸಜ್ಜಾಗಿದೆ.ರಹ್ಮಾನಿಯಾ ಸಮ್ಮೇಳನ ಬರುವಾಗ ಮತ್ತೊಮ್ಮೆ ಹಾರಿಸ್ ರಹ್ಮಾನಿ ನೆನಪಿನಂಗಳದಲ್ಲಿದ್ದಾನೆ. ಬಾಲ್ಯದಿಂದಲೂ ನಾವು ಗೆಳೆಯರು,ನನ್ನ ದೊಡ್ಡಮ್ಮನ ಮೊಮ್ಮಗ ಕೂಡಾ.*
*(ನಮ್ಮ ತಾತರಾಗಿದ್ದ ಮರ್ಹೂಮ್ ಅಬೂಬಕ್ಕರ್ ಹಾಜಿ ಪೊನ್ನಾನಿಯಲ್ಲಿ ಕಲಿತ ಪಂಡಿತರಾಗಿದ್ದರು.ಆಲಡ್ಕಕ್ಕೆ ಶಂಸುಲ್ ಉಲಮಾ ಪ್ರಭಾಷಣಕ್ಕೆ ಬರುತ್ತಿದ್ದ ಕಾಲದಲ್ಲಿ ತಾತನವರು ಆಗ ಕಲ್ಲಡ್ಕದಲ್ಲಿ ಮುದರ್ರಿಸ್ ಆಗಿದ್ದರಂತೆ.ಸೂಕ್ಷ್ಮತೆಯ ಆಗರವಾಗಿದ್ದ ಅವರು ಎಲ್ಲರಿಗೂ ಪ್ರೀತಿ ಪಾತ್ರರಾಗಿದ್ದರು, ಆದ್ರಿಂದ ನಾವು ಅವರ ಮೊಮ್ಮಕ್ಕಳಾದೆವಲ್ಲ ಅನ್ನೋ ಅಭಿಮಾನ ಎಂದಿಗೂ ಇದೆ.ಅಷ್ಟೇ ಅಲ್ಲದೆ ಅಂದು ನಮ್ಮೂರಲ್ಲಿ ಸಮಸ್ತದ ಉಸಿರಾಗಿ ನಿರಾಶ್ರಿತರ ಧ್ವನಿಯಾಗಿದ್ದ ಸಕ್ರಿಯ ಕಾರ್ಯಕರ್ತರಾದ ಕಲ್ಲಡ್ಕ ಮರ್ಹೂಮ್ ಇಬ್ರಾಹಿಂ ಹಾಜಿಯವರಿಗೆ ನಮ್ಮ ತಾತರೆಂದರೆ ಬಹಳ ಅಚ್ಚುಮೆಚ್ಚು.ಈ ಇಬ್ಬರೂ ಮಹಾ ಮನುಷ್ಯರು ಕಲ್ಲಡ್ಕದ ಧಾರ್ಮಿಕ ಮತ್ತು ಸಾಮಾಜಿಕ ನೇತೃತ್ವಕ್ಕೆ ಮುಂದಾಳತ್ವ ವಹಿಸಿದ್ದರು ಎಂದರೆ ತಪ್ಪಾಗಲ್ಲ.)*

*ಹಾರಿಸ್ ತನ್ನ ಪ್ರಾಥಮಿಕ ಶಿಕ್ಷಣದಿಂದ ಎಸ್.ಎಸ್.ಎಲ್.ಸಿ ವರೆಗೂ ಕಲಿತದ್ದು ಕೋಟೆಕಾರಿನ ಹಾಸ್ಟೆಲೊಂದರಲ್ಲಾಗಿತ್ತು.ನಿಜವಾಗಿಯೂ ಅದರ ನಂತರವಾಗಿತ್ತು ನನ್ನೊಂದಿಗಿನ ಒಡನಾಟ ಪ್ರಾರಂಭಗೊಂಡದ್ದು.ಕಾರಣ ಸಣ್ಣಪುಟ್ಟ ಕೆಲಸ ನೋಡಿಕೊಂಡು ಆ ನಂತರ ಅಧಿಕವೂ ತಂಗಿದ್ದು ತನ್ನ ಅಜ್ಜಿಯ ಕೆ.ಸಿ ರೋಡಿನ ಮನೆಯಲ್ಲೇ.ಆ ಮಧ್ಯೆ ನಾನೂ ಕೂಡಾ ಅಲ್ಲೇ ಹತ್ತಿರದ ದೊಡ್ಡಮ್ಮನ ಮನೆಯಲ್ಲಿ ತಂಗಿದ್ದೆ.ನಂತರ ಹಾರಿಸ್ ನ ಕುಶಾಗ್ರತೆಯನ್ನು ಮನಗಂಡು ಆತನ ತಾಯಿಯ ಸಹೋದರ ಮಜೀದ್ ಮುಸ್ಲಿಯಾರರು ಉನ್ನತ ಮಟ್ಟದ ಶಿಕ್ಷಣ ಪಡೆಯುವ ಇರಾದೆಯಿಂದ ಕಡಮೇರಿ ರಹ್ಮಾನಿಯಾಗೆ ಸೇರಿಸಿದ್ದರು.ಅವನ ಜೀವನದಲ್ಲಿ ಅದೊಂದು ಕ್ರಾಂತಿಯ ಹೆಜ್ಜೆಯಾಗಿತ್ತು.ಅದೇ ವರ್ಷ ನನ್ನನ್ನೂ ಅವರೇ ಪಯ್ಯಕ್ಕಿಗೆ ಸೇರಿಸಿದ್ದರು.ನಂತರ ನಮ್ಮ ಭೇಟಿಯು ನಿಧಾನ ಪಡೆಯಿತು.ಕಾರಣ ನಂತರ ಶಿಕ್ಷಣದೆಡೆಗೆ ಗಮನ ಕೊಡಬೇಕಾಯಿತು.*

*ಆದರೂ ಹಾರಿಸ್ ನಾನು ಪಯ್ಯಕ್ಕಿ ಯಲ್ಲಿ ತೃತೀಯ ವರ್ಷಗಳನ್ನು ಪೂರೈಸುವುದರೊಳಗೆ 3 ಬಾರಿ ಬಂದಿದ್ದ.ರಹ್ಮಾನಿಯಾದ ಕ್ಯಾಲೆಂಡರ್ ವಿತರಣೆಗಾಗಿ ಎಂದು ನನ್ನ ನೆನಪು..ಈ ಮಧ್ಯೆ ಮಾಸಿಕವೊಂದರಲ್ಲಿ ಲೇಖನವೊಂದು ಪ್ರಕಟಗೊಂಡಾಗ ಇನ್ನೂ ಬರೆಯಬೇಕು ಎಂದು ಹುರಿದುಂಬಿಸಿದ್ದ.ರಹ್ಮಾನಿ ಕೂಡಾ ಒಳ್ಳೆಯ ಬರಹಗಾರ.ಪ್ರಚಲಿತ ಮಾಸಿಕದಲ್ಲಿ ಎಡೆಬಿಡದೆ ಬರೆಯುತ್ತಿದ್ದ.ನನ್ನನ್ನೂ ಪ್ರೋತ್ಸಾಹಿಸಿದ್ದು ಇದೆ.ನಂತರ ನಮ್ಮ ಭೇಟಿ ಆಲಪ್ಪುಝದಲ್ಲಿ ನಡೆದ ಸಮಸ್ತ ಮಹಾ ಸಮ್ಮೇಳನ ದ ವೇದಿಕೆಯ ಬಳಿಯಾಗಿತ್ತು.ಆಗ ಆತನನ್ನು ನನ್ನ ಗೆಳೆಯರಿಗೂ ಪರಿಚಯಿಸಿದ್ದೆ.ಆತನೂ ಆಗ ನಾನು ಮಲಪ್ಪುರಂ ಜಿಲ್ಲೆಯ ಪ್ರದೇಶವೊಂದರಲ್ಲಿ ಬಿ.ಎಡ್ ವ್ಯಾಸಂಗ ಮಾಡುತ್ತಿರುವೆನೆಂದು ಹೇಳಿದ್ದ.ರಹ್ಮಾನಿಯಾದ ಕಲಿಕೆ ಮುಗಿದ ನಂತರ ದ.ಕ ಜಿಲ್ಲೆಯ ಕೈಕಂಬ ಸಮೀಪ ತಿಂಗಳುಗಳ ಕಾಲ ಖತೀಬ್ ಆಗಿದ್ದು ನಂತರ ಉನ್ನತ ವ್ಯಾಸಂಗಕ್ಕಾಗಿ ಮಲಪ್ಪುರದೆಡೆಗೆ ಸಾಗಿದ್ದ.ಕಾಣದೆ ತುಂಬಾ ದಿನಗಳು ಕಳೆದುದರಿಂದ ನನಗೆ ಆಗಲೇ ನೋಡಲು ತುಂಬಾ ಚೇಂಜಸ್ ಕಾಣುತ್ತಿದ್ದ ರಹ್ಮಾನಿ ಉಭಯ ಕುಶಲೋಪರಿಯ ಬಳಿಕ ಅವರ ತಂಡ ನಮ್ಮಿಂದ ಬೀಳ್ಕೊಟ್ಟರು.ನಾನಂತೂ ಕನ ಮನದಲ್ಲೂ ಎಣಿಸಿರಲ್ಲಿಲ್ಲ! ಅದು ನನ್ನ ಕೊನೆಯ ಭೇಟಿಯೆಂದು.ಅಂದು ಹೇಳಿದ ಸಲಾಮ್ ಕೊನೆಯ ಸಲಾಮೆಂದು.ನಮಗೆ ಅಭಿಮಾನವಿತ್ತು ರಹ್ಮಾನಿ ನಮ್ಮ ತಾತನವರ ಕೀರ್ತಿಯನ್ನು ಬಾನೆತ್ತರಕ್ಕೇರಿಸುವನೆಂದು.ನಿರೀಕ್ಷೆಯಿತ್ತು‌ ನಮ್ಮ ಕುಟುಂಬದ ಘನ ವಿದ್ವಾಂಸನಾಗಿ ಹೊರಬರುವನೆಂದು.ರಹ್ಮಾನಿಯಾ ಗೂ ಕೂಡಾ ಆಕಾಂಕ್ಷೆ ಇತ್ತು.*

*ಆದರೆ ವಿಧಿಯ ಲೀಲೆ ಬೇರೆಯೇ ಆಗಿತ್ತು.ಆಕಸ್ಮಿಕವಾಗಿ ಆತನ ರೂಹ್ ಸ್ವರ್ಗದೆಡೆಗೆ ಹಾರಿತ್ತು.ಹಲವು ಕನಸ ಗೋಪುರಗಳು ನುಚ್ಚುನೂರಾಗಿದ್ದವು.ಒಡನಾಟದಲ್ಲಿ ಸದಾ ಮಂದಸ್ಮಿತ ಸ್ವಭಾವಗುಣಕ್ಕೆ ಕಾವಲುನಿಂತ ಹಾರಿಸ ನ ಕನಸುಗಳು ಕವಲೊಡೆಯುವ ಮುನ್ನ ಮುದುಡಿ ಹೋಗಬಹುದೆಂದು ಯಾರೂ ಊಹಿಸಿರಲಿಲ್ಲ.ಸಮಸ್ತ ಎಂದರೆ ಜೀವವಾಗಿತ್ತು.ಹೆಮ್ಮೆ ಮತ್ತು ಗೌರವ ಕೂಡಾ ಇತ್ತು.ವಿರುದ್ಧ ಧ್ವನಿಯೆತ್ತಿದವರ ಸದ್ದಡಗಿಸಲು ಸದಾ ಮುಂದಿದ್ದ.ಕಾರಣ ತನ್ನ ಗುರು ಪರಂಪರೆಯ ಎಲ್ಲರೂ ಸಮಸ್ತದ ನೇತೃತ್ವದಲ್ಲಿರುವ ವಿಧ್ವತ್ ಪ್ರತಿಭೆಗಳು..ಕೋಟುಮಲ ಉಸ್ತಾದರಂತಹ ಸಾತ್ವಿಕರು.ಇಬ್ಬರೂ ಈಗ ನಮ್ಮೊಂದಿಗಿಲ್ಲ.ಆದರೆ ಅವರ ನೆನಪುಗಳು ಸದಾ ಮರುಕಳಿಸುತ್ತಿದೆ.ಆ ದಿನ ವಾರ್ತೆ ಕೇಳಿದ ನನಗಂತೂ ನಂಬಲಾಗಲೇ ಇಲ್ಲ.ತಾಜುದ್ದೀನ್ ರಹ್ಮಾನಿಯವರನ್ನು ಸಂಪರ್ಕಿಸಿ ವಿಷಯ ತಿಳಿದ ನಂತರ ಏನೆನ್ನಬೇಕೋ ತಿಳಿಯಲಾರದೆ ಚಡಪಡಿಸಿತು ಮನ.ಮುಸ್ಸಂಜೆಯಾಗುವ ಮುನ್ನ ಗುಂಡುಕಲ್ಲು ತಲುಪಿದೆ.ಅಲ್ಲಿ ತಲುಪಿದರೆ ಯಾವ ಕಲ್ಲು ಹೃದಯವೂ ಕರಗಿ ನೀರಾಗುವಂತಿತ್ತು ಆ ವಾತಾವರಣ.ಮಳೆ ಹನಿಗಳು ಭುವಿಯನ್ನು ತಂಪೆರಗಿಸುತ್ತಿತ್ತು.ಅಂಬುಲೆನ್ಸೊಂದು ಬಂದು ನಿಂತಾಗ ಸೇರಿದ್ದ ನೂರಾರು ಜನರು ಈ ಜವಾನನ ಮಯ್ಯಿತನ್ನು ನೋಡಲು ಸೇರಿದ್ದರು.ಆ ಮುಖವು ಪ್ರಕಾಶಿಸುತ್ತಿತ್ತು. ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೆ ಜನರು ಧಫನ ಭೂಮಿಯವರೆಗೂ ಸಾಕ್ಷಿಯಾಗಿದ್ದರು.ಜಿಫ್ರೀ ತಂಗಳ್ ಮಯ್ಯಿತ್ ನಮಾಝ್ ಗೆ ನೇತೃತ್ವ ನೀಡಿದ್ದರು.*

*ಅಲ್ಲಾಹನು ಪ್ರಿಯ ಗೆಳೆಯ ಹಾರಿಸ್ ರಹ್ಮಾನಿ ಗೆ ಮಗ್ಫಿರತ್ ನೀಡಲಿ,ನಮ್ಮೆಲ್ಲರನ್ನು ಕುಟುಂಬದೊಂದಿಗೆ ಸ್ವರ್ಗದಲ್ಲಿ ಒಂದು ಗೂಡಿಸಲಿ.ಆಮೀನ್ ಯಾ ರಬ್ಬಲ್ ಆಲಮೀನ್..*

*✍🏻ನಿಝಾಮುದ್ದೀನ್ ಅನ್ಸಾರಿ ಕಲ್ಲಡ್ಕ*
🔳◽🔳◽🔳◽🔳◽🔳◽

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಂಝಾನ್ ನೀಡುವ ಒಳಿತಿನ ಸಂದೇಶ...

-ನಿಝಾಮ್ ಅನ್ಸಾರಿ ಮತ್ತೆ ರಂಝಾನ್ ತಿಂಗಳ ಆಗಮನವಾಗಿದೆ. ಪ್ರತಿ ವರ್ಷವೂ ರಂಝಾನ್ ಬಗ್ಗೆ ಬರೆಯುವಾಗ ಅದರ ಶ್ರೇಷ್ಟತೆ, ವ್ರತಾನುಷ್ಟಾನದ ಪ್ರಾಧಾನ್ಯತೆಯನ್ನೇ ಹೆಚ್ಚಿನವರೂ ಬರೆಯುತ್ತಾರೆ. ಅದನ್ನೇ ಮಸೀದಿಗಳಲ್ಲೂ ಹೇಳುವುದಿದೆ. ಒಳ್ಳೆಯದೇ. ಕಾರಣ ಆಧುನಿಕ ಜನರು ಧರ್ಮದ ಪ್ರತಿಯೊಂದು ವಿಷಯಗಳಲ್ಲೂ ಸಡಿಲಿಕೆ ಬಯಸುತ್ತಾರೆ. ಅಂದರೆ ಅವರವರ ಜೀವನಕ್ರಮಗಳಿಗನುಸಾರವಾಗಿ ಧರ್ಮದ ನಿಯಮಗಳನ್ನು ಗಾಳಿಗೆ ತೂರುವಂತಹ ಕಾರ್ಯಗಳು ಎಲ್ಲಾ ಕಡೆ ನಡೆಯುತ್ತಲಿದೆ. ಹಾಗಿರುವಾಗ ರಂಝಾನ್ ವ್ರತಾಚರಣೆಯ ಮಹತ್ವವನ್ನು ಪ್ರತಿ ಬಾರಿಯೂ ಪ್ರಭಾಷಣ ವೇದಿಕೆಗಳಲ್ಲಿ, ಮಸೀದಿಗಳಲ್ಲಿ ಜನ ಸಾಮಾನ್ಯರಿಗೆ ನೆನಪಿಸುತ್ತಲಿರುವುದು ಸ್ವಾಗತಾರ್ಹವಾದುದು. ಮತ್ತು ಪ್ರಯೋಜನಕಾರಿಯೂ ಕೂಡಾ. ಯಾಕೆ ಈ ರೀತಿ ಬರೆದೆ ಅಂತ ಕೇಳಿದರೆ, ಇತ್ತೀಚೆಗೆ ವಾಟ್ಸಾಪ್ ನೊಳಗೆ ಕಣ್ಣಾಡಿಸಿದಾಗ ಕಂಡ ಕೆಲವೊಂದು ಸಂದೇಶಗಳು ಧರ್ಮದ ಬಗ್ಗೆ ಕೀಳರಿಮೆಯ ಭಾವ ತೋರುವವರಿಗೆ ತಕ್ಕ ಉತ್ತರ ನೀಡುವಂತಿತ್ತು. ಬಡ ಕುಟುಂಬಕ್ಕೆ ಮನೆ ಕಟ್ಟುವ ಸಹಾಯಾರ್ಥ ಕಲೆಕ್ಷನ್, ರಂಝಾನ್ ನಂತರದ ಬಡ ಹೆಣ್ಮಕ್ಕಳ ಮದುವೆಗಾಗಿ, ಮುಅಲ್ಲಿಂಗಳಿಗಾಗಿ ಹೀಗೇ ಹಲವು ರೀತಿಯಲ್ಲಿ ಯುವ-ವಯಸ್ಕರು ಸೇರಿ ಸಮುದಾಯದೊಂದಿಗಿನ ಸಾಮಾಜಿಕ ಕಾಳಜಿಗಾಗಿ ರಂಝಾನ್ ಅನ್ನು ಉಪಯೋಗಿಸುತ್ತಿದ್ದಾರೆನ್ನುವಾಗ ಧರ್ಮದ ಮನದಲ್ಲಿ ಅಭಿಮಾನ ಮೂಡುತ್ತಿದೆ. ಬುರ್ಖಾದ ವಿಚಾರದಲ್ಲಿ ಬಲತ್ಕಾರ ಮಾಡಲಾಗುತ್ತದೆ ಎಂದು ಆರೋಪಿಸುತ್ತಿರುವಾಗ, ಆ ವಾದವನ್ನು ವಿರ...

ನಾನುಗೌರಿ ವೆಬ್ ನಲ್ಲಿ ಪ್ರಕಟಗೊಂಡ ಬರಹಗಳು..ಓದಲು ಈ ಲಿಂಕ್ ಉಪಯೋಗಿಸಿ

-ನಿಝಾಮ್ ಅನ್ಸಾರಿ ಭಾರತದ ಉನ್ನತ ಶಿಕ್ಷಣದ ಮಹಾನ್‌ ಆಶಯಕ್ಕೆ ಎಳ್ಳುನೀರು ಬಿಡುತ್ತಿರುವ ಪ್ರಭುತ್ವ… http://naanugauri.com/indian-higher-education-shrinking-down- **************************************************************** ಲಾಕ್‌ಡೌನ್‌: ತುತ್ತು ಅನ್ನಕ್ಕಾಗಿ ಗುಳೆ ಹೊರಟವರ ಕತೆ http://naanugauri.com/lockdown-story-of-labour/ via @Naanu gauri ***************************************************************** ಪೌರತ್ವ ವಸೂಲಿ – ನಾಝಿ ಜರ್ಮನಿಯಿಂದ ಕಲಿಯಬೇಕಾದುದು… http://naanugauri.com/citizen-amendment-act-same-thing-happen-in-german-80-years-back- ****************************************************************** ಪ್ಲೇಗ್ ಹಾಗೂ ಕೋವಿಡ್ 19 ನಡುವೆ ಕೆಲವು ಹೋಲಿಕೆಗಳು http://naanugauri.com/covid-19-and-bubonic-plague-this-lead-to-renaissance/ via @Naanu gauri

ಅಳಿವಿನಂಚಿನಲ್ಲಿರುವ ಸಾಂಪ್ರದಾಯಿಕ ಕೃಷಿ ಪರಂಪರೆ-* ನಿಝಾಮ್ ಅನ್ಸಾರಿ

ಭಾರತವು ಕೃಷಿ ಅವಲಂಬಿತ ಹಳ್ಳಿಗಳನ್ನೊಳಗೊಂಡ ಸಮೃದ್ಧ ದೇಶ. ದೇಶದ ಬೆಳವಣಿಗೆಯಲ್ಲಿ ವ್ಯವಸಾಯದ ಪಾತ್ರ ಬಹುಮುಖ್ಯವಾದುದು. ತಂತ್ರಜ್ಞಾನವು ದೇಶಕ್ಕೆ ಯಾವ ರೀತಿಯಲ್ಲಿ ಕೊಡುಗೆಗಳನ್ನು ನೀಡುತ್ತವೆಯೋ ಅದೇ ರೀತಿಯಲ್ಲಿ ಕೃಷಿಯ ಕೊಡುಗೆಯೂ ಕೂಡಾ ಅಪಾರವಾದುದು. ಆದರೆ ಇತ್ತೀಚಿನ ದಿನಗಳಲ್ಲಿ ಹಳ್ಳಿಗಳಲ್ಲಿ ವ್ಯವಸಾಯವು ಇಳಿಮುಖವಾಗುತ್ತಿದೆ. ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವವರನ್ನು ಕಾಣಬಹುದಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿನ ಜನರು ವಿದ್ಯಾವಂತರಾಗುತ್ತಲೇ ತಮ್ಮ ಪಾರಂಪರಿಕ ಕುಲ ಕಸುಬನ್ನು ನಿರ್ಲಕ್ಷಿಸಿ ನಗರಗಳತ್ತ ವಲಸೆ ಹೋಗುತ್ತಿದ್ದಾರೆ.ಕೈ ಕೆಸರು ಮಾಡಿಕೊಂಡು ದುಡಿಯುವವರ ಕೊರತೆ ಅಗಾಧವಾಗಿ ಎದ್ದು ಕಾಣುತ್ತಿದೆ. ಇಂದಿನ ನವ ತಲೆಮಾರು ಹಳ್ಳಿಗಳು ಕೇವಲ ವೃದ್ಧರಿಗೆ ಮಾತ್ರ ಯೋಗ್ಯವಾದುದು ಎಂದು ತಿಳಿದಂತಿದೆ. `ನೇಗಿಲಾ ಹಿಡಿದಾ ಹೊಲದಲಿ ಹಾಡುತ ಉಳುವಾ ಯೋಗಿಯ ನೋಡಲ್ಲಿ’ ಎಂದು ಕುವೆಂಪುರಂತಹ ಖ್ಯಾತ ಕವಿಗಳಿಂದ ಕೊಂಡಾಡಲ್ಪಟ್ಟ ಕೃಷಿ ಚಟುವಟಿಕೆಗಳಿಂದು ಕಣ್ಮರೆಯಾಗಿದೆ. ನೇಗಿಲಿನಂತಹ ಕೃಷಿ ಸಲಕರಣೆಗಳು ಇಂದು ಮ್ಯೂಸಿಯಂ ಸೇರಿಬಿಟ್ಟಿವೆ. ಇದರೊಂದಿಗೆ ಅತ್ಯಂತ ಸುಂದರವಾದ ಕೃಷಿ ಪರಂಪರೆ ಮೂಲೆಗುಂಪಾಗುತ್ತಿದೆ. ಹಳೆಯ ಕಾಲದ ಸಾಂಪ್ರದಾಯಿಕ ಬೇಸಾಯಕ್ಕೆ ಉಪಯೋಗವಾಗುತ್ತಿದ್ದ ಪರಿಕರಗಳ ಸ್ಥಾನವನ್ನು ಟ್ರಾಕ್ಟರ್,ಟಿಲ್ಲರ್ ಗಳಂತಹ ಯಂತ್ರಗಳು ಆಕ್ರಮಿಸಿಕೊಂಡಿವೆ. ಭತ್ತ ನಾಟಿ ಮಾಡುವ ಮಹಿಳೆಯರಿಂದ ಕೇಳಿ ಬರು...