ವಿಷಯಕ್ಕೆ ಹೋಗಿ

#ಸೂಫೀ- #ವಿಶ್ವ ಪ್ರೇಮದ ಮೂಲಕ ಭಗವತ್ ಸಾಕ್ಷಾತ್ಕಾರ

ಇತ್ತೀಚೆಗೆ ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾದ ಅಂಕಣವೊಂದರಲ್ಲಿ ಬರಹದುದ್ದಕ್ಕೂ ಮುಸ್ಲಿಂ ಮೂಲಭೂತವಾದಿಗಳನ್ನು ತರಾಟೆಗೆ ತೆಗೆದುಕೊಂಡು ಟೀಕಿಸುವ,ಪ್ರತ್ಯಾರೋಪಗಳನ್ನು ಛೂ ಬಿಡುವ ಭರದಲ್ಲಿ ಲೇಖಕನು ಮಹಾನ್ ಸೂಫೀ ಸಂತ ಮುಈನುದ್ದೀನ್ ಚಿಶ್ತಿ (ರ)ರ ಬಗ್ಗೆ ಕೀಳಾಗಿ ಓರ್ವ ದಂಗೆಕೋರನಂತೆ ಚಿತ್ರಿಸಲು ಪ್ರಯತ್ನಿಸಿದ್ದು ಕಂಡು ತುಂಬಾ ಬೇಜಾರಾಯ್ತು...
ಬಹುಶಃ ಅದಾಗಿರಬಹುದು ನನ್ನ ಕೈಗೆ ತಲುಪಲು ಕಾರಣ...
(ಏನೇ ಆಗಲಿ #ಕರಜಗಿರವರು ಸೂಫೀ ಪಂಥವನ್ನು ಪ್ರತಿಪಾದಿಸುವಾಗ ಚಿಶ್ತಿಯವರ ತರೀಖತ್ ಗೆ ಸಂಪೂರ್ಣ ನ್ಯಾಯ ಒದಗಿಸಿದ್ದು ಕಂಡು ಮನತುಂಬಿತು...)

ಪಡೆದ ಸೂಫಿ ಪರಂಪರೆಯನ್ನು ಜಗದಗಲಕ್ಕೆ ಪರಿಚಯಿಸುವಲ್ಲಿ ಖ್ಯಾತ ಸಾಹಿತಿ #ಡಾ_ಗುರುರಾಜ_ಕರಜಗಿಯವರ ಅಪೂರ್ವ ಪ್ರಯತ್ನವಿದು..
ಕರಜಗಿಯವರ ಚಿಂತನೆಯ ವೈಶಾಲ್ಯತೆಯನ್ನು ಓದುಗ ಇಲ್ಲಿ ಕೊನೆವರೆಗೂ ಅನುಭವಿಸುತ್ತಾನೆ

ಹನ್ನೊಂದು, ಹನ್ನೆರಡನೆಯ ಶತಮಾನದಲ್ಲಿ ಜೀವಿಸಿ ಕಣ್ಮರೆಯಾದ ಅದೆಷ್ಟೋ ಸೂಫಿಗಳ ಜೀವನದ ಸಾರವು ಇಲ್ಲಿ ಪ್ರತಿಧ್ವನಿಸುತ್ತದೆ.ಅವರು ವಿಶ್ವ ಭ್ರಾತೃತ್ವಕ್ಕೆ ನೀಡಿದ ಅಗತ್ಯ ಜೀವರಸಾಯನ ಇಲ್ಲಿದೆ...
ನಮ್ಮ ಜೀವನಕ್ಕೆ ಪಾಠ ಹೇಳಿ ಕೊಡುವ ಅನೇಕ ಕಥೆಗಳಿವೆ..ಆ ಕಥೆಗಳೇ ಅವರ ಜೀವನವಾಗಿತ್ತು...ನಂಬಲಾಗದ್ದು...ಇಂದಿನ ಕಾಲದ ನಮಗೆ ಅರಗಿಸಿಕೊಳ್ಳಲಾಗದ್ದು...

ಧರ್ಮಾಚರಣೆಯ ಗೋಜಲಿನಲ್ಲಿ,ಆಧುನಿಕತೆಯ ಅಬ್ಬರದಲ್ಲಿ ಹೃನ್ಮನಗಳನ್ನು ವಿಚಲಿತಗೊಳಿಸಿಕೊಂ

ವಿಲವಿಲನೆ ಒದ್ದಾಡುತ್ತಿರುವ ಮನುಜ ಕುಲಕ್ಕೆ ಪರಿಣಾಮಕಾರಿ ಪರಿಹಾರವನ್ನೊದಗಿಸಬಲ್ಲ ಸರಳ ಸಾತ್ವಿಕ ಚಿಂತನ ಪರಂಪರೆ ಸೂಫೀ....

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕೋವಿಡ್ ಕಾಲದ ಓದು: ಚಂದ್ರನ ಚೂರು

'ಚಂದ್ರನ ಚೂರು' ಕೃತಿಯ ಹೆಸರು ಕೇಳಿದಾಗ ನಿಜವಾಗಿಯೂ ಅದೊಂದು ಕಾದಂಬರಿಯಾಗಿರಬಹುದು ಎಂದು ಭಾವಿಸಿದ್ದೆ. ಆದರೆ, ಪುಸ್ತಕ ಕೈಗೆ ತಲುಪಿದಾಗಲೇ ಗೊತ್ತಾಗಿದ್ದು, ಅದೊಂದು ಚಂದ್ರಲೋಕಕ್ಕೆ ಕೊಂಡೊಯ್ಯುವ ಅದ್ಭುತ ಕೃತಿ ಅಂತ. ತಂದೆ ಕುವೆಂಪು ಅವರ ಸಾಹಿತ್ಯದ ಹಾದಿಯಲ್ಲೇ ನಡೆದರೂ, ತೇಜಸ್ವಿಯವರ ಸಾಹಿತ್ಯವು ನಿಸರ್ಗ ವಿಸ್ಮಯ, ಭೂಗೋಳ, ಜೀವಶಾಸ್ತ್ರ, ಭತಶಾಸ್ತ್ರ, ಇತಿಹಾಸ ಹೀಗೇ ಎಲ್ಲಾ ಶಾಸ್ತ್ರಗಳ ಮಿಶ್ರಣ ರಸಾಯನ ಎಂದೇ ಹೇಳಬಹುದು. ಚಂದ್ರನ ಚೂರು ಚಂದ್ರ ಲೋಕದ ವಿಸ್ಮಯ ದೃಶ್ಯಗಳನ್ನು ಕಟ್ಟಿಕೊಡುವ ಚೊಚ್ಚಲ ಕೃತಿ. ಬಾಹ್ಯಾಕಾಶ, ಖಗೋಳ ಶಾಸ್ತ್ರ ವಿಷಯದಲ್ಲಿ ಆಸಕ್ತಿ ಇಲ್ಲದ ನನ್ನಂತವರನ್ನೂ ಇದು ಸರಾಗವಾಗಿ ಓದಿಸಿಕೊಂಡು ಹೋಗುವಂತೆ ಮಾಡುತ್ತದೆ, ಅದಕ್ಕೆ ಕಾರಣ, ತೇಜಸ್ವಿ ಅವರ ಬರವಣಿಗೆ ಹಾಗೂ ವಿವರಣೆಯ ಶೈಲಿ.. ಜಗತ್ತಿನಲ್ಲಿ ಮನುಷ್ಯನು ಚಂದ್ರನಲ್ಲಿಗೆ ಕಾಲಿಡುವುದಕ್ಕೂ ಮುನ್ನ, ಯಾವುದೆಲ್ಲಾ ರೀತಿಯ ಪರಿಶ್ರಮಗಳು ನಡೆದಿದ್ದವು ಹಾಗೂ ಭೂಮಂಡಲ ಮತ್ತು ಚಂದ್ರನ ಕುರಿತಾಘಿ ಯಾವುದೆಲ್ಲಾ ಆಯಾಮಗಳಲ್ಲಿ ಅಧ್ಯಯನಗಳಾಗಿದ್ದುವು ಎಂಬುದರ ಸಂಪೂರ್ಣ ವಿಷಯಗಳಿವೆ. ಚಂದ್ರನಲ್ಲಿ ತಲುಪಿದ ಮನುಷ್ಯನಿಗೆ ಆದ ಅನುಭವಗಳೇನು? ನೀಲ್ ಆಮ್Fಸ್ಟ್ರಾಂಗ್ ತಂಡದ ಚಂದ್ರಯಾನದ ರಸವತ್ತಾದ ಅನುಭವಗಳು, ಚಂದಿರನ ಮಣ್ಣಲ್ಲಿ ಅಮೇರಿಕದ ಫ್ಲಾಗ್ ಮತ್ತು ಬೋಡ್F ಸ್ಥಾಪಿಸಿ ಬಂದ ಆ ಧೀರ ತಂಡದ ಬೆರಗಾಗಿಸುವ ಕ್ಷಣ ಕ್ಷಣದ ವರದಿಗಳು ಈ ಕೃತಿಯ ಲೇಖನಗಳಲ್ಲಿ ಅಡಗಿದೆ. ಒಟ್ಟಿನಲ...

ಇಂದಿನಿಂದ 'ಸಮಸ್ತ'ದ ಆನ್ ಲೈನ್ ತರಗತಿಗಳು ಆರಂಭ

ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಒಕ್ಕೂಟದ (SKJU)ಅಧೀನದಲ್ಲಿ‌ ಕಾರ್ಯಾಚರಿಸುವ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್‌ ಅಂಗೀಕೃತ ಮದ್ರಸಗಳ ವಿದ್ಯಾರ್ಥಿಗಳಿಗೆ ನವ ಅಧ್ಯಯನ ವರ್ಷ ಇಂದಿನಿಂದ ಆರಂಭಗೊಂಡಿದೆ. ವಿಶೇಷ ಅಂದ್ರೆ, ಈ ಬಾರಿ ತರಗತಿಗಳ ಪ್ರಾರಂಭೋತ್ಸವದ ಸಂಭ್ರಮಗಳಿಲ್ಲದೆ, ಮದ್ರಸಾ ಕಟ್ಟಡಗಳು ತೆರೆಯದೇ, ಹತ್ತು ಸಾವಿರಕ್ಕೂ ಮಿಕ್ಕ ಮದ್ರಸಗಳ ಹನ್ನೆರಡು ಲಕ್ಷ ವಿದ್ಯಾರ್ಥಿಗಳು ಅವರವರ ಮನೆಗಳಲ್ಲಿಯೇ ಕುಳಿತು ತರಗತಿಗಳಲ್ಲಿ ಪಾಲ್ಗೊಳ್ಳುತ್ತಿರುವುದು ಎಂಬುದು.  ಆನ್ ಲೈನ್ ತರಗತಿಗಳಿಗಾಗಿ, ಸಮಸ್ತ ಈ ಹಿಂದೆಯೇ ಎಲ್ಲಾ ಸಿದ್ಧತೆಗಳನ್ನು ನಡೆಸಿದ್ದು, ವಿದ್ಯಾಭ್ಯಾಸ ಬೋರ್ಡ್‌ ಅದಕ್ಕಾಗಿ ಆರು ಕ್ಯಾಮರಾ ಯುನಿಟ್ ಗಳ ಕ್ಲಾಸ್ ರೂಂಗಳು ,22 ಪರಿಣತರಾದ ಅಧ್ಯಾಪಕರನ್ನು ನೇಮಕಗೊಳಿಸಿದೆ.  ತರಗತಿ ಆರಂಭದಿಂದ ಕೊನೆಯವರೆಗೂ ವಿದ್ಯಾರ್ಥಿ ಜೊತೆ ಪೋಷಕರು ಕುಳಿತಿರಬೇಕು.ಹೋಂ ವರ್ಕ್ ನೀಡಿದರೆ, ಅದನ್ನು ಮಾಡಿ, ಮುಂದೆ ಮದ್ರಸಗಳಲ್ಲಿ ತರಗತಿ ಆರಂಭಗೊಳ್ಳುವಾಗ ಮೌಲ್ಯಮಾಪನಕ್ಕಾಗಿ ಅಧ್ಯಾಪಕರಿಗೆ ತೋರಿಸಬೇಕು. ಮನೆಯಲ್ಲಿ ತರಗತಿಯ ವಾತಾವರಣವನ್ನು ಒದಗಿಸಿಕೊಟ್ಟು,ವಿದ್ಯಾರ್ಥಿಗಳಿಗೆ ಮನೆಯವರು ಸಹಕರಿಸಬೇಕು. ಅಲ್ಲದೇ, ಮದ್ರಸಾ ಹಾಗೂ ಜಮಾಅತ್ ಕಮಿಟಿಗಳು ಸೇರಿ, ಆನ್‌ಲೈನ್ ತರಗತಿಗಳು ಆಯಾ ಮದ್ರಸಗಳ ವಿದ್ಯಾರ್ಥಿಗಳಿಗೆ ಅವರವರ ಮನೆಗಳಲ್ಲಿಯೇ ಸುಲಭವಾಗಿ ತಲುಪುವಂತೆ ಎಲ್ಲಾ ರೀತಿಯಲ್ಲಿ ಸಹಕಾರವನ್ನು ನೀಡಬೇಕು. ಮದ್ರಸಗಳು ತ...

Payyakki Usthad Islamic Academy -Ansariya College of Islamic Science10th Anniversary & Convocation Program-#Photo Gallery......