- ನಿಝಾಮ್ ಅನ್ಸಾರಿ ಕಲ್ಲಡ್ಕ

ವೈವಿಧ್ಯತೆಯ ವರ್ಣ್ಯ ಪ್ರತೀಕ ವಾದ ಭವ್ಯ ಭಾರತವು ವಿವಿಧತೆಯಲ್ಲಿನ ಏಕತೆಯ ವೈಶಿಷ್ಟ್ಯತೆಯನ್ನು ಹೊತ್ತ ಮಣ್ಣು. ವಿಭಿನ್ನ ರೀತಿಯ ವರ್ಗ, ವರ್ಣ, ಜಾತಿ, ಮತ, ಪಂಥ, ಪಂಗಡಗಳ ಸಮೈಕ್ಯತಾ ಪ್ರತಿಪಾದ್ಯ ಭೂಮಿ...ಬಲಿಷ್ಟವೂ,ಜನಪರವೂ, ಸದೃಢಾತ್ಮಕವೂ ಆದ ಭಾರತದ ಸಂವಿಧಾನದ ರೂಪ ಕಲ್ಪನೆಯು ವಿಶ್ವಕ್ಕೇ ಮಾದರಿಯಾಗಿದೆ. ಸರ್ವ ಧರ್ಮಗಳ ಉದಾತ್ತ ಸಂಸ್ಕೃತಿಗಳಿಗೆ, ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆಯುಂಟಾಗದಂತೆ ಅತಿ ಸೂಕ್ಷ್ಮವೂ ,ಅಷ್ಟೇ ಪರಿಗಣನಾತ್ಮಕ ಸ್ಪಷ್ಟ ಶೈಲಿಯನ್ನಾಗಿದೆ ಸಂವಿಧಾನ ಶಿಲ್ಪಿಯು ಸ್ವೀಕರಿಸಿದ್ದು..
ಇತ್ತೀಚಿಗೆ ದೇಶದೆಲ್ಲೆಡೆ ವ್ಯಾಪಕವಾಗಿ ಚರ್ಚೆಕ್ಕೀಡಾಗಿರುವ ದೇಶದ ಅತ್ಯುನ್ನತ ನ್ಯಾಯಪೀಠವಾದ ಸುಪ್ರೀಂ ಕೋರ್ಟ್ ನ ಕೆಲವೊಂದು ತೀರ್ಪುಗಳು ಜನರ ಮಧ್ಯೆ ವ್ಯಾಪಕ ಚರ್ಚೆಗೀಡಾಗಿಸುವಂತಿತ್ತು. ಶಬರಿಮಲೆ ಮಹಿಳಾ ಪ್ರವೇಶ,ಸಹಮತದ ಸಲಿಂಗಕಾಮ ಮತ್ತು ವ್ಯಭಿಚಾರ ಅಪರಾಧವಲ್ಲ, SC ST ಬಡ್ತಿ ಮೀಸಲಾತಿ, ನಮಾಝ್ ಗೆ ಮಸೀದಿ ಮುಖ್ಯವಲ್ಲ, ತ್ರಿವಳಿ ತಲಾಕ್ ಗೆ ಸಾಂವಿಧಾನಿಕ ಮಾನ್ಯತೆ ರದ್ದು ಹೀಗೇ 2018 ರ ಹತ್ತಕ್ಕೂ ಹೆಚ್ಚು ತೀರ್ಪುಗಳು ಮಹತ್ವದ ತೀರ್ಪುಗಳೆಂದು ಬಿಂಬಿಸಲ್ಪಟ್ಟವು. ಹೆಚ್ಚಿನ ತೀರ್ಪುಗಳೂ ಒಂದೊಂದು ಸಮುದಾಯ ಸಂಬಂಧಿತವಾದುದರಿಂದಲೇ ಇತರ ಸಮುದಾಯಗಳು ಆ ಬಗ್ಗೆ ತಕರಾರೆತ್ತಲೇ ಇಲ್ಲ.ಮಾತ್ರವಲ್ಲ ಕೆಲವು ಮತಾಂಧರು ಆ ಬಗ್ಗೆ ಸಂಭ್ರಮಾಚರಣೆಯಂತೆ ಕಂಡರು. ನಾವಿಲ್ಲಿ ಬರಿಯ ತ್ರಿವಳಿ ತಲಾಕ್ ಬಗ್ಗೇನೆ ಚರ್ಚೆ ಕೈಗೊಳ್ಳುವುದಾದರೆ ತಲಾಕ್ ಕುರಿತಾದ ಇಸ್ಲಾಂ ನ ನಿಲುವು ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಯೋದಕ್ಕೆ ಹೆಚ್ಚೇನೂ ಸಮಯ ಬೇಕಿಲ್ಲ. ಹಾಗಿದ್ದೂ ಯಾಕೆ ಈ ಪ್ರಜಾಪ್ರಭುತ್ವ ದೇಶದಲ್ಲಿ ವ್ಯಕ್ತಿಯೊಬ್ಬನ ಸರ್ವಾಧಿಕಾರಿ ಧೋರಣೆಗೆ ತಲೆಬಾಗಬೇಕೆಂಬುದು ಪ್ರತಿಯೊಬ್ಬ ನಿಷ್ಠಾವಂತ ಪ್ರಜೆಯ ಮನದಾಳದೊಳಗಿನ ಯಕ್ಷಪ್ರಶ್ನೆ ಯಾಗಿದೆ. ಈ ನಿಟ್ಟಿನಲ್ಲಿ ಜನಸಾಮಾನ್ಯರ ಮೇಲೆ ನಡೆಯುತ್ತಿರುವ ನಿರಂತರ ಕಾನೂನಾತ್ಮಕ ದೌರ್ಜನ್ಯ ಗಳು, ಅಲ್ಪ ಸಮುದಾಯವನ್ನು ಕೇವಲ ಬಲಿಪಶುಗಳಂತೆ ಕಾಣುವ, ಅಂಗೀಕರಿಸಲಸಾಧ್ಯವಾದಂತಹ ಜನ ವಿರೋಧಿ ನಿಯಮಾವಳಿಗಳ ಹೇರಿಕೆಯ ಹಿನ್ನೆಲೆಯಲ್ಲಿ ಖಂಡನೆ ವ್ಯಕ್ತಪಡಿಸಿ, ಆಕ್ರೋಶಿತ ಜನತೆಯು ಅಂದೇ ಬೀದಿಗಿಳಿದಿದ್ದಾರೆ. ಕೇಂದ್ರ ಸರ್ಕಾರವು ರಾಮರಾಜ್ಯದ ಅಜೆಂಡಾವನ್ನಿಟ್ಟುಕೊಂಡು ಈ ಪ್ರಜಾಪ್ರಭುತ್ವ ದೇಶದಾದ್ಯಂತ ಅನುಷ್ಠಾನಗೊಳಿಸಲು ಉದ್ದೇಶಿಸಿರುವ UNIFORM CIVIL CODE ಎನ್ನುವ ಏಕರೂಪದ ನಾಗರಿಕ ಸಂಹಿತೆ ಯನ್ನು ಇಲ್ಲಿ ಜಾರಿಗೆ ತಂದರೆ ಉಂಟಾಗಬಹುದಾದ ಪರಿಣಾಮಗಳನ್ನು, ಅದರ ಸಾಧಕ ಬಾಧಕಗಳ ಕುರಿತಾದ ಒಂದು ಸಣ್ಣ ಚರ್ಚೆಯಾಗಿದೆ ಈ ಬರಹದ ಹಿಂದಿನ ಮರ್ಮಪ್ರದಾನ ಲಕ್ಶ್ಯ.
ಏಕರೂಪ ನಾಗರಿಕ ಸಂಹಿತೆ ಯನ್ನು ಜಾರಿಗೊಳಿಸುವುದರಿಂದ ಬರೀ ಮುಸ್ಲಿಮರಿಗಲ್ಲ ದೇಶದಲ್ಲಿನ ಇತರ ಕ್ರೈಸ್ತ, ಸಿಖ್, ಬುದ್ದ, ಮತ್ತು ಜೈನ ಧರ್ಮ ಗಳ ಮೇಲೂ ಇದರ ಪ್ರಭಾವವು ವ್ಯತಿರಿಕ್ತವಾಗಿ ಪರಿಣಮಿಸುತ್ತದೆ.. ಕಾರಣ ಅವರಿಗೂ ಕೂಡ ಧಾರ್ಮಿಕ ಸ್ವಾತಂತ್ರ್ಯವನ್ನು ಒದಗಿಸುವ ಸಂವಿಧಾನ ವಾಗಿದೆ ಪ್ರಚಲಿತ ದಲ್ಲಿರುವುದು. ಹೀಗಿರುವಾಗ ಮುಸಲ್ಮಾನರತ್ತ ತಿರುಗಿ ಒಂದು ಪ್ರಶ್ನೆಯು ಉದ್ಭವಿಸುತ್ತದೆ. ಮುಸ್ಲಿಮರು ಯಾಕೆ ಈ ದೇಶದ ನಿಯಮಾವಳಿಗಳ ಪಾಲನೆಗೆ ಸತತ ಹಿಂದೇಟು ಹಾಕುತ್ತಿದ್ದಾರೆ? ಇಸ್ಲಾಮಿಕ ನಿಯಮಗಳತ್ತ ಮಾತ್ರ ಯಾಕೆ ಅಷ್ಟೊಂದು ಆಸಕ್ತಿ ತೋರಿ ಹಠ ಹಿಡಿಯುತ್ತಿದ್ದಾರೆ..?ಎಂದು ಕೇಳಿದರೆ ಅವರೊಂದಿಗೆ ಬಹಳ ತಾಳ್ಮೆ ಯಿಂದಲೇ ನಾವು ಹೇಳುತ್ತಿದ್ದೇವೆ ನಾವು ಮುಸ್ಲಿಮರು ಭಾರತೀಯ ಪ್ರಜೆಗಳೆಂಬ ನಿಟ್ಟಿನಲ್ಲಿ ಈ ದೇಶದ ಸರ್ವ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದೇವೆ. ಅದು ನಮ್ಮ ಕರ್ತವ್ಯ ವೂ ಕೂಡ. ಅದು ಸಿವಿಲಾಗಲಿ,ಕ್ರಿಮಿನಲ್ ಆಗಿರಲಿ.ಎಲ್ಲದಕ್ಕೂ ಬಾಧ್ಯಸ್ಥರಾಗಿದ್ದೇವೆ. ಪಾಲಿಸದೇ ಬಿಟ್ಟಿದ್ದಾದರೂ ಯಾವುದು? ಆದರೆ ಸಂವಿಧಾನವು ನಮಗೆ ನೀಡಿರುವ ಹಕ್ಕುಗಳೆಂಬ ನಿಟ್ಟಿನಲ್ಲಿ ಇತರ ಧರ್ಮೀಯರಿಗೂ ಕೂಡ ಅವರ ವ್ಯಕ್ತಿತ್ವ ವನ್ನು ಅವರವರ ಐಡೆಂಟಿಟಿಯ ನೆಲೆಗೊಳ್ಳುವಿಕೆ ಯನ್ನು ಮನಗಂಡು ಕೆಲವು ಸೀಮಿತ ವಿಷಯಗಳಿಗೆ ಪ್ರತ್ಯೇಕ ತೆರೆನಾದ ಧಾರ್ಮಿಕ ವಿಧಿ ಸಿಗುವ ರೂಪು ರೇಷೆಗಳು ಈ ದೇಶದ ಸಂವಿಧಾನದಲ್ಲಿದೆ.. ಅದರಲ್ಲಿ ಮುಸ್ಲಿಮರಿಗಿರುವ ಮೀಸಲಾತಿಯಾಗಿದೆ ಮುಹಮ್ಮದನ್ ಲಾ, ಪರ್ಸನಲ್ ಲಾ,ಅಥವಾ ಶರೀಅತ್ application act ಅನ್ನುವುದು. 1937 ರಲ್ಲಿ ಬ್ರಿಟಿಷರು ಸ್ಥಾಪಿಸಿದ ಸಂವಿಧಾನಿಕ ನಿಯಮವಾಗಿದೆ. ಇದು ದೇಶದ ಎಲ್ಲರಿಗೂ ಅನುಕರಣೀಯವಲ್ಲ. ಮುಸ್ಲಿಮರ ಪರವಾಗಿ ಹೇಳುವುದಾದರೆ ಅವರ ವೈಯುಕ್ತಿಕ ವಿಷಯಗಳಾದ ವಿವಾಹ, ವಿಚ್ಛೇದನ, ಜೀವನಾಂಶ ನೀಡುವಿಕೆ, ಮಹ್ರ್, ಸ್ತ್ರೀ ಆಸ್ತಿ ಹಕ್ಕು, ವಕ್ಫ಼್, ದಾನ, ಟ್ರಸ್ಟ್ ಇತ್ಯಾದಿ ವಿಷಯಗಳಲ್ಲಿ ಮುಸ್ಲಿಮನೊಬ್ಬ ಇನ್ನೋರ್ವ ಮುಸ್ಲಿಮನೊಂದಿಗೆ ತರ್ಕಕ್ಕಿಳಿದರೆ, ನ್ಯಾಯಾಲಯ ತಲುಪಿದಾಗ ಅವರಿಗೆ ಷರೀಅತ್ ನ ಅನುಸಾರವಾಗಿ ತೀರ್ಪು ಲಭಿಸಲು ಕುಶಾಗ್ರಮತಿಗಳಾದ ನಮ್ಮ ದೇಶದ ಸಂವಿಧಾನ ಶಿಲ್ಪಿಗಳು ಸಂಯೋಜಿಸಿ ಬರೆದಿಟ್ಟ ಸ್ಪಷ್ಟರೇಖೆ ಗಳ ಆಧಾರ ದಲ್ಲಿ ತೀರ್ಪು ನೀಡುವ ಸಾಂವಿಧಾನಿಕ ವ್ಯವಸ್ಥೆಯು 1937ರಿಂದಲೇ ನಮ್ಮ ಕೋರ್ಟ್ ಗಳಲ್ಲಿ ಜಾರಿಯಲ್ಲಿದೆ. ಪ್ರಸ್ತುತ ವ್ಯವಸ್ಥೆಯನುಸಾರ ಒಬ್ಬ ಮುಸ್ಲಿಮನಿಗೆ ನ್ಯಾಯಾಲಯ ದಲ್ಲಿ ಒಂದು ಪ್ರಕರಣ ದಾಖಲಾದರೆ ಮೊದಲನೆಯದಾಗಿ ಇಬ್ಬರೂ ಮುಸ್ಲಿಮರೋ ಎಂದು ಕೋರ್ಟ್ ತನಿಖೆ ನಡೆಸುತ್ತದೆ. ನಾನು ಮತ್ತು ನನ್ನ ಹಿಂದೂ ಸಹೋದರನ ನಡುವಿನ ತರ್ಕ ವಾಗಿದ್ದಲ್ಲಿ ಈ ನಿಯಮಗಳು ಪರಿಣಾಮ ಬೀರಲ್ಲ. ಅದೇರೀತಿ ಕ್ರೈಸ್ತನೋರ್ವನ ನಡುವಿನದ್ದಾದರೂ ಸಹ. ನಾನೊಂದು ಕ್ರಿಮಿನಲ್ ಕೃತ್ಯವನ್ನೆಸಗಿದರೆ ಅಥವಾ ಆಕ್ರಮ ಲೈಂಗಿಕ ಸಂಬಂಧದಲ್ಲೇರ್ಪಟ್ಟರೆ,ಯಾರದ್ದಾದರೂ ಆಸ್ತಿಯನ್ನು ಕೊಳ್ಳೆಹೊಡೆದರೆ ,ಕೊಲೆಗೈದರೆ ಕೋರ್ಟೊಂದು ಭಾರತೀಯ ಪ್ರಜೆಗೆ ವಿಧಿಸುವ ನಿಯಮಗಳೇನೋ CRPC ಅವುಗಳನ್ನು ಅನುಸರಿಸುವ ಭಾದ್ಯತೆ ನನಗೂ ಇದೆ. ಅಲ್ಲಿ ನಾನು ಮುಸ್ಲಿಮನೆಂಬ ಕಾರಣಕ್ಕೆ ಯಾವುದೇ ರಿಯಾಯಿತಿ ಇಲ್ಲ. ಬೇಕೆನ್ನುವ ವಾದ ಕೂಡಾ ಇಲ್ಲ. ವಾಸ್ತವವಾಗಿ ಓರ್ವ ಮುಸ್ಲಿಮನು ಅತ್ಯಾಚಾರಗೈ ದರೆ ಏನು ಮಾಡಬೇಕೆಂಬ ಕಟ್ಟುನಿಟ್ಟಾದ ನಿಯಮಾವಳಿಗಳನ್ನು ಶರೀಅತ್ ಹೇಳಿದೆ. ಅದಿಲ್ಲಿ ಜಾರಿಗೆ ತರಲು ಹೇಳುವುದಿಲ್ಲ. ಕಾರಣ ಆ ನಿಯಮಗಳು ಸ್ಥಾಪಿಸದಿದ್ದರೂ ನಮಗಿಲ್ಲಿ ಜೀವಿಸಬಹುದು. ನಾವು ಅತ್ಯಾಚಾರದೆಡೆಗೆ ತಲೆ ಹಾಕದಿದ್ದರೆ ಸಾಕು. ಆದರೆ ವಿವಾಹ, ವಿಚ್ಛೇದನ. ಮುಸ್ಲಿಮನ ಆಸ್ತಿಯ ವಿಚಾರ ,ತಲಾಕ್, ವಕ್ಫ಼್, ದಾನ, ಟ್ರಸ್ಟ್ ಹಾಗಲ್ಲ. ಅದು ಸಂಪತ್ತಿನ, ಇಸ್ಲಾಮೀ ಜೀವನದ ಬಗೆಗಿನ ವಿಚಾರವಾದರೆ ಅತ್ಯಾಚಾರ, ಮದ್ಯಪಾನ, ಕಳವು, ಸುಳಿಗೆಗಳೆಲ್ಲವೂ ಅವುಗಳಿಂದ ವ್ಯತಿರಿಕ್ತವಾದವುಗಳಾಗಿವೆ. ನಿಖಾಹ್ ನಿರ್ವಹಣೆಗೆ ಸಮಯವಾದಲ್ಲಿ ನಿರ್ವಹಿಸಬೇಕು, ತಲಾಖ್ ಹೇಳಲು ನಿರ್ಬಂಧಿತನಾದರೆ ಹೇಳಬೇಕು, ವಕ್ಫ಼್ ಆಸ್ತಿಯನ್ನು ಪಾಲು ಮಾಡಬೇಕು, ಸ್ತ್ರೀಯರ ಸ್ವತ್ತಿನ ಹಕ್ಕು, ಪಿತನು ಮೃತನಾದರೆ ಅವನ ಆಸ್ತಿಯು ಮಗನಿಗೆ ಹಲಾಲಾಗಿ ದೊರಕುವಂತಾಗಬೇಕು, ಅದೇ ರೀತಿ ವಕ್ಫ಼್ ಆಸ್ತಿಯ ಜವಾಬ್ದಾರಿಯನ್ನು ನೋಡಿಕೊಳ್ಳಬೇಕು.ಇತ್ಯಾದಿ ವಿಷಯಗಳಲ್ಲಿ ಹಲಾಲ್ ಮತ್ತು ಹರಾಮಿನ ಪರಿಧಿಯಲ್ಲಿ ನಿಂತುಕೊಂಡು ಜೀವನ ಸಾಗಿಸಬೇಕಾದ ಮುಸ್ಲಿಮರಿಗೆ ಅವರ ವಿಷಯದಲ್ಲಿ ಒಂದು ತರ್ಕ ಬಂದರೆ ಕೋರ್ಟ್ ತಲುಪಿದಾಗ ಯಾವ ವಿಭಾಗವೆಂದು ಪರಿಶೋಧನೆಗೊಳಪಡಿಸಿ ಅವರು ಸುನ್ನೀಯೋ ಶಿಯಾ ಪಂಗಡದವನೋ ಎಂದು ಖಾತ್ರಿಪಡಿಸಲಾಗುತ್ತದೆ. ಸುನ್ನೀ ಎಂದರೆ ಅದರಲ್ಲಿ ನಮ್ಮೂರಲ್ಲಿ ಕಾಣಸಿಗುವ ಎಲ್ಲಾ ಅವಾಂತರವಾದಿ ಬಿದಈ ಪ್ರಸ್ಥಾನಗಳೂ ಒಳಗೊಂಡಿದೆ. ನ್ಯಾಯಾಲಯ ಪ್ರವೇಶಿಸಿದರೆ ಅಲ್ಲಿ ಎರಡು ವಿಭಾಗಗಳು ಮಾತ್ರ. ಅವುಗಳಲ್ಲಿ ಮದ್ಸ್ ಹಬ್ ಅನುಸಾರ ವಿಧಿಲಭಿಸುವ ಸೌಕರ್ಯಗಳು ಈ ಹಿಂದೆಯೇ ಸಂವಿಧಾನದಲ್ಲಿದೆ . ಉದಾಹರಣೆಗೆ ನ್ಯಾಯಾಲಯದ ಮೆಟ್ಟಿಲೇರುವ ವ್ಯಕ್ತಿಯು ಹನಫೀಯಾದರೆ ಅವರ ಶೈಖ್ ಬುರ್ಹಾನ್ ಅಲಿಯರ ಅಲ್ ಹಿದಾಯ ಫಿಲ್ ಫುರೂಅನ್ನಾಧರಿಸಿ ತೀರ್ಪು ಸಿಗುವಾಗ,ಶಿಯಾ ಪಂಗಡದವನಿಗೆ ನಜ್ಮುದ್ದೀನ್ ಜಾಫ಼ರ್ ಬಿನ್ ಮುಹಮ್ಮದ್ ಹಿಲ್ಲೀ ಯ ಶರಾಇಉಲ್ ಇಸ್ಲಾಂ ನ ಅನುಸಾರವಾಗಿ ವಿಧಿಸುವಾಗ , ಶಾಫಿಈ ಮದ್ ಹಬ್ ನ್ನು ಅನುಸರಿಸುವವನಿಗೆ ಮಿನ್ ಹಾಜ್ ಆಧಾರಿತ ತೀರ್ಪು ನೀಡುವ ವ್ಯವಸ್ಥೆಗಳಿವೆ. ಹಾಮಿಲ್ಟನ್ ರಂತಹ ಪ್ರಖ್ಯಾತ ಗ್ರಂಥಕರ್ತರು ಅನುವಾದಿಸಿಟ್ಟ ಈ ನಿಯಮಗಳು ನ್ಯಾಯಾಲಯದ ಮುಂದಿದೆ. ಅದೇರೀತಿ ಔರಂಗಜೇಬ್ ಆಲಮ್ಗೀರ್ ನ ಕಾಲದಲ್ಲಿ ಅಂದಿನ ವಿದ್ವಾಂಸರು ಸೇರಿ ರಚಿಸಿದ ಫತಾವಾ ಆಲಂಗೀರಿ ಕೂಡಾ ನಮ್ಮ ಮುಂದಿರುವಾಗ ಅದರನುಸಾರವಾಗಬೇಕು ಈ ದೇಶದಲ್ಲಿ ಮುಸಲ್ಮಾನನ ತೀರ್ಪು. ಅದೂ ಕೆಲವು ಸೀಮಿತ ವಿಷಯಗಳಲ್ಲಿ ಮಾತ್ರ. ಇಂತಹ ತೀರ್ಪು ಸಿಗುವ ಸೌಕರ್ಯ ನಮಗೆ ಲಭಿಸಲು ಕಾರಣ ದೇಶದಲ್ಲಿ ಪ್ರಜಾಪ್ರಭುತ್ವವು ಅಸ್ತಿತ್ವ ದಲ್ಲಿರೋದ್ರಿಂದಲೇ ಮತ್ತು ಏಕರೂಪದ ನಾಗರಿಕ ಸಂಹಿತೆ ಜಾರಿಗೊಳಿಸಲಾಗಿಲ್ಲವೆಂಬ ಕಾರಣದಿಂದಾಗಿದೆ.
UNIFORM CIVIL CODE ಎನ್ನುವ ಈ ಕೋಡ್ ದೇಶದಲ್ಲಿ ಜಾರಿಗೆ ಬಂದರೆ ಉಂಟಾಗುವ ದುಷ್ಪರಿಣಾಮ ಗಳೇನು? UNIFORM ಎಂದು ಹೇಳುವಾಗ ನಮ್ಮ ಮನಸ್ಸಿಗೆ ಥಟ್ಟನೆ ಹೊಳೆಯುವುದು ಶಾಲೆಯೊಂದರ ಅಥವಾ ಕಾಲೇಜ್ ನ ಯೂನಿಫ಼ಾರ್ಮ್. ಐಕ್ಯರೂಪದಲ್ಲಿರುವ ವಸ್ತ್ರ ವಿಧಾನ. ಅದು ಡ್ರೆಸ್ ಕೋಡಾದರೆ ಇದು ಸಿವಿಲ್ ಕೋಡ್. ಏಕರೂಪದ ನಿಯಮ. ನಾವು ವಿದ್ಯಾಕೇಂದ್ರದ ಯೂನಿಫಾರ್ಮ್ ಎಂದು ಹೇಳಿದರೆ ಅದಕ್ಕೆ ಪ್ರತ್ಯೇಕ ತೆರೆನಾದ ಬಣ್ಣವಿರುತ್ತದೆ. ಆದರೆ ಈ ದೇಶದಲ್ಲಿ ಅದ್ಯಾವ ರೀತಿಯ ಏಕ ನಿಯಮವನ್ನಾಗಿದೆ ನೀವು ಸ್ಥಾಪಿಸಹೊರಟಿರುವುದು? ಯಾವ ಧರ್ಮದ ನಿಯಮಾವಳಿಯನ್ನಾಗಿದೆ ನೀವು ಆಯ್ಕೆಮಾಡಿಕೊಂಡಿದ್ದು?ಮುಸ್ಲಿಮರ ನಿಯಮಗಳಿಗೆ ನಿಮ್ಮ ಬಳಿ ಸ್ಥಾನ ಸಿಗಲ್ಲ ಖಂಡಿತ. ನಾವು ನಿಖಾಹ್ ಮಾಡುವುದು ಝವ್ ಮಾಡುವುದು ಝವ್ವಜ್ತುಕ ವ ಅಂಕಹ್ತುಕ ಖಬಿಲ್ತು ಮಿಂಕ ನಿಕಾಹಹಾ ಈಜಾಬು ಮತ್ತು ಖಬೂಲ್ ಮಹ್ರ್ ನ್ನು ಮಾನದಂಡ ವನ್ನಾಗಿಸಿ ಸಾಕ್ಷಿಗಳ ಮೂಲಕ ವರನು ಮತ್ತು ವಲಿಯ್ಯ್ ನಿರ್ವಹಿಸಿದರೆ ಅದು ನಿಕಾಹಾಗಿ ಪರಿಗಣಿಸಲ್ಪಡುವುದು.ನಿಯಮಾನುಸಾರ ಹೆಣ್ಣು ಅವನ ಹೆಂಡತಿಯಾದಳು. ಈ ನಿಯಮವನ್ನು ನೀವು ತರಲಿಚ್ಛಿಸುತ್ತೀರಾ?ಇಲ್ಲ ತಾನೇ. ಜಾರಿಗೆ ತರಲು ನಮಗೂ ತಾತ್ಪರ್ಯವಿಲ್ಲ ಕಾರಣ ಈ ನಿಯಮವನ್ನು ಅಮುಸ್ಲಿಮರ ಮೇಲೆ ಹೇರಿಸಬೇಕೆಂದು ನಮಗೆ ನಿರ್ಬಂಧವಿಲ್ಲ.ಆದ್ದರಿಂದ ಅದನ್ನು ಏಕರೂಪ ನಾಗರಿಕ ಸಂಹಿತೆಯನ್ನಾಗಿ ಪ್ರಖ್ಯಾಪಿಸುವುದರಲ್ಲಿ ನಮಗೆ ಆಸಕ್ತಿಯಿಲ್ಲ. ಕಾರಣ ನಾವಿಲ್ಲಿ ಕೇವಲ 20%ರಷ್ಟೇ ಇರುವ ಅಲ್ಪ ಸಂಖ್ಯಾತರಾದರೆ ಉಳಿದ 80%ವೂ ಅಮುಸ್ಲಿಮರು.ಬಹುಸಂಖ್ಯಾತರ ನಿಯಮವನ್ನಾಗಿದೆ ಏಕರೂಪದ ನಿಯಮವಾಗಿ ಘೋಷಿಸುವುದು ಎಂದಾಗಿತ್ತು ದೇಶವನ್ನಾಳುವ ವಿದ್ವಾನ್ ಹೇಳಿದ್ದು. ಬಹುಸಂಖ್ಯಾತರೆಂದರೆ ಇಲ್ಲಿರುವ ಅಹಿಂದವರಾಗಿದ್ದಾರೆ. ಹಿಂದೂಗಳೆಲ್ಲರೂ ಒಂದೇ ನಿಯಮ ಪಾಲನೆಗೆ ತಯ್ಯಾರಾಗುವರೇ? ಇಲ್ಲ.ಅಂದರೆ ಪ್ರಧಾನವಾಗಿ ಹಿಂದೂ ಸಹೋದರರಿಗೆ ಇದರೊಂದಿಗೆ ಕಿಂಚಿತ್ತೂ ತಾತ್ಪರ್ಯವಿಲ್ಲ.ಕ್ರೈಸ್ತ ಧರ್ಮೀಯರಿಗೂ ಇಲ್ಲ. ಅದರೊಂದಿಗೆ ಮುಸ್ಲಿಮರೊಂದಿಗೆ ಮಗದೊಂದು ಸವಾಲು, ನಿಮಗೆ ಪ್ರಸ್ತುತ ನಿಯಮಗಳನ್ನು ಸ್ವೀಕರಿಸಿದರೇನು?ಆ ಬುದ್ದಿ ಜೀವಿಗಳೊಂದಿಗೆ ನಾವು ಹೇಳುತ್ತಿದ್ದೇವೆ. ಒಂದು ಉದಾಹರಣೆ ಹೇಳುವುದಾದರೆ ನಮ್ಮೆಡೆಯಲ್ಲೇ ಇರುವ ಪುರುಷನೋರ್ವ ಹೆಣ್ಣೊಬ್ಬಳನ್ನು ಮದುವೆಯಾಗುತ್ತಾನೆ. ಕಾಲಕ್ರಮೇಣ ಅವಳಲ್ಲಿ ಶಿಸ್ತುಲ್ಲಂಘನೆಯ ಅತೀದೊಡ್ಡ ಪ್ರವೃತ್ತಿಯೊಂದು ಗೋಚರಿಸಿತೆಂದಿಟ್ಟುಕೊಳ್ಳೋಣ. ಅನೈತಿಕ ಚಟುವಟಿಕೆಯಲ್ಲಿ ತೊಡಗಿರುವ ವಿಚಾರ ಸ್ಪಷ್ಟತೆ ಪಡೆದಾಗ ಅವಳನ್ನು ತಲಾಖ್ ಹೇಳಿ ವಿಚ್ಛೇದಿಸಲಾಯ್ತು.ಇಸ್ಲಾಮಿಕ್ ಶರೀಅತ್ನ ಅನುಸಾರವಾಗಿ ತಲಾಕ್ ಹೇಳಿ ನ್ಯಾಯಾಲಯಕ್ಕೆ ಹೋದರೆ ಮುಸ್ಲಿಂ ಪರ್ಸನಲ್ ಲಾ ನೆಲೆಗೊಳ್ಳುವ ಕಾಲದುದ್ದಕ್ಕೂ ಈ ಹೆಣ್ಣು ನನ್ನ ಹೆಂಡತಿ ಯಲ್ಲ ಎಂದು ಸಾಬೀತು ಪಡಿಸಲು ಮಸೀದಿಯ ತಲಾಕ್ ಸರ್ಟಿಫಿಕೇಟ್ ಸಾಕು. ಅವಳು ಹೆಂಡತಿಯೆಂದು ರುಜುಪಡಿಸಲು ಮಸೀದಿಯ ಖಾಝಿಯ ನಿಕಾಹ್ ಸರ್ಟಿಫಿಕೇಟ್ ಸಾಕು. ಇರಲಿ ಇನ್ನು ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬಂತೆಂದಿಟ್ಟುಕೊಳ್ಳೋಣ.ಧಾರ್ಮಿಕವಾಗಿ ಈ ಹೆಣ್ಣು ಹೆಂಡತಿಯಲ್ಲ ಎಂದಾದರೂ, ಅವನಿಗೆ ಮತ್ತೊಂದು ವಿವಾಹವಾಗಿ ಸಂಸಾರವಾಯ್ತು, ಮಕ್ಕಳಾಯ್ತು, ಕಾಲ ಕ್ರಮೇಣ ಇವನು ಮರಣಹೊಂದಿದ.ಅವನ ಮಕ್ಕಳು ಆಸ್ತಿ ಪಾಲು ಮಾಡುವ ವೇಳೆ ಈ ಹೆಣ್ಣು ಪ್ರತ್ಯಕ್ಷಳಾಗಿ ಹೇಳುತ್ತಾಳೆ 'ನಾನು ಅವನ ಹೆಂಡತಿ ಮತ್ತು ಅವನ ಆಸ್ತಿಯಲ್ಲಿ ನನಗೂ ಹಕ್ಕುಗಳಿವೆ ಎಂದು ಹೇಳಿದರೆ ಕುಟುಂಬದ ಸದಸ್ಯರು ಅವಳನ್ನು ತಿರಸ್ಕರಿಸುತ್ತಾರೆ. ಆ ಸ್ತ್ರೀಯು ನೇರವಾಗಿ ನ್ಯಾಯಾಲಯದ ಮೆಟ್ಟಿಲೇರಿ ಹೇಳುತ್ತಾಳೆ ನಾನು ಆ ಮೃತ ವ್ಯಕ್ತಿಯ ಹೆಂಡತಿ ಯಾಗಿರುವೆನು.ಕೋರ್ಟ್ ಆ ಯುವಕರಾದ ಮಕ್ಕಳನ್ನ ಕರೆಸಿ ಇದು ನಿಮ್ಮ ತಂದೆಯ ಹೆಂಡತಿಯಲ್ಲವೇ ಎಂದು ಕೇಳಿದರೆ ಅಲ್ಲಿ ಅವರು, ಇವಳನ್ನು ನಮ್ಮಪ್ಪನವರು ತಲಾಕ್ ಹೇಳಿ ವಿಚ್ಛೇದಿಸಿದ್ದಾರೆ. ಅದಕ್ಕೆ ಪುರಾವೆಯಾಗಿ ಮಸೀದಿಯ ವಿಚ್ಛೇದನ ಸರ್ಟಿಫಿಕೇಟ್ ಇದೆ ಎಂದರೆ ಇಲ್ಲಿ ಅದೆಲ್ಲ ಸ್ವೀಕಾರಾರ್ಹವಲ್ಲ, ಹೆಣ್ಣೊಬ್ಬಳಿಗೆ ಪುರುಷನಿಂದ ವಿಚ್ಛೇದನ ಪಡೆಯಲು ಕೋರ್ಟ್ ನಲ್ಲಿ ಅದನ್ನು ಪ್ರಸ್ತಾಪಿಸಿದ ನಂತರ ನ್ಯಾಯಾಲಯ ಆ ಪ್ರಸ್ತಾಪವನ್ನು ಮನಗಂಡ ನಂತರ ಅದಕ್ಕೆ ಎರಡೋ ಮೂರೋ ವರ್ಷಗಳ ಕಾಲಾವಧಿ ಬೇಕಾದಲ್ಲಿ ಅದೂ ಕಳೆದು ಕೋರ್ಟ್ ಮೂಲಕ ವಿಚ್ಛೇದನ ಪಡೆದರೆ ಮಾತ್ರ ಅದು ವಿಚ್ಛೇದಿಸಿದಂತಾಗುವುದು ಎಂದು ಹೇಳಿ ಇವಳು ಆ ಮೃತ ವ್ಯಕ್ತಿಯ ಹೆಂಡತಿಯಾದುದರಿಂದ ಅವಳಿಗೂ ಆಸ್ತಿಯಲ್ಲಿ ಪಾಲಿದೆ ಎಂದರೆ ಅವಳಿಗೂ ಆಸ್ತಿ ನೀಡುವುದಾ?ಯಾವುದೀ ನಿಯಮ!ನಮಗಿದನ್ನು ಅಂಗೀಕರಿಸಲು ಕಷ್ಟ ಸಾಧ್ಯ.
ಅದರೊಂದಿಗೆ ಇನ್ನೂ ಹಲವು ಕಾರ್ಯಗಳು ಒಟ್ಟು ಸೇರುತ್ತದೆ. ಸ್ವಾಭಾವಿಕವಾಗಿಯೂ ಮುಸ್ಲಿಮನು ಮೃತನಾದರೆ ಮಸೀದಿ ಪರಿಸರದಲ್ಲಿ ದಫ಼ನಕ್ರಿಯೆ ನಡೆಸಲಾಗುತ್ತದೆ. ಒಂದುವೇಳೆ ಆಕಸ್ಮಿಕವಾಗಿ ಹತ್ತಿರದ ಮನೆಯಾತ ಈ ರೀತಿಯ ದಫ಼ನಕ್ರಿಯೆಯಿಂದಾಗಿ ಪರಿಸರನಾಶವಾಗಿ ತೊಂದರೆಗೀಡಾಗಿದ್ದೇವೆಂದು ಕೇಸು ಕೊಟ್ಟರೆ ಕೋರ್ಟ್ ಇಲ್ಲಿ ಎಲ್ಲರಿಗೂ ಒಂದೇ ನಿಯಮವೆಂದು ಹೇಳಿ ಎಲ್ಲರೂ ಅಂತ್ಯ ಸಂಸ್ಕಾರದ ವೇಳೆ ಶವಕ್ಕೆ ಅಗ್ನಿಸ್ಪರ್ಷಗೈಯ್ಯಬೇಕೆಂದು ಆಜ್ನೆಯಿತ್ತರೆ ಅದನ್ನು ಅನುಸರಿಸೋದಾ?
ಇಸ್ಲಾಮೀ ಚೌಕಟ್ಟಿನೊಳಗಿನ ಜೀವನವನ್ನು ದುಸ್ತರಗೊಳಿಸುವ ವಿಷಯಗಳಲ್ಲವೇ ಇದು. ಈ ಪರಿಸ್ಥಿತಿಯು ಏಕರೂಪ ನಾಗರಿಕ ಸಂಹಿತೆ ಯನ್ನು ಜಾರಿಗೆ ತಂದರೆ ನಮಗೆ ಬಂದೆರಗುವುದು ಖಚಿತ. ಆದ್ದರಿಂದಲೇ ಹೇಳ್ತಿರೋದು ಸಿವಿಲ್ ಕೋಡ್ ನ ಅನುಷ್ಠಾನ ದಿಂದ ಧಾರ್ಮಿಕ ಪರವಾದ ಹಲವು ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಗಳು ಸಾಕಷ್ಟಿವೆ.ಅವುಗಳನ್ನು ನಮಗೆ ಸಹಿಸಲು ಅಸಾಧ್ಯ.ಹೀಗೆ ಹೇಳುವಾಗ ನಮಗೆ ಹಠವಿದೆಯೋ ಅಥವಾ ಹಕ್ಕುಗಳಿವೆಯೋ ?ಎಂಬುದನ್ನು ನಿಖರವಾಗಿ ಪರಿಶೋಧಿಸಬಹುದು. ಪ್ರಪ್ರಥಮವಾಗಿ ನಾವು ಚಿಂತಿಸಬೇಕಾದದ್ದು ಭಾರತದ ಸಂವಿಧಾನದ ಕುರಿತಾಗಬೇಕು.ನಮ್ಮ ದೇಶದ ಸಂವಿಧಾನವು ಅತ್ಯಂತ ದೊಡ್ಡ ಸುಮಾರು 395 ವಿಭಾಗಗಳನ್ನೊಳಗೊಂಡ 7000 ಕ್ಕೂ ಮಿಕ್ಕ ಬಾರಿ ತಿದ್ದುಪಡಿ ಮಾಡಲಾದ 2ವರ್ಷ 11 ತಿಂಗಳು 17 ದಿನಗಳು ವ್ಯವಯಿಸಿ ಮೂರು ವರ್ಷಗಳ ಕಠಿಣ ಪರಿಶ್ರಮದಿಂದ ದೇಶದ ಸಂವಿಧಾನದ ನಿರ್ಮಾಣವಾಯ್ತ. ದೇಶದ ಜನತೆಯ ಜೀವನ ಮಾರ್ಗ ವನ್ನು ರೂಪಿಸುವುದಾಗಿದೆ ಅದು. ಸುಮಾರು ಮೂರು ಸಾವಿರಕ್ಕೂ ಹೆಚ್ಚಿನ ಜಾತಿಗಳು, ಇಪ್ಪತ್ತೈದು ಸಾವಿರಕ್ಕೂ ಮಿಕ್ಕ ಉಪಜಾತಿಗಳು, 8ಕ್ಕೂ ಮಿಕ್ಕ ಧರ್ಮಗಳಿರುವ ಭೂಮಿ ನಮ್ಮದು. ಜೇಬಿನಿಂದ ಒಂದು ನೋಟನ್ನು ಕೈಗೆತ್ತಿಕೊಂಡರೂ ಸಾಕು ಹದಿನೇಳು ಭಾಷೆಗಳಲ್ಲಿ ಎಷ್ಟರ ನೋಟೆಂದು ಬರೆದಿಡಲಾಗಿದೆ.ಅಷ್ಟೇ ವೈವಿಧ್ಯಮಯ ಮಣ್ಣಾಗಿದೆ ಇದು. ಮಾತ್ರವಲ್ಲ ನ್ಯಾಯ, ಸ್ವಾತಂತ್ರ್ಯ, ಸಮತ್ವ ,ಸೌಹಾರ್ದತೆ ಈ ನಾಲ್ಕು ಪಿಲ್ಲರ್ ಗಳ ಮೇಲಾಗಿದೆ ಸಂವಿಧಾನದ ನಿರ್ಮಾಣ. ಈ ನಾಲ್ಕೂ ದೇಶದಲ್ಲಿ ನೆಲೆಯೂರಬೇಕು. ಮಾನವ ಸೌಹಾರ್ದತೆಗೆ ಅತೀ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತದೆ ಈ ದೇಶದ ಸಂವಿಧಾನ. ಹೀಗಾಗಿ ನಮ್ಮ ಧರ್ಮದನುಸಾರ ನಮಗೆ ಜೀವಿಸಬಹುದು ಎಂಬುದು ಸಂವಿಧಾನವು ನಮಗೆ ನೀಡಿರುವ ಅತಿ ಸುಪ್ರಧಾನ ಹಕ್ಕಾಗಿದೆ. Article 25 ಎಂಬುದು ಪ್ರಧಾನ ಘಟಕವಾಗಿದೆ. ನಾವು ಕೇಳುತ್ತಿರುವುದು ಸಂವಿಧಾನ ಅನುವದನೀಯ ಮಾಡಿ ಕೊಟ್ಟ ಹಕ್ಕುಗಳನ್ನಾಗಿದೆ ಹೊರತು ಹೊಸತಾಗಿ ಜಾರಿಗೆ ತರಬೇಕೆಂದಲ್ಲ.ಇಲ್ಲಿ ಕಲಾಪ ನಡೆಸುವ ಉದ್ದೇಶದಿಂದಲೂ ಅಲ್ಲ.ಈ ದೇಶದಲ್ಲಿ ಒಬ್ಬೊಬ್ಬರಿಗೂ ಅವರವರ ಮನಃಸ್ಸಾಕ್ಷಿಗನುಸಾರವಾಗಿ ನಂಬಿಕೆ, ವಿಶ್ವಾಸವನ್ನಾಯ್ಕೆ ಮಾಡುವ ಸ್ವಾತಂತ್ರ್ಯವಿದೆಯೆಂದು 25ನೇ ಪರಿಚ್ಛೇದ ಸ್ಪಷ್ಟಪಡಿಸುತ್ತದೆ.ಜೊತೆಗೆ ಆ ನಂಬಿಕೆಯ ಪ್ರಕಾರ ಅದನ್ನು ಅನುಷ್ಟಿಸಲೂ,ಪ್ರಚಾರ ಮಾಡಲು ಅವಕಾಶ ನೀಡುತ್ತಿದೆ.ಸಂವಿಧಾನ ಹೇಳುವ ಪ್ರಕಾರ article 25 ರಿಂದ 29ವರೆಗಿರುವ ಪರಿಚ್ಛೇದ ಗಳು ಮೂಲಭೂತ ಹಕ್ಕುಗಳಾಗಿದ್ದರೆ,36 ರಿಂದ 51 ರವರೆಗಿನ ಪರಿಚ್ಛೇದವು ಜಾರಿಗೆ ತಂದರೆ ಒಳ್ಳೆಯದು ಎಂಬರ್ಥದಲ್ಲಿ ಬರುವವುಗಳಾಗಿವೆ. ಅದರಲ್ಲಿನ 44 ನೇ ಪರಿಚ್ಛೇದ ವಾಗಿದೆ ಈ ದೇಶದಲ್ಲಿ ಎಲ್ಲಾ ಪ್ರದೇಶಗಳನ್ನೊಳಗೊಂಡ ಏಕರೂಪ ನಾಗರಿಕ ನಿಯಮವೊಂದನ್ನು ಅನುಷ್ಠಾನಕ್ಕೆ ತರಬಹುದೆನ್ನುವುದು.ಈ ನಿಯಮಗಳು ಜಾರಿಗೆ ತರದಿದ್ದರೆ ಅದನ್ನು ಯಾವ ನ್ಯಾಯಾಲಯಕ್ಕೂ ಪ್ರಶ್ನಿಸುವಂತಿಲ್ಲ..ಆದರೆ ಆರ್ಟಿಕಲ್ 25 ಹಾಗಲ್ಲ. ಅದಕ್ಕೂ ಮುನ್ನ ಸಂವಿಧಾನ ಹೇಳುವ ಆರ್ಟಿಕಲ್ 29 ಪರಿಪೂರ್ಣ ವಾಗಿ ಜಾರಿಗೆ ತರಲಾಗಿದೆಯೇ? ಇಂದಿಗೂ ಉತ್ತರ ಬಾರತದಾಧ್ಯಂತ ಮಣ್ನಿನ ಪಾತ್ರೆಯಲ್ಲಿ ಗಂಜಿ ಸೇವಿಸುವ ಹರಿಜನರಿಲ್ಲವೇ?
ಗಾಂಧಿ ಪ್ರತಿಮೆಯನ್ನು ಗಂಗಾನದಿಯ ನೀರು ತಂದು ತೊಳೆದವರಿಲ್ಲವೇ ?ವಿಧ್ಯಾಭ್ಯಾಸದಿ ಮುಂಚೂಣಿ ಯಲ್ಲಿರುವ ಕೇರಳದಲ್ಲಿ ತಿರುವನಂತಪುರದಲ್ಲಿ ರೆಜಿಸ್ಟ್ರೇಷನ್ (ಐ ಎ ಎಸ್) ಆಫೀಸರ್ ನಿರ್ವೃತ್ತರಾದಾಗ ಮರುದಿನ ಹಾಜರಾಗಬೇಕಿದ್ದ ನೂತನಾಧಿಕಾರಿ ಅಂದು ಬಾರದೆ ಕಛೇರಿಗೊಂದು ಮೆಸ್ಸೇಜ್ 'ನಾಳೆ ನಾನು ಹಾಜರಾಗುವ ಮುನ್ನ ಮೂರು ಕೆಲಸಗಳು ಪೂರ್ತಿಯಾಗಿರಬೇಕು.ಆಫೀಸಿನಲ್ಲಿರುವ ಕುರ್ಚಿ, ಮೇಜು, ಮತ್ತು ಕಾರನ್ನು ಸಗಣಿ ಹಾಕಿ ತೊಳೆದಿಡಬೇಕು'ಎಂದಾಗಿತ್ತು. ಯಾಕೆಂದರೆ ಈ ಮುನ್ನ ಕುಳಿತವನು ಹರಿಜನ ನಾಗಿದ್ದ.ಇಂತಹ ತಾರತಮ್ಯದ ದುರ್ವಾಸನೆಯು ಮಾಸಿ ಹೋಗದ ಈ ದೇಶದಲ್ಲಾಗಿದೆಯೇ ಹರಿಜನರನ್ನು ಸಕಲ ಸಂಧಿಗ್ಧತೆಯಿಂದ ಪಾರು ಮಾಡುವುದು?ಸಂವಿಧಾನ ನಮಗೂ ತಿಳಿದಿದೆ.ಇದು ಒಂದು ವಿಭಾಗದವರಿಗೆ ಮಾತ್ರ ತೊಂದರೆ ನೀಡುವ ನಿಗೂಢ ತಂತ್ರ ವಲ್ಲದೆ ಮತ್ತಿನ್ನೇನು? ಅಸ್ಪ್ರಶ್ಯತೆಯ ಎಲ್ಲೆಡೆ ಇಂದಿಗೂ ತಾಂಡವಾಡುತ್ತಿದೆ.ಮಳೆ ಬಂದಾಗ ಒಂದು ದೇಗುಲದ ಆವರಣದಲ್ಲಿ ನಿಂತನೆಂಬ ಕಾರಣಕ್ಕೆ ಸವರ್ಣನೊಬ್ಬನನ್ನು ಬರ್ಬರವಾಗಿ ಹತ್ಯೆಗೈದ ಘಟನೆಯು ಪಾರ್ಲಿಮೆಂಟ್ ಚರಿತ್ರೆಯಲ್ಲಿದೆ.ಇದೆಲ್ಲವನ್ನು ಕಂಡು ಯಾರಾದರೂ ಕಣ್ಣೀರು ಸುರಿಸಿದರೇ?ಇದು ಸಂವಿಧಾನ ವಿರುದ್ಧ ನೀತಿಯಲ್ಲವೇ..46ನೇ ಆರ್ಟಿಕಲ್ ನೋಡಿ.ಭಾರತದ ಏಕೀಕರಣ ಕ್ಕೆ ನೀವು ಕಂಡ ಮಾರ್ಗವೋ ಇದು. ಭಾರತೀಯ ಮುಸ್ಲಿಮರಾದ ನಮಗೆ ಪಾಂಡಿತ್ಯ ಪರಂಪರೆ ಇದೆ.ಸ್ವಾತಂತ್ರ್ಯಕ್ಕಾಗಿ ಜೀವಕೊಟ್ಟ ತ್ಯಾಗಿವರ್ಯ್ರರ ಹಿಂಬಾಲಕರು ನಾವು.ನಮ್ಮ ಪೂರ್ವಿಕರು ಮಹಾನರಾದ ಪೊನ್ನಾನಿ ಮಖ್ದೂಮ್ (ರ.ಅ) ಬ್ರಿಟಿಷರ ಆಗಮನ ಕ್ಕೂ ಮುನ್ನ ಪೋರ್ಚುಗೀಸರ ವಿರುಧ್ಧ ಸಮರ ಸಾರಿದರು. ಜನರೊಂದಿಗೆ ಸಹಕಾರ ನೀಡದಿರಲು ಆಜ್ನೆಯಿತ್ತರು.ಬ್ರಿಟಿಷರು ಬಂದಾಗ ವೆಳೆಯಂಗೋಡ್ ಉಮರ್ ಖಾಝಿ ರ.ಅ ತನ್ನ ಜನತೆಯೊಂದಿಗೆ ಯಾವುದೇ ಕಾರಣಕ್ಕೂ ತೆರಿಗೆ ನೀಡಬೇಡಿ ಎಂದು ಪ್ರಖ್ಯಾಪಿಸುವ ಕಾಲದಲ್ಲಿ ಭಾರತದ ರಾಷ್ಟಪಿತರು ಜನಿಸಿರಲಿಲ್ಲ ಎಂಬುದನ್ನು ಮನದಟ್ಟು ಮಾಡಬೇಕಾಗಿದೆ.ಅಂತಹ ಪಾರಂಪರಿಕ ಇತಿಹಾಸವಿರುವ ನಮಗೆ ಈ ನಿಯಮಗಳೊಂದಿಗೆ ಹತ್ತಿರದ ಸಂಬಂಧಗಳಿವೆ.ನಮಗೆ ಹಠವಿಲ್ಲ ಆದರೆ ಹಕ್ಕುಗಳಿವೆ. ಅದನ್ನೀಗ ಕೇಳುವುದು ನಮ್ಮ ಅವಶ್ಯಕತೆ ಯಾಗಿದೆ.ಎಲ್ಲಾ ಸಮುದಾಯಗಳಲ್ಲೂ ಈ ರೀತಿಯ ಹಕ್ಕುಗಳಿವೆ. ದೇಶದ ಸಿಖ್ ಸಮುದಾಯದ ಒಬ್ಬ ಸೈನ್ಯದಲ್ಲಿ ಇಟ್ಟರೆ ,ಹೆಲ್ಮೆಟ್ ಧರಿಸದಿದ್ದರೆ ದಂಡ ಹಾಕುವುದೋ ಕತ್ತಿ ಹಿಡಿದು ಬಸ್ಸೇರಿದರೆ ಅದನ್ನು ಭಯೋತ್ಪಾದಕ ಕೃತ್ಯವೆಂದು ಕೇಸು ದಾಖಲಿಸುವಂತಹ ಪ್ರತೀತಿ ಇದೆಯೇ?ಅದವರ ಧಾರ್ಮಿಕ ಹಕ್ಕುಗಳಾಗಿವೆ.ಯಾರಿಗೂ ಪ್ರಶ್ನಿಸುವಂತಿಲ್ಲ.ಶಬರಿಮಲೆಗೆಂದು ಶಾಲು ಹಾಕಿದ ಪೊಲೀಸ್ ಪೇದೆಗೆ ಗಡ್ಡವನ್ನಿಟ್ಟು ಕೆಲಸದಲ್ಲಿ ಮುಂದುವರಿಯಬಹುದು.ಮುಸ್ಲಿಮನಿಗೆ ಗಡ್ಡವಿಡಬೇಕೋ ಎಂಬ ವಿಚಾರದಲ್ಲಿ ಈಗಲೂ ಚರ್ಚೆ ನಡೆಯುತ್ತಿದೆ.ಈ ಹಕ್ಕುಗಳನ್ನು ಹಿಂಪಡೆಯಬೇಕೆಂದು ನಾವು ಹೇಳೊಲ್ಲ.ದೂರು ನೀಡುವ ಗೋಜಿಗೆ ನಾವು ಹೋಗುವುದೂ ಇಲ್ಲ.ಹೀಗಿರುವಾಗಲಾಗಿತ್ತು ದೇಶದ ಪ್ರಧಾನಿ ಉತ್ತರ ಭಾರತದಲ್ಲಿ ವೇದಿಕೆ ಮೇಲೆ ಭಾಷಣ ಬಿಗಿದದ್ದು ರಾಜ್ಯದಲ್ಲಿ ಮುಸ್ಲಿಮರು ಕಣ್ಣೀರು ಸುರಿಸುವ ಅವಸ್ಥೆಯು ಇನ್ನು ಬಾರದಂತೆ ಕ್ರಮ ಕೈಗೊಂಡು ಇಲ್ಲಿ ತ್ರಿವಳಿ ತ್ವಲಾಖ್ ಸಂಪ್ರದಾಯವನ್ನು ನಿಷೇಧಿಸುವ ಸಲುವಾಗಿ ಇಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಬೇಕೆಂದು.ಈ ಹೇಳಿದ ಪ್ರಧಾನಿ ಯೊಂದಿಗೆ ಒಂದೇ ಒಂದು ಮಾತು, ಪ್ರಸ್ತುತ ಪ್ರಖ್ಯಾಪನೆಯಿಂದ ಸ್ತ್ರೀ ಸಮೂಹದಲ್ಲಿ ತಲಾಕ್ ನ ಕುರಿತಾದ ನಿರ್ಲಕ್ಷ್ಯ ಭಾವನೆ ಮೂಡಿಸಿ.ಶರೀಅತ್ ನ ನಿಯಮಗಳನ್ನು ಇಲ್ಲವಾಗಿಸುವಲ್ಲಿನ ಷಡ್ಯಂತ್ರವಲ್ಲದೆ ಬೇರೇನೂ ಅಲ್ಲ.

ಅದಿರಲಿ ಇನ್ನು ಈ ವಿಷಯಗಳಲ್ಲಿ ಆಸಕ್ತಿ ಹೆಚ್ಚಿಸಿ ಜನಸಾಮಾನ್ಯರ ನಡುವೆ ಎತ್ತಿದ ಆ ಕೈ ಇದಕ್ಕೂ ಮುಂಚೆ ಗುಜರಾತ್ ಕಲಾಪದಲ್ಲಿ ಅದೆಷ್ಟೋ ಗರ್ಭಿಣಿಯರ ಉದರದಿಂದ ತ್ರಿಶೂಲವ ಚುಚ್ಚಿ ಹಸುಳೆಗಳನ್ನು ಹೊರ ತೆಗೆದ ಕೈಯದು!ಆಗ ಬಾರದ ಕಣ್ಣೀರು ಈಗ್ಯಾಕೆ?ಬೀಫ್ ನಿಷೇಧ ದ ಹೆಸರಿನಲ್ಲಿ ಬಲಿಯಾದ ಅಮಾಯಕ ಜೀವಗಳೆಷ್ಟು..ಜೈ ಶ್ರೀರಾಮ್ ಘೋಷಣೆ ಹೇಳಲ್ಲಿಲ್ಲವೆಂಬ ಕಾರಣಕ್ಕೆ ದಾರುಣ ಅಂತ್ಯ ಕಂಡ ಜೀವಗಳೆಷ್ಟು..!? ತನ್ನ ಸ್ವಂತ ಜೀವನ ಸಂಗಾತಿಯಾದ ಯಶೋಧಾ ಬೆನ್ ರ ಕಣ್ಣೀರೊಪ್ಪಲು ಸಾದ್ಯವಾಗದವರೋ ಇತರರ ದುಖದಲ್ಲಿ ಭಾಗಿಯಾಗುವಂತೆ ನಾಟಕವಾಡುವುದು?
ತ್ರಿವಳಿ ತಲಾಕ್ ನ ವಿಷಯಕ್ಕೆ ಸಂಬಂಧಿಸಿದಂತೆ ಇಸ್ಲಾಮ್ ಬಹಳ ಸ್ಪಷ್ಟ ನಿಲುವನ್ನು ತಾಳಿದೆ.ನಿಕಾಹ್ ಎಂದರೆ ಅತ್ಯಂತ ಬಲಿಷ್ಟವಾದ ಒಪ್ಪಂದ ವಾಗಿದೆಂದು ಕುರಾನ್ ಹೇಳುತ್ತಿದೆ.ವಧು ವರರು ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಜೀವಿಸಲು ತಯಾರಾದರೆ ಮಾತ್ರ ನಿಕಾಹ್. ಅದೂ ನಿಬಂಧನೆಗಳನ್ನು ಸಂಪೂರ್ಣವಾಗಿ ಪಾಲಿಸುವೆನೆಂಬ ಶಪಥದ ಮೂಲಕವಾಗಿರಬೇಕು.ಇನ್ನು ಒಂದು ಸಂಧಿಗ್ಧಘಟ್ಟದಲ್ಲಿ ಆ ಪುರುಷನು ಸ್ತ್ರೀಯೂ ಅವರ ಬಾಂಧವ್ಯದಲ್ಲಿ ಬಿರುಕು ಕಾಣಿಸಿಕೊಂಡಿತೆನಿಸಿಕೊಳ್ಳಿ.ಆ ವೇಳೆ ಇಸ್ಲಾಂ ಪ್ರತಿಪಾದಿಸಿದ ಶರೈಯ್ಯಾದ 5 ಹಂತಗಳನ್ನು ಪೂರೈಸದೆ ತಲಾಕ್ ಹೇಳುವ ಯಾವುದೇ ಆಯ್ಕೆಗಳಿಲ್ಲ.ಮೊದಲನೆಯದಾಗಿ ಇಬ್ಬರೂ ಒಟ್ಟಾಗಿ ಕುಳಿತು ಮಾತುಕತೆ ನಡೆಸಿ ಪರಿಹಾರ ಹುಡುಕುವಂತಾಗಬೇಕು.ಎರಡ್ನೆಯದ್ದಾಗಿ ಸಹಶಯನದಿಂದ ದೂರವಾಗಬೇಕು.ನಂತರವೂ ಅಸಾಧ್ಯವೆಂದು ಗೋಚರಿಸಿದಲ್ಲಿ ಸಣ್ಣಗೆ ಗದರಿಸಬಹುದು.ಅದೂ ನಿಶ್ಫ಼ಲವಾದಲ್ಲಿ ಎರಡೂ ಕುಟುಂಬದ ಸದಸ್ಯರ ನಡುವೆ ನೀತಿವಂತರ ಸಮ್ಮುಖದಲ್ಲಿ ಚರ್ಚೆ ನಡೆಸಬೇಕು.ಯಾವುದೇ ಕಾರಣಕ್ಕೂ ಪರಿಹಾರವಿಲ್ಲವೆಂದು ಮನದಟ್ಟಾದರೆ ಐದನೆಯದಾಗಿ ಒಂದು ತಲಾಕ್ ಹೇಳಬಹುದು. ಅದೂ ಕೂಡಾ ಸ್ತ್ರೀಗೆ ಮುಟ್ಟಾಗದ ಸಮಯದಲ್ಲಾಗಿರಬೇಕು. ಅದೂ ಕೂಡ ಅವಳು 'ಇದ್ದಾ' ಕೂರುವಾಗ ಅವಳ ಖರ್ಚು ವೆಚ್ಚಗಳನ್ನು ಭರಿಸಲು ಇವನು ತಯ್ಯಾರಾಗಬೇಕು.ಕೊಟ್ಟ ಮಹ್ರಿನಿಂದ ಒಂದಂಶವನ್ನೂ ಅವಳಿಂದ ಹಿಂಪಡೆಯುವಂತಿಲ್ಲ. ಅದೆಷ್ಟು ಕ್ರಮಬದ್ಧ ವ್ಯವಸ್ಥೆ ಯಾಗಿದೆ ಇಸ್ಲಾಮಿನಲ್ಲಿ ತಲಾಕ್ ಎಂಬುದು.ಮಾತ್ರವಲ್ಲ ತಲಾಕ್ ಹೇಳುವ ವೇಳೆ ಅಲ್ಲಾಹನ ಸಿಂಹಾಸನವೇ ಅಲುಗಾಡುವುದೆಂದೂ,ಅಲ್ಲಾಹನನ್ನು ಅತ್ಯಂತ ಕುಪಿತನಾಗಿಸುವ ವಿಷಯ ವೆಂದೂ ಪ್ರವಾದಿ ಸ.ಅ ಹೇಳಿದ್ದರೆ ಅದರ ಗೌರವವನ್ನು ನಾವು ಮನಗಾಣಬೇಕಾಗಿದೆ. ಇಸ್ಲಾಮಿನ ಸ್ತ್ರೀ ಪುರುಷ ಸಮತ್ವವನ್ನು ಅಲ್ಲಗಳೆಯುವವರೊಂದಿಗೆ,ಹಿಂದೂ ಧರ್ಮದ ಪ್ರಕಾರ ಎಲ್ಲಾ ಸಿದ್ದಾಂತಗಳನ್ನೂ ಪರಿಗಣಿಸಿದರೂ ಸಹ ಕೊನೆಗೊಂದು ಪ್ರಶ್ನೆ ಉಳಿಯುತ್ತದೆ. ಅದೇನೆಂದರೆ 2018 ರ ತೀರ್ಪಿನ ತನಕವೂ ಶಬರಿಮಲೆಗೆ ಸ್ತ್ರೀ ಪ್ರವೇಶ ನಿರಾಕರಣೆ ಮಾಡಿದ್ಯಾಕೆ? ಅಯ್ಯಪ್ಪ ದರ್ಶನದಿಂದ ಅವರಿಗೂ ಪುಣ್ಯ ಸಿಗಬೇಡವೆ?ಇನ್ನು ಕ್ರೈಸ್ತ ಸಮುದಾಯದವನ್ನು ನೋಡಿದರೆ ಅವರೊಂದಿಗೂ ಕೇಳುವುದಾದರೆ ನಿಮ್ಮ ಧಾರ್ಮಿಕ ಇತಿಹಾಸದಲ್ಲಿ ಯಾವಾಗಲೂ ನಾಯಕ ನಾಗಿ ಅಥವಾ ಫಾದರ್ ಆಗಿ ಪುರುಷ ನನ್ನೇ ಆರಿಸಲಾಗುತ್ತದೆ? ಮಾರ್ಪಾಪರ ಸ್ಥಾನವನ್ನು ಇದುವರೆಗೂ ಮಾರ್ಮಾಮ ತುಂಬಲಿಲ್ಲವಲ್ಲ. ಟ್ರೈನ್ ನಲ್ಲೇಕೆ ಸ್ತ್ರೀಯರಿಗಾಗಿ ಮಾತ್ರ ಒಂದು ಬೋಗಿ? ಸ್ತ್ರೀ ಪುರುಷ ಸಮತ್ವ ವು ಈ ರಾಷ್ಟ್ರದಲ್ಲಿ ಸ್ಥಾಪಿಸಲು ಸಾಧ್ಯತೆ ಅತಿ ವಿರಳ.
ವರದಿಗಳ ಪ್ರಕಾರ 150 ರಾಷ್ಟ್ರಗಳ ಪೈಕಿ ಈ ವಿಷಯದಲ್ಲಿ ಭಾರತವು 87 ನೇ ಸ್ಥಾನದಲ್ಲಿದೆ. ಆದರೆ ಸ್ತ್ರೀ ಸಂರಕ್ಷಣೆಯ ತುತ್ತೂರಿಯೂದಿ ರಂಪಾಟ ಮಾಡುವವರು ಕೇಳಬೇಕು ಇದೇ ಭಾರತದಲ್ಲಿರುವ ಶ್ರೀಮಂತ ವರ್ಗವು ಮದ್ಯಪಾನ ಮಾಡಿ,ಕಣ್ಣುಕೆಂಪಾಗಿಸಿ,ಆ ನೇತ್ರಗಳನ್ನು ಆಹ್ಲಾದಿಸಲು ಬಡಪಾಯಿ ಹುಡುಗಿಯರನ್ನು ನಗ್ನರಾಗಿಸಿ ನೃತ್ಯವಾಡಿಸುವ ಅನೈತಿಕತೆಯ ಕೇಂದ್ರಗಳಾದ ಪಂಚತಾರಾ ಕ್ಯಾಬರೆಗಳನ್ನು ಮುಚ್ಚಿಸಲು ಸಾಧ್ಯವೇ ನಿಮಗೆ? ಮುಂಬೈ,ಕಲ್ಕತ್ತಾದಂತಹಾ ಮೆಟ್ರೊಪಾಲಿಟನ್ ನಗರಗಳಲ್ಲಿ ಹಣಕ್ಕಾಗಿ ಮಾಂಸ ಮಾರುವ ವೇಷ್ಯೆಯರ ಕೇಂದ್ರಗಳಿಗೆ ಬೀಗ ಜಡಿಯುವಿರಾ? ಜೀವನ ನಡೆಸಲು ಅಸಾಧ್ಯಕರವೆನಿಸಿದಾಗ,ದಿನದೂಡಲು ಕಷ್ಟಕರವಾದಾಗ ಸ್ವಶರೀರವನ್ನು ಮಾರಿ ಮಾರಕ ರೋಗಗಳಿಗೆ ತುತ್ತಾಗಿ ಚಿಕಿತ್ಸಾಧನವಿಲ್ಲದೆ ಕೊನೆಗೊಮ್ಮೆ ಜೀವಚ್ಚವವಾಗಿ ಬೀದಿಗೆಸೆಯಲ್ಪಡುವ ಹೀನಾಯ ಸಂಸ್ಕೃತಿಗೆ ತಡೆಯೊಡ್ಡಲು ಸಾಧ್ಯವಿದೆಯೆ? 2011ರ ಗಣತಿಯ ಪ್ರಕಾರ ಭಾರತದಲ್ಲಿ ವಿಚ್ಛೇದಿತ ಸ್ತ್ರೀಯರಲ್ಲಿ 68%ಹಿಂದೂ ಸ್ತ್ರೀಯರಾದರೆ,33%ಮುಸ್ಲಿಮರಾಗಿದ್ದಾರೆ.ಪತ್ರಿಕಾ ವರದಿಯಾಗಿದೆ ಇದು. ಆದ್ದರಿಂದ ಎಂದಿಗೂ ಸ್ತ್ರೀ ಸಮತ್ವ ಮತ್ತು ಸ್ವಾತಂತ್ರ್ಯದ ಹೆಸರಲ್ಲಿ ಪವಿತ್ರವಾದ ಇಸ್ಲಾಮಿನ ಶರೀಅತ್ ನ್ನು ನಿರ್ನಾಮಗೊಳಿಸಲು ವಿಫಲಯತ್ನವಗೈಯದಿರಿ.ಈ ಶರೀಅತ್ ಪೂರ್ಣಗೊಂಡ ವೇಳೆ ಪ್ರವಾದಿವರೇಣ್ಯರು ಸ.ಅ ಗಂಭೀರ ಪ್ರಭಾಷಣ ನಡೆಸಿ ಹೇಳಿದರು "ಇದು ಸಂಪೂರ್ಣತೆ ಹೊಂದಿದ ಧರ್ಮವಾಗಿರುತ್ತದೆ." ಅಂದೂ ಸ್ತ್ರೀಗೆ ಮುಕ್ತ ಸ್ವಾತಂತ್ರ್ಯವಿತ್ತು. ಏನೇ ಆಗಲಿ ಇಲ್ಲಿ ಶರೀಅತ್ ಗೆ ಯಾವ ರೀತಿಯ ಕುಂದು ಕೊರತೆಗಳು ಉಂಟಾಗದು ಎಂಬುದು ಖಂಡಿತ. ಶರೀಅತ್act ನ್ನು ನಿಷೇಧಿಸಲೆತ್ನಿಸುವವರು ಆಗ್ರಹಿಸುವುದು ಈ ದೇಶದ ಅಧೋಗತಿಯನ್ನಲ್ಲದೆ ಪ್ರಗತಿಯನ್ನಲ್ಲ...

ಕಾಮೆಂಟ್‌ಗಳು