ವಿಷಯಕ್ಕೆ ಹೋಗಿ

'ಮ್ಯೂಸಿಕಲಿ': ನರಕದ ಭಯವಿರಲಿ -'ಟಿಕ್ ಟಾಕ್' ಮೋಡಿಗೆ ಬಲಿಯಾಗುತ್ತಿರುವ ಹದಿಹರೆಯದ ಮುಸ್ಲಿಂ ತರುಣಿಯರು'

✒-ನಿಝಾಮ್ ಅನ್ಸಾರಿ



ಪ್ರಪಂಚವು ಹಂತ ಹಂತವಾಗಿ ಅಭಿವೃದ್ಧಿಯ ಕಡೆಗೆ ದಾಪುಗಾಲಿರಿಸುತ್ತಿದೆ. ದಿನ ಕಳೆದಂತೆ ವಿಜ್ಞಾನ ತಂತ್ರಜ್ಞಾನ ವಲಯಗಳಲ್ಲಿ ಕ್ಷಿಪ್ರಗತಿಯ ಬದಲಾವಣೆಯನ್ನು ಕಾಣುತ್ತಿದ್ದೇವೆ. ನಿನ್ನೆ ಹೊಸತೆನಿಸಿದ್ದೆಲ್ಲಾ ಇಂದಿಗೆ ಹಳೆಯದಾಗುತ್ತಿದೆ. ಹಳೆಯ ಕಾಲದಲ್ಲಿ ಶಾಲೆಯಿಂದ ಕೊಂಚ ಬಿಡುವು ಸಿಕ್ಕಾಗ ಕ್ರಿಕೆಟ್, ಚೆನ್ನಿದಾಂಡು ಎಂದೆಲ್ಲಾ ಹೇಳಿ ಮೈದಾನಕ್ಕಿಳಿಯೋದು, ಹುಣಸೇ ಮರ ಏರೋದು, ಮಾವಿನ ಮರಕ್ಕೆ ಕಲ್ಲೆಸೆಯೋದು ಸರ್ವೇಸಾಮಾನ್ಯವಾಗಿತ್ತು. ಆಧುನಿಕತೆಯ ಜಗತ್ತು ಮನುಷ್ಯನ ದೈಹಿಕ ಬಲಕ್ಕಾಗಿ ಜಿಮ್ ಕೋಚಿಂಗ್ ಸೆಂಟರ್ ಗಳನ್ನು ತೆರೆದರೆ, ಶರೀರವನ್ನು ಅಲ್ಪವೂ ಅಲುಗಾಡಿಸದೆ ಕೆಲಸ ಮಾಡಿ ವೇತನ ಪಡೆಯುವಲ್ಲಿ ಕಂಪೂಟರೀಕೃತ ನೂತನ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸಿದೆ‌. ಅಂದರೆ ಹಾಯಾಗಿ ಕುಳಿತಲ್ಲೇ ತಿಂಡಿ ತಿನಿಸು, ಕೆಲಸ,ವ್ಯಾಯಾಮವೆಲ್ಲದರಲ್ಲೂ ಸುಧಾರಿಸಿಕೊಂಡು ಮುಂದೆ ಸಾಗಿದೆ. ಹಿಂದಿನ ಕಾಲದಂತೆ ಊರೂರು ಅಲೆದಾಡೋದು,ನೆರೆಕರೆ ಸಂಬಂಧಿಕರನ್ನು ಕಂಡು ಮಾತನಾಡೋದು, ಹರಟೆ ಹೊಡೆಯೋದು ಇಂದಿಗೆ ಹಳೆಯ ಆಚಾರಗಳಾಗಿ ಪರಿಗಣಿಸಲ್ಪಟ್ಟಿದೆ. ಆಧುನಿಕ ತಂತ್ರಜ್ಞಾನಗಳು ಮನುಷ್ಯನನ್ನು ತಾಳಕ್ಕೆ ತಕ್ಕಂತೆ ಕುಣಿಸುವ ,ಮಾನಸಿಕವಾಗಿ ತನ್ನತ್ತ ಕೇಂದ್ರೀಕರಿಸುವಲ್ಲಿ ಅನುಸರಿಸುವ ಗುಲಾಮರಂತೆ ಕಂಡುಕೊಂಡಿದೆ‌.

ನಾವು ಎಲ್ಲಾ ಸಮಯದಲ್ಲೂ ಬ್ಯುಸಿಯಾಗಿದ್ದರೆ ಮೊಬೈಲ್,ಕಂಪ್ಯೂಟರ್ ಗಳಂತಹ ತಂತ್ರಜ್ಞಾನಗಳು ನಮ್ಮನ್ನು ಗುಲಾಮರನ್ನಾಗಿಸಿದೆ ಎನ್ನಬಹುದು. ಮನೆ ದಿನಚರಿಗಳೂ ಆರಭವಾಗೋದೇ ತಂತ್ರಜ್ಞಾನದಿಂದ. ಬೆಳಗ್ಗಿನ ಬ್ರೇಕ್ ಫಾಸ್ಟ್ ನಿಂದ ರಾತ್ರಿಯ ಡಿನ್ನರ್ ವರೆಗೂ ಆನ್ಲೈನ್ ಮೂಲಕ ಆರ್ಡರ್ ಮಾಡಿ ತರಿಸುತ್ತಾರೆ. ನಗರ ವಲಯಗಳಲ್ಲಂತೂ ಗ್ಯಾಸ್ ಸ್ಟೌವ್ ಗಳನ್ನೇ ಮುಟ್ಟದ ಅದೆಷ್ಟೋ ಮಹಿಳೆಯರಿದ್ದಾರೆ.
ನಮ್ಮ ಈ ಬ್ಯುಸಿಮಯ ಬದುಕು ಜೀವನದ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆಯೆಂದರೆ ನಮ್ಮವರೊಂದಿಗೆ ಮಾತನಾಡಲೂ ಕೂಡಾ ಸಮಯದ ಕೊರತೆ ಶುರುವಿಟ್ಟಿದೆ‌. ಸಮಯ ಕಳೆಯುದಕ್ಕಾಗಿ ವಿಭಿನ್ನ ಆಟೋಟಗಳಿಗೆ ಮೊರೆ ಹೋಗುತ್ತಿದ್ದ ನಾವು ಈಗಿನ ಮಕ್ಕಳ ಸಮಯವೆಲ್ಲವೂ ಪರದೆ ಮೇಲೆ ವ್ಯರ್ಥವಾಗಿ ಹೋಗೋದನ್ನ ನೋಡಿ ತುಟಿಪಿಟಿಕ್ಕೆನ್ನದೆ ಹೈರಾಣಾಗಿ ಬಿಡುತ್ತೇವೆ.

ನಿಜವಾಗಿಯೂ ಇಲ್ಲಿ ನಡೆಯುತ್ತಿರುವುದೇನೆಂದರೆ,ಆಧುನಿಕ ತಂತ್ರಜ್ಞಾನದೊಂದಿಗಿನ ಅಪರಿಮಿತವಾದ ನಮ್ಮ ಒಡನಾಟ. ಸಮಯವು ಹಿಂದಿನಂತೆಯೇ ಇಪ್ಪತ್ನಾಲ್ಕು ಘಂಟೆಗಳೇ ಇವೆ.ಆದರೆ ಸಾಕಾಗುತ್ತಿಲ್ಲ. ಹಗಲು ರಾತ್ರಿಯೆನ್ನದೆ ಮೊಬೈಲ್ ಲೋಕದ ಮಾಯಾಜಾಲದಲ್ಲಿ ಬಿದ್ದಿರುವ ನಮಗೆ ನಮ್ಮ ಜಾಲತಾಣವೇ ಹೋರಾಟದ ವೇದಿಕೆ. ಆಂತರಿಕವಾಗಿ ಕಲಹವಾಡುವ ನಾವು ಬಾಹ್ಯ ಜಗತ್ತಿನಲ್ಲಾಗುವ ಪರಿವರ್ತನೆಯ ಬಗ್ಗೆ ಕಿಂಚಿತ್ತೂ ಚಿಂತಿಸುತ್ತಿಲ್ಲ.ನಮ್ಮ ಮಾತು ಮೌನದಿಂದಾಗುವ ಅದೆಷ್ಟೋ ರದ್ಧಾಂತಗಳೆಗೆ ಪರೋಕ್ಷವಾಗಿ ನಾವೇ ಕಾರಣರಾಗುತ್ತಿದ್ದೇವೆ. ತಾಂತ್ರಿಕ ಜಗತ್ತು ಹೇಳಿಕೊಟ್ಟದ್ದೇ ಪ್ರಪಂಚವೆಂದು ನಂಬಿದಾಗ ಮಾನವೀಯತೆಯು ಯಾಂತ್ರಿಕತೆಯೊಳಗಿನ ನಿರಾಕಾರವಾದ ಒಂದು ಸೊಬಗು ಸಾಧನವಾಗುತ್ತದೆಯಷ್ಟೇ.

ಒಂದೆಡೆ ಸಣ್ಣ ಮಕ್ಕಳು ಬ್ಲೂವೇಲ್, ಮೊಮೊಗಳಂತಹ ಅಪಾಯಕಾರಿಯಾದ ಆಟಗಳನ್ನಾಡಿ ಪ್ರಾಣ ಕಳೆದುಕೊಳ್ಳುತ್ತಿದ್ದರೆ, ಇತ್ತ ಸಾಮಾಜಿಕ ಜಾಲತಾಣಗಳು ಅದರದೇ ಆದ ಮೋಡಿಯಲ್ಲಿ ಜನರ ನಿದ್ದೆಗೆಡಿಸಿದೆ. ದಿನಪೂರ್ತಿ ರಜೆ ಇದ್ದರೂ ಇಂಟರ್ನೆಟ್ ನಲ್ಲಿ ಕಳೆಯುವ ಅದೆಷ್ಟೋ ಯುವಕದ್ದಾರೆ.ಅವರಿಗೆ ತಮ್ಮ ಸುತ್ತಮುತ್ತಲಿನ ಕುರಿತು ಗೊಡವೆಯೇ ಇರೋದಿಲ್ಲ. ಎಲ್ಲಿ ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡಬೇಕೆನ್ನುವ ಸಾಮಾನ್ಯ ಜ್ಞಾನವೂ ಇರುವುದಿಲ್ಲ‌.
ವಾಟ್ಸಾಪ್,ಫೇಸ್ ಬುಕ್ ಒಂದಕ್ಕೊಂದು ಪೈಪೋಟಿ ನೀಡಿ ನೆಟ್ಟಿಗರನ್ನು ಆಕರ್ಷಿಸುವ ಮೂಲಕ ಖ್ಯಾತಿ ಪಡೆದಿದೆ. ಸಿಮ್ ಕಂಪೆನಿಗಳ ವಿಷಯಗಳನ್ನು ಹೇಳಬೇಕಿಲ್ಲ ತಾನೆ. ಇಂದು ದೇಶದ ಜನಸಂಖ್ಯೆಯ ಬಹು ಭಾಗವೂ ಈ ವಿಷಯದಲ್ಲಿ ಮುಂದಿದೆ.ಮುಸುರೆ ತಿಕ್ಕುವವರಿಂದ ಹಿಡಿದು ಮ್ಯಾನೇಜರುಗಳ ವರೆಗೂ ಅಂತರ್ಜಾಲದ ಸುಳಿಯಲ್ಲಿ ಸಿಲುಕಿ ನರಳುತ್ತಿರುವವರಿದ್ದಾರೆ.

ಏನೇ ಇರಲಿ,ಇವೆಲ್ಲವೂ ಎಷ್ಟು ಪ್ರಯೋಜನಕಾರಿಯೋ ಅದಕ್ಕಿಂತ ಹೆಚ್ಚಾಗಿ ಉಪದ್ರವಕಾರಿಯಾಗಿದೆ ಅನ್ನೋದನ್ನ ಮಾತ್ರ ಅಲ್ಲಗಳೆಯಲಾಗದು.
ವಾಟ್ಸಾಪ್,ಫೇಸ್ ಬುಕ್,ಟ್ವಿಟ್ಟರ್ ಗಳಂತೆ ಹಲವು ಸಾಮಾಜಿಕ ಜಾಲತಾಣಗಳು ಬಳಕೆಗೆ ಬಂದಿದ್ದರೂ ಒಂದು ಸೀಮಿತ ಸಮುದಾಯದ ಮೇಲೆ ಮಾತ್ರ ಅದರ ಪರಿಣಾಮವು ಎದ್ದು ಕಾಣುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ತಾಂತ್ರಿಕ ಮಾರುಕಟ್ಟೆಗೆ ಲಗ್ಗೆಯಿಡುತ್ತಿರುವ ಸಂಗೀತಮಯ ,ಸ್ಪೋಟ್ ಡಬ್ಬಿಂಗ್ ಅಪ್ಲಿಕೇಶನ್‌ಗಳು ಮಾತ್ರ ಇದಕ್ಕಿಂತ ಭಿನ್ನವೆನಿಸುತ್ತದೆ.

ಅವುಗಳ ಪೈಕಿ ಇನ್ಸ್ಟ್ರಾಗ್ರಾಮ್ ಮೊದಲಿಗ.ನಂತರ ಡಬ್ಸ್ ಸ್ಮಾಶ್ ,ಮ್ಯೂಸಿಕಲಿ ಆಗಿ ಇದೀಗ ಟಿಕ್ ಟಾಕ್ ಸರದಿ. ಏತನ್ಮಧ್ಯೆ ಹಲವು ಅಪ್ಲಿಕೇಶನ್ ಹೊರಬಂದರೂ ಜನರು ಪ್ಲೇ ಸ್ಟೋರ್ನಿಂದಲೇ ಹಿಂತಿರುಗಿಸಿದರು.
ಇಂತಹ ಆಪ್ಗಳು ಎಲ್ಲರ ಮನೆ ಮಾತಾಗಿದ್ದು ಕವನ,ಹಾಡು,ನಿನೆಮಾ ಡೈಲಾಗುಗಳು,ಹಿನ್ನಲೆ ಗಾಯನ ಇಂತಹ ಹಲವು ಪ್ರಕಾರಗಳನ್ನು ಒಳಗೊಂಡಿದೆ .ಇಲ್ಲಿ ಬಳಕೆದಾರನು ತನ್ನ ಅಭಿವ್ಯಕ್ತಿಯನುಸಾರ ಬೇಕಾದ ಸಂಗೀತ ,ಡೈಲಾಗುಗಳನ್ನು ಬಳಸಬಹುದು.ಡಬ್ ಮಾಡಬಹುದು.ಮದ್ರಾಸ್ ಹೈಕೋರ್ಟ್ ಕೆಲವು ದಿನಗಳ ಹಿಂದೆಯಷ್ಟೇ ಟಿಕ್ ಟಾಕ್ ನಿಷೇಧಿಸಲಾಗಿದೆ ಅನ್ನುವ ತೀರ್ಪು ನೀಡಿತ್ತು. ಈ ನಡೆಯನ್ನು ಎಲ್ಲಾ ಕಡೆಯಿಂದಲೂ ವಿಚಾರವಾದಿಗಳು ಸೈ ಅಂದಿದ್ದರು.ಟಿಕ್ ಟಾಕ್ ತಾಣವನ್ನು ‌ಜನರು, ಅದರಲ್ಲೂ ಹೆಚ್ಚಿನ ಹುಡುಗಿಯರು ಅಶ್ಲೀಲ ಪ್ರದರ್ಶನಕ್ಕಾಗಿ ಬಳಸುತ್ತಿದ್ದಾರೆ ಎಂಬುವುದಾಗಿ ಕೆಲವರು ಕೋರ್ಟ್ ಮೆಟ್ಟಿಲೇರಿದ್ದರು. ಈ ಹಿನ್ನಲೆಯಲ್ಲಿ ಮದ್ರಾಸ್ ಹೈಕೋರ್ಟ್ ಸ್ಪಷ್ಟ ನಿಲುವು ಕೈಗೊಂಡರೂ ನಂತರ ಅದನ್ನು ಹಿಂಪಡೆಯಲಾಯಿತು. ಹೀಗೇ ಒಂದು ಜಾಲತಾಣದಿಂದಾಗಿ ಲಜ್ಜಾಹೀನ ಸಂಸ್ಕೃತಿಯೊಂದು ಮರುಹುಟ್ಟು ಪಡೆದಂತಾಗಿದೆ. ಈ ವಿಚಾರವಾಗಿ ಎಲ್ಲರನ್ನೂ ದೂಷಿಸುವಂತಿಲ್ಲ. ಒಂದು ನಿರ್ದಿಷ್ಟ ಪ್ರಮಾಣದ ಯುವ ಪೀಳಿಗೆಯೊಂದು ಜನನ ಮರಣವೆನ್ನದೆ ಟಿಕ್ ಟಾಕ್ ಅನ್ನುವ ಸ್ಥಿತಿಗೆ ತಲುಪಿದೆ. ಮಾನಸಿಕವಾಗಿ ಟಿಕ್ ಟಾಕ್ ಮೋಡಿಗೆ ಜನರು ಆಕರ್ಷಿತರಾಗಿ ಕೊನೆಗೆ ತಮ್ಮ ಶಿಕ್ಷಣ, ವೃತ್ತಿಯಲ್ಲಿನ ಜವಾಬ್ದಾರಿಯನ್ನು ಮರೆತು ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಹೋಗುತ್ತಿದ್ದಾರೆ.

ಆದರೆ ಇಂದು ನಮ್ಮ ಮುಸ್ಲಿಂ ಸಮಾಜದ ಹುಡುಗಿಯರು ಈ ಅಪ್ಲಿಕೇಶನ್ ಬಳಸಿ ತಮ್ಮ ನಗ್ನತೆಯನ್ನು ಪ್ರದರ್ಶಿಸುತ್ತಿರುವುದು ಬಹಳ ಖೇದಕರವೂ,ಪೋಷಕರು ಗಮನಿಸಬೇಕಾಗ ಗೌರವವಿರುವ ವಿಷಯ.

ಎಲ್ಲಿ ನೋಡಿದರೂ ನಮ್ಮ ಹದಿಹರೆಯದ ಹುಡುಗಿಯರು ಸೇರಿ ಪ್ರತ್ಯಕ್ಷ ವ್ಯಭಿಚಾರಕ್ಕೆ ಒತ್ತು ನೀಡುವಂತಹ, ಪಡ್ಡೆ ಹುಡುಗರ ಕಾಮ ಕೆರಳಿಸುವಂತಹ ವೀಡಿಯೋಗಳನ್ನು ಹರಿಯ ಬಿಡುತ್ತಿದ್ದಾರೆ.ನಮ್ಮ ಮನೆಯಲ್ಲೇ ಕುಳಿತು ನಮ್ಮ ಹೆಣ್ಮಕ್ಕಳು ಈ ರೀತಿ ಪಂಚೇದ್ರಿಯಗಳ ವ್ಯಭಿಚಾರಕ್ಕೆ ಅನುವು ಮಾಡಿಕೊಡುವುದಾದರೆ ಕೊನೆಗೊಮ್ಮೆ ಅನಾಹುತವು ನಮ್ಮ ಮನೆ ಬಾಗಿಲಿಗೆ ಬಂದೆರಗುತ್ತದೆ ಖಂಡಿತ.

ಮುಸ್ಲಿಂ ಹೆಣ್ಮಕ್ಕಳು ಕಲಿಯುವ ಕಾಲೇಜುಗಳು,ವಸತಿ ಶಾಲೆಗಳಲ್ಲಿ ವಾಸ ಮಾಡಲು ಅನುಮತಿ ನೀಡುವ ತಂದೆ ತಾಯಿಯರು,ತಮ್ಮ ಮಕ್ಕಳ ಮೇಲೆ ಧಾರ್ಮಿಕ ಚೌಕಟ್ಟಿನ ಆಧಾರದಲ್ಲಿ ನಿಗಾ ವಹಿಸುದಾದರೆ ಮಾತ್ರ ಭವಿಷ್ಯದಲ್ಲಿ ಉಂಟಾಗುವ ಮಾನ ಹಾನಿಯನ್ನು ಇಲ್ಲವಾಗಿಸಬಹುದು. ಶಾಪಿಂಗ್ ಮಾಲ್ ಗಳಿಗೊಮ್ಮೆ ಭೇಟಿ ಕೊಟ್ಟು ನೋಡಿ. ನಮ್ಮ ಮನೆಯಲ್ಲಿ ಸಾಂಪ್ರದಾಯಿಕ ಬುರ್ಖಾ ಧರಿಸಿ ಓಡಾಡುತ್ತಿದ್ದ ಮಕ್ಕಳು ಕಾಲೇಜ್ ಹಾಸ್ಟೆಲ್ ಸೇರಿದಂದಿನಿಂದ ಫ್ಯಾಷನ್ ಬುರ್ಖಾದೆಡೆಗೆ ಸಾಗುತ್ತಾರೆ.ಅದರಲ್ಲೂ ದೇಹಾಂಗಗಳ ಸ್ಪಷ್ಟ ಪ್ರದರ್ಶನ..!
ನಿಜಕ್ಕೂ ಅಸಹನೀಯ…ಖೇದಕರ..ನಾವಿದೆಲ್ಲವನ್ನು ಕಂಡೂ ಕಾಣದಂತೆ ನಟಿಸುತ್ತಿದ್ದೇವೆ…ಈ ಕಾರಣದಿಂದಲೇ ಬುರ್ಖಾ ಅನ್ನೋದು ಇತ್ತೀಚೆಗೆ ವಿವಾದದ ಕೇಂದ್ರ ಬಿಂದು ಎನಿಸಿರುವುದು. ಬುರ್ಖಾವನ್ನು ನಮ್ಮ ಹೆಣ್ಮಕ್ಕಳು ದುರುಪಯೋಗ ಮಾಡುವುದರಿಂದ ಅದು ತಾನಾಗಿಯೇ ಸಮಾಜದಲ್ಲಿ ಇತರರ ಕೆಂಗಣ್ಣಿಗೆ ಗುರಿಯಾಗಿಸುತ್ತದೆ.

ಇದನ್ನು ಇಲ್ಲಿ ಹೇಳುವಾಗ “ನರಕದಿ ನಾ ಕಂಡಿರೋದು ಅತಿ ಹೆಚ್ಚು ಸ್ತ್ರೀಯರನ್ನಾಗಿದೆ” ಎಂಬ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಮಾತು ನೆನಪಾಗುತ್ತಿದೆ..

ಲೌಕಿಕ ಶಿಕ್ಷಣ ನೀಡುವ ವಿಚಾರದಲ್ಲಿ ಹೇಳುವುದಾದರೆ ಧಾರ್ಮಿಕತೆಯ ಬಗ್ಗೆ ಅರಿವಿಲ್ಲದ, ಅಂತರಂಗ ಬಹಿರಂಗ ಶುದ್ದಿಯಿಲ್ಲದ ಹೆಣ್ಮಕ್ಕಳು ಲೌಕಿಕ ಶಿಕ್ಷಣ ಪಡೆಯೋದ್ರಿಂದ ದುನಿಯಾದಲ್ಲಿ ಸಂಪಾದಿಸಬಹುದು, ಕೀರ್ತಿ ಗಳಿಸಬಹುದೇ ವಿನಃ ಪರಲೋಕದಲ್ಲಿ ಅಲ್ಲಾಹನ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಅದರಲ್ಲೂ ಹೆಚ್ಚಿನವರು ನಗರಗಳಲ್ಲಿ ಖಾಸಗಿ ಬದುಕು ಕಟ್ಟಿಕೊಂಡವರು. ಅವರಿಗೆ ಪ್ರಭಾಷಣ,ಧಾರ್ಮಿಕ ತರಗತಿ ತರಬೇತಿಗಳು ಇಂತಹುದೇನೂ ಅರಿವಿಗೆ ಬರುವುದಿಲ್ಲ‌.. ಬರೀ ಬೀಚ್,ಶಾಪಿಂಗ್ ಮಾಲ್ ಗಳು,ವರ್ಣ ರಂಜಿತ ಸಂಗೀತ ರಸಮಂಜರಿ ವೇದಿಕೆಗಳು ಇವೆಲ್ಲವುದಕ್ಕಿಂತಲೂ ಆಕರ್ಷಕವಾಗಿರುತ್ತೆ. ಈ ಬಗ್ಗೆ ಟೀಕಿಸುವುದಲ್ಲದೆ ಅವರನ್ನು ಸರಿದಾರಿಗೆ ತರುವ ಪ್ರಯತ್ನ ಯಾವ ಸಂಘಟನೆಗಳಿಂದಲೂ ಆಗುತ್ತಿಲ್ಲ. ಬುರ್ಖಾ ಹಾಕಿ ಸಿನೆಮಾ ಥಿಯೇಟರ್ ಪ್ರವೇಶಿಸುವ ಅದೆಷ್ಟೋ ಮುಸ್ಲಿಂ ಸ್ತ್ರೀಯರು ನಮ್ಮ ಮಂಗಳೂರಿನಲ್ಲೇ ಇದ್ದಾರೆ. ಟಿಕ್ ಟಾಕ್ ,ಮ್ಯೂಸಿಕಲಿ ಆಪ್ಗಳಲ್ಲಿ ಅನ್ಯರೊಂದಿಗೆ ಸಲುಗೆ ಬೆಳೆಸಿ ಸಲ್ಲಾಪವಾಡಿ ಸಿಕ್ಕಿ ಬಿದ್ದ ಸಾವಿರಾರು ಘಟನೆಗಳು ಹಳೆಯದಾಗಿವೆ. ಅದರಲ್ಲೂ ಕೇರಳೀಯ ಮತ್ತು ಮಂಗಳೂರು ಬ್ಯಾರಿಗಳ ಹೆಣ್ಮಕ್ಕಳ ನಡುವೆ ಪೈಪೋಟಿ ನಡೆಯುತ್ತೆ. ಮಂಗಳೂರು ನಗರದೆಲ್ಲಡೆ ಇರುವ ಶಾಲಾ ಕಾಲೇಜುಗಳ ಆವರಣಕ್ಕೊಮ್ಮೆ ಇಣುಕಿ ನೋಡಿ. ನಮ್ಮ ಸಮುದಾಯದ ಹೆಣ್ಮಕ್ಕಳ ದುಸ್ಥಿತಿ ಅರಿವಾಗಬಹುದು. ಅಂದ ಮಾತ್ರಕ್ಕೆ ಇದು ಬರಿ ನಗರದಲ್ಲಿ ಮಾತ್ರ ನಡೆಯೋದು ಅಂತಿಲ್ಲ. ಗ್ರಾಮಾಂತರ ಪ್ರದೇಶಗಳಲ್ಲೂ ಈ ಬಗ್ಗೆ ಅದೆಷ್ಟೋ ದೂರುಗಳಿವೆ. ಟಿಕ್ ಟಾಕ್ ತೆರೆದರೆ ಹೆಚ್ಚಿಗೆ ಸ್ಕಾರ್ಪ್ ಹಾಕಿದ ಹೆಣ್ಮಕ್ಕಳು ಕಾಣುವಾಗ ಬಹಳ ಬೇಸರವೆನಿಸುತ್ತದೆ.
ಕೊನೆಗೊಂದು ಮಾತು ಈ ವಿಚಾರಗಳು ಬರೀ ಸೂಚನೆಗಳು ಮಾತ್ರ. ಮುಂದೊಂದು ದಿನ ನಮ್ಮ ಮಕ್ಕಳನ್ನು ನಮ್ಮ ಹತೋಟಿಯಲ್ಲಿಡಲು ಸಾಧ್ಯವಾಗದೆ, ಪರಿಸ್ಠಿತಿ ಕೈ ಬಿಟ್ಟು ಹೋಗುವಾಗ ನಮಗದರ ಅರಿವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ತಂದೆ ತಾಯಿಯರ ಸಮ್ಮತಿಯಿಂದಲೇ ಹಲವು ಪ್ರಣಯ ವಿವಾಹಗಳು ನೆರವೇರುತ್ತವೆ. ಅದು ಖಂಡಿತ ಬರಕತ್ತಿಲ್ಲದ ಕುಟುಂಬವನ್ನು ಸೃಷ್ಟಿ ಮಾಡುತ್ತದೆ.

ಪ್ರೇಮ ವಿವಾಹಕ್ಕೆ ಅವಕಾಶ ಎಂದಿಗೂ ಇಸ್ಲಾಂ ನೀಡಿಲ್ಲ. ವಿವಾಹವಾಗು ,ನಂತರ ಜೀವಕ್ಕಿಂತಲೂ ಒಡತಿಯನ್ನು ಪ್ರೀತಿಸು.ಅದರಲ್ಲಿ ಅಲ್ಲಾಹನ ಪ್ರೀತಿಯಿದೆ‌‌, ಅನುಗ್ರಹ ವಿದೆ. ಇದೆಲ್ಲರೂ ಅರಿತಿರಬೇಕು. ಕಾಲಾತೀತವಾಗಿ ನಾವು ಮನದಟ್ಟು ಮಾಡಬೇಕಾದ ವಿಚಾರಗಳಾಗಿವೆ ಇದು. ನಾವು ಮುಸ್ಲಿಮರಾಗಿರೋದೆ ಬಹು ದೊಡ್ಡ ಅನುಗ್ರಹವಾಗಿದೆ. ಆ ನಂತರ ಅದಕ್ಕಾಗಿ ಸ್ತುತಿಸಿ ಜೀವನ ನಡೆಸುವುದಲ್ಲದೆ ಹೀಗೇ ಸಮಯವನ್ನು ಪೋಲು ಮಾಡುವುದು ಧರ್ಮದೊಂದಿಗೆ ಮಾಡುವ ಬಹುದೊಡ್ದ ಅಪರಾಧ. ಮಗಳು ಐಟಿ ,ಬಿಟಿ, ನರ್ಸಿಂಗ್ ಕಲಿಯುತ್ತಾಳೆಂದು ದೂರದೂರಿಗೆ ಅಟ್ಟಿ ಬಿಡುವ ಪೋಷಕರೇ ಗಮನಿಸಿ ಇನ್ನಾದರೂ ಜಾಗೃತೆ ವಹಿಸಿ ಮುಂದುವರೆಯಿರಿ..
ಲೌಕಿಕ ಶಿಕ್ಷಣ ವೆನ್ನುವುದು ಅಲ್ಲಾಹನ ಸ್ವರ್ಗಕ್ಕೆ ತಲುಪಲು ಕಡ್ಡಾಯವೇನಲ್ಲ. ಆದರೆ ದೀನೀ ಜ್ಞಾನ ಕಡ್ಡಾಯ. ಅದಿಲ್ಲದಿದ್ದರೆ ನರ್ಸಿಂಗ್ ಪ್ರಮಾಣಪತ್ರ ಖಬರಿನಲ್ಲೂ ನಾಳೆ ಮಹ್ಶರಾದಲ್ಲೂ ಉಪಕಾರಪ್ರದವಲ್ಲ. ಚಿಂತಿಸಿರಿ .ಚಿಂತಿಸುವವರಾಗಿದ್ದರೆ, ಚಿಂತಿಸುವ ಮನ ನಿಮ್ಮಲ್ಲಿದ್ದರೆ..ನೀವು ಉತ್ತಮ ಪೋಷಕರಾಗಿದ್ದರೆ..ಉತ್ತಮ ಗುಣನಡತೆ ಹೊಂದಿರುವ ಮಕ್ಕಳಾಗಿದ್ದರೆ…

ಆಧುನಿಕತೆಯು ನಮ್ಮನ್ನು ಸೆಳೆಯುತ್ತಲೇ ಇರುತ್ತವೆ. ದಿನಕಳೆದಂತೆ ಹೊಸ ಅಪ್ಲಿಕೇಶನ್ ಗಳು ಮತ್ತು ಅದರ ಪರಿಷ್ಕೃತ ಆವೃತ್ತಿಗಳನ್ನು ಮಾರುಕಟ್ಟೆಗೆ ಬಿಡುತ್ತಲೇ ಇರುತ್ತವೆ. ಆದರೆ ಧರ್ಮ ಮಾತ್ರ ಆಧುನಿಕತೆಯೊಂದಿಗೆ ಎಂದಿಗೂ ಹೆಜ್ಜೆ ಹಾಕಲ್ಲ. ಧಾರ್ಮಿಕ ಸಿದ್ದಾಂತಗಳಲ್ಲಿ ಎಂದಿಗೂ ಕಿಂಚಿತ್ತು ಬದಲಾವಣೆಯಾಗಲ್ಲ.ನಾವು ಎಚ್ಚೆತ್ತುಕೊಂಡು ಅವುಗಳನ್ನು ಅಳವಡಿಸಿ, ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಉತ್ತಮ ಸಮುದಾಯದಲ್ಲಿ ಸೇರಬೇಕಿದೆ.ಸೃಷ್ಟಿಕರ್ತನು ಅನುಗ್ರಹಿಸಲಿ ಆಮೀನ್..

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಂದಿನಿಂದ 'ಸಮಸ್ತ'ದ ಆನ್ ಲೈನ್ ತರಗತಿಗಳು ಆರಂಭ

ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಒಕ್ಕೂಟದ (SKJU)ಅಧೀನದಲ್ಲಿ‌ ಕಾರ್ಯಾಚರಿಸುವ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್‌ ಅಂಗೀಕೃತ ಮದ್ರಸಗಳ ವಿದ್ಯಾರ್ಥಿಗಳಿಗೆ ನವ ಅಧ್ಯಯನ ವರ್ಷ ಇಂದಿನಿಂದ ಆರಂಭಗೊಂಡಿದೆ. ವಿಶೇಷ ಅಂದ್ರೆ, ಈ ಬಾರಿ ತರಗತಿಗಳ ಪ್ರಾರಂಭೋತ್ಸವದ ಸಂಭ್ರಮಗಳಿಲ್ಲದೆ, ಮದ್ರಸಾ ಕಟ್ಟಡಗಳು ತೆರೆಯದೇ, ಹತ್ತು ಸಾವಿರಕ್ಕೂ ಮಿಕ್ಕ ಮದ್ರಸಗಳ ಹನ್ನೆರಡು ಲಕ್ಷ ವಿದ್ಯಾರ್ಥಿಗಳು ಅವರವರ ಮನೆಗಳಲ್ಲಿಯೇ ಕುಳಿತು ತರಗತಿಗಳಲ್ಲಿ ಪಾಲ್ಗೊಳ್ಳುತ್ತಿರುವುದು ಎಂಬುದು.  ಆನ್ ಲೈನ್ ತರಗತಿಗಳಿಗಾಗಿ, ಸಮಸ್ತ ಈ ಹಿಂದೆಯೇ ಎಲ್ಲಾ ಸಿದ್ಧತೆಗಳನ್ನು ನಡೆಸಿದ್ದು, ವಿದ್ಯಾಭ್ಯಾಸ ಬೋರ್ಡ್‌ ಅದಕ್ಕಾಗಿ ಆರು ಕ್ಯಾಮರಾ ಯುನಿಟ್ ಗಳ ಕ್ಲಾಸ್ ರೂಂಗಳು ,22 ಪರಿಣತರಾದ ಅಧ್ಯಾಪಕರನ್ನು ನೇಮಕಗೊಳಿಸಿದೆ.  ತರಗತಿ ಆರಂಭದಿಂದ ಕೊನೆಯವರೆಗೂ ವಿದ್ಯಾರ್ಥಿ ಜೊತೆ ಪೋಷಕರು ಕುಳಿತಿರಬೇಕು.ಹೋಂ ವರ್ಕ್ ನೀಡಿದರೆ, ಅದನ್ನು ಮಾಡಿ, ಮುಂದೆ ಮದ್ರಸಗಳಲ್ಲಿ ತರಗತಿ ಆರಂಭಗೊಳ್ಳುವಾಗ ಮೌಲ್ಯಮಾಪನಕ್ಕಾಗಿ ಅಧ್ಯಾಪಕರಿಗೆ ತೋರಿಸಬೇಕು. ಮನೆಯಲ್ಲಿ ತರಗತಿಯ ವಾತಾವರಣವನ್ನು ಒದಗಿಸಿಕೊಟ್ಟು,ವಿದ್ಯಾರ್ಥಿಗಳಿಗೆ ಮನೆಯವರು ಸಹಕರಿಸಬೇಕು. ಅಲ್ಲದೇ, ಮದ್ರಸಾ ಹಾಗೂ ಜಮಾಅತ್ ಕಮಿಟಿಗಳು ಸೇರಿ, ಆನ್‌ಲೈನ್ ತರಗತಿಗಳು ಆಯಾ ಮದ್ರಸಗಳ ವಿದ್ಯಾರ್ಥಿಗಳಿಗೆ ಅವರವರ ಮನೆಗಳಲ್ಲಿಯೇ ಸುಲಭವಾಗಿ ತಲುಪುವಂತೆ ಎಲ್ಲಾ ರೀತಿಯಲ್ಲಿ ಸಹಕಾರವನ್ನು ನೀಡಬೇಕು. ಮದ್ರಸಗಳು ತ...

ಅರಬಿ ಭಾಷೆ : ಇತಿಹಾಸ ಮತ್ತು ವರ್ತಮಾನ

✒ ನಿಝಾಮ್ ಅನ್ಸಾರಿ ಭಾಷೆ ಮನುಷ್ಯನ ಸವಿಶೇಷತೆಗಳಲ್ಲೊಂದು. ಚಿಂತನೆಗಳು ಮತ್ತು ಅಭಿರುಚಿಗಳ ಆಶಯವನ್ನು ಅಭಿವ್ಯಕ್ತಿಗೊಳಿಸುವ ಅಥವಾ ಹೊರ ಹಾಕುವ ಶಬ್ದಗಳ ಒಂದು ಸಮೂಹವಾಗಿದೆ ಇದು. ಪ್ರಪಂಚದಲ್ಲಿ ಇಂದು ಹಲವು ಅಧಿಕೃತವಾಗಿರುವ ಭಾಷೆಗಳು ಅಸ್ತಿತ್ವದಲ್ಲಿವೆ.ಅದರಲ್ಲೂ ಪ್ರಾದೇಶಿಕ ಭಾಷೆಗಳು ಬೇರೇನೆ. ಆದರೆ ಈ ಎಲ್ಲಾ ಭಾಷೆಗಳ ಪೈಕಿ ರಾಜನಂತೆ ಇರೋದು ಅರಬಿ ಭಾಷೆ ಮಾತ್ರ . ಒಂದು ಕಾಲದಲ್ಲಿ ಇಡೀ ಜಗತ್ತನ್ನೇ ನಿಯಂತ್ರಿಸುವ ತಾಕತ್ತಿದ್ದ ಭಾಷೆಯಾಗಿತ್ತು ಅರಬಿ. ಯಾವ ರೀತಿಯಲ್ಲಿ ಈಗ ಆಂಗ್ಲ ಭಾಷೆಗೆ ಪ್ರಾಧಾನ್ಯತೆ, ಜಾಗತಿಕ ಅಂಗೀಕಾರ ಇದೆಯೋ ಅದೇ ರೀತಿಯಲ್ಲಿ ಅಂದು ಅರಬಿ ಭಾಷೆ ಸ್ಥಾನ ಪಡೆದಿತ್ತು. ಬಲದಿಂದ ಎಡಕ್ಕೆ ಇರುವ ಕೆಲವೊಂದು ಭಾಷೆಗಳಲ್ಲಿ ಅರಬೀ ಕೂಡಾ ಒಂದು. ಸೈಮಟಿಕ್ ಭಾಷೆಗಳಲ್ಲೊಂದಾದ ಅರಬಿ ಜಗತ್ತಿನ ಅತ್ಯಂತ ಪುರಾತನ ಭಾಷೆಗಳ ಪೈಕಿ ಒಂದು ಕೂಡಾ . ಐಕ್ಯ ರಾಷ್ಟ್ರ ಸಂಘದ ಅಂಗೀಕೃತ ಭಾಷೆಯಾದ ಅರಬಿ, 26 ದೇಶಗಳ ಅಧಿಕೃತ ಭಾಷೆಯಾಗಿದೆ‌. ಆಫ್ರಿಕನ್ ಯೂನಿಯನ್ ಆರ್ಗನೈಸೇಷನ್ ಇಸ್ಲಾಮಿಕ್ ಕಾನ್ಫೆರನ್ಸ್ ನಂತಹ ಹಲವು ಅಂತಾರಾಷ್ಟ್ರೀಯ ಸಂಸ್ಥೆಗಳು ಅರಬಿ ಭಾಷೆಯನ್ನು ಅಧಿಕೃತ ಭಾಷೆಯಾಗಿ ಅಂಗೀಕರಿಸಿದೆ. ಅರಬಿ ಭಾಷೆ: ಹುಟ್ಟು ಮತ್ತು ಬೆಳವಣಿಗೆ ಬಿ.ಸಿ 1900 ರಲ್ಲಿ ಜೀವಿಸಿದ್ದ 'ಯಅರೂಬ್ ಇಬ್ನ್ ಖಹ್ತಾನ್' ಎಂಬವರನ್ನು ಅರಬಿ ಭಾಷೆಯ ಪಿತಾಮಹ ಎಂದು ಕರೆಯಲಾಗುತ್ತದೆ. ಇವರ ನಾಮಕ್ಕೆ ಹೊಂದಿಕೊಂಡು 'ಅರಬಿ' ಎಂಬ ಹೆಸರು...

Payyakki Usthad Islamic Academy -Ansariya College of Islamic Science10th Anniversary & Convocation Program-#Photo Gallery......