ವಿಷಯಕ್ಕೆ ಹೋಗಿ

ಕವನ- ಮನದಾಳದ ಮರ್ಹೂಮ್ ಪಯ್ಯಕ್ಕಿ ಉಸ್ತಾದ್

ಉಷಾಕಿರಣ ಬೀರಿ ಊರ ಬೆಳಗಿಹ
ಜ್ಞಾನದೈಸಿರಿಯು
ದಶಮಾನಗಳಂಚಿಗೂ ದಿಟ್ಟೆದೆಯಿಂದ
ಭೋಧನಾನಿರತ ಆ ಹರಿವ-
ಅರಿವಿನ ಪ್ರವಾಹವು ದರಹಾಸವ ಚೆಲ್ಲಿ
ಇಹದಾಚೆಗೆ ಪಯಣವಿತ್ತ ಪರಾರ್ಧ್ಯ ಪಾರಂಗತರು
ಅವರು #ಪಯ್ಯಕ್ಕಿಉಸ್ತಾದ್..!!



ಓ ಭುವಿಯೇ...ಬಿಚ್ಚಿಡು ನೀ
ನಿನ್ನೊಡಲಲಿ ಬಚ್ಚಿಟ್ಟ
ಜ್ಞಾನ ಸರಣಿಯ ಅಭಿಜ್ಞರ ಅನುಬಂಧವ...
ಅದೇಗೆ ಸಾಧಿಸಿತೆಂದೇ ಅಚ್ಚರಿಯು ಎನಗೆ..!
ಅನುಪಮ ದಶಕಗಳಸವೆಸಿದ ಆ
ಕನತ್ ಚಿಲುಮೆಯ ಸಾಗರವ
ಆರಡಿಯೊಳಗೆ ತುಂಬಲು ನಿನಗೆ..!
ಪೃಥ್ವಿಯೇ ನಿಜಕ್ಕೂ ಭಾಗ್ಯಶಾಲಿ ನೀ
ನಿನ್ನೆದೆಯ ಅಪ್ಪಿ ಚಿರನಿದ್ರೆಗೆ ಜಾರಿದ
ಜಲಜಲಿಸುವ ಆ ವಿದ್ವತ್ ಕನಿ..!

ಇಳೆಯ ರೋಧನವು
ಮುಗಿಲು ಮುಟ್ಟಿದಾಕ್ಷಣ..
ವರ್ಷಿತ ಗಗನದಿಂದ ಅಶ್ರುಧಾರೆಯಂತೆ
ತಣ್ಬನಿಗಳು ಜಾರಿ
ಮೆಲ್ಲಗೆ ಭುವಿಯ ಸೇರಲು...
ವಿರಹವ ತಾಳಲಾರದೆ
ಶೋಕದಿ ಮರುಗಿದ
ಮನುಕುಲದ ಮನವು
ಮೆಲ್ಲನೆ ಮಂತ್ರಿಸಿತು
ಅವರಿನ್ನೂ ಬದುಕಿರುತ್ತಿದ್ದರೆ..?!!

ಕಂಬನಿ ಮಿಡಿದ ಹೃದಯಗಳೆಷ್ಟು ಕೇಳು
ಆ ಪರಂಜ್ಯೋತಿಯ ಕಣ್ಣಾರೆ ದರ್ಶಿಸಲು
ಹಾತೊರೆಯುತಿಹ ಮನದಾಳಗಳದೆಷ್ಟು...!
ಚಿನುಮಯ ಸಾಮ್ರಾಜ್ಯವ ಕಟ್ಟಿ
ಜ್ಞಾನದ ತುತ್ತತುದಿ ಏರಿದ ಪುಂಗವರ
ಸ್ಮರಣೆಯ ಮೆಲುಕು ಹಾಕುವರೆಷ್ಟು.....!!
ನಡೆದರು ನೋಟದಲಿ
ಕಣ್ಣಳತೆಯಿಟ್ಟು ..
ಕಣ್ದೊಳಲು ಸಾಗಿಲ್ಲ ಅವರ ಬಿಟ್ಟು..
ಇತಿಹಾಸ ಬರೆದಿತು
ಆರವವಿಲ್ಲ-ಆ ಜೀವನವನು ಕಂಡು
ಇನ್ಯಾರು ಹೋಲುವರು
ಈ ನಿಸ್ತುಲ ದ್ಯುತಿಗೆ ಸಮಾನರು..!?!
ಆಧ್ಯಾತ್ಮಿಕ ಪಥದ ಮಾರ್ಗದರ್ಶಕ
ನನ್ನ ಮನದಾಳದ ಮರ್ಹೂಮ್
ಅವರಿಗೆ ಅವರೇ ಸಾಟಿ...!!

-ನಿಝಾಮ್ ಅನ್ಸಾರಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಂಝಾನ್ ನೀಡುವ ಒಳಿತಿನ ಸಂದೇಶ...

-ನಿಝಾಮ್ ಅನ್ಸಾರಿ ಮತ್ತೆ ರಂಝಾನ್ ತಿಂಗಳ ಆಗಮನವಾಗಿದೆ. ಪ್ರತಿ ವರ್ಷವೂ ರಂಝಾನ್ ಬಗ್ಗೆ ಬರೆಯುವಾಗ ಅದರ ಶ್ರೇಷ್ಟತೆ, ವ್ರತಾನುಷ್ಟಾನದ ಪ್ರಾಧಾನ್ಯತೆಯನ್ನೇ ಹೆಚ್ಚಿನವರೂ ಬರೆಯುತ್ತಾರೆ. ಅದನ್ನೇ ಮಸೀದಿಗಳಲ್ಲೂ ಹೇಳುವುದಿದೆ. ಒಳ್ಳೆಯದೇ. ಕಾರಣ ಆಧುನಿಕ ಜನರು ಧರ್ಮದ ಪ್ರತಿಯೊಂದು ವಿಷಯಗಳಲ್ಲೂ ಸಡಿಲಿಕೆ ಬಯಸುತ್ತಾರೆ. ಅಂದರೆ ಅವರವರ ಜೀವನಕ್ರಮಗಳಿಗನುಸಾರವಾಗಿ ಧರ್ಮದ ನಿಯಮಗಳನ್ನು ಗಾಳಿಗೆ ತೂರುವಂತಹ ಕಾರ್ಯಗಳು ಎಲ್ಲಾ ಕಡೆ ನಡೆಯುತ್ತಲಿದೆ. ಹಾಗಿರುವಾಗ ರಂಝಾನ್ ವ್ರತಾಚರಣೆಯ ಮಹತ್ವವನ್ನು ಪ್ರತಿ ಬಾರಿಯೂ ಪ್ರಭಾಷಣ ವೇದಿಕೆಗಳಲ್ಲಿ, ಮಸೀದಿಗಳಲ್ಲಿ ಜನ ಸಾಮಾನ್ಯರಿಗೆ ನೆನಪಿಸುತ್ತಲಿರುವುದು ಸ್ವಾಗತಾರ್ಹವಾದುದು. ಮತ್ತು ಪ್ರಯೋಜನಕಾರಿಯೂ ಕೂಡಾ. ಯಾಕೆ ಈ ರೀತಿ ಬರೆದೆ ಅಂತ ಕೇಳಿದರೆ, ಇತ್ತೀಚೆಗೆ ವಾಟ್ಸಾಪ್ ನೊಳಗೆ ಕಣ್ಣಾಡಿಸಿದಾಗ ಕಂಡ ಕೆಲವೊಂದು ಸಂದೇಶಗಳು ಧರ್ಮದ ಬಗ್ಗೆ ಕೀಳರಿಮೆಯ ಭಾವ ತೋರುವವರಿಗೆ ತಕ್ಕ ಉತ್ತರ ನೀಡುವಂತಿತ್ತು. ಬಡ ಕುಟುಂಬಕ್ಕೆ ಮನೆ ಕಟ್ಟುವ ಸಹಾಯಾರ್ಥ ಕಲೆಕ್ಷನ್, ರಂಝಾನ್ ನಂತರದ ಬಡ ಹೆಣ್ಮಕ್ಕಳ ಮದುವೆಗಾಗಿ, ಮುಅಲ್ಲಿಂಗಳಿಗಾಗಿ ಹೀಗೇ ಹಲವು ರೀತಿಯಲ್ಲಿ ಯುವ-ವಯಸ್ಕರು ಸೇರಿ ಸಮುದಾಯದೊಂದಿಗಿನ ಸಾಮಾಜಿಕ ಕಾಳಜಿಗಾಗಿ ರಂಝಾನ್ ಅನ್ನು ಉಪಯೋಗಿಸುತ್ತಿದ್ದಾರೆನ್ನುವಾಗ ಧರ್ಮದ ಮನದಲ್ಲಿ ಅಭಿಮಾನ ಮೂಡುತ್ತಿದೆ. ಬುರ್ಖಾದ ವಿಚಾರದಲ್ಲಿ ಬಲತ್ಕಾರ ಮಾಡಲಾಗುತ್ತದೆ ಎಂದು ಆರೋಪಿಸುತ್ತಿರುವಾಗ, ಆ ವಾದವನ್ನು ವಿರ...

ನಾನುಗೌರಿ ವೆಬ್ ನಲ್ಲಿ ಪ್ರಕಟಗೊಂಡ ಬರಹಗಳು..ಓದಲು ಈ ಲಿಂಕ್ ಉಪಯೋಗಿಸಿ

-ನಿಝಾಮ್ ಅನ್ಸಾರಿ ಭಾರತದ ಉನ್ನತ ಶಿಕ್ಷಣದ ಮಹಾನ್‌ ಆಶಯಕ್ಕೆ ಎಳ್ಳುನೀರು ಬಿಡುತ್ತಿರುವ ಪ್ರಭುತ್ವ… http://naanugauri.com/indian-higher-education-shrinking-down- **************************************************************** ಲಾಕ್‌ಡೌನ್‌: ತುತ್ತು ಅನ್ನಕ್ಕಾಗಿ ಗುಳೆ ಹೊರಟವರ ಕತೆ http://naanugauri.com/lockdown-story-of-labour/ via @Naanu gauri ***************************************************************** ಪೌರತ್ವ ವಸೂಲಿ – ನಾಝಿ ಜರ್ಮನಿಯಿಂದ ಕಲಿಯಬೇಕಾದುದು… http://naanugauri.com/citizen-amendment-act-same-thing-happen-in-german-80-years-back- ****************************************************************** ಪ್ಲೇಗ್ ಹಾಗೂ ಕೋವಿಡ್ 19 ನಡುವೆ ಕೆಲವು ಹೋಲಿಕೆಗಳು http://naanugauri.com/covid-19-and-bubonic-plague-this-lead-to-renaissance/ via @Naanu gauri

ಅಳಿವಿನಂಚಿನಲ್ಲಿರುವ ಸಾಂಪ್ರದಾಯಿಕ ಕೃಷಿ ಪರಂಪರೆ-* ನಿಝಾಮ್ ಅನ್ಸಾರಿ

ಭಾರತವು ಕೃಷಿ ಅವಲಂಬಿತ ಹಳ್ಳಿಗಳನ್ನೊಳಗೊಂಡ ಸಮೃದ್ಧ ದೇಶ. ದೇಶದ ಬೆಳವಣಿಗೆಯಲ್ಲಿ ವ್ಯವಸಾಯದ ಪಾತ್ರ ಬಹುಮುಖ್ಯವಾದುದು. ತಂತ್ರಜ್ಞಾನವು ದೇಶಕ್ಕೆ ಯಾವ ರೀತಿಯಲ್ಲಿ ಕೊಡುಗೆಗಳನ್ನು ನೀಡುತ್ತವೆಯೋ ಅದೇ ರೀತಿಯಲ್ಲಿ ಕೃಷಿಯ ಕೊಡುಗೆಯೂ ಕೂಡಾ ಅಪಾರವಾದುದು. ಆದರೆ ಇತ್ತೀಚಿನ ದಿನಗಳಲ್ಲಿ ಹಳ್ಳಿಗಳಲ್ಲಿ ವ್ಯವಸಾಯವು ಇಳಿಮುಖವಾಗುತ್ತಿದೆ. ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವವರನ್ನು ಕಾಣಬಹುದಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿನ ಜನರು ವಿದ್ಯಾವಂತರಾಗುತ್ತಲೇ ತಮ್ಮ ಪಾರಂಪರಿಕ ಕುಲ ಕಸುಬನ್ನು ನಿರ್ಲಕ್ಷಿಸಿ ನಗರಗಳತ್ತ ವಲಸೆ ಹೋಗುತ್ತಿದ್ದಾರೆ.ಕೈ ಕೆಸರು ಮಾಡಿಕೊಂಡು ದುಡಿಯುವವರ ಕೊರತೆ ಅಗಾಧವಾಗಿ ಎದ್ದು ಕಾಣುತ್ತಿದೆ. ಇಂದಿನ ನವ ತಲೆಮಾರು ಹಳ್ಳಿಗಳು ಕೇವಲ ವೃದ್ಧರಿಗೆ ಮಾತ್ರ ಯೋಗ್ಯವಾದುದು ಎಂದು ತಿಳಿದಂತಿದೆ. `ನೇಗಿಲಾ ಹಿಡಿದಾ ಹೊಲದಲಿ ಹಾಡುತ ಉಳುವಾ ಯೋಗಿಯ ನೋಡಲ್ಲಿ’ ಎಂದು ಕುವೆಂಪುರಂತಹ ಖ್ಯಾತ ಕವಿಗಳಿಂದ ಕೊಂಡಾಡಲ್ಪಟ್ಟ ಕೃಷಿ ಚಟುವಟಿಕೆಗಳಿಂದು ಕಣ್ಮರೆಯಾಗಿದೆ. ನೇಗಿಲಿನಂತಹ ಕೃಷಿ ಸಲಕರಣೆಗಳು ಇಂದು ಮ್ಯೂಸಿಯಂ ಸೇರಿಬಿಟ್ಟಿವೆ. ಇದರೊಂದಿಗೆ ಅತ್ಯಂತ ಸುಂದರವಾದ ಕೃಷಿ ಪರಂಪರೆ ಮೂಲೆಗುಂಪಾಗುತ್ತಿದೆ. ಹಳೆಯ ಕಾಲದ ಸಾಂಪ್ರದಾಯಿಕ ಬೇಸಾಯಕ್ಕೆ ಉಪಯೋಗವಾಗುತ್ತಿದ್ದ ಪರಿಕರಗಳ ಸ್ಥಾನವನ್ನು ಟ್ರಾಕ್ಟರ್,ಟಿಲ್ಲರ್ ಗಳಂತಹ ಯಂತ್ರಗಳು ಆಕ್ರಮಿಸಿಕೊಂಡಿವೆ. ಭತ್ತ ನಾಟಿ ಮಾಡುವ ಮಹಿಳೆಯರಿಂದ ಕೇಳಿ ಬರು...