
ಊರಿಡೀ ವರ್ಗೀಯತೆಯ ಗಬ್ಬುನಾತ ಹರಡುತ್ತಿದೆ.ಸಾಹೋದರ್ಯತೆಯ ಕೊಂಡಿಗಳು ಕಳಚಲ್ಪಡುತ್ತಿದೆ.. *ದಿನಗಳೆದಂತೆ ಮನುಷ್ಯನ ಸ್ವಭಾವ ಗುಣವು ರಾಕ್ಷಸ ಸ್ವರೂಪ ತಾಳುತ್ತಿದೆ*.ಮನುಜನು ಮಾನವೀಯತೆ ತೊರೆದು ಅನ್ಯಾಯವಾಗಿ ಅಮಾಯಕ ಅನ್ಯನ ರಕ್ತ ಹೀರುವಲ್ಲಿ ಆಸಕ್ತಿ ತೋರುತ್ತಿದ್ದಾನೆ.ಹತ್ಯೆಗಳು ಕೊನೆಯಲ್ಲಿ ರಾಜಕೀಯ ಪ್ರೇರಿತವೆಂದು ಬಿಂಬಿಸಲ್ಪಡುತ್ತದೆ.ಹಂತಕನು ರಕ್ತದ ಕಲೆ ಮಾಸುವ ಮುನ್ನ ಜಾಮೀನಿನ ಕದತೆರೆದು ಹೊರನುಸುಳುತ್ತಾನೆ.. ನಂತರ ಆ ಹೆಸರಿನ ಕೆಲವೊಂದು *ಸಾಂಘಿಕ ಚರ್ಚೆಗಳು* ಬಜಾರಿನಲ್ಲಿ ಬಿಸಿಸುದ್ದಿಯಾಗಿರುತ್ತದೆ.ಅದು ಮಾತ್ರ.....
ಯಾಕೀಗಾಯಿತು?
*ಯಾವುದೀ ನರಭಕ್ಷಕತೆಯನ್ನು ಪ್ರೋತ್ಸಾಹಿಸುವ ಕೈಗಳು?*
ಪರಸ್ಪರ ಸಮೈಕ್ಯತೆಯಿಂದ ಕೂಡಿದ್ದ ನಮ್ಮ ಊರನ್ನು ಅನೈಕ್ಯತೆಯ ರಣಾಂಗಣ ಮಾಡಿದೋರ್ಯಾರು?
*ರಕ್ತ ಚಿಮ್ಮಿಸುವ ಕೈಗಳಿಗೆ ಜಾತಿ ಮತ ಪಥ ಪಂಗಡ ಗಳ ನಡುವೆ ತಡೆಗೋಡೆಗಳನ್ನು ಕಟ್ಟಲು ಪ್ರೇರಣೆ ನೀಡುವೋರ್ಯಾರು?*
*ಇದು ಪ್ರಜಾಪ್ರಭುತ್ವ ಭಾರತ.ಹಲವು ಧರ್ಮೀಯರು,ವಂಶಜರು ಆಳಿದ ಪುಣ್ಯ ಮಣ್ಣು.ಇಲ್ಲಿ ಅಕ್ರಮಣಗಳಿಗೆ ಅವಕಾಶವಿಲ್ಲ..ಸ್ವೇಚ್ಚಾರಗಳಿಗೆ ಅನುಮತಿಯಿಲ್ಲ..ಸರ್ವರೂ ಸಮ್ಮಿಲನದ ದ್ಯೋತಕವಾಗಿ ಜೀವಿಸಬೇಕಾದವರು ನಾವು ಭಾರತೀಯ ಪ್ರಜೆಗಳು.*
ಆದರೆ *ಇಂದು ನಡೆಯುತ್ತಿರುವುದೋ?!*
ಸಮಾಜದ ಎಲ್ಲೆಂದರಲ್ಲಿ ಅಡಗಿರುವ ಕೆಲವೊಂದು ಕಾಣದ ವರ್ಗೀಯತೆಯ ಕೈಗಳು ಇಂದು ನಮ್ಮೆಡೆಯಲ್ಲಿ ಅಮಾನುಷಿಕ ಕೃತ್ಯಗಳನ್ನೆಸಗಿ ಪರಾರಿಯಾಗುತ್ತಿದೆ.....
ಮನುಷ್ಯನೇಕೆ ಹೀಗಾದ..? *ಅತಿ ದಾರುಣವಾಗಿ ಪದೇ ಪದೇ ತನ್ನಲ್ಲಿರುವ ಮೃಗೀಯತೆಯನ್ನು ಹೊರಜಗತ್ತಿಗೆ ಅನಾವರಣಗೊಳಿಸುತ್ತಿದ್ದಾನೆ.*
*ಇಂದು ನಮ್ಮಿಂದ ಅಗಲಿದ ಪ್ರಿಯ ಸಹೋದರ ಅಶ್ರಫ್ ಸಮಾಜದ ಪ್ರಗತಿ ಕಂಠಕ ಶಕ್ತಿಗಳ ನೆತ್ತರಾರ್ಭಟಕ್ಕೆ ಬಲಿಯಾಗಿದ್ದಾರೆ..ಅಲ್ಲಾಹನು ಈ ಪಾವನ ತಿಂಗಳ ಪಾವಿತ್ರ್ಯತೆಯ ದಿನರಾತ್ರಿಗಳ ಶ್ರೇಷ್ಠತೆಯಿಂದ ಅವರಿಗೆ ಮಗ್ಫ಼ಿರತ್ ಕರುಣಿಸಲಿ ಆಮೀನ್....*
*ಮರುಕಳಿಸದಿರಲಿ ಈ ನೋವು.....*
ಮುಸ್ಲಿಮ್ ಸಮುದಾಯವಿಂದು ದುಖದ ಕಡಲಲ್ಲಿದೆ.ಅನೇಕ ಹತ್ಯೆಗಳಿಗೆ ಬಲಿಪಶುಗಳಾದ ಹಲವಾರು ಸಹೋದರರ ವಿರಹದ ವಿಶಾದವು ಎಲ್ಲರಲ್ಲೂ ಮನೆಮಾಡಿದೆ.ಅಂತೆಯೇ ಅಲ್ಲಲ್ಲಿ ನಡೆಯುತ್ತಿರುವ ಹಲ್ಲೆ,ಹೊಡಿದಾಟ ಬಡಿದಾಟಗಳು ಸಮಾಜದ ಸ್ವಾಸ್ಥ್ಯ ದಹನಮಾಡುವ ಹಂತಕ್ಕೆ ತಲುಪಿದೆ.ಕ್ಷುಲ್ಲಕತೆಯ ಹೆಸರಿನಲ್ಲಿ ಶಾಂತಿ ಕದಡುವ ಶ್ರಮವು ಬಹುತೇಕ ಕಲ್ಲಡ್ಕದಿಂದ ಕರ್ನಾಟಕದುದ್ದಕ್ಕೂ ಪಸರಿಸುವ ಯತ್ನಗಳು ನಡೆಯುತ್ತಿವೆ. *ಹೊತ್ತಿ ಉರಿಯುವ ಬೆಂಕಿಗೆ ತುಪ್ಪಸುರಿಯುವ ಕೆಲವರ ಹೇಳಿಕೆಗಳು ಇಂದು ಕೋಮುವಾದಿಗಳ ಉದ್ದೇಶಗಳಿಗೆ ತಣ್ಣೀರೆರೆಚಿದಂತಿದೆ.*.ಅನ್ಯರ ರಕ್ತ ಹಿಂಡುವ ಹಿಂಸಾಚಾರ ಗಳಿಗೆ ಎಡೆಮಾಡುತ್ತಿದೆ.
ಮಾನವೀಯತೆಯ ಸಮುದ್ದಾರಕರಾಗಬೇಕಾದ ನಾವು ಮಾನವತೆಯ ಅಳಿವಿಗಾಗಿ ಪಣತೊಟ್ಟರೆ?!
*ವಿಚಿತ್ರ್ ಲೋಕವಯ್ಯಾ ಇದು.......*
*ಅಧಿಕಾರಕ್ಕಾಗಿ ಹಣದ ವ್ಯಾಮೋಹ ಕ್ಕಾಗಿ ಮುಗ್ಧರನ್ನು ಬಲಿಪಶುಗಳಂತೆ ಕಾಣುವ ಜಮಾನ.*
*ಜನಮೈತ್ರಿ ಆಗಬೇಕಾದ ಆರಕ್ಷಕ ಠಾಣೆ ಇಂದು ಜನತೆಯ ಹಣ ಕಸಿಯುವ ಖಜಾನೆ ಯಾಗುತ್ತಿದೆ.*
*ನ್ಯಾಯದ ಕಣ್ಣಿಗೆ ಕಟ್ಟಿದ ಬಟ್ಟೆಯು ಸಡಿಲವಾಗಿ, ತಕ್ಕಡಿಗೆ ತುಕ್ಕು ಹಿಡಿದಿದೆ*
ಇಲ್ಲಿ
ಅಮಾಯಕನಿಗೆ ನ್ಯಾಯವೆಂದು?
ಈ ಅನಾರೋಗ್ಯ ಕರ ಬೆಳವಣಿಗೆಯಲ್ಲಿ
*ಈ ನಾಡಿನ ಸರ್ವಾಧಿಕಾರ ಹೊತ್ತ ರಾಜಕಾರಣಿಗಳು, ಸಚಿವಾಲಯ,ಮಾನ್ಯ ಮುಖ್ಯಮಂತ್ರಿಗಳು ಏಕೆ ದನಿ ಎತ್ತದೆ ಮೃದು ಧೋರಣೆ ತಾಳುತ್ತಿದ್ದಾರೆ?ಮನುಷ್ಯ ಜೀವವು ಅಷ್ಟಕ್ಕೂ ಬೆಲೆಯಿಲ್ಲದಾಯಿತೆ?*
*ಇಂದು ಅಶ್ರಫ್...ನಾಳೆ ನಾನು...ಮರುದಿನ ನೀನು! ಎಂದೇಕೆ ಯೋಚಿಸುತ್ತಿಲ್ಲ?*
*ಜೀವಕ್ಕೆ ಅಧಿಕಾರವೇ ಮುಳುವಾಯಿತೆ?*
*ಪರಿಸ್ಥಿತಿ ಉದ್ವಿಗ್ನತೆ ಕಂಡಾಗ ಕೆಲವರನ್ನು ರನ್ನು ಜೈಲಿಗಟ್ಟಿದರೆ ಸಾಕೇ?*
*ಇನ್ನೇನು ಮನೆಗೆ ನುಗ್ಗಿ ದಾಂಧಲೆ ನಡೆಸಿ ಅಮಾಯಕರನ್ನು ಬಲವಂತವಾಗಿ ಬಂಧಿಸಿದರೆ ಪರಿಸ್ಥಿತಿಯನ್ನು ಸುಧಾರಿಸಲು ಸಾಧ್ಯವೇ?*
*ಈ ಸ್ಥಿತಿ ಮುಂದುವರಿದರೆ ಇಲ್ಲಿ ಬೀದಿ ಕಾಳಗ ಶುರುವಾಗುವುದಂತೂ ದಿಟ.ಅಮಾಯಕ ಯುವಕರು ಎದೆಸೆಟೆದು ನಡೆದಾಡಲೂ ಸಾಧಿಸದೆ ಬಂಧನಾ ಭೀತಿಯಲ್ಲಿ ಬದುಕಬೇಕಾದ ಸನ್ನಿವೇಶ ಸಂಜಾತವಾಗಿದೆ.*
*ಯಾಕೀಗಾಯಿತು? ಒಬ್ಬರನ್ನೊಬ್ಬ ದುರುಗುಟ್ಟಿ ನೋಡಲು ಪರಿಸ್ಥಿತಿಯನ್ನು ಈ ಹಂತಕ್ಕೆ ತಲುಪಿಸಿದ್ದ್ಯಾರು?*
*ಪ್ರವಾದಿ ಪೈಗಂಬರ್ ಸಲ್ಲಲ್ಲಾಹು ಅಲೈಹಿ ವಸಲ್ಲಮರು* ಹೇಳಿದರು:
*ಅಂತ್ಯದಿನವು ಹತ್ತಿರವಾದಂತೆಯೇ ಹತ್ಯೆಗಳು ಹೆಚ್ಚಾಗುವುದು.ಆದರೆ ಕೊಲ್ಲುವವನಿಗೆ ಗೊತ್ತಿಲ್ಲ ನಾನು ಯಾಕಾಗಿ ಕೊಲ್ಲುತ್ತಿರುವೆನು? ಕೊಲ್ಲಲ್ಪಡುವವನಿಗೋ ಗೊತ್ತಿಲ್ಲ ನಾನೇತಕೆ ಕೊಲ್ಲಲ್ಪಟ್ಟೆ!?*
ಅಂತಹ ಸ್ಥಿತಿಯಾಗಿದೆ ನಮ್ಮ ನಾಡಲ್ಲಿಂದು!!
*ಮಾತು ಮಾತಿಗೂ ಖಡ್ಗದ ಕುರಿತು ವರ್ಣಿಸುವುದೇ ನಮ್ಮ ಸಂಸ್ಕೃತಿ ಎಂದಾದರೆ ಇದಕ್ಕೂ ಮಿಗಿಲಾದ ಒಂದು ರಣಾಂಗಣ ಇಲ್ಲಿ ನಿರ್ಮಾಣವಾಗುವುದಂತೂ ಖಂಡಿತ.*
*ಎಚ್ಚೆತ್ತುಕೊಳ್ಳೋಣ ...ಸಹೋದರರಲ್ಲಿ ನಮ್ಮ ಒಡಹುಟ್ಟಿದವರೂ ಇದ್ದಾರೆ ಅನ್ನೋ ತಿಳುವಳಿಕೆ ಯಿಂದ...ಇಲ್ಲದಿದ್ದಲ್ಲಿ ಅನಾಹುತ ಕಟ್ಟಿಟ್ಟ ಬುತ್ತಿ.*
*ಅಲ್ಲಾಹನು ನಮ್ಮ ಸಮುದಾಯವನ್ನು ಪರಸ್ಪರ ಐಕ್ಯತೆಯ ಸಮುದಾಯ ವನ್ನಾಗಿಸಲಿ* *ಸಮಾಜದ ಪ್ರಗತಿ ಕಂಠಕ ಶಕ್ತಿಗಳನ್ನು ಪರಾಜಯಗೊಳಿಸಿ ಸ್ನೇಹ ಸಮೃದ್ಧ ಶಾಂತಿಯ ಸೌಹಾರ್ದತೆಯ ನಾಡಾಗಿಸುವಲ್ಲಿ ಕರುಣಿಸಲಿ ಆಮೀನ್*
ಎಂಬ ಪ್ರಾರ್ಥನೆ ಯೊಂದಿಗೆ....
ನಿಝಾಮ್ ಅನ್ಸಾರಿ
ಕಾಮೆಂಟ್‌ಗಳು