ವಿಷಯಕ್ಕೆ ಹೋಗಿ

ತುಂಬಿದ ಕೊಡ ತುಳುಕುವುದಿಲ್ಲ...

ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ಶೈಖುನಾ ಪಯ್ಯಕ್ಕಿ ಉಸ್ತಾದರ ಕುರಿತು ಹಾಗೇ ಹೇಳಬೇಕಷ್ಟೇ. ಪಾಂಡಿತ್ಯದ ಸಮಾನತೆಯಿಲ್ಲದ ಶಿಖರದಿ ವಿರಾಜಮಾನ ಸುಲ್ತಾನರಾಗಿ ವಿಹರಿಸುವಾಗಲೂ,ಸಂಪದ್ಭರಿತ ಪಳ್ಳಿಕ್ಕೆರೆಯ ಖಾಝಿ ಸ್ಥಾನವನ್ನು ವಹಿಸುವಾಗಲೂ,ಪೈವಳಿಕೆಯಲ್ಲಿ ತನ್ನ ಕನಸಗೂಸು 'ಅನ್ಸಾರಿಯಾ' ಕವಲೊಡೆದು ಹೆಮ್ಮರವಾಗಿ ಬೆಳೆದು ಫಸಲು ಬಿಡಲು ಪ್ರಾರಂಭಿಸಿದ ಆ ಸುವರ್ಣ ನಿಮಿಷಗಳಲ್ಲಿ ವಿಧ್ಯಾರ್ಥಿಗಳು ಪ್ರಥಮವಾಗಿ ಸನದು ಸ್ವೀಕರಿಸಿದ ವೇಳೆಯೂ ವಿನಯಾನ್ವಿತರ ಆ ಮಂದಹಾಸಲ್ಲಿ ಕಿಂಚಿತ್ತೂ ಬದಲಾವಣೆಯಿಲ್ಲ.ತಾಳ್ಮೆಯ ಮೂಲಕ ಉಸ್ತಾದರು ಮತ್ತೆ ಮತ್ತೆ ಅಧ್ಬುತವೆನಿಸುತ್ತಿದ್ದಾರೆ.*



*ವಿಲಾಯತ್ತಿನ ಉನ್ನತ ಗಿರಿಸಾಲುಗಳನ್ನೇರಿದ ಪಿತಾಮಹರ ಸ್ಮರಣೆಗಳು ಪಯ್ಯಕ್ಕಿಯ ಚರಿತ್ರೆಯ ಹಾಳೆಗಳಲ್ಲಿ ಇಂದಿಗೂ ಜಲಜಲಿಸುವ ಸ್ಮರಣೆಯಾಗಿ ಉಳಿದಿದೆ. ಅವರನ್ನಾಗಿತ್ತು ಈ ನಾಡು ಪ್ರಥಮವಾಗಿ ಪಯ್ಯಕ್ಕಿ ಉಸ್ತಾದ್ ಎಂದು ಕರೆದಿದ್ದು.ಅನ್ಯ ಸ್ತ್ರೀಯರ ನೆರಳು ಕೂಡಾ ತನ್ನ ಪುರುಷಾಯುಸ್ಸಿನಲ್ಲಿ ಕಾಣಬಾರದೆಂದು ಆಗ್ರಹಿಸಿದ ಆ ಅತಿ ಸೂಕ್ಷ್ಮ ಜೀವನದ ಬಗ್ಗೆ ಅಲ್ಪ ಚಿಂತಿಸಿ ನೋಡಿ..ಅಹ್ಲುಬೈತ್ ಹಿಂದೆಯೇ ಕಾಲಿರಿಸಿದ ಈ ಮಣ್ಣಲ್ಲಿ ಪೊನ್ನಾನಿ ದರ್ಸೀ ಪಾರಂಪರ್ಯದ ಬೀಜ ಬಿತ್ತಿ ಬೆಳೆಸಿವರು ಮರ್ಹೂಮ್ ಪಯ್ಯಕ್ಕಿ ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ನ.ಮ ಆಗಿದ್ದರು.ಕಳೆದ ವರ್ಷದ ಉರೂಸಿನಲ್ಲ್ಲಿ ಸೌಹಾರ್ದ ಸಂಗಮದ ವೇದಿಕೆಯಲ್ಲಿ ಶಾಲಾ ಅಧ್ಯಾಪಕರೊಬ್ಬರು ಈ ರೀತಿ ಹೇಳಿದ್ದರು"ಇವರು ನಿಮ್ಮ ಮಾತ್ರವಲ್ಲ ನಮ್ಮ ಪಯ್ಯಕ್ಕಿ ಉಸ್ತಾದರೂ ಕೂಡಾ ಎಂದು.ಅವರ ಆತ್ಮೀಯ ವಾದ ಸಾನಿಧ್ಯ ಇಂದಿಗೂ ಪೈವಳಿಕೆಯ ವಾಯುವಿನಲ್ಲಿ ನಮಗೆ ಅನುಭವಿಸಬಹುದು.ಪಯ್ಯಕ್ಕಿ ಮಸೀದಿಯ ಹತ್ತಿರದಲ್ಲೇ ಇದೆ ಆ ಮಹಾನುಭಾವ ರ ಖಬರ್ ಶರೀಫ್.!*

*ಚಂದ್ರವರ್ಷ ಗಣನೆಯಲ್ಲಿ ಪೈವಳಿಕೆ ದರ್ಸ್ ಶತಮಾನವೊಂದನ್ನು ಪೂರೈಸಿದೆ.ಕಲಿಯಲು ವಿಧ್ಯಾರ್ಥಿಗಳು ಸಿಗುವರೋ ಎಂದು ಆಶಂಕೆ ವ್ಯಕ್ತಪಡಿಸಿದ ಪಯ್ಯಕ್ಕಿ ಉಸ್ತಾದರೊಂದಿಗೆ ಬಾಪ್ಪ ಹೇಳಿದರು"30 ರಿಂದ 40 ರ ಮಧ್ಯೆ ವಿಧ್ಯಾರ್ಥಿಗಳಿರುವರೆಂದು"ಇಂದಿಗೂ 35 ಮಕ್ಕಳು ವಿಧ್ಯಾರ್ಜನೆಗೈಯ್ಯುತ್ತಿದ್ದಾರೆ 'ಅಸರ್' ಇರುವ ನಾಲಗೆಯಿಂದ ಹೇಳಿದ ಮಾತು ಫಲಬೀರದೇ ಹೋಗಲಿಲ್ಲ.'ಹೋಗಬಹುದು' ಎಂದು ಹೇಳುವುದಲ್ಲದೆ ಉಸ್ತಾದ್ ಯಾರನ್ನೂ ಬಲವಂತವಾಗಿ ನಿಲ್ಲಿಸಲು ತಯ್ಯಾರಿಲ್ಲ.ಸೌಕರ್ಯಗಳು ಕೂಡಾ ಪರಿಮಿತ.ಆದರೂ ಸಬ್ಖಿನಲ್ಲಿ ಉಸ್ತಾದರ ಪ್ರಾವೀಣ್ಯತೆಯನ್ನು ಮನಗಂಡು ಎಲ್ಲೆಲ್ಲಿಂದಲೋ ಮಕ್ಕಳು ನಿಶಬ್ಧರಾಗಿ ಈ ತೀರವ ತಲುಪುತ್ತಿದ್ದಾರೆ.ನಂದಿ ದಾರುಸ್ಸಲಾಮ್ ,ಪಟ್ಟಿಕ್ಕಾಡ್ ಮುಂತಾದೆಡೆಗಳಲ್ಲಿ ಬಿರುದುದಾರಿಗಳಾಗಿ ಹೊರಬಂದು ಸೇವಾರಂಗದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.*

*ವಿಶುದ್ಧ ಹರಮ್ ಶರೀಫ್ ನಲ್ಲಾಗಿದೆ ಪಯ್ಯಕ್ಕಿ ಉಸ್ತಾದರು ಪಠಣ ಪೂರ್ತಿಗೊಳಿಸಿದ್ದೆಂದು ಹೆಚ್ಚಿನವರಿಗೂ ತಿಳಿದಿಲ್ಲ.ಈ ಮಧ್ಯೆ ಶಂಸುಲ್ ಉಲಮಾ ಅವಾರ್ಡ್ ಲಭಿಸಿದ ನಂತರವಾಗಿದೆ ಉಸ್ತಾದರು ಸಾಮಾನ್ಯರೆಡೆಯಲ್ಲಿ ಮಶ್ಹೂರ್ ಆಗಿದ್ದೂ ಕೂಡಾ.ವಿನಯ ಮಾತ್ರ ಅವರ ಜೀವನ ಶೈಲಿ. ಮತ ಲೌಕಿಕ ಸಮನ್ವಯ ಕಾಲೇಜ್ ಮತ್ತು ದರ್ಸ್ ನ್ನು ಒಂದೇ ಸೂರಿನಡಿಯಲ್ಲಿ ಕಳಂಕವಿಲ್ಲದೆ ಒಂದೇ ರೀತಿಯಲ್ಲಿ ಮುನ್ನಡೆಸುವ ವಿದ್ವಾಂಸರು ಉತ್ತರ ಮಲಬಾರಿನಲ್ಲಿ ಬೇರೆ ಇದ್ದಾರೆಯೇ ಎಂಬುದು ಸಂಶಯ.ಅರಸಿ ಬಂದ ಖಾಝಿ ಸ್ಥಾನದಿಂದ ಸರಿದು ನಿಲ್ಲಲು ಪ್ರಯತ್ನಿಸುವುದು ನಮಗೆ ಯೋಚಿಸಲೂ ಕೂಡಾ ಕಷ್ಟಕರ.*

*ಸಾಂಕ್ರಾಮಿಕ ರೋಗಗಳು ವ್ಯಾಪಕವಾಗಿ ಹರಡಿದ ಕಾಲದಲ್ಲಿ ಪೈವಳಿಕೆ ಸಾದಾತ್ತುಗಳು ಪ್ರಾರಂಭಿಸಿದ ರಾತೀಬ್ ಗೂ ಕೂಡಾ ತುಂಬಾ ಪ್ರತ್ಯೇಕತೆಗಳಿವೆ.ಐದು ತಾಸುಗಳು ಬೇಕು ಮಜ್ಲಿಸ್ ಮುಗಿಯಬೇಕೆಂದರೆ.ಅದರಿಂದಾಗಿ ಸಾಂಕ್ರಾಮಿಕ ರೋಗಗಳ ಸರ್ವನಾಶವಾಯ್ತು.ಇಂದು ಪಯ್ಯಕ್ಕಿ ಉಸ್ತಾದರಲ್ಲಾಗಿದೆ ಪೈವಳಿಕೆ ಸಾದಾತ್ತುಗಳು ನಡೆಸುವ ರಾತೀಬ್ ನ ಉಸ್ತುವಾರಿ ವಹಿಸಿಕೊಟ್ಟದ್ದು.ಇಲ್ಲಿ ಹೇಳಲಿಚ್ಛಿಸಿದ್ದು ಪಯ್ಯಕ್ಕಿ ಉಸ್ತಾದ್ ಇಸ್ಲಾಮಿಕ್ ಅನ್ಸಾರಿಯಾ ದ ಅವಾ ಅಕಾಡೆಮಿ ಯ ಕುರಿತಾಗಿತ್ತು.ಆದರೆ ಧನ್ಯತೆಯ ಪಾರಂಪರ್ಯವನ್ನು ಪ್ರತಿಪಾದಿಸದೆ ಅದರತ್ತ ಪ್ರವೇಶಿಸಲಾಗಲ್ಲ.ದಶ ವರುಷಗಳ ಹಿಂದಿನ ಬಂಡೆಕಲ್ಲುಗಳ ಸಾಲುಗಳಿಂದು ಲೋಕೋತ್ತರ ಇಸ್ಲಾಮಿಕ್ ಶೈಕ್ಷಣಿಕ ಸಮುಚ್ಚಯವಾಗಿ ಬಿಟ್ಟಿದೆ.ಜನರನ್ನು ಆಕರ್ಷಿಸುವ ಮೂಲಕ ತನ್ನತ್ತ ಸೆಳೆಯುವ ಮ್ಯಾನೇಜ್ಮೆಂಟ್ ನೈಪುಣ್ಯತೆಯೋ ,ಪ್ರಮುಖರ ಬೆಂಬಲವಿಲ್ಲದಿದ್ದರೂ ಕೂಡಾ ಪಿ ಯು ಐ ಎ ಬೆಳೆಯುತ್ತಲಿದೆ.ಮದೀನಾ ಗಾರ್ಡನ್ ನಿಂದ ಅನ್ಸಾರಿ ಬಿರುದುದಾರಿಗಳಾಗಿ ಈ ವಿಧ್ವತ್ ಪ್ರತಿಭೆಗಳು ಹೊರಜಗತ್ತನ್ನು ತುಳಿಯುತ್ತಿರುವುದು ಸುಂದರ ನಾಳೆಗಳ ಸುನ್ನೀ ನೇತೃತ್ವದೆಡೆಗಾಗಿರಬಹುದು.ಇಂಶಾ ಅಲ್ಲಾಹ್..*

*ಭಾರವಿರುವ ಮುಂಡಾಸಿಗಿಂತ ಶ್ರೇಷ್ಠತೆ ಇರುವುದು ಸಾತ್ವಿಕ ಉಖ್ರವಿಗಳಾದ ಪಂಡಿತ ಜ್ಯೋತಿಗಳ ಪ್ರಾರ್ಥನಾನಿರತ ದೀಕ್ಷೆಯಲ್ಲಾಗಿದೆ.ಹಾಗಾದಲ್ಲಿ ಪಯ್ಯಕ್ಕಿಯ ವಿಧ್ಯಾರ್ಥಿಗಳು ಭಾಗ್ಯಶಾಲಿಗಳು.ಪೊನ್ನಾನಿ ಪಾರಂಪರಿಕ ಹಾದಿ ಒಂದೆಡೆ,ಜ್ಞಾನ ಸರಣಿಯಲ್ಲಿ ಪಳಗಿದ ಪಂಡಿತವ್ಯೂಹದ ಅಧಿಪತಿಯಾದ ಉಸ್ತಾದ್,ಪ್ರವಾದಿ ಕುಟುಂಬ ವಿಶ್ರಾಂತಿ ಪಡೆಯುವ ಮಣ್ಣು,ಮಹತ್ವ ಗಳ ಇಲ್ಲವಾಗಿಸುವ ನವ ಯುಗದ ಅಲಂಕಾರಗಳಿಗೆ ಇಲ್ಲಿ ಎಡೆಯಿಲ್ಲ.ಆತ್ಮೀಯವಾದ ಹೆಜ್ಜೆಗುರುತುಗಳಾಗಿವೆ ಪೈವಳಿಕೆ ಎಂಬ ಪ್ರವಿಶಾಲ ಪ್ರದೇಶಕ್ಕೆ ಜನರನ್ನು ತಲುಪಿಸುತ್ತಿರುವುದು.ಅಷ್ಟಕ್ಕೂ ಉದಾತ್ತ ವಾದ ಇತಿಹಾಸ ಶೃಂಖಲೆಯ ಕೊನೆಯ ಕೊಂಡಿಗೆ ಅಲ್ಲದಿದ್ದರೂ ಮಿತಿ ಮೀರಿ ನಡೆಯಲು ಸಾಧ್ಯವಿಲ್ಲವಲ್ಲವೇ..!*

✍🏻ಕನ್ನಡಕ್ಕೆ: ನಿಝಾಮ್ ಅನ್ಸಾರಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಂಝಾನ್ ನೀಡುವ ಒಳಿತಿನ ಸಂದೇಶ...

-ನಿಝಾಮ್ ಅನ್ಸಾರಿ ಮತ್ತೆ ರಂಝಾನ್ ತಿಂಗಳ ಆಗಮನವಾಗಿದೆ. ಪ್ರತಿ ವರ್ಷವೂ ರಂಝಾನ್ ಬಗ್ಗೆ ಬರೆಯುವಾಗ ಅದರ ಶ್ರೇಷ್ಟತೆ, ವ್ರತಾನುಷ್ಟಾನದ ಪ್ರಾಧಾನ್ಯತೆಯನ್ನೇ ಹೆಚ್ಚಿನವರೂ ಬರೆಯುತ್ತಾರೆ. ಅದನ್ನೇ ಮಸೀದಿಗಳಲ್ಲೂ ಹೇಳುವುದಿದೆ. ಒಳ್ಳೆಯದೇ. ಕಾರಣ ಆಧುನಿಕ ಜನರು ಧರ್ಮದ ಪ್ರತಿಯೊಂದು ವಿಷಯಗಳಲ್ಲೂ ಸಡಿಲಿಕೆ ಬಯಸುತ್ತಾರೆ. ಅಂದರೆ ಅವರವರ ಜೀವನಕ್ರಮಗಳಿಗನುಸಾರವಾಗಿ ಧರ್ಮದ ನಿಯಮಗಳನ್ನು ಗಾಳಿಗೆ ತೂರುವಂತಹ ಕಾರ್ಯಗಳು ಎಲ್ಲಾ ಕಡೆ ನಡೆಯುತ್ತಲಿದೆ. ಹಾಗಿರುವಾಗ ರಂಝಾನ್ ವ್ರತಾಚರಣೆಯ ಮಹತ್ವವನ್ನು ಪ್ರತಿ ಬಾರಿಯೂ ಪ್ರಭಾಷಣ ವೇದಿಕೆಗಳಲ್ಲಿ, ಮಸೀದಿಗಳಲ್ಲಿ ಜನ ಸಾಮಾನ್ಯರಿಗೆ ನೆನಪಿಸುತ್ತಲಿರುವುದು ಸ್ವಾಗತಾರ್ಹವಾದುದು. ಮತ್ತು ಪ್ರಯೋಜನಕಾರಿಯೂ ಕೂಡಾ. ಯಾಕೆ ಈ ರೀತಿ ಬರೆದೆ ಅಂತ ಕೇಳಿದರೆ, ಇತ್ತೀಚೆಗೆ ವಾಟ್ಸಾಪ್ ನೊಳಗೆ ಕಣ್ಣಾಡಿಸಿದಾಗ ಕಂಡ ಕೆಲವೊಂದು ಸಂದೇಶಗಳು ಧರ್ಮದ ಬಗ್ಗೆ ಕೀಳರಿಮೆಯ ಭಾವ ತೋರುವವರಿಗೆ ತಕ್ಕ ಉತ್ತರ ನೀಡುವಂತಿತ್ತು. ಬಡ ಕುಟುಂಬಕ್ಕೆ ಮನೆ ಕಟ್ಟುವ ಸಹಾಯಾರ್ಥ ಕಲೆಕ್ಷನ್, ರಂಝಾನ್ ನಂತರದ ಬಡ ಹೆಣ್ಮಕ್ಕಳ ಮದುವೆಗಾಗಿ, ಮುಅಲ್ಲಿಂಗಳಿಗಾಗಿ ಹೀಗೇ ಹಲವು ರೀತಿಯಲ್ಲಿ ಯುವ-ವಯಸ್ಕರು ಸೇರಿ ಸಮುದಾಯದೊಂದಿಗಿನ ಸಾಮಾಜಿಕ ಕಾಳಜಿಗಾಗಿ ರಂಝಾನ್ ಅನ್ನು ಉಪಯೋಗಿಸುತ್ತಿದ್ದಾರೆನ್ನುವಾಗ ಧರ್ಮದ ಮನದಲ್ಲಿ ಅಭಿಮಾನ ಮೂಡುತ್ತಿದೆ. ಬುರ್ಖಾದ ವಿಚಾರದಲ್ಲಿ ಬಲತ್ಕಾರ ಮಾಡಲಾಗುತ್ತದೆ ಎಂದು ಆರೋಪಿಸುತ್ತಿರುವಾಗ, ಆ ವಾದವನ್ನು ವಿರ...

ನಾನುಗೌರಿ ವೆಬ್ ನಲ್ಲಿ ಪ್ರಕಟಗೊಂಡ ಬರಹಗಳು..ಓದಲು ಈ ಲಿಂಕ್ ಉಪಯೋಗಿಸಿ

-ನಿಝಾಮ್ ಅನ್ಸಾರಿ ಭಾರತದ ಉನ್ನತ ಶಿಕ್ಷಣದ ಮಹಾನ್‌ ಆಶಯಕ್ಕೆ ಎಳ್ಳುನೀರು ಬಿಡುತ್ತಿರುವ ಪ್ರಭುತ್ವ… http://naanugauri.com/indian-higher-education-shrinking-down- **************************************************************** ಲಾಕ್‌ಡೌನ್‌: ತುತ್ತು ಅನ್ನಕ್ಕಾಗಿ ಗುಳೆ ಹೊರಟವರ ಕತೆ http://naanugauri.com/lockdown-story-of-labour/ via @Naanu gauri ***************************************************************** ಪೌರತ್ವ ವಸೂಲಿ – ನಾಝಿ ಜರ್ಮನಿಯಿಂದ ಕಲಿಯಬೇಕಾದುದು… http://naanugauri.com/citizen-amendment-act-same-thing-happen-in-german-80-years-back- ****************************************************************** ಪ್ಲೇಗ್ ಹಾಗೂ ಕೋವಿಡ್ 19 ನಡುವೆ ಕೆಲವು ಹೋಲಿಕೆಗಳು http://naanugauri.com/covid-19-and-bubonic-plague-this-lead-to-renaissance/ via @Naanu gauri

ಅಳಿವಿನಂಚಿನಲ್ಲಿರುವ ಸಾಂಪ್ರದಾಯಿಕ ಕೃಷಿ ಪರಂಪರೆ-* ನಿಝಾಮ್ ಅನ್ಸಾರಿ

ಭಾರತವು ಕೃಷಿ ಅವಲಂಬಿತ ಹಳ್ಳಿಗಳನ್ನೊಳಗೊಂಡ ಸಮೃದ್ಧ ದೇಶ. ದೇಶದ ಬೆಳವಣಿಗೆಯಲ್ಲಿ ವ್ಯವಸಾಯದ ಪಾತ್ರ ಬಹುಮುಖ್ಯವಾದುದು. ತಂತ್ರಜ್ಞಾನವು ದೇಶಕ್ಕೆ ಯಾವ ರೀತಿಯಲ್ಲಿ ಕೊಡುಗೆಗಳನ್ನು ನೀಡುತ್ತವೆಯೋ ಅದೇ ರೀತಿಯಲ್ಲಿ ಕೃಷಿಯ ಕೊಡುಗೆಯೂ ಕೂಡಾ ಅಪಾರವಾದುದು. ಆದರೆ ಇತ್ತೀಚಿನ ದಿನಗಳಲ್ಲಿ ಹಳ್ಳಿಗಳಲ್ಲಿ ವ್ಯವಸಾಯವು ಇಳಿಮುಖವಾಗುತ್ತಿದೆ. ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವವರನ್ನು ಕಾಣಬಹುದಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿನ ಜನರು ವಿದ್ಯಾವಂತರಾಗುತ್ತಲೇ ತಮ್ಮ ಪಾರಂಪರಿಕ ಕುಲ ಕಸುಬನ್ನು ನಿರ್ಲಕ್ಷಿಸಿ ನಗರಗಳತ್ತ ವಲಸೆ ಹೋಗುತ್ತಿದ್ದಾರೆ.ಕೈ ಕೆಸರು ಮಾಡಿಕೊಂಡು ದುಡಿಯುವವರ ಕೊರತೆ ಅಗಾಧವಾಗಿ ಎದ್ದು ಕಾಣುತ್ತಿದೆ. ಇಂದಿನ ನವ ತಲೆಮಾರು ಹಳ್ಳಿಗಳು ಕೇವಲ ವೃದ್ಧರಿಗೆ ಮಾತ್ರ ಯೋಗ್ಯವಾದುದು ಎಂದು ತಿಳಿದಂತಿದೆ. `ನೇಗಿಲಾ ಹಿಡಿದಾ ಹೊಲದಲಿ ಹಾಡುತ ಉಳುವಾ ಯೋಗಿಯ ನೋಡಲ್ಲಿ’ ಎಂದು ಕುವೆಂಪುರಂತಹ ಖ್ಯಾತ ಕವಿಗಳಿಂದ ಕೊಂಡಾಡಲ್ಪಟ್ಟ ಕೃಷಿ ಚಟುವಟಿಕೆಗಳಿಂದು ಕಣ್ಮರೆಯಾಗಿದೆ. ನೇಗಿಲಿನಂತಹ ಕೃಷಿ ಸಲಕರಣೆಗಳು ಇಂದು ಮ್ಯೂಸಿಯಂ ಸೇರಿಬಿಟ್ಟಿವೆ. ಇದರೊಂದಿಗೆ ಅತ್ಯಂತ ಸುಂದರವಾದ ಕೃಷಿ ಪರಂಪರೆ ಮೂಲೆಗುಂಪಾಗುತ್ತಿದೆ. ಹಳೆಯ ಕಾಲದ ಸಾಂಪ್ರದಾಯಿಕ ಬೇಸಾಯಕ್ಕೆ ಉಪಯೋಗವಾಗುತ್ತಿದ್ದ ಪರಿಕರಗಳ ಸ್ಥಾನವನ್ನು ಟ್ರಾಕ್ಟರ್,ಟಿಲ್ಲರ್ ಗಳಂತಹ ಯಂತ್ರಗಳು ಆಕ್ರಮಿಸಿಕೊಂಡಿವೆ. ಭತ್ತ ನಾಟಿ ಮಾಡುವ ಮಹಿಳೆಯರಿಂದ ಕೇಳಿ ಬರು...