-ನಿಝಾಮ್ ಅನ್ಸಾರಿ ಎರಡು ತಿಂಗಳ ಹಿಂದೆ ಮಂಗಳೂರಿನ ರಥಬೀದಿ ಯ ಲ್ಲಿರುವ ಸರ್ಕಾರಿ ಕಾಲೇಜಿಗೆ ಭೇಟಿ ನೀಡುವ ಅವಕಾಶ ಸಿಕ್ಕಿತು. ಅಲ್ಲಿ ಹೋಗಿ ನೋಡಿದರೆ, ಕಾಲೇಜು ವತಿಯಿಂದ ಪತ್ರಿಕೋದ್ಯಮದ ನಾನಾ ಆಯಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ವರ್ಕ್‍ಶಾಪ್ ಹಮ್ಮಿಕೊಳ್ಳಲಾಗಿತ್ತು. ನಾನಂತೂ ಯಾವ ಕಾರಣಕ್ಕೆ ಅಲ್ಲಿ ಬಂದು ತಲುಪಿದೆನೋ ಗೊತ್ತಿಲ್ಲ, ವರ್ಕ್‍ಶಾಪ್ ಮುಗಿಯುವಷ್ಟರಲ್ಲಿ ಪುಸ್ತಕವೊಂದು ಕೊಡುಗೆಯಾಗಿ ನನ್ನ ಕೈ ಸೇರಿತ್ತು. ಅದು ಅಲ್ಲಿನ ಅಧ್ಯಾಪಕಿ ಜಯಶ್ರೀ ಬಿ.ಕದ್ರಿ ಅವರ ‘ತೆರೆದಂತೆ ಹಾದಿ’ ಎಂಬ ವೈಚಾರಿಕ ಬರಹಗಳ ಸಂಗ್ರಹ. ನಿನ್ನೆ ಮನೇಲಿ ನನ್ನ ಪದವಿ ಸರ್ಟಿಫಿಕೇಟ್‍ಗಾಗಿ ಹುಡುಕಾಡುತ್ತಿದ್ದಾಗ, ಈ ಪುಸ್ತಕ ಸಿಕ್ಕಿತು. ಅದನ್ನು ನನ್ನ ಓದಿನ ಪಟ್ಟಿಗೆ ಸೇರಿಸಲು ಇದೇ ಸಕಾಲ ಅಂದುಕೊಂಡು ಕೈಗೆತ್ತಿಕೊಂಡೆ. ಅಂದ ಹಾಗೆ, ಪದವಿ ಸರ್ಟಿಫಿಕೇಟ್ ಹುಡುಕುತ್ತಿದ್ದೆಂದೆನಲ್ಲಾ. ನನ್ನ ಪದವಿಗೂ, ರಥಬೀದಿಯ ಆ ಕಾಲೇಜಿಗೂ ಅವಿನಾಭಾವ ಸಂಬಂಧವಿದೆ. ಮೂರು ವರ್ಷಗಳ ಪದವಿ ಪರೀಕ್ಷೆಗಳನ್ನು ಬರೆದಿದ್ದು ಅದೇ ಕಾಲೇಜಿನಲ್ಲಿ. ಅದಕ್ಕೂ ಮುನ್ನ ಎಸ್ಸೆಸೆಲ್ಸಿ ಪರೀಕ್ಷೆ ಬರೆದಿದ್ದೂ ಕೂಡಾ ಅಲ್ಲೇ ಹತ್ತಿರದ ಶಾಲೆಯೊಂದರಲ್ಲಿ. ಹಾಗಾಗಿ, ರಥಬೀದಿಯ ಆ ಬೀದಿಗಳು ಮತ್ತು ಶಾಲಾ, ಕಾಲೇಜು ಆವರಣ ಮನಸ್ಸಿಗೆ ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡುತ್ತದೆ. ಏನೇ ಇರಲಿ, ಅಂತೂ ಜಯಶ್ರೀ ಮೇಡಂ ನಮ್ಮನ್ನು ಬರಮಾಡಿಕೊಂಡ ...
ಪಥಿಕನ ಬಗ್ಗೆ ಸಿಂಪಲ್ಲಾಗಿ : ನಿಝಾಮ್ ಅನ್ಸಾರಿ - ತಂ - ದಿ. ಇಸ್ಮಾಯಿಲ್ ಯು.ಕೆ, ತಾ -ಝುಬೈದಾ. ಕಲ್ಲಡ್ಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ. ಕಾಸರಗೋಡು ಧಾರ್ಮಿಕ-ಲೌಕಿಕ ಸಮನ್ವಯ ಶಿಕ್ಷಣ ಸಂಸ್ಥೆಯಲ್ಲಿ ಪದವಿ ವ್ಯಾಸಂಗ. ಸಮಾಜಶಾಸ್ತ್ರದಲ್ಲಿ ಬಿ.ಎ ಹಾಗೂ ಅರಬಿಕ್ ನಲ್ಲಿ 'ಅನ್ಸಾರಿ' ಪದವೀಧರ, ಪ್ರಸ್ತುತ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿ.