{ತಿಂಗಳುಗಳ ಹಿಂದೆ ಸೆಮಿನಾರೊಂದರಲ್ಲಿ ಭಾಗವಹಿಸಲು ಶಿವಮೊಗ್ಗ ತಲುಪಿದ್ದೆ. ಜೊತೆಗೆ ನಾಲ್ಕೈದು ಗೆಳೆಯರಿದ್ದರು. ಸೆಮಿನಾರ್ ಮುಗಿಸಿ ಹಿಂತಿರುಗುವಾಗ ಪುಸ್ತಕ ಪ್ರೇಮಿ ಗೆಳೆಯನೊಬ್ಬನ ಜೊತೆ ಅಲ್ಲೇ ಬಸ್ ಸ್ಟಾಂಡ್ ಹತ್ತಿರದ ಒಂದು ಪುಸ್ತಕದಂಗಡಿಗೆ ಹೋದೆವು. ಆತನಿಗೆ ಮರುಭೂಮಿಯ ಹೂವು ಪುಸ್ತಕ ಬೇಕೆಂದಿದ್ದ. ನಾನು ಯಯಾತಿ ಬೇಕೆಂದೆ. ಅಲ್ಲಿಂದ ಹೊರಡುವಾಗ ಅವತ್ತೇ ಓದಿ ಮುಗಿಸಬೇಕು ಅಂದು ಕೊಂಡ ನನಗೆ ಓದುಭಾಗ್ಯ ದೊರಕಿದ್ದು ಮಾತ್ರ ಇಂದು..ಏನೇ ಆಗಲಿ..ಕೊನೆಗೂ ಈ ಕೋವಿಡ್ ದಿನಗಳು ಕೊನೆಗೂ ಕಾರ್ನಾಡರನ್ನು ಓದಿಸುವಂತೆ ಮಾಡಿದೆ...}
ಅಂದ ಹಾಗೆ ಯಯಾತಿ ಗಿರೀಶ ಕಾರ್ನಾಡ ಅವರ ೧೯೬೧ ರಲ್ಲಿ ಪ್ರಕಟವಾದ ಮೊದಲ ನಾಟಕ. ಕೀರ್ತಿನಾಥ ಕುರ್ತಕೋಟಿ ಅವರು ಮುನ್ನುಡಿ, ಹಾಗೂ ಜಿ.ಎಸ್ ಅಮೂರ ಹಿನ್ನುಡಿ ಬರೆದಿದ್ದಾರೆ. ನಾಲ್ಕಂಕಗಳಿರುವ ಪ್ರಸ್ತುತ ನಾಟಕದಲ್ಲಿ ಪಾತ್ರಗಳಾಗಿ ದೇವಯಾನಿ, ಸ್ವರ್ಣಲತೆ, ಶರ್ಮಿಷ್ಠೆ, ಯಯಾತಿ, ಪುರು, ಚಿತ್ರಲೇಖೆ ಮುಂತಾದವರು ಬರುತ್ತಾರೆ.
ಕುರ್ತಕೋಟಿ ಅವರು ಹೇಳಿರುವಂತೆ, ಈ ನಾಟಕದಲ್ಲಿ ಮನುಷ್ಯ ಸಾಹಸದ ದುರಂತ ಚಿತ್ರವೊಂದನ್ನು ರೂಪಿಸುವ ಹವಣಿಕೆಯು ಎದ್ದು ಕಾಣುತ್ತದೆ. ನಾಟಕದ ಆಧುನಿಕತೆಯ ಅಂಶವೆಂದೇ ಅದು, ಇಲ್ಲಿಯ ಪಾತ್ರಗಳೆಲ್ಲವೂ ಮನುಷ್ಯನ ಸಾಮಾನ್ಯ ಮಟ್ಟವನ್ನೂ ಮೀರುವ ಹಂಬಲವನ್ನಿಟ್ಟುಕೊಂಡವುಗಳು. ಆದರೆ ಮನುಷ್ಯನ ದೌರ್ಬಲ್ಯಗಳಿಂದಲೇ ಅವುಗಳ ಹಂಬಲ ಪೂರ್ಣಗೊಳ್ಳುವುದಿಲ್ಲ. ಯಯಾತಿ ಅಮರತ್ವದ ಆಕಾಂಕ್ಷೆ, ದೇವಯಾನಿಯ ಪ್ರೀತಿಯ ಹಂಬಲ, ಶರ್ಮಿಷ್ಠಯ ಮುನುಷ್ಯತ್ವದಾಸೆ, ಪುರುವಿನ ವ್ಯಕ್ತಿತ್ವದ ಶೋಧ ಇವೆಲ್ಲ ತಾತ್ವಿಕ ಕಾಮನೆಗಳಾಗಿವೆ. ಕಾರ್ನಾಡರೇ ಹೇಳಿದಂತೆ, ವಾಚಕರು ಪುರುವಿನ ಕೊನೆಯ ವಾಕ್ಯದೊಡನೆ ತಾವೂ "ಇದೆಲ್ಲದರ ಅರ್ಥವೇನು ದೇವರೇ, ಇದರ ಅರ್ಥವೇನು..? ಎಂದು ಗದ್ದಲವೆಬ್ಬಿಸಿದರೆ, ಆ ಗದ್ದಲದಲ್ಲಿ ನನ್ನ ಧ್ವನಿಯೂ ಕೂಡಿದೆ" ಎಂದು ಮಾತ್ರ ಹೇಳಬಯಸುತ್ತೇನೆ" ಅಂದಂತೆ ನಾಟಕ ಕೊನೆಯಾದಾಗ ಓದುಗನಾಗಿ ನನಗೂ ಕೂಡಾ ಆ ಗದ್ದಲದ ನಡುವೆ ಇದ್ದಂತೆ ಅನಿಸಿತು...
(ನನ್ನ ಹೃದಯಾಂತರಾಳದಲ್ಲಿ ಅಕ್ಷರ ದೀಪ ಬೆಳಗಿದ ನನ್ನೆಲ್ಲಾ ಗುರುವೃಂದಕ್ಕೆ ಕೃತಜ್ಞ.. ಹಾಗೇ ನನ್ನವರಾದ ಎಲ್ಲರಿಗೂ.)

ಕಾಮೆಂಟ್‌ಗಳು