ಬಾಹ್ಯ ನೋಟಕ್ಕೆ ಶಾಂತವೂ ಆದರೆ, ಸೂಕ್ಷ್ಮ ಪರಿಶೋಧನೆಯಲ್ಲಿ ಭೀತಿಜನಕವೂ ಆದ ಬದಲಾವಣೆಗಳನ್ನಾಗಿದೆ ಕೋವಿಡ್‍ನ ಈ ಅಂತರಕಾಲದಲ್ಲಿ, ಸಾಮಾಜಿಕ-ಆರ್ಥಿಕ ವಲಯಗಳಲ್ಲಿ, ಕಾರ್ಪೊರೇಟ್‍ಗಳು ಹಾಗೂ ಆಡಳಿತಾರೂಢರು ಪರೀಕ್ಷಿಸುತ್ತಲಿರುವುದು. ಟಾಟಾ ಕನ್ಸಲ್ಟೆನ್ಸಿ (tata consultancy) ಎಂಬ ಭಾರತೀಯ ಐಟಿ ಕಂಪೆನಿ, ಕೋವಿಡ್ ಕಾಲದ ನಂತರ ಮುಂದಿನ ಎರಡು ವರ್ಷಗಳಲ್ಲಿ ತನ್ನ ಶೇ. 75 ರಷ್ಟು ನೌಕರರನ್ನೂ ಮನೆಯಿಂದಲೇ ಕೆಲಸ ಮಾಡಿಸುವ ವ್ಯವಸ್ಥೆಯೆಡೆಗೆ ಬದಲಾಗಲಿದೆ ಎಂದು ಘೋಷಿಸಿರುವುದು ಅದರ ಒಂದು ಭಾಗವೇ ಆಗಿದೆ. ಇದು ಬಹುಶಃ ಒಂದು ಜಾಗತಿಕ ಪ್ರವಣತೆ ಆಗಲಿದೆ ಎನ್ನುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ವೃತ್ತಿ, ಶಿಕ್ಷಣ, ಸೇವಾ ಕ್ಷೇತ್ರಗಳು, ಮುಂದೆ ಬಹುದೊಡ್ಡ ಬದಲಾವಣೆಗೆ ಸಾಕ್ಷಿಯಾಗಲಿದೆ ಎಂಬ ಸೂಚನೆಗಳು ಜಗತ್ತಿನ ನಾನಾ ಕಡೆಗಳಿಂದ ಲಭಿಸುತ್ತಿವೆ.
ಕೋವಿಡ್ ಸುರಕ್ಷತೆಯ ಭಾಗವಾಗಿ ಕೈಗೊಂಡ ಹಲವು ಕ್ರಮಗಳು, ದೀರ್ಘಕಾಲ ಮುಂದುವರಿದಂತೆಯೇ ತಮಗೆ ಲಾಭವನ್ನು ಹೆಚ್ಚಿಸಲಿದೆ ಎಂದು ಸರ್ಕಾರ ಹಾಗೂ ಕಾರ್ಪೋರೇಟ್‍ಗಳು ಮನದಟ್ಟು ಮಾಡಿವೆ. ಮಾತ್ರವಲ್ಲ, ಅದು ದೀರ್ಘಕಾಲ ನೆಲೆಗೊಳ್ಳಲು ಅವರು ಕಾನೂನಾತ್ಮಕ ಹಾಗೂ ಪ್ರಾಯೋಗಿಕವಾಗಿ ಪರಿಶ್ರಮ ಪಡುತ್ತಾರೆಂಬ ವಿಷಯದಲ್ಲಿ ಸಂದೇಹವಿಲ್ಲ. ಕಾರ್ಪೊರೇಟ್ ಶಕ್ತಿಗಳು ಮಾಡೋಕೆ ಹೊರಟಿರುವ ಪ್ರಧಾನ ಪರಿವರ್ತನೆಗಳಲ್ಲಿ ಹಲವು, ಅವರಿಗೆ ಹೆಚ್ಚಿನ ಲಾಭದಾಯಕವೂ, ನೌಕರರಿಗೆ ಬಹಳಷ್ಟು ಗುಪ್ತವ್ಯಯಗಳು (hiಜಜeಟಿ ಛಿosಣs) ಒಳಗೊಂಡಿರುವುದೂ ಆಗಿರುತ್ತದೆ. ಇದೇ ರೀತಿಯಾಗಿದೆ ಆನ್‍ಲೈನ್ ಕಲಿಕೆಯ ವಿಷಯದಲ್ಲೂ ನಡೆಯುವಂತದ್ದು. ಇದೀಗಾಗಲೇ ಯು.ಜಿ.ಸಿ, ಮುಂದಿನ ಸೆಮಿಸ್ಟರ್ ನ ಕಲಿಕೆಯು ಶೇ.25 ರಷ್ಟು ಆನ್‍ಲೈನ್ ಮೂಲಕ ಆಗಿರಬೇಕೆಂದು ವಿಶ್ವವಿದ್ಯಾಲಯಗಳೊಂದಿಗೆ ನಿರ್ದೇಶಿಸಿವೆ.
ಡಿಜಿಟಲ್ ವಿಭಜನೆಯ ಕಾಲವು, ಮೊಬೈಲ್ ಫೋನ್‍ಗಳ ಆಗಮನದೊಂದಿಗೆ, ಅದರಲ್ಲೂ ವಿಶೇಷವಾಗಿ ಸ್ಮಾರ್ಟ್‍ಫೋನ್ ಗಳ ಆಗಮನದೊಂದಿಗೆ ಕೊನೆಗೊಂಡಿದೆ ಎಂದು ಮನಬಂದಂತೆ ಅಂದುಕೊಳ್ಳುವವರಿದ್ದಾರೆ. ಆದರೆ, ಹಲವು ವಿಶ್ವವಿದ್ಯಾಲಯಗಳ ಅಧ್ಯಯನಗಳು ಹೇಳುವ ಪ್ರಕಾರ, ಹೆಚ್ಚಿನ ವಿದ್ಯಾರ್ಥಿಗಳಿಗೆ ಅಂತರ್ಜಾಲ ಸಂಪರ್ಕ ವ್ಯವಸ್ಥೆಗಳು ಸಾಂಕೇತಿಕವಾಗಿಯೂ, ವಿಭವರಾಹಿತ್ಯದಿಂದಲೂ ಅಲಭ್ಯವಾಗುವ ಸಾಧ್ಯತೆಗಳು ಬಹಳ ದೊಡ್ಡದು ಎಂಬುದೇ ಆಗಿದೆ. ಬಳಕೆ ಮಾಡಲು ಸಾಧ್ಯವಿರುವವರೂ ಮಾರುಕಟ್ಟೆಯಲ್ಲಿ ಬೆಲೆತೆತ್ತು ಕೊಂಡುಕೊಳ್ಳುತ್ತಾರೆ. ಡಿಜಿಟಲ್ ವಿಭಜನೆಗೆ ಅಂತ್ಯ ಎಂಬುದಿಲ್ಲ, ಅದು ನವ ವಿಧಾನಗಳಲ್ಲಿ ಅವತರಿಸಲ್ಪಡುತ್ತಲೇ ಇರುತ್ತದೆ ಎಂಬುದು ತರ್ಕವಿಲ್ಲದ ವಾಸ್ತವವಾಗಿದೆ. ಇದರ ವಿರುದ್ಧ ನಡೆಯುವಂತಹ ಯಾವುದೇ ರೀತಿಯ ಹಸ್ತಕ್ಷೇಪಗಳಿಗೂ ಕೂಡಾ, ವಿದ್ಯಾರ್ಥಿಗಳಿಗೆ ನೆರವಾಗಲು ಖಂಡಿತ ಸಾಧ್ಯವಾಗದು.
ಉದ್ಯೋಗಿಗಳಲ್ಲಿ ಹಾಗೂ ಗ್ರಾಹಕರಲ್ಲಿ ಗುಪ್ತವ್ಯಯಗಳನ್ನು ಒತ್ತಡದಿಂದ ಹೇರಿ, ಅಥವಾ ಇನ್ನಿತರ ವಿಧಾನಗಳ ಮೂಲಕ ನೌಕರಿಯಿಂದ ಹೊರದಬ್ಬಿ, ಪ್ರತ್ಯಕ್ಷವ್ಯಯಗಳನ್ನು ಕಡಿಮೆಗೊಳಿಸಿ, ಲಾಭಾಂಶವನ್ನು ಮೇಲೆತ್ತಲಿಕ್ಕಾಗಿರುವ ಕಾರ್ಪೊರೇಟ್ ಕಾನೂನುಗಳು, ಕೋವಿಡ್ ಸಂಬಂಧವಾಗಿ ಕೈಗೊಂಡ ಕ್ರಮಗಳಿಗಿಂತಲೂ ಬಹಳ ಹಿಂದೆಯೇ ಆರಂಭಿಸಿದ್ದಾಗಿದೆ.
ಕಾರ್ಪೊರೇಟ್ ಒಡೆತನವು ನಮ್ಮ ಸಾಮಾಜಿಕ ಜೀವನದಲ್ಲಿ ಸಾಕಷ್ಟು ಬದಲಾವಣೆಗಳನ್ನು ಉಂಟುಮಾಡುತ್ತಿರುವುದು ನಾವು ಗಮನಿಸಿದರೂ, ಇಲ್ಲದಿದ್ದರೂ ನಮ್ಮ ಕಣ್ಮುಂದೆಯೇ ಆಗಿದೆ. ಅವುಗಳಲ್ಲಿ ಹೆಚ್ಚಿನವೂ ನಮ್ಮ ಅನುಮತಿ ಪಡೆದೇ ಆಗಿರುತ್ತದೆ. ಇಂತಹ ಅನುಮತಿಗಳನ್ನು ಅವರು ಯಾವ ವಿಧಾನದಲ್ಲಿ ಪಡೆದುಕೊಳ್ಳುತ್ತಾರೆ ಎಂಬುದು ಇದೀಗ ಸುಪರಿಚಿತವೂ ಆಗಿದೆ. ಕೆಲಸಕ್ಕೆ ನೌಕರರ ಅಗತ್ಯವಿಲ್ಲ, ಅಥವಾ ಹೇಗೆ ನೌಕರರನ್ನು ಪರಮಾವಧಿ ಕನಿಷ್ಟ ಸಂಖ್ಯೆಗಿಳಿಸಬಹುದು ಎಂಬ ಒಂದು ರೀತಿಯ ‘ಮನುಜರಾಹಿತ್ಯ’ ಸಾಮೀಪ್ಯವಾಗಿದೆ ಹೆಚ್ಚಿನ ಕಂಪೆನಿಗಳೂ ತೋರುತ್ತಿರುವುದು. ಇದೊಂದು ಅತಿಶಯೋಕ್ತಿಯೆಂದೆನಿಸಬಹುದು. ಆದರೆ , ವಾಸ್ತವ ನಮ್ಮ ಕಣ್ಣು ತೆರೆಸುವಲ್ಲಿ ಪರ್ಯಾಪ್ತವಾಗಿದೆ. ಮಾಧ್ಯಮ ದಿಗ್ಗಜ ಫೇಸ್‍ಬುಕ್, ಕೆಲಸಕ್ಕೆ ನೇಮಿಸಿಕೊಂಡಿರುವ ಉದ್ಯೋಗಿಗಳ ಸಂಖ್ಯೆ 50 ಸಾವಿರದಷ್ಟು ಮಾತ್ರವಾಗಿದೆ. ಲಕ್ಷಗಟ್ಟಲೆ ಜನರನ್ನು ನೇಮಿಸಿಕೊಂಡಿದ್ದ ಹಳೆಯ ಒಡೆತನದ ಸಂಸ್ಥೆಗಳಿಂದ ಬೇರ್ಪಟ್ಟು, ಇದೀಗ ಗೂಗಲ್ ನಲ್ಲಿಯೂ ಕೂಡಾ ಸುಮಾರು 55 ಸಾವಿರ ಜನ ಮಾತ್ರ ಸ್ಥಿರ ಉದ್ಯೋಗಿಗಳಾಗಿ ಇರೋದು. ವಾಟ್ಸಾಪ್ ಎಂಬ ಪ್ಲಾಟ್ ಫಾಮ್ ಫೇಸ್ಬುಕ್ ಅನ್ನು ಖರೀದಿಸುವಾಗ ಅದರಲ್ಲಿ 12 ಉದ್ಯೋಗಿಗಗಳು ಮಾತ್ರ ಇದ್ದರಷ್ಟೇ. ಫೇಸ್ಬುಕ್ ವಾಟ್ಸಾಪ್ ಅನ್ನು ಖರೀದಿ ಮಾಡಿದ್ದು 22 ಕೋಟಿ ಡಾಲರ್ ಗಾಗಿತ್ತು.
ಒಡೆತನ ವ್ಯವಸ್ಥೆಯ ಈ ರೀತಿಯ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳದೆ, ಬದಲಾಗುತ್ತಿರುವ ವಿಶ್ವದ ಆರ್ಥಿಕ ವ್ಯವಸ್ಥೆಯನ್ನು ವಿವರಿಸುವುದು ಅಸಾಧ್ಯ. ಇಂದು ಅಂತರರಾಷ್ಟ್ರೀಯ ತೆರಿಗೆಯನ್ನು ಬಿಟ್ಟುಕೊಡುವ (ಕತ್ತರಿಸುವ) ಸಂಸ್ಥೆಗಳಲ್ಲಿ ಅತಿ ಪ್ರಧಾನವಾದುದು ಆಪಲ್, ಗೂಗಲ್ ಮತ್ತು ಫೇಸ್ಬುಕ್ ನಂತಹ ನವ ಮಾಧ್ಯಮ ಕಾರ್ಪೊರೇಟ್‍ಗಳಾಗಿವೆ. ಇವು ಜಾಗತಿಕ ಮಟ್ಟದಲ್ಲಿ ಕಾರ್ಯನಿರ್ವಹಿಸುವ ವ್ಯವಸ್ಥೆಗಳಾದುದರಿಂದ ಅವರಿಗೆ ಒಂದು ದೇಶದಿಂದ ಬಂಡವಾಳವನ್ನು ಇನ್ನೊಂದು ದೇಶಕ್ಕೆ ಬದಲಾಯಿಸಲು ಸುಲಭ ಸಾಧ್ಯವಾಗುತ್ತದೆ. ಈ ರೀತಿ ದೇಶರಾಷ್ಟ್ರಗಳ ಗಡಿದಾಟಿ ಬಂಡವಾಳವನ್ನು ಅನಾಯಾಸವಾಗಿ ಬದಲಾಯಿಸಿಕೊಳ್ಳಲು ಸಾಧ್ಯವಾಗುವ ಸಂದರ್ಭವನ್ನು ಸೃಷ್ಟಿಮಾಡಲೆಂದೇ ಆಗಿತ್ತು 80 ದಶಕದಲ್ಲಿ ವಿಶ್ವ ವ್ಯಾಪಾರ ಸಂಸ್ಥೆಯು ಉರುಗ್ವೆ ಚರ್ಚೆಗಾಗಿ, ಡಂಕಲ್ ಡ್ರಾಫ್ಟ್ ಪ್ರಸ್ತಾಪಿಸಿದ್ದು, ಅಂತಿಮವಾಗಿ, ತೃತೀಯ ಜಾಗತಿಕ ರಾಷ್ಟ್ರಗಳ ಬಲವಾದ ವಿರೋಧದ ನಡುವೆ ತೊಂಬತ್ತರ ದಶಕದಲ್ಲಿ ಅದು ಜಾಗತಿಕ ಒಪ್ಪಂದವಾಗಿ ಬದಲಾವಣೆಗೊಂಡದ್ದೂ ಕೂಡಾ. ಆಪಲ್‍ಗೆ ತನ್ನ ತೆರಿಗೆಯನ್ನು ಬಿಟ್ಟು ಕೂಡಿಟ್ಟ ಸಂಪತ್ತಿನಿಂದ, ಹಳೆಯ ಒಡೆತನ ದಿಗ್ಗಜರೆನಿಸಿಕೊಂಡ ‘ಜನರಲ್ ಇಲೆಕ್ಟ್ರಿಕಲ್ಸ್’ ಹಾಗೂ ‘ಸೀಮೆನ್ಸ್’ ಕಂಪೆನಿಗಳನ್ನು ಖರೀದಿಸಲು ಸಾಧ್ಯವಿದೆ ಅನ್ನುವಾಗ, ಅದು ಹಳೆಯ ಒಡೆತನ ಎಲ್ಲಿದೆ ಹಾಗೂ ನವಮಾಧ್ಯಮ ಒಡೆತನ ಯಾವ ಸೀಮೆಯನ್ನು ದಾಟಿ ನಿಂತಿದೆ ಎನ್ನುವುದರ ಸೂಚನೆಯಾಗಿಯೂ ಮನದಟ್ಟು ಮಾಡಲು ಸಾಧ್ಯವಾಗುತ್ತದೆ.
ಕಾರ್ಪೊರೇಟ್‍ಗಳು ಪ್ರಸ್ತುತ ಕಾರ್ಯಾಚರಿಸುತ್ತಿರುವುದು ‘ಪ್ಲಾಟ್‍ಫಾರ್ಮ್ ಕ್ಯಾಪಿಟಲಿಸಂ’ ಎಂಬ ಅನ್ಯೋನ್ಯ ವ್ಯವಸ್ಥೆಯ ಮೂಲಕವಾಗಿದೆ. ಎಲ್ಲಾ ಉದ್ಯೋಗಗಳನ್ನು ಔಟ್ ಸೋರ್ಸ್ ಮಾಡಿಕೊಂಡು ಅಥವಾ ಇತರೆ ಪ್ಲಾಟ್‍ಫಾರ್ಮ್‍ನ್ನು ಆಶ್ರಯಿಸಿ ಉತ್ಪಾದನೆ ಮಾಡುವುದು, ಸಾಧ್ಯವಾದಷ್ಟು ಕಡಿಮೆ ಪ್ರಮಾಣದಲ್ಲಿ ಶ್ರಮಿಕ ಸಾಮಥ್ರ್ಯವನ್ನು ಖರೀದಿಸುವುದು ಇತ್ಯಾದಿ. ಉದಾಹರಣೆಗೆ ನಾವು ಊಬರ್ ಎಂಬ ವ್ಯವಸ್ಥೆಯನ್ನು ಹಲವು ಬಾರಿ ವಿಮರ್ಶಿಸುವುದು ಊರಿನ ಆಟೋ ಮತ್ತು ಟ್ಯಾಕ್ಸಿ ಡ್ರೈವರ್‍ಗಳೊಂದಿಗಿನ ಸಂಘರ್ಷಗಳ ಹೆಸರಲ್ಲಾಗಿದೆ. ಆದರೆ, ಊಬರ್ ನ ಮೂಲ ವ್ಯವಸ್ಥೆಯಯಲ್ಲಿನ ಸಾಮಾಜಿಕ ಭೀಕರತೆಯೊಂದಿಗೆ ತುಲನೆ ಮಾಡಿ ನೋಡುವಾಗ, ಇದು ಕ್ಷುಲ್ಲಕ ವಿಚಾರವಾಗಿದೆ.ಅದು ಯಾವ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ..? ಊಬರ್ ಮ್ಯಾಪ್‍ಗಾಗಿ ಗೂಗಲನ್ನು, ಅದರ ಟೆಕ್ಸ್ಟ್‍ಗಾಗಿ ಟ್ವಿಲಿಯೋ, ಪೇಮೆಂಟ್‍ಗೆ ಬ್ರೈನ್‍ಟ್ರಿ, ಇಮೇಲ್ ಕಳುಹಿಸಲು ಸೆಂಡ್‍ಗ್ರಿಡ್ ಇತ್ಯಾದಿಗಳನ್ನು ಅವಲಂಬಿಸಿದೆ. ಇದ್ಯಾವುದೂ ಊಬರ್‍ನ ಒಡೆತನದಲ್ಲಿರುವ ಪ್ಲಾಟ್‍ಫಾರ್ಮ್‍ಗಳಲ್ಲ, ಇವರೆಲ್ಲರೂ ಸ್ವಂತದ್ದೆನ್ನುವಂತೆ ಇತರ ಪ್ಲಾಟ್‍ಫಾರ್ಮ್‍ಗಳನ್ನು ಅವಲಂಬಿಸುತ್ತಾರೆ. ಉದ್ಯೋಗಿಗಳು ಹೆಚ್ಚಾಗುತ್ತಲೇ ಇದ್ದಾರೆ. ಆಧುನಿಕ ಒಡೆತನದ ನವ ಮಾಧ್ಯಮ ಕಾರ್ಪೊರೇಟ್‍ಗಳು ಈ ರೀತಿಯಲ್ಲಿ ಅನ್ಯೋನ್ಯ ಪ್ಲಾಟ್‍ಫಾರ್ಮ್‍ಗಳನ್ನು ಉಪಯೋಗಿಸಿಕೊಂಡು, ಒಂದು ಸಾಂಕೇತಿಕ, ಜಾಗತಿಕ ಕಾರ್ಪೊರೇಟ್ ಶೃಂಖಲೆಯನ್ನು ನಿರ್ಮಿಸುತ್ತಿದ್ದಾರೆ. ಆಪಲ್ ತಾನು ‘ಸಿರಿ’ ಎಂಬ ಕಂಪೆನಿಯನ್ನು ಉಪಯೋಗಿಸುತ್ತದೆ. ‘ಸಿರಿ’ಯ ಸೇವೆಯನ್ನು ಆಪಲ್ ಸ್ಟೀವ್ ಜಾಬ್ಸ್ ರ ಕಾಲದಲ್ಲಿ ಖರೀದಿಸಿದ್ದಾಗಿದೆ.
ಮುಂದಿನ ಎರಡು ವರ್ಷಗಳಿಗೆ ತಮ್ಮ 75 ಶೇಕಡಾ ಉದ್ಯೋಗಿಗಳೂ ತಮ್ಮ ಮನೆಗಳಲ್ಲೇ ಕುಳಿತು ಕೆಲಸ ನಿರ್ವಹಿಸಲಿದ್ದಾರೆ ಎಂದು ಹೇಳುವ ಕಂಪೆನಿಗಳು, ಮುಂದಿನ ವರ್ಷವಾಗುವಾಗ ಇವರಲ್ಲಿ ಎಷ್ಟು ಮಂದಿಗೆ ಉದ್ಯೋಗವಿರಲಿದೆ ಎಂಬುದನ್ನೂ ಸ್ಪಷ್ಟಪಡಿಸಬೇಕಿದೆ. ನಿಮ್ಮ ಉದ್ಯೋಗ ನಿಮ್ಮ ಕಂಪೆನಿಯೊಂದಿಗಿನ ಒಂದು ಗುಪ್ತ ಒಪ್ಪಂದ ಮಾತ್ರವಾಗಿ ಬದಲಾಗುವ ಒಂದು ಜಗತ್ತನ್ನು ಕೋವಿಡ್‍ನ ನಂತರ ಕಾರ್ಪೊರೇಟ್ ಶಕ್ತಿಗಳು ನಿರ್ಮಾಣ ಮಾಡಹೊರಟಿದ್ದಾರೆ. ಮಾಕ್ರ್ಸ್ ನಂತವರ ಕಾಲದಲ್ಲಿ, ಮನೆಗಳಿಂದ ಫ್ಯಾಕ್ಟರಿಗಳ ಕಡೆಗೆ ಒಡೆತನವನ್ನು ಕರೆದುಕೊಂಡು ಬಂದ ಆಧುನಿಕ ನೌಕರರ ವರ್ಗವನ್ನು, ಅವರಿದೀಗ ಅವರ ಮನೆಗಳಿಗೇ ಹಿಂತಿರುಗಿಸುತ್ತಿದ್ದಾರೆ.
ಪ್ಲಾಟ್‍ಫಾರ್ಮ್ ಒಡೆತನವು ಎಷ್ಟು ಅನಾಯಾಸವಾಗಿ, ಕೋವಿಡ್‍ನ ಸಂದರ್ಭವನ್ನು ತಮ್ಮ ಘೋಷಿತವೂ ಅಘೋಷಿತವೂ ಆದ ಲಾಭಲಕ್ಷ್ಯಗಳಿಗಾಗಿ ಉಪಯೋಗಿಸಲು ಹೊರಟಿವೆ ಎಂಬುವುದರ ಒಂದು ಪ್ರತ್ಯಕ್ಷ ಉದಾಹರಣೆಯನ್ನಾಗಿದೆ ನಾವಿದರಲ್ಲಿ ಕಾಣುತ್ತಿರೋದು. ನೌಕರರನ್ನು ಈ ರೀತಿ ಸಾಮೂಹಿಕವಾಗಿ ಮನೆಯಲ್ಲಿಯೇ ಕೆಲಸ ನಿರ್ವಹಿಸುವಂತೆ ಮಾಡುವುದರಿಂದ ಹಿಂದೆ, ಎಸ್ಟಾಬ್ಲಿಷ್‍ಮೆಂಟ್ ಖರ್ಚುಗಳನ್ನು ಉಳಿತಾಯ ಮಾಡಬಹುದೆನ್ನುವ (ಅಷ್ಟು ನಿಸ್ವಾರ್ಥವಲ್ಲದ) ಉದ್ದೇಶವನ್ನು ಮಾತ್ರ ಹೊಂದಿದ್ದಾರೆ ಅಂದುಕೊಳ್ಳಲು ಸಾಧ್ಯವಿಲ್ಲ. ಅದು ಔದ್ಯೋಗಿಕ ವ್ಯಾಪಾರದ ಕ್ರಮದಲ್ಲಿ ಗುರುತರವಾದ ಪ್ರತ್ಯಾಘಾತಗಳನ್ನು ಸೃಷ್ಟಿಸುವ ಒಂದು ಹಸ್ತಕ್ಷೇಪವೇ ಆಗಿದೆ. ಯಾರನ್ನು ನೇಮಿಸುತ್ತಾರೆ, ಯಾರನ್ನು ವಜಾಗೊಳಿಸುತ್ತಾರೆ, ಯಾವ ರೀತಿಯ ಮಾನದಂಡಗಳನ್ನು ಈ ವಿಷಯದಲ್ಲಿ ಪಾಲಿಸುತ್ತಾರೆ ಮುಂತಾದ ಪ್ರಶ್ನೆಗಳು ಅಪ್ರಸಕ್ತವಾಗುತ್ತಿದೆ. ಆ ಅರ್ಥದಲ್ಲಿ ಸರಕಾರಗಳೊಂದಿಗೆ ಈ ವಿಷಯಗಳ ಬಗ್ಗೆ ಟ್ರೇಡ್ ಯೂನಿಯನ್‍ಗಳು ಮಾತುಕತೆ ನಡೆಸಬೇಕಿದೆ.
ಇದನ್ನು ಇಂದಿನ ನಿಯೋಲಿಬೆರಲ್ ವ್ಯವಸ್ಥೆಯಲ್ಲಿ ಪೂರ್ಣವಾಗಿಯೂ ಕಟ್ಟಿಹಾಕಲು ಸಾಧ್ಯವಿದೆ ಎಂದು ಭಾವಿಸುವುದರಲ್ಲಿ ಅರ್ಥವಿಲ್ಲ. ಆದರೂ ಈ ಘಟ್ಟದಲ್ಲಿ ಟ್ರೇಡ್ ಯೂನಿಯನ್‍ಗಳು ಮತ್ತು ನಾಗರಿಕ ಸಮಾಜ ಇದನ್ನು ಪ್ರಶ್ನಿಸಬೇಕೆಂಬುದು ಅನಿವಾರ್ಯವಾಗಿದೆ. ಕಡೇ ಪಕ್ಷ ಮನೆಯಲ್ಲಿ ಉದ್ಯೋಗ ಎಂಬುದು, ಎಲ್ಲಾ ಉದ್ಯೋಗಿಗಳ ಪೈಕಿ ಎಷ್ಟು ಶೇಕಡಾ ಜನರಿಂದ, ಯಾವುದೆಲ್ಲಾ ವ್ಯವಸ್ಥೆಗಳಲ್ಲಿ ಮಾಡಿಸಬಹುದು ಎಂಬುದರ ಕುರಿತಾಗಿ ಕಾನೂನು ಬದ್ಧವಾದ ನಿರ್ದೇಶನಗಳನ್ನು ಹೊರಡಿಸುದಕ್ಕೆ ಒತ್ತಡ ಹೇರುವ ಕೆಲಸವಾದರೂ ಮಾಡಬೇಕಿದೆ. ಈ ರೀತಿಯ ಮೂಲಭೂತವಾದ ಬದಲಾವಣೆಗಳು, ಒಂದು ನಿಯಮ-ಸಾಮಾಜಿಕ ನಿಯಂತ್ರಣಗಳಿಲ್ಲದೆ, ಸ್ವ ಇಚ್ಛಾಪರವಾಗಿ ಜಾರಿಗೆ ತರೋದಕ್ಕೆ, ಕಾರ್ಪೊರೇಟ್‍ಗಳಿಗೆ ಸಾಧ್ಯವಾಗುವ ಜಾಗತಿಕ ಗ್ರಾಮ ಎಂಬ ಬನಾನ ರಿಪಬ್ಲಿಕ್ ಆಗಿ ಈ ಜಗತ್ತು ಈಗಲೂ ಸಂಪೂರ್ಣವಾಗಿ ಬದಲಾಗಿಲ್ಲ.
***************************************************************************
ಕಾಮೆಂಟ್‌ಗಳು