ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಫೈಹ ತರ್ಬಿಯಾ ವೆಕೇಶನ್ ಕೋರ್ಸ್ ಗೆ ವಿದ್ಯುಕ್ತ ಚಾಲನೆ

ಉಪ್ಪಳ: ಪೈವಳಿಕೆ ಪಯ್ಯಕ್ಕಿ ಉಸ್ತಾದ್ ಇಸ್ಲಾಮಿಕ್ ಅಕಾಡೆಮಿಯ ಪೂರ್ವ ವಿದ್ಯಾರ್ಥಿ ಸಂಘ 'ಫೈಹಾ' ದ ವತಿಯಿಂದ ನಡೆಸಲ್ಪಡುವ 40 ದಿನಗಳ ತರ್ಬಿಯಾ ವೆಕೇಶನ್ ಸರ್ಟಿಫಿಕೇಟ್ ಕೋರ್ಸ್ ಗೆ ಸೋಮವಾರ ಉಪ್ಪಳದ ಬದ್ರಿಯಾ ಮದ್ರಸಾ ಸಭಾಂಗಣದಲ್ಲಿ ವಿದ್ಯುಕ್ತ ಚಾಲನೆ ನೀಡಲಾಯಿತು. ಮುತವಲ್ಲಿ ಮುಹಮ್ಮದ್ ತುರುತ್ತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಪಯ್ಯಕ್ಕಿ ಉಸ್ತಾದ್ ಇಸ್ಲಾಮಿಕ್ ಅಕಾಡೆಮಿಯ ಅಧ್ಯಕ್ಷರಾದ ಅಬ್ದುಲ್ ಮಜೀದ್ ದಾರಿಮಿ ಪೈವಳಿಕೆ ಉದ್ಘಾಟಿಸಿದರು. ಪೈವಳಿಕೆ ಅನ್ಸಾರಿಯಾ ದಅವಾ ಕಾಲೇಜಿನ ಅಧ್ಯಾಪಕರಾದ ರಫೀಕ್ ಬಾಖವಿ ಮಠ ಕಾರ್ಯಕ್ರಮದಲ್ಲಿ ತರ್ಬಿಯಾ ಕೋರ್ಸ್ ನ ಅನಿವಾರ್ಯತೆಯ ಬಗ್ಗೆ ವಿಷಯ ಮಂಡನೆ ನಡೆಸಿದರು. ಕಾರ್ಯಕ್ರಮದಲ್ಲಿ ಪಯ್ಯಕ್ಕಿ ಉಸ್ತಾದ್ ಅಕಾಡೆಮಿಯ ಜ. ಸೆಕ್ರಟರಿ ಹನೀಫ್ ಹಾಜಿ ಪೈವಳಿಕೆ, ಟ್ರಶರರ್ ಅಝೀಝ್ ಹಾಜಿ ಮರಿಕ್ಕೆ,ಕಾರ್ಯದರ್ಶಿ ಸ್ವಾಲಿಹ್ ಹಾಜಿ ಕಳಾಯಿ ,ಪಯ್ಯಕ್ಕಿ ದರ್ಸ್ ಪೂರ್ವ ವಿದ್ಯಾರ್ಥಿಗಳ ಸಂಘ- ಓಸ್ಫೋಮಾಕ್ಸ್ ನ ಅಧ್ಯಕ್ಷರಾದ ಟಿ.ಎಚ್. ಅಬ್ದುಲ್ ಖಾದರ್ ಫೈಝಿ ಚೆಂಗಳ, ಪೈವಳಿಕೆ ಅನ್ಸಾರಿಯಾ ಕಾಲೇಜಿನ ಅಧ್ಯಾಪಕ ಲತೀಫ್ ದಾರಿಮಿ, ಕ್ಯಾಲಿಕಟ್ ಮುಹಮ್ಮದ್ ಹಾಜಿ,ಮುಹಮ್ಮದ್ ಕುಂಞಿ ಪೈವಳಿಕೆ, ಅಬ್ದುಲ್ ಜಬ್ಬಾರ್ ಉಪ್ಪಳ, ಹಮೀದ್ ಮಾಸಿಮಾರ್, ಹನೀಫ್ ಗೋಲ್ಡ್ ಕಿಂಗ್, ಉಪ್ಪಳ ಟೌನ್ ಖತೀಬ್ ಇಬ್ರಾಹಿಂ ಹನೀಫಿ, ಹನೀಫ್ ಮುಸ್ಲಿಯಾರ್ ತಹಾನಿ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ...

FAIHA Tharbiya Course Inauguration Photos

[wpvideo LyVeMtGI] [wpvideo TTeAb4Fw]

ಕರ್ನಾಟಕದಲ್ಲಿ ಇಸ್ಲಾಮ್: ಒ೦ದು ಸ೦ಕ್ಷಿಪ್ತ ನೋಟ

ವಾಟ್ಸಪ್ ನಲ್ಲಿ ಸಿಕ್ಕಿದ ಸಂಗ್ರಹ ಲೇಖನ: ಪಕ್ಕದ ಕೇರಳ ರಾಜ್ಯದ ಉಲಾಮಗಳು ಬ೦ದು ಕರ್ನಾಟಕದಲ್ಲಿ ಧರ್ಮ ಪ್ರಚಾರ ಮಾಡಿದರೆ೦ದು ಜನಜನಿತ ಮಾತು.ಆದರೆ,ಅದು ಅಷ್ಟೊ೦ದು ಸರಿಯಾದ ಮಾತಲ್ಲ.ಕರ್ನಾಟಕದಲ್ಲಿ ಧರ್ಮ ಪ್ರಚಾರದ ಹೊಣೆಯನ್ನು ನೇರವಾಗಿ ಸ್ವಹಾಬಿಗಳು ವಹಿಸಿದ್ದರು.ಸ್ವಹಾಬಿಗಳಿ೦ದ ನೇರವಾಗಿ ಧಾರ್ಮಿಕ ಜ್ಞಾನವನ್ನು ಕರಗತ ಮಾಡಿದ ಹಲವರು ಕರ್ನಾಟಕದವರೂ ಇದ್ದಾರೆ ಎನ್ನುವುದು ಹೆಮ್ಮೆಯ ಸ೦ಗತಿ.ಕರ್ನಾಟಕದಲ್ಲಿ ಸ್ವಹಾಬಿಗಳು ನಿರ್ಮಿಸಿದ ಎರಡು ಮಸೀದಿಗಳು ಇದಕ್ಕೆ ಜ್ವಲ೦ತ ನಿದರ್ಶನ.ಕರ್ನಾಟಕದಲ್ಲಿ ಇಸ್ಲಾಮ್ ಧರ್ಮದ ಪ್ರಚಾರ ಹಾಗೂ ಸ್ವಹಾಬಿಗಳಿ೦ದ ನಿರ್ಮಿಸಲ್ಪಟ್ಟ ಮಸೀದಿಯ ಕುರಿತು ಜನರಿಗೆ ಹೆಚ್ಚಿನ ಮಾಹಿತಿ ಇಲ್ಲದ ಕಾರಣ ಆ ಬಗ್ಗೆ ಅಧ್ಯಯನ ಅತ್ಯಗತ್ಯ. ಭಾರತಕ್ಕೆ ಇಸ್ಲಾಮ್ ಹೇಗೆ? ಯಾವಾಗ? ಬ೦ತು ಎ೦ಬುದರ ಬಗ್ಗೆ ಇತಿಹಾಸಕಾರರಲ್ಲಿ ವಿಭಿನ್ನ ಅಭಿಪ್ರಾಯಗಳಿವೆ. ಆದರೆ ಭಾರತದಲ್ಲಿ ಮೊಟ್ಟ ಮೊದಲು ಇಸ್ಲಾಮ್ ತಲುಪಿದ್ದು ಕೇರಳದತ್ತ ಎನ್ನುವುದರಲ್ಲಿ ಸ೦ಶಯವಿಲ್ಲ.ಕೇರಳದಲ್ಲಿ ಇಸ್ಲಾಮ್ ಸ೦ಪೂರ್ಣವಾಗಿ ವ್ಯಾಪಿಸುವ ಮೊದಲೇ ಸ್ವಹಾಬಿಗಳು ದಕ್ಷಿಣ ಕರ್ನಾಟಕದಲ್ಲಿ ಧರ್ಮ ಪ್ರಚಾರ ಕೈಗೊ೦ಡಿದ್ದರು. ಅರಬಿಗಳು ಮೂಲತಃ ವ್ಯಾಪಾರಿಗಳು.ಅರೇಬಿಯಾದಿ೦ದ ಸರಕುಗಳನ್ನು ತು೦ಬಿಸಿ ವಿವಿಧ ಕಡೆಗೆ ಯಾತ್ರೆ ಹೋಗುವ ಅರಬಿಗಳು ಅಲ್ಲಿ೦ದ ಸರಕುಗಳನ್ನು ಖರೀದಿಸಿ ತವರೂರಲ್ಲಿ ವ್ಯಾಪಾರ ವಹಿವಾಟು ನಡೆಸುತಿದ್ದರು.ಅ೦ದ ಹಾಗು ಭಾರತಕ್ಕೆ ಕೂಡ ಈ ಅರಬ್ ವರ್ತಕರು ಬ೦ದಿದ್ದ...

FAIHA- ALUMNI MEET

FAIHA-(Federation Of Ansaries For Islamic & Humanitarian Activities)Organized Alumni Meet On Feb 2, 2k19 at Payyakki Usthad Islamic Academy.

#ಹಬೀಬರನ್ನು_ಪ್ರೀತಿಸುವ_ಮನಗಳಿಗೆ_ದಿನವೂ_ಪ್ರೇಮಿಗಳ_ದಿನ...

ನಗೆಯೊಂದು ಬೀರಿದರೆ ನನ್ನ ಪ್ರಿಯ ಹಬೀಬರ ಆನನವು ಮಲ್ಲಿಗೆ ಹೂ ಅರಳಿದಂತೆ.... ಸಿಹಿಮುತ್ತುಗಳಾಡಿದರೆ ನನ್ನ‌ ಪ್ರೇಮ ಭಾಜನರ ಅಧರವು ಸಂಪಿಗೆಯು ಕಂಪು ಹರಡಿದಂತೆ.... ಆಕಾಶವೇ ಹೇಳು , ನಿನ್ನೊಡಲೊಳಗಿನ ಚಂದಿರನ ಶೋಭೆಯೋ ಅವರಿಗೆ,ಅದೋ ಅದಕ್ಕಿಂತಲೂ ಮಿಗಿಲೋ.. ಪೃಥ್ವಿಯೇ ಮಾತಾಡು, ನೀ ಪ್ರೀತಿಸಿದ ಚಂದಿರನಿಗಿಂತಲೂ ಕಾಂತಿಯಿದೆಯೋ ಆ ಮೃದು ಮಂದಹಾಸಕ್ಕೆ... ಮೋಡವೇ ಹೇಳು ಬಾ.. ತಾರೆಗಳಂತೆ ಪ್ರಕಾಶಿಸಿದ ಅನುಚರರ ಮಧ್ಯೆ ನನ್ನ ಹಬೀಬರು ಹುಣ್ಣಿಮೆಯ ಚಂದ್ರನ ಸೊಬಗನ್ನು ನಾಚಿಸುವಷ್ಟು ಸುಂದರಾಂಗರೇ... ಗರಿಬಿಚ್ಚಿ ಹಾರತೊಡಗಿದೆ ಮನಸ್ಸು ಪ್ರಣಯಾನುರಾಗಗಳ ರಸದಲ್ಲಿ ಬೆರೆತು ಮತ್ತೆ ಮನವು ಮದೀನಾವನ್ನು ನೆನೆಯುತ್ತಿದೆ.. ಆ ಪುಣ್ಯ ಮಣ್ಣನ್ನು ಮತ್ತೆ ಸ್ಮರಿಸುತ್ತಿದೆ.. ಅಸ್ಸಲಾಮು ಅಲೈಕ ಯಾ ರಸೂಲಲ್ಲಾಹ್.....

Payyakki Usthad Islamic Academy -Ansariya College of Islamic Science10th Anniversary & Convocation Program-#Photo Gallery......