ವಿಷಯಕ್ಕೆ ಹೋಗಿ

ದಾರುಲ್ ಹುದಾ: ಕೀರ್ತಿಯ ಕಿರೀಟಕ್ಕೆ ಮತ್ತೊಂದು ಗರಿ

'ದಾರುಲ್ ಹುದಾ' ಜೊತೆ ಒಡಂಬಡಿಕೆಗೆ ಸಹಿ ಹಾಕಿದ ಮೊರೊಕ್ಕೊ 'ಅಲ್ ಖರವಿಯ್ಯೀನ್' ವಿಶ್ವವಿದ್ಯಾನಿಲಯ..!



ಜಗತ್ತಿನ ಅತಿ ಪುರಾತ‌ನ ಇಸ್ಲಾಮಿಕ್ ವಿದ್ಯಾಲಯವಾದ ಮೊರೋಕ್ಕೊ ದಲ್ಲಿರುವ 'ಅಲ್ ಖರವಿಯ್ಯೀನ್' ವಿಶ್ವವಿದ್ಯಾಲಯವು, ಚೆಮ್ಮಾಡ್ ದಾರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯೊಂದಿಗೆ ಸಹಕಾರ ಒಡಂಬಡಿಕೆಯ ಪತ್ರಕ್ಕೆ ಸಹಿ ಹಾಕಿತು.

ಒಡಂಬಡಿಕೆಗೆ ಸಹಿ ಹಾಕುವ ಕಾರ್ಯಕ್ರಮವು 'ಅಲ್ ಖರವಿಯ್ಯೀನ್ ವಿಶ್ವವಿದ್ಯಾಲಯ'ದ ಉನ್ನತ ಮತ ಶಿಕ್ಷಣ ವಿಭಾಗ 'ದಾರುಲ್ ಹದೀಸ್ ಅಲ್ ಹಸನಿಯ್ಯ'ದ ಕ್ಯಾಂಪಸ್ನಲ್ಲಿ ಜರುಗಿತು.

ಯುನೆಸ್ಕೊ ಮತ್ತು ಗಿನ್ನೆಸ್ ವಿಶ್ವ ದಾಖಲೆ ಪಟ್ಟಿಯ ಪ್ರಕಾರ ಜಗತ್ತಿನ ಅತ್ಯಂತ ಪುರಾತನವಾದ ಧಾರ್ಮಿಕ ಉನ್ನತ ಶಿಕ್ಷಣ ಕೇಂದ್ರವಾಗಿದೆ ಅಲ್ ಖರವಿಯ್ಯೀನ್ ವಿಶ್ವವಿದ್ಯಾಲಯ. ಅರಬ್ ವಂಶಜರಾಗಿದ್ದ ಫಾತಿಮ ಅಲ್ ಫಿಹ್ರಿ , ಕ್ರಿ.ಶ 859 ರಲ್ಲಿ ಸ್ಥಾಪಿಸಿದ ಪ್ರಾಥಮಿಕ ಮತ ಶಿಕ್ಷಣ ಶಾಲೆಯಾಗಿತ್ತು ಅದು. ಆನಂತರ ಇಸ್ಲಾಮಿನ ಇತಿಹಾಸದಲ್ಲೇ ಆಧ್ಯಾತ್ಮಿಕ ಶಿಕ್ಷಣ ರಂಗದಲ್ಲಿ ಜಗತ್ಪ್ರಸಿದ್ಧಿ ಪಡೆದ ಪ್ರಧಾನ ಕೇಂದ್ರವಾಗಿ ಅಲ್ ಖರವಿಯ್ಯೀನ್ ರೂಪುಗೊಂಡಿತು. 1963 ರಲ್ಲಿ ಇದು ವಿಶ್ವವಿದ್ಯಾಲಯವೆನಿಸಿಕೊಂಡಿತು.

ಜಾಗತಿಕ ಮಟ್ಟದಲ್ಲಿನ ವಿಶ್ವವಿದ್ಯಾಲಯವೊಂದು ಇದೇ ಪ್ರಥಮ ಬಾರಿಗೆ ಭಾರತೀಯ ವಿಶ್ವವಿದ್ಯಾಲಯದೊಂದಿಗೆ ಕೈ ಜೋಡಿಸುತ್ತಿದೆ.

ಅಕಾಡೆಮಿಕ್ ಒಡಂಬಡಿಕೆಯ ಪ್ರಕಾರ ವಿದ್ಯಾರ್ಥಿ ಹಸ್ತಾಂತರ, ಸಂಶೋಧನೆಯಂತಹ ವಿವಿಧ ಅಕಾಡೆಮಿಕ್ ಯೋಜನೆಗಳಲ್ಲಿ ಎರಡೂ ವಿದ್ಯಾಲಯಗಳು ಪರಸ್ಪರ ಸಹಕಾರ ಮನೋಭಾವದಿಂದ ಕಾರ್ಯನಿರ್ವಹಿಸಲಿದೆ. ವಿಶ್ವವಿದ್ಯಾಲಯ ಉನ್ನತ ವಿಭಾಗವಾದ 'ದಾರುಲ್ ಹದೀಸ್ ಅಲ್ ಹಸನಿಯ್ಯ'ದೊಂದಿಗಿನ ಪ್ರತ್ಯೇಕವಾದ ಸಹಕಾರವೂ ಕೂಡಾ ಎಂ.ಒ.ಯು ನ ಭಾಗವಾಗಿದೆ.

ಮೊರೋಕ್ಕೊ ಮಾಜಿ ದೊರೆಯಾಗಿದ್ದ ಹಸನ್ (ದ್ವಿತೀಯ) 1964 ರಲ್ಲಿ ಸ್ಥಾಪಿಸಿದ ದಾರುಲ್ ಹದೀಸ್ ಇದೀಗ ಅಲ್ ಖರವಿಯ್ಯೀನ್ ವಿಶ್ವವಿದ್ಯಾಲಯದ ಅಧೀನದಲ್ಲಿರುವ ಮುಕ್ತವಾದ ಕ್ಯಾಂಪಸ್ಸಾಗಿದೆ.
ಭಾರತದ ಇಸ್ಲಾಮಿಕ್‌ ವಿಶ್ವವಿದ್ಯಾನಿಲಯಗಳ ಅಂತರರಾಷ್ಟ್ರೀಯ ಒಕ್ಕೂಟಗಳಾದ ಫೆಡೆರೇಶನ್ ಆಫ್ ದಿ ಯುನಿವರ್ಸಿಟೀಸ್ ಆಫ್ ದಿ ಇಸ್ಲಾಮಿಕ್ ವರ್ಲ್ಡ್, ಲೀಗ್ ಆಫ್ ಇಸ್ಲಾಮಿಕ್ ಯುನಿವರ್ಸಿಟೀಸ್ ಮುಂತಾದುವುಗಳಿಂದ ಈ ಹಿಂದೆಯೇ ಅಂಗೀಕಾರ ಪಡೆದಿರುವ ವಿದ್ಯಾಲಯವಾಗಿದೆ ದಾರುಲ್ ಹುದಾ.

ಇಂಟರ್ ನ್ಯಾಷನಲ್ ಇಸ್ಲಾಮಿಕ್ ಯುನಿವರ್ಸಿಟಿ ಮಲೇಷಿಯಾ, ಅಲ್ ಅಝ್ಹರ್ ಈಜಿಪ್ಟ್, ಸೈತೂನ ಟುನೀಷ್ಯಾ, ಸುಲ್ತಾನ್ ಶರೀಫ್ ಅಲಿ ಇಸ್ಲಾಮಿಕ್ ಯುನಿವರ್ಸಿಟಿ ಬ್ರೂಣ, ಅಂಗಾರ ಯುನಿವರ್ಸಿಟಿ ತುರ್ಕಿ ಹೀಗೇ ಈಗಾಗಲೇ ಒಂದು ಡಜನಿಗಿಂತಲೂ ಹೆಚ್ಚು ಅಂತಾರಾಷ್ಟ್ರೀಯ ವಿದ್ಯಾಲಯಗಳೊಂದಿಗೆ ದಾರುಲ್ ಹುದಾ ಪ್ರಸ್ತುತ ಸಹಕಾರದ ಒಡಂಬಡಿಕೆ ಮಾಡಿಕೊಂಡಿದೆ.

ಎಂ.ಒ.ಯು ಒಡಂಬಡಿಕೆಯ ಕಾರ್ಯಕ್ರಮದಲ್ಲಿ ಅಲ್ ಖರವಿಯ್ಯೀನ್ ವಿಶ್ವವಿದ್ಯಾಲಯ ಮತ್ತು ದಾರುಲ್ ಹದೀಸ್ ಅಲ್ ಹಸನಿಯ್ಯ ಇದರ ಪ್ರತಿನಿಧಿಗಳಾಗಿ ರೆಕ್ಟರ್ ಪ್ರೊ. ಡಾ. ಅಹ್ಮದ್ ಖಂಲೀಶಿ, ಡೆಪ್ಯುಟಿ ರೆಕ್ಟರ್ ಪ್ರೊ.ಡಾ .ಅಬ್ದುಲ್ ಹಮೀದ್ ಅಶ್ಶಾಖ್ ಮುಂತಾದವರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

Nizam Ansari ಹೇಳಿದ್ದಾರೆ…
Thank you.... All
Swalih atrಹೇಳಿದ್ದಾರೆ…
Masha allah

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕೋವಿಡ್ ಕಾಲದ ಓದು: ಚಂದ್ರನ ಚೂರು

'ಚಂದ್ರನ ಚೂರು' ಕೃತಿಯ ಹೆಸರು ಕೇಳಿದಾಗ ನಿಜವಾಗಿಯೂ ಅದೊಂದು ಕಾದಂಬರಿಯಾಗಿರಬಹುದು ಎಂದು ಭಾವಿಸಿದ್ದೆ. ಆದರೆ, ಪುಸ್ತಕ ಕೈಗೆ ತಲುಪಿದಾಗಲೇ ಗೊತ್ತಾಗಿದ್ದು, ಅದೊಂದು ಚಂದ್ರಲೋಕಕ್ಕೆ ಕೊಂಡೊಯ್ಯುವ ಅದ್ಭುತ ಕೃತಿ ಅಂತ. ತಂದೆ ಕುವೆಂಪು ಅವರ ಸಾಹಿತ್ಯದ ಹಾದಿಯಲ್ಲೇ ನಡೆದರೂ, ತೇಜಸ್ವಿಯವರ ಸಾಹಿತ್ಯವು ನಿಸರ್ಗ ವಿಸ್ಮಯ, ಭೂಗೋಳ, ಜೀವಶಾಸ್ತ್ರ, ಭತಶಾಸ್ತ್ರ, ಇತಿಹಾಸ ಹೀಗೇ ಎಲ್ಲಾ ಶಾಸ್ತ್ರಗಳ ಮಿಶ್ರಣ ರಸಾಯನ ಎಂದೇ ಹೇಳಬಹುದು. ಚಂದ್ರನ ಚೂರು ಚಂದ್ರ ಲೋಕದ ವಿಸ್ಮಯ ದೃಶ್ಯಗಳನ್ನು ಕಟ್ಟಿಕೊಡುವ ಚೊಚ್ಚಲ ಕೃತಿ. ಬಾಹ್ಯಾಕಾಶ, ಖಗೋಳ ಶಾಸ್ತ್ರ ವಿಷಯದಲ್ಲಿ ಆಸಕ್ತಿ ಇಲ್ಲದ ನನ್ನಂತವರನ್ನೂ ಇದು ಸರಾಗವಾಗಿ ಓದಿಸಿಕೊಂಡು ಹೋಗುವಂತೆ ಮಾಡುತ್ತದೆ, ಅದಕ್ಕೆ ಕಾರಣ, ತೇಜಸ್ವಿ ಅವರ ಬರವಣಿಗೆ ಹಾಗೂ ವಿವರಣೆಯ ಶೈಲಿ.. ಜಗತ್ತಿನಲ್ಲಿ ಮನುಷ್ಯನು ಚಂದ್ರನಲ್ಲಿಗೆ ಕಾಲಿಡುವುದಕ್ಕೂ ಮುನ್ನ, ಯಾವುದೆಲ್ಲಾ ರೀತಿಯ ಪರಿಶ್ರಮಗಳು ನಡೆದಿದ್ದವು ಹಾಗೂ ಭೂಮಂಡಲ ಮತ್ತು ಚಂದ್ರನ ಕುರಿತಾಘಿ ಯಾವುದೆಲ್ಲಾ ಆಯಾಮಗಳಲ್ಲಿ ಅಧ್ಯಯನಗಳಾಗಿದ್ದುವು ಎಂಬುದರ ಸಂಪೂರ್ಣ ವಿಷಯಗಳಿವೆ. ಚಂದ್ರನಲ್ಲಿ ತಲುಪಿದ ಮನುಷ್ಯನಿಗೆ ಆದ ಅನುಭವಗಳೇನು? ನೀಲ್ ಆಮ್Fಸ್ಟ್ರಾಂಗ್ ತಂಡದ ಚಂದ್ರಯಾನದ ರಸವತ್ತಾದ ಅನುಭವಗಳು, ಚಂದಿರನ ಮಣ್ಣಲ್ಲಿ ಅಮೇರಿಕದ ಫ್ಲಾಗ್ ಮತ್ತು ಬೋಡ್F ಸ್ಥಾಪಿಸಿ ಬಂದ ಆ ಧೀರ ತಂಡದ ಬೆರಗಾಗಿಸುವ ಕ್ಷಣ ಕ್ಷಣದ ವರದಿಗಳು ಈ ಕೃತಿಯ ಲೇಖನಗಳಲ್ಲಿ ಅಡಗಿದೆ. ಒಟ್ಟಿನಲ...

ಇಂದಿನಿಂದ 'ಸಮಸ್ತ'ದ ಆನ್ ಲೈನ್ ತರಗತಿಗಳು ಆರಂಭ

ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಒಕ್ಕೂಟದ (SKJU)ಅಧೀನದಲ್ಲಿ‌ ಕಾರ್ಯಾಚರಿಸುವ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್‌ ಅಂಗೀಕೃತ ಮದ್ರಸಗಳ ವಿದ್ಯಾರ್ಥಿಗಳಿಗೆ ನವ ಅಧ್ಯಯನ ವರ್ಷ ಇಂದಿನಿಂದ ಆರಂಭಗೊಂಡಿದೆ. ವಿಶೇಷ ಅಂದ್ರೆ, ಈ ಬಾರಿ ತರಗತಿಗಳ ಪ್ರಾರಂಭೋತ್ಸವದ ಸಂಭ್ರಮಗಳಿಲ್ಲದೆ, ಮದ್ರಸಾ ಕಟ್ಟಡಗಳು ತೆರೆಯದೇ, ಹತ್ತು ಸಾವಿರಕ್ಕೂ ಮಿಕ್ಕ ಮದ್ರಸಗಳ ಹನ್ನೆರಡು ಲಕ್ಷ ವಿದ್ಯಾರ್ಥಿಗಳು ಅವರವರ ಮನೆಗಳಲ್ಲಿಯೇ ಕುಳಿತು ತರಗತಿಗಳಲ್ಲಿ ಪಾಲ್ಗೊಳ್ಳುತ್ತಿರುವುದು ಎಂಬುದು.  ಆನ್ ಲೈನ್ ತರಗತಿಗಳಿಗಾಗಿ, ಸಮಸ್ತ ಈ ಹಿಂದೆಯೇ ಎಲ್ಲಾ ಸಿದ್ಧತೆಗಳನ್ನು ನಡೆಸಿದ್ದು, ವಿದ್ಯಾಭ್ಯಾಸ ಬೋರ್ಡ್‌ ಅದಕ್ಕಾಗಿ ಆರು ಕ್ಯಾಮರಾ ಯುನಿಟ್ ಗಳ ಕ್ಲಾಸ್ ರೂಂಗಳು ,22 ಪರಿಣತರಾದ ಅಧ್ಯಾಪಕರನ್ನು ನೇಮಕಗೊಳಿಸಿದೆ.  ತರಗತಿ ಆರಂಭದಿಂದ ಕೊನೆಯವರೆಗೂ ವಿದ್ಯಾರ್ಥಿ ಜೊತೆ ಪೋಷಕರು ಕುಳಿತಿರಬೇಕು.ಹೋಂ ವರ್ಕ್ ನೀಡಿದರೆ, ಅದನ್ನು ಮಾಡಿ, ಮುಂದೆ ಮದ್ರಸಗಳಲ್ಲಿ ತರಗತಿ ಆರಂಭಗೊಳ್ಳುವಾಗ ಮೌಲ್ಯಮಾಪನಕ್ಕಾಗಿ ಅಧ್ಯಾಪಕರಿಗೆ ತೋರಿಸಬೇಕು. ಮನೆಯಲ್ಲಿ ತರಗತಿಯ ವಾತಾವರಣವನ್ನು ಒದಗಿಸಿಕೊಟ್ಟು,ವಿದ್ಯಾರ್ಥಿಗಳಿಗೆ ಮನೆಯವರು ಸಹಕರಿಸಬೇಕು. ಅಲ್ಲದೇ, ಮದ್ರಸಾ ಹಾಗೂ ಜಮಾಅತ್ ಕಮಿಟಿಗಳು ಸೇರಿ, ಆನ್‌ಲೈನ್ ತರಗತಿಗಳು ಆಯಾ ಮದ್ರಸಗಳ ವಿದ್ಯಾರ್ಥಿಗಳಿಗೆ ಅವರವರ ಮನೆಗಳಲ್ಲಿಯೇ ಸುಲಭವಾಗಿ ತಲುಪುವಂತೆ ಎಲ್ಲಾ ರೀತಿಯಲ್ಲಿ ಸಹಕಾರವನ್ನು ನೀಡಬೇಕು. ಮದ್ರಸಗಳು ತ...

Payyakki Usthad Islamic Academy -Ansariya College of Islamic Science10th Anniversary & Convocation Program-#Photo Gallery......