'ದಾರುಲ್ ಹುದಾ' ಜೊತೆ ಒಡಂಬಡಿಕೆಗೆ ಸಹಿ ಹಾಕಿದ ಮೊರೊಕ್ಕೊ 'ಅಲ್ ಖರವಿಯ್ಯೀನ್' ವಿಶ್ವವಿದ್ಯಾನಿಲಯ..!

ಜಗತ್ತಿನ ಅತಿ ಪುರಾತನ ಇಸ್ಲಾಮಿಕ್ ವಿದ್ಯಾಲಯವಾದ ಮೊರೋಕ್ಕೊ ದಲ್ಲಿರುವ 'ಅಲ್ ಖರವಿಯ್ಯೀನ್' ವಿಶ್ವವಿದ್ಯಾಲಯವು, ಚೆಮ್ಮಾಡ್ ದಾರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯೊಂದಿಗೆ ಸಹಕಾರ ಒಡಂಬಡಿಕೆಯ ಪತ್ರಕ್ಕೆ ಸಹಿ ಹಾಕಿತು.
ಒಡಂಬಡಿಕೆಗೆ ಸಹಿ ಹಾಕುವ ಕಾರ್ಯಕ್ರಮವು 'ಅಲ್ ಖರವಿಯ್ಯೀನ್ ವಿಶ್ವವಿದ್ಯಾಲಯ'ದ ಉನ್ನತ ಮತ ಶಿಕ್ಷಣ ವಿಭಾಗ 'ದಾರುಲ್ ಹದೀಸ್ ಅಲ್ ಹಸನಿಯ್ಯ'ದ ಕ್ಯಾಂಪಸ್ನಲ್ಲಿ ಜರುಗಿತು.
ಯುನೆಸ್ಕೊ ಮತ್ತು ಗಿನ್ನೆಸ್ ವಿಶ್ವ ದಾಖಲೆ ಪಟ್ಟಿಯ ಪ್ರಕಾರ ಜಗತ್ತಿನ ಅತ್ಯಂತ ಪುರಾತನವಾದ ಧಾರ್ಮಿಕ ಉನ್ನತ ಶಿಕ್ಷಣ ಕೇಂದ್ರವಾಗಿದೆ ಅಲ್ ಖರವಿಯ್ಯೀನ್ ವಿಶ್ವವಿದ್ಯಾಲಯ. ಅರಬ್ ವಂಶಜರಾಗಿದ್ದ ಫಾತಿಮ ಅಲ್ ಫಿಹ್ರಿ , ಕ್ರಿ.ಶ 859 ರಲ್ಲಿ ಸ್ಥಾಪಿಸಿದ ಪ್ರಾಥಮಿಕ ಮತ ಶಿಕ್ಷಣ ಶಾಲೆಯಾಗಿತ್ತು ಅದು. ಆನಂತರ ಇಸ್ಲಾಮಿನ ಇತಿಹಾಸದಲ್ಲೇ ಆಧ್ಯಾತ್ಮಿಕ ಶಿಕ್ಷಣ ರಂಗದಲ್ಲಿ ಜಗತ್ಪ್ರಸಿದ್ಧಿ ಪಡೆದ ಪ್ರಧಾನ ಕೇಂದ್ರವಾಗಿ ಅಲ್ ಖರವಿಯ್ಯೀನ್ ರೂಪುಗೊಂಡಿತು. 1963 ರಲ್ಲಿ ಇದು ವಿಶ್ವವಿದ್ಯಾಲಯವೆನಿಸಿಕೊಂಡಿತು.
ಜಾಗತಿಕ ಮಟ್ಟದಲ್ಲಿನ ವಿಶ್ವವಿದ್ಯಾಲಯವೊಂದು ಇದೇ ಪ್ರಥಮ ಬಾರಿಗೆ ಭಾರತೀಯ ವಿಶ್ವವಿದ್ಯಾಲಯದೊಂದಿಗೆ ಕೈ ಜೋಡಿಸುತ್ತಿದೆ.
ಅಕಾಡೆಮಿಕ್ ಒಡಂಬಡಿಕೆಯ ಪ್ರಕಾರ ವಿದ್ಯಾರ್ಥಿ ಹಸ್ತಾಂತರ, ಸಂಶೋಧನೆಯಂತಹ ವಿವಿಧ ಅಕಾಡೆಮಿಕ್ ಯೋಜನೆಗಳಲ್ಲಿ ಎರಡೂ ವಿದ್ಯಾಲಯಗಳು ಪರಸ್ಪರ ಸಹಕಾರ ಮನೋಭಾವದಿಂದ ಕಾರ್ಯನಿರ್ವಹಿಸಲಿದೆ. ವಿಶ್ವವಿದ್ಯಾಲಯ ಉನ್ನತ ವಿಭಾಗವಾದ 'ದಾರುಲ್ ಹದೀಸ್ ಅಲ್ ಹಸನಿಯ್ಯ'ದೊಂದಿಗಿನ ಪ್ರತ್ಯೇಕವಾದ ಸಹಕಾರವೂ ಕೂಡಾ ಎಂ.ಒ.ಯು ನ ಭಾಗವಾಗಿದೆ.
ಮೊರೋಕ್ಕೊ ಮಾಜಿ ದೊರೆಯಾಗಿದ್ದ ಹಸನ್ (ದ್ವಿತೀಯ) 1964 ರಲ್ಲಿ ಸ್ಥಾಪಿಸಿದ ದಾರುಲ್ ಹದೀಸ್ ಇದೀಗ ಅಲ್ ಖರವಿಯ್ಯೀನ್ ವಿಶ್ವವಿದ್ಯಾಲಯದ ಅಧೀನದಲ್ಲಿರುವ ಮುಕ್ತವಾದ ಕ್ಯಾಂಪಸ್ಸಾಗಿದೆ.
ಭಾರತದ ಇಸ್ಲಾಮಿಕ್ ವಿಶ್ವವಿದ್ಯಾನಿಲಯಗಳ ಅಂತರರಾಷ್ಟ್ರೀಯ ಒಕ್ಕೂಟಗಳಾದ ಫೆಡೆರೇಶನ್ ಆಫ್ ದಿ ಯುನಿವರ್ಸಿಟೀಸ್ ಆಫ್ ದಿ ಇಸ್ಲಾಮಿಕ್ ವರ್ಲ್ಡ್, ಲೀಗ್ ಆಫ್ ಇಸ್ಲಾಮಿಕ್ ಯುನಿವರ್ಸಿಟೀಸ್ ಮುಂತಾದುವುಗಳಿಂದ ಈ ಹಿಂದೆಯೇ ಅಂಗೀಕಾರ ಪಡೆದಿರುವ ವಿದ್ಯಾಲಯವಾಗಿದೆ ದಾರುಲ್ ಹುದಾ.
ಇಂಟರ್ ನ್ಯಾಷನಲ್ ಇಸ್ಲಾಮಿಕ್ ಯುನಿವರ್ಸಿಟಿ ಮಲೇಷಿಯಾ, ಅಲ್ ಅಝ್ಹರ್ ಈಜಿಪ್ಟ್, ಸೈತೂನ ಟುನೀಷ್ಯಾ, ಸುಲ್ತಾನ್ ಶರೀಫ್ ಅಲಿ ಇಸ್ಲಾಮಿಕ್ ಯುನಿವರ್ಸಿಟಿ ಬ್ರೂಣ, ಅಂಗಾರ ಯುನಿವರ್ಸಿಟಿ ತುರ್ಕಿ ಹೀಗೇ ಈಗಾಗಲೇ ಒಂದು ಡಜನಿಗಿಂತಲೂ ಹೆಚ್ಚು ಅಂತಾರಾಷ್ಟ್ರೀಯ ವಿದ್ಯಾಲಯಗಳೊಂದಿಗೆ ದಾರುಲ್ ಹುದಾ ಪ್ರಸ್ತುತ ಸಹಕಾರದ ಒಡಂಬಡಿಕೆ ಮಾಡಿಕೊಂಡಿದೆ.
ಎಂ.ಒ.ಯು ಒಡಂಬಡಿಕೆಯ ಕಾರ್ಯಕ್ರಮದಲ್ಲಿ ಅಲ್ ಖರವಿಯ್ಯೀನ್ ವಿಶ್ವವಿದ್ಯಾಲಯ ಮತ್ತು ದಾರುಲ್ ಹದೀಸ್ ಅಲ್ ಹಸನಿಯ್ಯ ಇದರ ಪ್ರತಿನಿಧಿಗಳಾಗಿ ರೆಕ್ಟರ್ ಪ್ರೊ. ಡಾ. ಅಹ್ಮದ್ ಖಂಲೀಶಿ, ಡೆಪ್ಯುಟಿ ರೆಕ್ಟರ್ ಪ್ರೊ.ಡಾ .ಅಬ್ದುಲ್ ಹಮೀದ್ ಅಶ್ಶಾಖ್ ಮುಂತಾದವರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು