ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮೇ, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕೋವಿಡ್ ಕಾಲದ ಓದು : ಏರೋಪ್ಲೇನ್ ಚಿಟ್ಟೆ ಮತ್ತು ಇತರ ಕಥೆಗಳು

'ಏರೋಪ್ಲೇನ್ ಚಿಟ್ಟೆ' ಪೂರ್ಣಚಂದ್ರ ತೇಜಸ್ವಿ ಬರೆದ ನಮ್ಮ ಪರಿಸರದ ಜೀವಜಾಲಗಳ ಕುರಿತು ಬರೆದಿರುವ ಕುತೂಹಲಕಾರಿ ಅಂಶಗಳನ್ನೊಳಗೊಂಡ ಕೃತಿ. ನಮ್ಮ ಸುತ್ತಮುತ್ತಲಲ್ಲಿ ಕಂಡು ಬರುವ ಒಂಟಿಹುಳು, ಏರೋಪ್ಲೇನ್ ಚಿಟ್ಟೆ, ಬಾವಲಿ, ಕೀಟ ಶಿಲ್ಪಿಗಳು, ಹಾವು ಮೀನು, ಹಲ್ಲಿ, ಮಲಬಾರ್ ಟ್ರೋಜನ್, ಜೇಡ ಹೀಗೇ ಹಲವು ಜೀವಿಗಳ ಕುರಿತಾದ ವಿಸ್ಮಯ ಪ್ರಪಂಚವನ್ನು ನಮ್ಮ ಮುಂದೆ ತೆರೆದಿಡುತ್ತದೆ. ಒಂಟಿ ಹುಳು, ಮರದ ಎಲೆಯನ್ನು ಬೀಡಿಯಾಕಾರದಲ್ಲಿ ಸುತ್ತಿ, ಅದರಲ್ಲಿ ಮೊಟ್ಟೆ ಇಟ್ಟು ಭೂಮಿಗೆ ಬಿಸಾಡುವ ಆ ಸಂತಾನೋತ್ಪತ್ತಿ ಪ್ರಕ್ರಿಯೆಯನ್ನು ತೇಜಸ್ವಿಯವರು ಸೂಕ್ಷ್ಮವಾಗಿ ಗಮನಿಸಿ, ಅದರ ಎಲ್ಲಾ ಆಯಾಮಗಳ ಕುರಿತೂ ವಿವರಿಸಿದ್ದಾರೆ. ಕೃತಿಯ ಶೀರ್ಷಿಕೆಯಂತೆಯೇ ಏರೋಪ್ಲೇನ್ ಚಿಟ್ಟೆಯ ಬಗ್ಗೆಯೂ ಸಾಕಷ್ಟು ಮಾಹಿತಿಗಳಿವೆ. ಅವೆಲ್ಲವುಗಳಿಗಿಂತಲೂ ನನಗೆ ಬಹಳ ಅಚ್ಚರಿ ಮೂಡಿಸಿದುದೆಂದರೆ ಬಾವಲಿ ಎಂಬ ಜೀವಿಯ ಅದ್ಭುತ ಜಗತ್ತು.. ಬಾವಲಿಯ ಬಗ್ಗೆ ಅವರು ಬಾಕಿಯುಳಿಸಿದ ವಿಷಯಗಳೇ ಇಲ್ಲವೆಂದು ಅನಿಸುವಷ್ಟರ ಮಟ್ಟಿಗೆ, ಜಾಗತಿಕ ಮಟ್ಟದಲ್ಲಿ ವಿಜ್ಞಾನಿಗಳು, ಪ್ರಾಣಿಶಾಸ್ತ್ರ ಪರಿಣತರು ಬಾವಲಿಗಳ ಶ್ರವಣಾತೀತ ಶಬ್ದಗಳನ್ನು ಆಲಿಸುವ ಸಾಮರ್ಥ್ಯವನ್ನು ಕಂಡು ಹಿಡಿಯುವ ಪ್ರಯತ್ನದಲ್ಲಿ ಅವರು ಮಾಡಿದಂತಹ ಸಂಶೋಧನೆಗಳು, ಅಧ್ಯಯನಗಳು ಹಂತ ಹಂತವಾಗಿ ತಿಳಿಯುವಾಗ ನಾವೆಲ್ಲಾ ಸಾಮಾನ್ಯವೆಂದೇ ಕಾಣುವ, ಒಂದು ಜೀವಿಯಲ್ಲಿ ಇಷ್ಟೊಂದು ಕೌತುಕ, ಕುತೂಹಲಗಳಿಗೆ ಎಡೆಮಾಡಿಕೊಡುವಂತಹ ವಿಷಯಗಳಿವೆ ಅ...

ಕೋವಿಡ್ ಕಾಲದ ಓದು: 'ಬತ್ತದ ತೊರೆ'

ಶಿವರಾಮ ಕಾರಂತರ 'ಬತ್ತದ ತೊರೆ' ೧೯೫೩ ರಲ್ಲಿ ಮೂಡಿಬಂದ ಕೃತಿ. ಕನ್ನಡ ಸಾಹಿತ್ಯಕ್ಕೆ ಕಾರಂತರ ಕೊಡುಗೆ ಅಪಾರವಾದುದೆಂಬುವುದರಲ್ಲಿ ಎರಡು ಮಾತಿಲ್ಲ. ಕಡಲ ತೀರದ ಭಾರ್ಗವರೆಂದು ಖ್ಯಾತನಾಮರಾದ ಕಾರಂತರು ತಮ್ಮ ೫೦ ನೇಯ ವಯಸ್ಸಿನ ಆಸುಪಾಸಿನಲ್ಲಿ ಬರೆದ ಕೃತಿಯಿದು. ಅವರ ಸಮಕಾಲೀನರಾಗಿ ಹಲವು ಕಾದಂಬರಿಕಾರರು ಇದ್ದರೂ ಕೂಡಾ, ಅವರ ಕಾದಂಬರಿ ಪ್ರಕಾರದ ಸಾಧ್ಯತೆಗಳ ಅನಾವರಣ, ಅವುಗಳಲ್ಲಿನ ಹೊಸ ಪ್ರಯೋಗಗಳು ಇವುಗಳೆಲ್ಲಾ ಉಳಿದವರಿಗಿಂತಲೂ ಕಾರಂತರನ್ನು ಶ್ರೇಷ್ಠರನ್ನಾಗಿಸುತ್ತದೆ. ಇನ್ನು ಬತ್ತದ ತೊರೆ ಕಾದಂಬರಿಯಲ್ಲಿ ಐವರು ತರುಣಿಯರ ವಾಸ್ತವಿಕ ಜೀವನವನ್ನು ಮೂಲವಸ್ತುವನ್ನಾಗಿಸಿಕೊಂಡು ಮಂಜುಳೆ, ವಿನತೆ, ಅಂಜಲಿ ಈ ಮೂರು ಸ್ತ್ರೀ ಪಾತ್ರಗಳ ಮೂಲಕ ಚಿತ್ರಿಸಿದ್ದಾರೆ. ಸಹಜ ಪ್ರೇಮದಿಂದ ನಿರಾಶೆಗೊಂಡು ಮದುವೆ ಹುಳಿಯೆಂದು ತಿಳಿದವಳೊಬ್ಬಳಾದರೆ, ಮದುವೆ ಎಂಬುದು ಮೂರ್ಖತನ ಅಂದುಕೊಂಡೇ, ಜೀವನದ ಭಧ್ರತೆಗಾಗಿ ಮದುವೆಯಾದವಳೊಬ್ಬಳು, ತಾಯ್ತನವನ್ನು ಅದುಮಿ ಹಿಡಿದು ಕಣ್ಣೀರು ಕರೆದವಳೊಬ್ಬಳು, ವೇಶ್ಯೆಯಾಗಿ ಹುಟ್ಟಿ, ಮರ್ಯಾದಸ್ಥ ಬಾಳಿಗಾಗಿ ಊರು ಬಿಟ್ಟು ಓಡಿ ಹೋದವಳು, ಕಾದು ಕಾದು ಅಲೆದಾಡಿ, ಮದುವೆಯಾಗಿ ಗಂಡನನ್ನು ನಂಬಿ, ಅವನ ಸೆರೆಗೆ ಸಿಲುಕಿ ತಪ್ಪೇನೂ ಮಾಡದಿದ್ದರೂ, ತಾನು ಜಾರೆಯೆಂದು ಬರೆದು ಕೊಟ್ಟ ಸಹನಾಮಯಿಯೊಬ್ಬಳು, ಹೀಗೇ ಐವರು ಸ್ತ್ರೀಯರ ಜೀವನ ಇಲ್ಲಿ ಕಾದಂಬರಿಯಾಗಿದೆ. ಇಲ್ಲಿನ ಕೆಲವೊಂದು ಸನ್ನಿವೇಶಗಳು ಊಹೆಗೂ ಮೀರಿದ ಸತ್ಯಗಳಾಗಿವೆ ಎನ್ನುತ್...

ಆಡು ಜೀವನ: ಹಳೆಯ ಓದಿನ ನೆನಪು...

ನಿಝಾಮ್ ಅನ್ಸಾರಿ ಕಲ್ಲಡ್ಕ ಆಡು ಜೀವಿದಂ ಎಂಬ ಮಲಯಾಳಂ ಕಾದಂಬರಿಯನ್ನು ಬರೆದವರು ಮಲಯಾಳಂ ನ ಖ್ಯಾತ ಲೇಖಕ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬೆನ್ಯಾಮೀನ್. ಇದು ಇಂಗ್ಲಿಷ್, ಅರೆಬಿಕ್, ಕನ್ನಡ, ತಮಿಳು, ಹಿಂದಿ ಭಾಷೆಗಳಿಗೆ ಅನುವಾದಗೊಂಡಿದೆ, ನಜೀಬ್ ಎಂಬವರ ಗಲ್ಫ್ ಜೀವನದಲ್ಲಿ ಉಂಟಾದ ನೈಜ ಘಟನೆಗಳನ್ನಾಧರಿಸಿ ಈ ಕಾದಂಬರಿಯನ್ನು ಬರೆಯಲಾಗಿದೆ. ಆಡು ಜೀವಿತಂ’ ಎಂಬ ಮಲಯಾಳಂ ಕಾದಂಬರಿಯನ್ನು ನುರಿತ ಅನುವಾದಕರಾದ ಡಾ. ಅಶೋಕ್ ಕುಮಾರ್ ರವರು ‘ಆಡುಜೀವನ’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದಾರೆ. ಇದರ ಅರೆಬಿಕ್ ಅನುವಾದದ ಪ್ರಸಾರಕ್ಕೆ ಸೌದಿ ಸರ್ಕಾರ ನಿಷೇಧ ಹೇರಿತ್ತು. ಅದು, ಪ್ರಾಚೀನ ಅರಬರು ಕೂಲಿಯಾಳುಗಳ ಮೇಲೆ ಎಸಗುತ್ತಿದ್ದ ಕ್ರೂರತೆಗಳನ್ನು ನಜೀಬ್ ನ ಕಥೆಯ ಮೂಲಕ ಎಳೆಎಳೆಯಾಗಿ ಬಿಡಿಸಿ ಹೇಳಿದುದಕ್ಕೋ ಗೊತ್ತಿಲ್ಲ. ಅಂತೂ, ಕಳೆದ ಎರಡು ವರ್ಷಗಳ ಹಿಂದೆ, ಇದರ ಮೂಲ ಮಲಯಾಳಂ ,ಹಾಗೂ ಅನುವಾದ ಕನ್ನಡ ಎರಡೂ ಭಾಷೆಯಲ್ಲೂ ಓದುವ ಭಾಗ್ಯ ನನ್ನದಾಯಿತು. ಯಾಕೆ ಈ ನೆನಪು ಈಗ ಮರುಕಳಿಸಿತೆಂದು ಕೇಳಿದರೆ, ಆಡು ಜೀವಿದಂ ಮುಂದಿನ ವರ್ಷಗಳಲ್ಲಿ ಸಿನಿಮಾ ಆಗಿ ತೆರೆಕಾಣಲಿದೆ. ಮಲಯಾಳಂ ನಟ ಪೃಥ್ವಿರಾಜ್ ನಜೀಬನ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ. ಅಂದ ಹಾಗೆ, ಲಾಕ್ ಡೌನ್ ಗೂ ಮುನ್ನ ಸಿನಿಮಾ ಚಿತ್ರೀಕರಣ ತಂಡವು, ಜೋರ್ಡಾನ್ ನ ಮರುಭೂಮಿಗೆ ಚಿತ್ರೀಕರಣಕ್ಕಾಗಿ ತೆರಳಿತ್ತು. ಶೂಟ್ ಮುಗಿಸಿ ಹಿಂತಿರುಗಬೇಕೆನ್ನುವಷ್ಟರಲ್ಲಿ ಲಾಕ್ ಡೌನ್ ಘೋಷಣೆಯಾಗಿ, ವ...

ಕೋವಿಡ್ ಕಾಲದ ಓದು: ಚಂದ್ರನ ಚೂರು

'ಚಂದ್ರನ ಚೂರು' ಕೃತಿಯ ಹೆಸರು ಕೇಳಿದಾಗ ನಿಜವಾಗಿಯೂ ಅದೊಂದು ಕಾದಂಬರಿಯಾಗಿರಬಹುದು ಎಂದು ಭಾವಿಸಿದ್ದೆ. ಆದರೆ, ಪುಸ್ತಕ ಕೈಗೆ ತಲುಪಿದಾಗಲೇ ಗೊತ್ತಾಗಿದ್ದು, ಅದೊಂದು ಚಂದ್ರಲೋಕಕ್ಕೆ ಕೊಂಡೊಯ್ಯುವ ಅದ್ಭುತ ಕೃತಿ ಅಂತ. ತಂದೆ ಕುವೆಂಪು ಅವರ ಸಾಹಿತ್ಯದ ಹಾದಿಯಲ್ಲೇ ನಡೆದರೂ, ತೇಜಸ್ವಿಯವರ ಸಾಹಿತ್ಯವು ನಿಸರ್ಗ ವಿಸ್ಮಯ, ಭೂಗೋಳ, ಜೀವಶಾಸ್ತ್ರ, ಭತಶಾಸ್ತ್ರ, ಇತಿಹಾಸ ಹೀಗೇ ಎಲ್ಲಾ ಶಾಸ್ತ್ರಗಳ ಮಿಶ್ರಣ ರಸಾಯನ ಎಂದೇ ಹೇಳಬಹುದು. ಚಂದ್ರನ ಚೂರು ಚಂದ್ರ ಲೋಕದ ವಿಸ್ಮಯ ದೃಶ್ಯಗಳನ್ನು ಕಟ್ಟಿಕೊಡುವ ಚೊಚ್ಚಲ ಕೃತಿ. ಬಾಹ್ಯಾಕಾಶ, ಖಗೋಳ ಶಾಸ್ತ್ರ ವಿಷಯದಲ್ಲಿ ಆಸಕ್ತಿ ಇಲ್ಲದ ನನ್ನಂತವರನ್ನೂ ಇದು ಸರಾಗವಾಗಿ ಓದಿಸಿಕೊಂಡು ಹೋಗುವಂತೆ ಮಾಡುತ್ತದೆ, ಅದಕ್ಕೆ ಕಾರಣ, ತೇಜಸ್ವಿ ಅವರ ಬರವಣಿಗೆ ಹಾಗೂ ವಿವರಣೆಯ ಶೈಲಿ.. ಜಗತ್ತಿನಲ್ಲಿ ಮನುಷ್ಯನು ಚಂದ್ರನಲ್ಲಿಗೆ ಕಾಲಿಡುವುದಕ್ಕೂ ಮುನ್ನ, ಯಾವುದೆಲ್ಲಾ ರೀತಿಯ ಪರಿಶ್ರಮಗಳು ನಡೆದಿದ್ದವು ಹಾಗೂ ಭೂಮಂಡಲ ಮತ್ತು ಚಂದ್ರನ ಕುರಿತಾಘಿ ಯಾವುದೆಲ್ಲಾ ಆಯಾಮಗಳಲ್ಲಿ ಅಧ್ಯಯನಗಳಾಗಿದ್ದುವು ಎಂಬುದರ ಸಂಪೂರ್ಣ ವಿಷಯಗಳಿವೆ. ಚಂದ್ರನಲ್ಲಿ ತಲುಪಿದ ಮನುಷ್ಯನಿಗೆ ಆದ ಅನುಭವಗಳೇನು? ನೀಲ್ ಆಮ್Fಸ್ಟ್ರಾಂಗ್ ತಂಡದ ಚಂದ್ರಯಾನದ ರಸವತ್ತಾದ ಅನುಭವಗಳು, ಚಂದಿರನ ಮಣ್ಣಲ್ಲಿ ಅಮೇರಿಕದ ಫ್ಲಾಗ್ ಮತ್ತು ಬೋಡ್F ಸ್ಥಾಪಿಸಿ ಬಂದ ಆ ಧೀರ ತಂಡದ ಬೆರಗಾಗಿಸುವ ಕ್ಷಣ ಕ್ಷಣದ ವರದಿಗಳು ಈ ಕೃತಿಯ ಲೇಖನಗಳಲ್ಲಿ ಅಡಗಿದೆ. ಒಟ್ಟಿನಲ...

ಕೋವಿಡ್ ಮತ್ತು ಪ್ಲಾಟ್‍ಫಾರ್ಮ್ ಒಡೆತನ

ಬಾಹ್ಯ ನೋಟಕ್ಕೆ ಶಾಂತವೂ ಆದರೆ, ಸೂಕ್ಷ್ಮ ಪರಿಶೋಧನೆಯಲ್ಲಿ ಭೀತಿಜನಕವೂ ಆದ ಬದಲಾವಣೆಗಳನ್ನಾಗಿದೆ ಕೋವಿಡ್‍ನ ಈ ಅಂತರಕಾಲದಲ್ಲಿ, ಸಾಮಾಜಿಕ-ಆರ್ಥಿಕ ವಲಯಗಳಲ್ಲಿ, ಕಾರ್ಪೊರೇಟ್‍ಗಳು ಹಾಗೂ ಆಡಳಿತಾರೂಢರು ಪರೀಕ್ಷಿಸುತ್ತಲಿರುವುದು. ಟಾಟಾ ಕನ್ಸಲ್ಟೆನ್ಸಿ (tata consultancy) ಎಂಬ ಭಾರತೀಯ ಐಟಿ ಕಂಪೆನಿ, ಕೋವಿಡ್ ಕಾಲದ ನಂತರ ಮುಂದಿನ ಎರಡು ವರ್ಷಗಳಲ್ಲಿ ತನ್ನ ಶೇ. 75 ರಷ್ಟು ನೌಕರರನ್ನೂ ಮನೆಯಿಂದಲೇ ಕೆಲಸ ಮಾಡಿಸುವ ವ್ಯವಸ್ಥೆಯೆಡೆಗೆ ಬದಲಾಗಲಿದೆ ಎಂದು ಘೋಷಿಸಿರುವುದು ಅದರ ಒಂದು ಭಾಗವೇ ಆಗಿದೆ. ಇದು ಬಹುಶಃ ಒಂದು ಜಾಗತಿಕ ಪ್ರವಣತೆ ಆಗಲಿದೆ ಎನ್ನುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ವೃತ್ತಿ, ಶಿಕ್ಷಣ, ಸೇವಾ ಕ್ಷೇತ್ರಗಳು, ಮುಂದೆ ಬಹುದೊಡ್ಡ ಬದಲಾವಣೆಗೆ ಸಾಕ್ಷಿಯಾಗಲಿದೆ ಎಂಬ ಸೂಚನೆಗಳು ಜಗತ್ತಿನ ನಾನಾ ಕಡೆಗಳಿಂದ ಲಭಿಸುತ್ತಿವೆ. ಕೋವಿಡ್ ಸುರಕ್ಷತೆಯ ಭಾಗವಾಗಿ ಕೈಗೊಂಡ ಹಲವು ಕ್ರಮಗಳು, ದೀರ್ಘಕಾಲ ಮುಂದುವರಿದಂತೆಯೇ ತಮಗೆ ಲಾಭವನ್ನು ಹೆಚ್ಚಿಸಲಿದೆ ಎಂದು ಸರ್ಕಾರ ಹಾಗೂ ಕಾರ್ಪೋರೇಟ್‍ಗಳು ಮನದಟ್ಟು ಮಾಡಿವೆ. ಮಾತ್ರವಲ್ಲ, ಅದು ದೀರ್ಘಕಾಲ ನೆಲೆಗೊಳ್ಳಲು ಅವರು ಕಾನೂನಾತ್ಮಕ ಹಾಗೂ ಪ್ರಾಯೋಗಿಕವಾಗಿ ಪರಿಶ್ರಮ ಪಡುತ್ತಾರೆಂಬ ವಿಷಯದಲ್ಲಿ ಸಂದೇಹವಿಲ್ಲ. ಕಾರ್ಪೊರೇಟ್ ಶಕ್ತಿಗಳು ಮಾಡೋಕೆ ಹೊರಟಿರುವ ಪ್ರಧಾನ ಪರಿವರ್ತನೆಗಳಲ್ಲಿ ಹಲವು, ಅವರಿಗೆ ಹೆಚ್ಚಿನ ಲಾಭದಾಯಕವೂ, ನೌಕರರಿಗೆ ಬಹಳಷ್ಟು ಗುಪ್ತವ್ಯಯಗಳು (hiಜಜeಟಿ ಛಿosಣs) ಒಳಗೊಂಡಿ...

ನಾನೊಬ್ಬ ಪಥಿಕ: ಕೋವಿಡ್ ಕಾಲದ ಓದು: "ಮಲೆಗಳಲ್ಲಿ ಮದುಮಗಳು"

ನಾನೊಬ್ಬ ಪಥಿಕ: ಕೋವಿಡ್ ಕಾಲದ ಓದು: "ಮಲೆಗಳಲ್ಲಿ ಮದುಮಗಳು" : 'ಆ ಕೃತಿಯನ್ನು ನನಗೆ ಓದೋಕೆ ಆಗಲಿಲ್ಲವಲ್ಲಾ' ಅಂತ ಕಳೆದೊಂದು ವರ್ಷದಿಂದ ನನ್ನನ್ನು ಅತಿಯಾಗಿ ಕಾಡುತ್ತಿದ್ದ ಕೃತಿಯೆಂದರೆ ಅದು 'ಮಲೆಗಳಲ್ಲಿ ಮದುಮಗಳು&...

ಆಹಾರವಿಲ್ಲದೆ ಕಲ್ಲುಗಳನ್ನು ಬೇಯಿಸಿದಳು ಆ ಬಡತಾಯಿ..

ಖಲೀಫ ಉಮರ್ ಆಡಳಿತವನ್ನು ನೆನಪಿಸಿದ ಕೆನ್ಯಾದ ಈ ಘಟನೆ.. ಅದು ಹಝ್ರತ್ ಉಮರ್ (ರ) ರ ಆಡಳಿತ ಕಾಲ. ತನ್ನ ಆಡಳಿತ ಅವಧಿಯಲ್ಲಿ, ರಾಷ್ಟ್ರದ ಯಾರೂ ಕೂಡಾ ಸಂಕಷ್ಟಕ್ಕೆ ಗುರಿಯಾಗಬಾರದೆಂಬ ಮಹತ್ವದ ನಿರ್ಧಾರ ಉಮರ್ ಅವರದ್ದಾಗಿತ್ತು. ಹಾಗಾಗಿ, ಹಗಲು ರಾತ್ರಿಯೆನ್ನದೆ ಜನರಿಗಾಗಿ, ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮುಡಿಪಾಗಿಡುತ್ತಿದ್ದರು. ಅದಕ್ಕಾಗಿಯೇ ಸಿಬ್ಬಂದಿಗಳನ್ನು ನೇಮಿಸಿದ್ದರಲ್ಲದೆ, ರಾತ್ರಿ ಪಾಳಿಯಲ್ಲಿ ತಾನೇ ಸ್ವತಃ ಜನರ ಸುಖ ದುಃಖಗಳನ್ನು ಅರಿಯಲೆಂದು ಒಬ್ಬರನ್ನು ಜೊತೆಗೂಡಿಸಿ ಹೊರಟು ಬಿಡುತ್ತಿದ್ದರು. ಅದೊಂದು ದಿನ ರಾತ್ರಿ, ಇಡೀ ಊರಿಗೆ ಊರೇ ನಿಶ್ಯಬ್ದವಾಗಿದೆ. ಜನರು ಶಾಂತ ನಿದ್ರೆಯಲ್ಲಿ ಮುಳುಗಿದ್ದಾರೆ. ಹಝ್ರತ್ ಉಮರ್ ತನ್ನ ಜೊತೆ ಅಸ್ಲಮ್ ಅವರನ್ನು ಜೊತೆಗೂಡಿಸಿಕೊಂಡು ಅರೇಬಿಯಾ ಮರುಭೂಮಿಯ ಪ್ರತಿಯೊಂದು ಗುಡಿಸಲುಗಳ ಹಾದಿಯಾಗಿ ಸಾಗುತ್ತಲಿದ್ದಾರೆ. ಹೌದು, ರಾಜಠೀವಿಯಲ್ಲಿ ಮೆರೆಯಬೇಕಿದ್ದ, ರಾಜಾತಿಥ್ಯವನ್ನುಂಡು ಮಲಗಬೇಕಾಗಿದ್ದ ಸಮಯವದು. ಇಲ್ಲ ತನ್ನ ಎಂದಿನ ದಿನಚರಿಯಂತೆ ಇದು ನಡೆಯಲೇಬೇಕು. ಪ್ರಜೆಗಳೆಲ್ಲರೂ ಉಮರ್ ನ ಆಡಳಿತದಲ್ಲಿ ಸುಖ ನಿದ್ರೆ ಅನುಭವಿಸಿದರೆ ಮಾತ್ರ ತನಗೂ ನಿದ್ರಿಸಲು ಸಾಧ್ಯ. ಹಾಗಾಗಿ ಉಮರ್ ಖಲೀಫರ ವೇಷ ಕಳಚಿಟ್ಟು ಒಬ್ಬ ಸಾಮಾನ್ಯನಂತೆ ಈಗ ಹೊರಟಿದ್ದಾರೆ. ಅವರಿಬ್ಬರೂ ಈಗ ಮದೀನದ ಪ್ರ್ಯಾಂತ್ಯ ಪ್ರದೇಶವನ್ನು ತಲುಪಿದ್ದಾರೆ. ನಡೆಯುತ್ತಿದ್ದಂತೆಯೇ ದೂರದ ಒಂದು ಗುಡಿಸಲಿನಿಂದ ಪುಟ್...