ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಕಾರ್ನಾಡರ "ಯಯಾತಿ" ಈ ದಿನದ ಓದು...

{ತಿಂಗಳುಗಳ ಹಿಂದೆ ಸೆಮಿನಾರೊಂದರಲ್ಲಿ ಭಾಗವಹಿಸಲು ಶಿವಮೊಗ್ಗ ತಲುಪಿದ್ದೆ. ಜೊತೆಗೆ ನಾಲ್ಕೈದು ಗೆಳೆಯರಿದ್ದರು. ಸೆಮಿನಾರ್ ಮುಗಿಸಿ ಹಿಂತಿರುಗುವಾಗ ಪುಸ್ತಕ ಪ್ರೇಮಿ ಗೆಳೆಯನೊಬ್ಬನ ಜೊತೆ ಅಲ್ಲೇ ಬಸ್ ಸ್ಟಾಂಡ್ ಹತ್ತಿರದ ಒಂದು ಪುಸ್ತಕದಂಗಡಿಗೆ ಹೋದೆವು. ಆತನಿಗೆ ಮರುಭೂಮಿಯ ಹೂವು ಪುಸ್ತಕ ಬೇಕೆಂದಿದ್ದ. ನಾನು ಯಯಾತಿ ಬೇಕೆಂದೆ. ಅಲ್ಲಿಂದ ಹೊರಡುವಾಗ ಅವತ್ತೇ ಓದಿ ಮುಗಿಸಬೇಕು ಅಂದು ಕೊಂಡ ನನಗೆ ಓದುಭಾಗ್ಯ ದೊರಕಿದ್ದು ಮಾತ್ರ ಇಂದು..ಏನೇ ಆಗಲಿ..ಕೊನೆಗೂ ಈ ಕೋವಿಡ್ ದಿನಗಳು ಕೊನೆಗೂ ಕಾರ್ನಾಡರನ್ನು ಓದಿಸುವಂತೆ ಮಾಡಿದೆ...} ಅಂದ ಹಾಗೆ ಯಯಾತಿ ಗಿರೀಶ ಕಾರ್ನಾಡ ಅವರ ೧೯೬೧ ರಲ್ಲಿ ಪ್ರಕಟವಾದ ಮೊದಲ ನಾಟಕ. ಕೀರ್ತಿನಾಥ ಕುರ್ತಕೋಟಿ ಅವರು ಮುನ್ನುಡಿ, ಹಾಗೂ ಜಿ.ಎಸ್ ಅಮೂರ ಹಿನ್ನುಡಿ ಬರೆದಿದ್ದಾರೆ. ನಾಲ್ಕಂಕಗಳಿರುವ ಪ್ರಸ್ತುತ ನಾಟಕದಲ್ಲಿ ಪಾತ್ರಗಳಾಗಿ ದೇವಯಾನಿ, ಸ್ವರ್ಣಲತೆ, ಶರ್ಮಿಷ್ಠೆ, ಯಯಾತಿ, ಪುರು, ಚಿತ್ರಲೇಖೆ ಮುಂತಾದವರು ಬರುತ್ತಾರೆ. ಕುರ್ತಕೋಟಿ ಅವರು ಹೇಳಿರುವಂತೆ, ಈ ನಾಟಕದಲ್ಲಿ ಮನುಷ್ಯ ಸಾಹಸದ ದುರಂತ ಚಿತ್ರವೊಂದನ್ನು ರೂಪಿಸುವ ಹವಣಿಕೆಯು ಎದ್ದು ಕಾಣುತ್ತದೆ. ನಾಟಕದ ಆಧುನಿಕತೆಯ ಅಂಶವೆಂದೇ ಅದು, ಇಲ್ಲಿಯ ಪಾತ್ರಗಳೆಲ್ಲವೂ ಮನುಷ್ಯನ ಸಾಮಾನ್ಯ ಮಟ್ಟವನ್ನೂ ಮೀರುವ ಹಂಬಲವನ್ನಿಟ್ಟುಕೊಂಡವುಗಳು. ಆದರೆ ಮನುಷ್ಯನ ದೌರ್ಬಲ್ಯಗಳಿಂದಲೇ ಅವುಗಳ ಹಂಬಲ ಪೂರ್ಣಗೊಳ್ಳುವುದಿಲ್ಲ. ಯಯಾತಿ ಅಮರತ್ವದ ಆಕಾಂಕ್ಷೆ, ದೇವಯಾನಿಯ ಪ...

#ನಾನು ದೀಪ ಹಚ್ಚುವುದಿಲ್ಲ...

ನಾನು ಬೆಳಕನ್ನು ಆರಿಸಿ ದೀಪವ ಹಚ್ಚುವುದಿಲ್ಲ.. ಹಸಿದು ಬಳಲಿದ ವಲಸಿಗ ನನ್ನ ಜನಗಳ ಬರಿಗಾಲ ನಡಿಗೆಗೆ ಅದು ತೊಂದರೆಯಾದೀತು.. ನಾನು ಬೆಳಕನ್ನು ಆರಿಸಿ ಹಣತೆ ಹಚ್ಚುವುದಿಲ್ಲ ಹಸಿದು ಸಾವಿನ ದವಡೆಗೆ ಸಿಲುಕಿದ ನನ್ನ ಜನಗಳ ಆತ್ಮಗಳ ಬರಿಗಾಲ ಸಂಚಾರಕ್ಕೆ ಅದು ತೊಡಕಾದೀತು... ನಾನು ಇರುವ ಬೆಳಕ ಆರಿಸಿ ಮನೆಯ ಜಗಲಿಗೆ ಬಂದು ದೀಪವ ಹಚ್ಚುವುದಿಲ್ಲ.. ವೈರಾಣುವಿಗಿಂತಲೂ ಭೀಕರ ಮತಾಂಧ ಕ್ರಿಮಿಗಳು ನನ್ನ ಮನೆಯ ಹಿಂಬಾಗಿಲಿನಿಂದ ಸೇರಿಕೊಳ್ಳಲೂ ಬಹುದು.. ನಾನು ಬೆಳಕನ್ನು ಆರಿಸಿ ದೀಪ ಹಚ್ಚುತ್ತೇನೆ.. ಟಾರ್ಚು, ಮೇಣದ ಬತ್ತಿ ಎನಗೆ ಬೇಕಿಲ್ಲ... ಅಜ್ಞಾನದ ಅಂಧಕಾರವು ನೀಗಲು ಸುಜ್ಞಾನ ದೀವಿಗೆ ಹಚ್ಚಬೇಕಿದೆ.. ಆ ಬೆಳಕು ಜಗವೆಲ್ಲಾ ಪಸರಿಸಬೇಕಿದೆ.. #ನಿಝಾಮ್ ಅನ್ಸಾರಿ

ನಾನುಗೌರಿ ವೆಬ್ ನಲ್ಲಿ ಪ್ರಕಟಗೊಂಡ ಬರಹಗಳು..ಓದಲು ಈ ಲಿಂಕ್ ಉಪಯೋಗಿಸಿ

-ನಿಝಾಮ್ ಅನ್ಸಾರಿ ಭಾರತದ ಉನ್ನತ ಶಿಕ್ಷಣದ ಮಹಾನ್‌ ಆಶಯಕ್ಕೆ ಎಳ್ಳುನೀರು ಬಿಡುತ್ತಿರುವ ಪ್ರಭುತ್ವ… http://naanugauri.com/indian-higher-education-shrinking-down- **************************************************************** ಲಾಕ್‌ಡೌನ್‌: ತುತ್ತು ಅನ್ನಕ್ಕಾಗಿ ಗುಳೆ ಹೊರಟವರ ಕತೆ http://naanugauri.com/lockdown-story-of-labour/ via @Naanu gauri ***************************************************************** ಪೌರತ್ವ ವಸೂಲಿ – ನಾಝಿ ಜರ್ಮನಿಯಿಂದ ಕಲಿಯಬೇಕಾದುದು… http://naanugauri.com/citizen-amendment-act-same-thing-happen-in-german-80-years-back- ****************************************************************** ಪ್ಲೇಗ್ ಹಾಗೂ ಕೋವಿಡ್ 19 ನಡುವೆ ಕೆಲವು ಹೋಲಿಕೆಗಳು http://naanugauri.com/covid-19-and-bubonic-plague-this-lead-to-renaissance/ via @Naanu gauri

ಕೋವಿಡ್ ಕಾಲದ ಮತಾಚರಣೆ

- ನಿಝಾಮ್ ಅನ್ಸಾರಿ ಕಲ್ಲಡ್ಕ ಕೆಲವು ಧಾರ್ಮಿಕ ಸಂಸ್ಥೆಗಳು ಅವರ ಆರಾಧನೆಯ ನೆಪದಲ್ಲಿನ ಸಾಮೂಹಿಕ ಒಗ್ಗೂಡುವಿಕೆಯು ಆರಾಧಕರ ಸಂಖ್ಯೆಯನ್ನು ಕಡಿಮೆ ಮಾಡಿಕೊಂಡು ಈಗಲೂ ಮುಂದುವರೆಯುತ್ತಿದೆ. ಈ ಸಂಗಮಗಳು ಹಾಗೂ ಅನ್ಯೋನ್ಯವಾದ ಒಟ್ಟು ಸೇರುವಿಕೆಯು ತಂದೊಡ್ಡಬಹುದಾದಂತಹ ಆಘಾತಗಳು ಗುರುತರವಾದದ್ದು. ಎಲ್ಲಾ ಧಾರ್ಮಿಕ ಸಂಸ್ಥೆಗಳೂ ಈ ರೀತಿಯ ಗುಂಪು ಸೇರುವುದನ್ನು ಬಿಟ್ಟು, ಇತರರಿಗೆ ಮಾದರಿಯಾಗಬೇಕಿದೆ. ಬಹುತೇಕ ಮಸೀದಿಗಳೂ ಉತ್ತರದಾಯಿತ್ವ ಪ್ರಜ್ಞೆಯಿಂದ ಆರೋಗ್ಯ ಇಲಾಖೆ ಸೂಚಿಸುವುದಕ್ಕಿಂತಲೂ ಮೊದಲೇ ಜಾಗೃತರಾಗಿ ಸಾಮೂಹಿಕ ಪ್ರಾರ್ಥನೆಗಳನ್ನು ಮೊಟಕುಗೊಳಿಸಿದ್ದವು. ಆದರೆ, ಎಲ್ಲಯೋ ಕೆಲವೊಂದಷ್ಟು ಈಗಲೂ ತೆರೆದಿಟ್ಟಿವೆ. ಮಸೀದಿಗಳನ್ನು ತೆರೆದಿಡುವವರು ‘ಪ್ರವಾದಿ ಚರ್ಯೆಯನ್ನು ಪಾಲಿಸುತ್ತಿದ್ದೇವೆ’ ಎಂದು ವಾದಿಸುತ್ತಿದ್ದಾರೆ. ವಾಸ್ತವ ಹೇಳಬೇಕಾದರೆ, ಅವರು ಪ್ರವಾದಿ ಚರ್ಯೆಯ, ಪ್ರವಾದಿ ಕಲ್ಪನೆಯ ನೇರ ಉಲ್ಲಂಘನೆಯನ್ನಾಗಿದೆ ಮಾಡುತ್ತಿರುವುದು. ಇಸ್ಲಾಮಿನ ನಿಯಮಗಳ (ಶರೀಅಃ) ಐದು ಉನ್ನತ ಲಕ್ಷ್ಯಗಳಲ್ಲೊಂದು ಜೀವನ ಸಂರಕ್ಷಣೆಯೇ ಆಗಿದೆ. ಆದ್ದರಿಂದ ಮುಸಲ್ಮಾನರು ತೊಂದರೆಗಳನ್ನು ತಡೆಯಲಿಕ್ಕಿರುವ ಎಲ್ಲಾ ಹೆಜ್ಜೆಗಳನ್ನು ಸ್ವೀಕರಿಸಲು ಬಾಧ್ಯಸ್ಥರಾಗಿರುವರು. ರೋಗ ಹರಡುವಿಕೆಯನ್ನು ತಡೆ ಹಿಡಿಯುವ ಮಾರ್ಗಗಳೂ ಇದರೊಳಗೆ ಸೇರಿಕೊಂಡಿವೆ ಎಂಬುದೂ ಸ್ಪಷ್ಟ. ಅಚ್ಚರಿಯ ವಿಷಯವೇನೆಂದರೆ, 1400 ವರ್ಷಗಳ ಹಿಂದೆ ಪ್ರವಾದಿ ಮುಹಮ್ಮದ್ ಪೈಗಂಬರರು ಕ್ವಾರಂಟೈನ್...

ಮಹಿಳಾವಾದದ ನವ ಚಿಂತನೆಗಳು- -ನಿಝಾಮ್ ಅನ್ಸಾರಿ

ಹತ್ತೊಂಬತ್ತನೆಯ ಶತಮಾನದಲ್ಲಿ ಉದಯಿಸಿದ ಮಹಿಳಾ ವಿಮೋಚನೆಯ ಸಿದ್ಧಾಂತವು ಜಾಗತಿಕ ಮಟ್ಟದಲ್ಲಿ ಇಂದಿಗೂ ಚರ್ಚೆಗೊಳಗಾಗುತ್ತಲೇ ಇದೆ.ಫೆಮಿನಿಸಂ ಎನ್ನುವುದು ಸ್ತ್ರೀ ಸಮಾನತೆಯ ಹಕ್ಕುಗಳು ಮತ್ತು ನಿಯಮಗಳ ಸಂರಕ್ಷಣೆಯನ್ನು ಲಕ್ಷವಿರಿಸುವ ಒಂದು ಮುನ್ನಡೆಯಾಗಿದೆ.ಇದರ ಪ್ರಚಾರಕರ ಕರ್ತವ್ಯಪರವೂ,ಸಾಮಾಜಿಕವೂ,ಭೂಶಾಸ್ತ್ರಪರವೂ ಆದ ವಿಂಗಡನೆಯಿಂದಾಗಿ ಇದು ವಿಭಿನ್ನವಾಗಿ ವಿಶ್ಲೇಷಿಸಲ್ಪಡುತ್ತದೆ.ಅಂದರೆ ಮಹಿಳಾವಾದದ ಚಿಂತನಾ ಪದ್ಧತಿಯೂ ಪ್ರಾಯೋಗಿಕ ರೀತಿನೀತಿಗಳೂ ಎಲ್ಲಾ ಕಡೆ ಒಂದೇ ರೀತಿಯಾಗಿರಲಿಲ್ಲ.ಸಾಮಾನ್ಯವಾಗಿ ಎಲ್ಲಾ ಸಾಮಾಜಿಕ ಮುನ್ನಡೆಗಳ ಹುಟ್ಟು ಮತ್ತು ಪರಿಣಾಮದ ಕುರಿತು ಸಹಜವಾಗಿ ಪ್ರಶ್ನೆಗಳು ಉದ್ಭವಿಸುವಂತೆಯೇ ಫೆಮಿನಿಸಂ ಕೂಡಾ ಇಂದು ವ್ಯಾಪಕವಾಗಿ ವಿಮರ್ಶಿಸಲ್ಪಡುತ್ತದೆ.ಸ್ತ್ರೀವಿಮೋಚನೆಯನ್ನು ಪಾಶ್ಚಾತ್ಯ ರೀತಿಶಾಸ್ತ್ರಗಳಿಗನುಗುಣವಾಗಿ ತುಲನೆಗೈದು ಚಿಂತಿಸುವವರ ಸಂಖ್ಯೆಯು ದೈನಂದಿನ ಹೆಚ್ಚಾಗುತ್ತಿದೆ. ಸ್ತ್ರೀವಾದದ ಮೂರು ತರಂಗಗಳು; ಸ್ತ್ರೀವಾದದ ಇತಿಹಾಸವನ್ನು ಮೂರು ತರಂಗಗಳಾಗಿ ವಿಭಾಗಿಸಬಹುದು.ಈ ಮೂರೂ ತರಂಗಗಳು ಒಂದೇ ಆಶಯದ ವಿವಿಧ ಆಯಾಮಗಳನ್ನು ಸ್ಪರ್ಶಿಸುತ್ತದೆ.ಹತ್ತೊಂಬತನೆಯ ಮತ್ತು ಇಪ್ಪತ್ತನೆಯ ಶತಮಾನದ ಮೊದಲ ಘಟ್ಟದಲ್ಲೇ ಆರಂಭಗೊಂಡ ಒಂದನೆಯ ತರಂಗವು ಮಹಿಳೆಯರ ನಿಯಮ ಸಂರಕ್ಷಣೆ,ವಿವಾಹ,ಶಿಶುಪಾಲನೆ,ಆಸ್ತಿ ಹಕ್ಕು ಎಂಬಿತ್ಯಾದಿಗಳನ್ನು ಕೇಂದ್ರೀಕರಿಸಿ ಕಾರ್ಯ ನಿರ್ವಹಿಸಿತ್ತು. 1848 ರಲ್ಲಿ ನ್ಯೂಯಾರ್ಕಿನ ಸೆನೆಕಾ ಫಾಲ್ಸ್‍ನಲ್...

'ಮ್ಯೂಸಿಕಲಿ': ನರಕದ ಭಯವಿರಲಿ -'ಟಿಕ್ ಟಾಕ್' ಮೋಡಿಗೆ ಬಲಿಯಾಗುತ್ತಿರುವ ಹದಿಹರೆಯದ ಮುಸ್ಲಿಂ ತರುಣಿಯರು'

✒-ನಿಝಾಮ್ ಅನ್ಸಾರಿ ಪ್ರಪಂಚವು ಹಂತ ಹಂತವಾಗಿ ಅಭಿವೃದ್ಧಿಯ ಕಡೆಗೆ ದಾಪುಗಾಲಿರಿಸುತ್ತಿದೆ. ದಿನ ಕಳೆದಂತೆ ವಿಜ್ಞಾನ ತಂತ್ರಜ್ಞಾನ ವಲಯಗಳಲ್ಲಿ ಕ್ಷಿಪ್ರಗತಿಯ ಬದಲಾವಣೆಯನ್ನು ಕಾಣುತ್ತಿದ್ದೇವೆ. ನಿನ್ನೆ ಹೊಸತೆನಿಸಿದ್ದೆಲ್ಲಾ ಇಂದಿಗೆ ಹಳೆಯದಾಗುತ್ತಿದೆ. ಹಳೆಯ ಕಾಲದಲ್ಲಿ ಶಾಲೆಯಿಂದ ಕೊಂಚ ಬಿಡುವು ಸಿಕ್ಕಾಗ ಕ್ರಿಕೆಟ್, ಚೆನ್ನಿದಾಂಡು ಎಂದೆಲ್ಲಾ ಹೇಳಿ ಮೈದಾನಕ್ಕಿಳಿಯೋದು, ಹುಣಸೇ ಮರ ಏರೋದು, ಮಾವಿನ ಮರಕ್ಕೆ ಕಲ್ಲೆಸೆಯೋದು ಸರ್ವೇಸಾಮಾನ್ಯವಾಗಿತ್ತು. ಆಧುನಿಕತೆಯ ಜಗತ್ತು ಮನುಷ್ಯನ ದೈಹಿಕ ಬಲಕ್ಕಾಗಿ ಜಿಮ್ ಕೋಚಿಂಗ್ ಸೆಂಟರ್ ಗಳನ್ನು ತೆರೆದರೆ, ಶರೀರವನ್ನು ಅಲ್ಪವೂ ಅಲುಗಾಡಿಸದೆ ಕೆಲಸ ಮಾಡಿ ವೇತನ ಪಡೆಯುವಲ್ಲಿ ಕಂಪೂಟರೀಕೃತ ನೂತನ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸಿದೆ‌. ಅಂದರೆ ಹಾಯಾಗಿ ಕುಳಿತಲ್ಲೇ ತಿಂಡಿ ತಿನಿಸು, ಕೆಲಸ,ವ್ಯಾಯಾಮವೆಲ್ಲದರಲ್ಲೂ ಸುಧಾರಿಸಿಕೊಂಡು ಮುಂದೆ ಸಾಗಿದೆ. ಹಿಂದಿನ ಕಾಲದಂತೆ ಊರೂರು ಅಲೆದಾಡೋದು,ನೆರೆಕರೆ ಸಂಬಂಧಿಕರನ್ನು ಕಂಡು ಮಾತನಾಡೋದು, ಹರಟೆ ಹೊಡೆಯೋದು ಇಂದಿಗೆ ಹಳೆಯ ಆಚಾರಗಳಾಗಿ ಪರಿಗಣಿಸಲ್ಪಟ್ಟಿದೆ. ಆಧುನಿಕ ತಂತ್ರಜ್ಞಾನಗಳು ಮನುಷ್ಯನನ್ನು ತಾಳಕ್ಕೆ ತಕ್ಕಂತೆ ಕುಣಿಸುವ ,ಮಾನಸಿಕವಾಗಿ ತನ್ನತ್ತ ಕೇಂದ್ರೀಕರಿಸುವಲ್ಲಿ ಅನುಸರಿಸುವ ಗುಲಾಮರಂತೆ ಕಂಡುಕೊಂಡಿದೆ‌. ನಾವು ಎಲ್ಲಾ ಸಮಯದಲ್ಲೂ ಬ್ಯುಸಿಯಾಗಿದ್ದರೆ ಮೊಬೈಲ್,ಕಂಪ್ಯೂಟರ್ ಗಳಂತಹ ತಂತ್ರಜ್ಞಾನಗಳು ನಮ್ಮನ್ನು ಗುಲಾಮರನ್ನಾಗಿಸಿದೆ ಎನ್ನಬಹು...

2018 ಕೊಟ್ಟು ಹೋದ ಅಂತರಾಳದಿ ಬೇರೂರಿದ ಅಳೆಯಲಾಗದಂತಹ ನೋವು...

#ಧಾರ್ಮಿಕತೆಯ ಪ್ರಪಂಚಕ್ಕೆ ಕೈಹಿಡಿದು ಮುನ್ನಡೆಸಿದ ನನ್ನ ಗುರುವರ್ಯರಾದ ಶೈಖುನಾ ಪಯ್ಯಕ್ಕಿ ಉಸ್ತಾದ್... #ಆಕಾಶದೆತ್ತರ ಸ್ನೇಹ ತೋರಿ ಬೆಳೆಸಿದ,ತಾನು‌ ನೋವುಂಡರೂ ಮಕ್ಕಳಿಗಾಗಿ ತನ್ನ ಆಯುಷ್ಯವ ಧಾರೆಯೆರೆದ ಪ್ರೀತಿಯ ಕಡಲಾದ ನನ್ನಪ್ಪ... ಈ ಇಬ್ಬರೂ ನನ್ನೊಂದಿಗಿಲ್ಲ...(ಅವರ ಆಶಯ ಆದರ್ಶಗಳಲ್ಲದೆ..) ಸೃಷ್ಟಿಕರ್ತನಾದ ಅಲ್ಲಾಹನು ಅವರ ಪರಲೋಕ ಜೀವನವನ್ನು ಸಮೃದ್ಧವಾಗಿಸಲಿ ಆಮೀನ್... ಕೊನೆಗೊಂದು ಮಾತು- ಪ್ಲೀಸ್ 2018..ದಯಮಾಡಿ ಬರಬೇಡ ಇನ್ನೊಮ್ಮೆ ಇಂತಹ ನೋವ ನೆನಪುಗಳನ್ನು ಕೊಡಲು...ಸಹಿಸಲಾಗದು ಈ ಬಡ ಜೀವಕ್ಕೆ..ಬಾಳ ಆಸರೆಯನ್ನು ನುಂಗಿ ಹಾಕಿದ ನೀನು ನನಗೆ ಕೊಟ್ಟಿರೋದು ಕರಾಳ ದಿನಗಳು ಮಾತ್ರ.. ಇವರಂತೆಯೇ ಅದೆಷ್ಟೋ ಪುಣ್ಯಾತ್ಮರ ವಿರಹವನ್ನೂ ಸಹಿಸಬೇಕಾಗಿ ಬಂತು...ಸೃಷ್ಟಿ ಕರ್ತನ ವಿಧಿಗೆ ತಲೆಬಾಗಲೇ ಬೇಕಲ್ವಾ...‌ಎಲ್ಲರಿಗೂ ಅಲ್ಲಾಹನು ಮೋಕ್ಷವನ್ನು ನೀಡಲಿ ಎಂದು ಪ್ರಾರ್ಥಿಸೋಣ... https://m.facebook.com/story.php?story_fbid=2337706293119565&id=100006406501585

#ಚಲಿಸುವ_ಮೋಡಗಳ_ಮಧ್ಯದಿ... ನೀವೂ ಓದಿ

ಯುವ ಲೇಖಕ,ಉದಯೋನ್ಮುಖ ಕವಿಯೂ ಆದ ಪ್ರಿಯ ಸ್ನೇಹಿತ ಶ್ರೀರಾಜ್ ಆಚಾರ್ಯ ರವರ ದ್ವಿತೀಯ ಕವನ ಸಂಕಲನ ನನ್ನ ಕೈಸೇರಿ ತಿಂಗಳುಗಳಾಯಿತು...ಸಮಯ ಸಿಕ್ಕಾಗ ಓದಬೇಕೆಂದುಕೊಂಡಿದ್ದೆ..ಇವತ್ತು ಬಿಡುವು ಸಿಕ್ಕಿತು.. ಅಂದ ಹಾಗೆ ಈ ಕೃತಿಯು 'ರಿಕ್ತ ನಕ್ಷತ್ರ'ವೆಂಬ ಕವನ ಸಂಕಲನದ ನಂತರ ಕವಿಲೋಕಕ್ಕೆ ಸಮರ್ಪಿಸಿದ ಶ್ರೀರಾಜ್ ರ ದ್ವಿತೀಯ ಕಾಣಿಕೆ... ಬದುಕಿನ ಆಯಾಚಿತ ಅಲಗುಗಳಲ್ಲಿ ಎದುರು ಬರುವ ಸಂತಸ,ಸಂದಿಗ್ಧ, ಸಂತಾಪ ಭರಿತ ಸನ್ನಿವೇಶಗಳನ್ನು ಕವಿ ಹೃದಯವು ಇಲ್ಲಿ ಹೃದಯಕ್ಕೆ ನಾಟುವಂತೆ,ಮನಮುಟ್ಟುವಂತೆ ಚಿತ್ರಿಸಿದ್ದಾರೆ.. ಸುತ್ತಮುತ್ತಲಿನ ಬಗ್ಗೆ ಗೊಡವೆಯೇ ಇಲ್ಲದೆ ಬದುಕು ಸಾಗಿಸುವಾಗ ಸ್ವಂತಿಕೆಗೋಸ್ಕರ ದ್ವೇಷ ಕಟ್ಟಿ ಅದರೊಳಗೆ ಸ್ನೇಹವನ್ನು ಹುಡುಕುವ ಮನುಜನ ಮನೋಸ್ಥಿತಿಗೆ ಮರುಗುವ ಕವಿ ಮನಸ್ಸು ಶ್ರೀರಾಜ್ ರವರದ್ದು....ಅದು ಕವನದ ಸಾಲುಗಳುದ್ದಕ್ಕೂ ಗೋಚರಿಸುತ್ತದೆ.... ಅಂತೂ ಅವರು ಹಚ್ಚಿದ ಈ ದೀಪವು ನಂದಾದೀಪವಾಗಿ ಪ್ರಜ್ವಲಿಸಿ,ಚಲಿಸುವ ಮೋಡಗಳು ಶಾಂತಿಯ ತಂಗಾಳಿಗೆ ಕರಗಿ‌,ಈ ಭುವಿಗೆ ಸ್ನೇಹದ,ಸೌಹಾರ್ದತೆಯ,ಕರುಣೆಯ ವರ್ಷಧಾರೆಯಾಗಿ ಸುರಿದು ಓದುಗ ಮನಕ್ಕೆ ತಂಪೆರಗಲಿ ಎಂದು ಆಶಿಸುತ್ತಾ....ಅವರ ಭವಿಷ್ಯ ಉಜ್ವಲವಾಗಲಿ ಎಂಬ ಮನದಾಳದ ಹಾರೈಕೆ.... https://m.facebook.com/story.php?story_fbid=2331324147091113&id=100006406501585

#ಇರುವುದೆಲ್ಲವ_ಬಿಟ್ಟು.....

ಅಂತೂ ಇರೋ ಕೆಲಸವನ್ನ ಬಿಟ್ಟು ನಾನು, ತಡವಾಗಿ ಹೂ ಬಿಟ್ಟ ಮರದ ಅನೂಹ್ಯ ಪುಳಕದೊಂದಿಗೆ ಓದುಗ ಪ್ರಪಂಚಕ್ಕೆ ಪ್ರಕಾಶ್ ರೈ ನೀಡಿದ ಅನುಭವಗಳ,ಚಿಂತನೀಯ ರಸದೌತಣವ ಉಂಡು ಮುಗಿಸಿದೆ... #ಇರುವುದೆಲ್ಲವ ಬಿಟ್ಟು....

#ಸೂಫೀ- #ವಿಶ್ವ ಪ್ರೇಮದ ಮೂಲಕ ಭಗವತ್ ಸಾಕ್ಷಾತ್ಕಾರ

ಇತ್ತೀಚೆಗೆ ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾದ ಅಂಕಣವೊಂದರಲ್ಲಿ ಬರಹದುದ್ದಕ್ಕೂ ಮುಸ್ಲಿಂ ಮೂಲಭೂತವಾದಿಗಳನ್ನು ತರಾಟೆಗೆ ತೆಗೆದುಕೊಂಡು ಟೀಕಿಸುವ,ಪ್ರತ್ಯಾರೋಪಗಳನ್ನು ಛೂ ಬಿಡುವ ಭರದಲ್ಲಿ ಲೇಖಕನು ಮಹಾನ್ ಸೂಫೀ ಸಂತ ಮುಈನುದ್ದೀನ್ ಚಿಶ್ತಿ (ರ)ರ ಬಗ್ಗೆ ಕೀಳಾಗಿ ಓರ್ವ ದಂಗೆಕೋರನಂತೆ ಚಿತ್ರಿಸಲು ಪ್ರಯತ್ನಿಸಿದ್ದು ಕಂಡು ತುಂಬಾ ಬೇಜಾರಾಯ್ತು... ಬಹುಶಃ ಅದಾಗಿರಬಹುದು ನನ್ನ ಕೈಗೆ ತಲುಪಲು ಕಾರಣ... (ಏನೇ ಆಗಲಿ #ಕರಜಗಿರವರು ಸೂಫೀ ಪಂಥವನ್ನು ಪ್ರತಿಪಾದಿಸುವಾಗ ಚಿಶ್ತಿಯವರ ತರೀಖತ್ ಗೆ ಸಂಪೂರ್ಣ ನ್ಯಾಯ ಒದಗಿಸಿದ್ದು ಕಂಡು ಮನತುಂಬಿತು...) ಪಡೆದ ಸೂಫಿ ಪರಂಪರೆಯನ್ನು ಜಗದಗಲಕ್ಕೆ ಪರಿಚಯಿಸುವಲ್ಲಿ ಖ್ಯಾತ ಸಾಹಿತಿ #ಡಾ_ಗುರುರಾಜ_ಕರಜಗಿಯವರ ಅಪೂರ್ವ ಪ್ರಯತ್ನವಿದು.. ಕರಜಗಿಯವರ ಚಿಂತನೆಯ ವೈಶಾಲ್ಯತೆಯನ್ನು ಓದುಗ ಇಲ್ಲಿ ಕೊನೆವರೆಗೂ ಅನುಭವಿಸುತ್ತಾನೆ ಹನ್ನೊಂದು, ಹನ್ನೆರಡನೆಯ ಶತಮಾನದಲ್ಲಿ ಜೀವಿಸಿ ಕಣ್ಮರೆಯಾದ ಅದೆಷ್ಟೋ ಸೂಫಿಗಳ ಜೀವನದ ಸಾರವು ಇಲ್ಲಿ ಪ್ರತಿಧ್ವನಿಸುತ್ತದೆ.ಅವರು ವಿಶ್ವ ಭ್ರಾತೃತ್ವಕ್ಕೆ ನೀಡಿದ ಅಗತ್ಯ ಜೀವರಸಾಯನ ಇಲ್ಲಿದೆ... ನಮ್ಮ ಜೀವನಕ್ಕೆ ಪಾಠ ಹೇಳಿ ಕೊಡುವ ಅನೇಕ ಕಥೆಗಳಿವೆ..ಆ ಕಥೆಗಳೇ ಅವರ ಜೀವನವಾಗಿತ್ತು...ನಂಬಲಾಗದ್ದು...ಇಂದಿನ ಕಾಲದ ನಮಗೆ ಅರಗಿಸಿಕೊಳ್ಳಲಾಗದ್ದು... ಧರ್ಮಾಚರಣೆಯ ಗೋಜಲಿನಲ್ಲಿ,ಆಧುನಿಕತೆಯ ಅಬ್ಬರದಲ್ಲಿ ಹೃನ್ಮನಗಳನ್ನು ವಿಚಲಿತಗೊಳಿಸಿಕೊಂ ವಿಲವಿಲನೆ ಒದ್ದಾಡುತ್ತಿರುವ ಮನು...