ಹತ್ತೊಂಬತ್ತನೆಯ ಶತಮಾನದಲ್ಲಿ ಉದಯಿಸಿದ ಮಹಿಳಾ ವಿಮೋಚನೆಯ ಸಿದ್ಧಾಂತವು ಜಾಗತಿಕ ಮಟ್ಟದಲ್ಲಿ ಇಂದಿಗೂ ಚರ್ಚೆಗೊಳಗಾಗುತ್ತಲೇ ಇದೆ.ಫೆಮಿನಿಸಂ ಎನ್ನುವುದು ಸ್ತ್ರೀ ಸಮಾನತೆಯ ಹಕ್ಕುಗಳು ಮತ್ತು ನಿಯಮಗಳ ಸಂರಕ್ಷಣೆಯನ್ನು ಲಕ್ಷವಿರಿಸುವ ಒಂದು ಮುನ್ನಡೆಯಾಗಿದೆ.ಇದರ ಪ್ರಚಾರಕರ ಕರ್ತವ್ಯಪರವೂ,ಸಾಮಾಜಿಕವೂ,ಭೂಶಾಸ್ತ್ರಪರವೂ ಆದ ವಿಂಗಡನೆಯಿಂದಾಗಿ ಇದು ವಿಭಿನ್ನವಾಗಿ ವಿಶ್ಲೇಷಿಸಲ್ಪಡುತ್ತದೆ.ಅಂದರೆ ಮಹಿಳಾವಾದದ ಚಿಂತನಾ ಪದ್ಧತಿಯೂ ಪ್ರಾಯೋಗಿಕ ರೀತಿನೀತಿಗಳೂ ಎಲ್ಲಾ ಕಡೆ ಒಂದೇ ರೀತಿಯಾಗಿರಲಿಲ್ಲ.ಸಾಮಾನ್ಯವಾಗಿ ಎಲ್ಲಾ ಸಾಮಾಜಿಕ ಮುನ್ನಡೆಗಳ ಹುಟ್ಟು ಮತ್ತು ಪರಿಣಾಮದ ಕುರಿತು ಸಹಜವಾಗಿ ಪ್ರಶ್ನೆಗಳು ಉದ್ಭವಿಸುವಂತೆಯೇ ಫೆಮಿನಿಸಂ ಕೂಡಾ ಇಂದು ವ್ಯಾಪಕವಾಗಿ ವಿಮರ್ಶಿಸಲ್ಪಡುತ್ತದೆ.ಸ್ತ್ರೀವಿಮೋಚನೆಯನ್ನು ಪಾಶ್ಚಾತ್ಯ ರೀತಿಶಾಸ್ತ್ರಗಳಿಗನುಗುಣವಾಗಿ ತುಲನೆಗೈದು ಚಿಂತಿಸುವವರ ಸಂಖ್ಯೆಯು ದೈನಂದಿನ ಹೆಚ್ಚಾಗುತ್ತಿದೆ. ಸ್ತ್ರೀವಾದದ ಮೂರು ತರಂಗಗಳು; ಸ್ತ್ರೀವಾದದ ಇತಿಹಾಸವನ್ನು ಮೂರು ತರಂಗಗಳಾಗಿ ವಿಭಾಗಿಸಬಹುದು.ಈ ಮೂರೂ ತರಂಗಗಳು ಒಂದೇ ಆಶಯದ ವಿವಿಧ ಆಯಾಮಗಳನ್ನು ಸ್ಪರ್ಶಿಸುತ್ತದೆ.ಹತ್ತೊಂಬತನೆಯ ಮತ್ತು ಇಪ್ಪತ್ತನೆಯ ಶತಮಾನದ ಮೊದಲ ಘಟ್ಟದಲ್ಲೇ ಆರಂಭಗೊಂಡ ಒಂದನೆಯ ತರಂಗವು ಮಹಿಳೆಯರ ನಿಯಮ ಸಂರಕ್ಷಣೆ,ವಿವಾಹ,ಶಿಶುಪಾಲನೆ,ಆಸ್ತಿ ಹಕ್ಕು ಎಂಬಿತ್ಯಾದಿಗಳನ್ನು ಕೇಂದ್ರೀಕರಿಸಿ ಕಾರ್ಯ ನಿರ್ವಹಿಸಿತ್ತು. 1848 ರಲ್ಲಿ ನ್ಯೂಯಾರ್ಕಿನ ಸೆನೆಕಾ ಫಾಲ್ಸ್‍ನಲ್...
ಪಥಿಕನ ಬಗ್ಗೆ ಸಿಂಪಲ್ಲಾಗಿ : ನಿಝಾಮ್ ಅನ್ಸಾರಿ - ತಂ - ದಿ. ಇಸ್ಮಾಯಿಲ್ ಯು.ಕೆ, ತಾ -ಝುಬೈದಾ. ಕಲ್ಲಡ್ಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ. ಕಾಸರಗೋಡು ಧಾರ್ಮಿಕ-ಲೌಕಿಕ ಸಮನ್ವಯ ಶಿಕ್ಷಣ ಸಂಸ್ಥೆಯಲ್ಲಿ ಪದವಿ ವ್ಯಾಸಂಗ. ಸಮಾಜಶಾಸ್ತ್ರದಲ್ಲಿ ಬಿ.ಎ ಹಾಗೂ ಅರಬಿಕ್ ನಲ್ಲಿ 'ಅನ್ಸಾರಿ' ಪದವೀಧರ, ಪ್ರಸ್ತುತ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿ.